CAB ಪ್ರತಿಭಟನೆಗೆ ಕಾಂಗ್ರೆಸ್ ಕಾರಣ: ಮೋದಿ ಆರೋಪ!
CAB ಪ್ರತಿಭಟನೆಗೆ ಕಾಂಗ್ರೆಸ್ ಕಾರಣ ಎಂದ ಪ್ರಧಾನಿ ಮೋದಿ| ಜಾರ್ಖಂಡ್’ನ ಡಮ್ಕಾದಲ್ಲಿ ಚುನಾವಣಾ ಪ್ರಚಾರ ಸಭೆ| ‘ಪ್ರತಿಭಟನೆಗಳನ್ನು ಯಾರು ಮಾಡಿಸುತ್ತಿದ್ದಾರೆ ಎಂಬುದು ದೇಶದ ಜನರಿಗೆ ಗೊತ್ತು’| ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ದೇಶಾದ್ಯಂತ ಮುಂದುವರೆದ ಪ್ರತಿಭಟನೆ|
ಡಮ್ಕಾ(ಡಿ.15): ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ನಡೆಯುತ್ತಿರುವ ಪ್ರತಿಭಟನೆಗಳಿಗೆ ಕಾಂಗ್ರೆಸ್ ಕುಮ್ಮಕ್ಕು ನೀಡುತ್ತಿದೆ ಎಂದು ಪ್ರಧಾನಿ ಮೋದಿ ಆರೋಪಿಸಿದ್ದಾರೆ.
CAB ವಿರೋಧಿ ಹಿಂಸಾತ್ಮಕ ಪ್ರತಿಭಟನೆಗಳನ್ನು ನೋಡಿದರೆ, ಇದನ್ನು ಯಾರು ಮಾಡಿಸುತ್ತಿದ್ದಾರೆ ಎಂದು ಸ್ಪಷ್ಟವಾಗಿ ಗೊತ್ತಾಗುತ್ತದೆ ಎಂದು ಮೋದಿ ಹೇಳಿದರು.
CAB: ಈಶಾನ್ಯಕ್ಕೆ ರಾ‘ಜೀವ’ ತುಂಬಿದ ಚಂದ್ರಶೇಖರ್!
ಜಾರ್ಖಂಡ್’ನ ಡಮ್ಕಾದಲ್ಲಿ ಚುನಾವಣಾ ಪ್ರಚಾರ ಸಭೆ ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಕಾಂಗ್ರೆಸ್ ಷಡ್ಯಂತ್ರಗಳ ಹೊರತಾಗಿಯೂ ಶಾಂತಿ ಕಾಪಾಡುವಲ್ಲಿ ಅಸ್ಸಾಂ ಜನತೆ ಯಶಸ್ವಿಯಾಗಿದ್ದಾರೆ ಎಂದು ಹೇಳಿದರು.
ಪೌರತ್ವ ತಿದ್ದುಪಡಿ ಮಸೂದೆ: ಅಸ್ಸಾಂ ಏಕೆ ಕೊತ ಕೊತ ಕುದಿಯುತ್ತಿದೆ?
ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನ ರದ್ದುಗೊಳಿಸಿದಾಗ ಪಾಕಿಸ್ತಾನ ವಿದೇಶಗಳಲ್ಲಿರುವ ಭಾರತದ ರಾಯಭಾರ ಕಚೇರಿಗಳ ಮುಂದೆ ಪ್ರತಿಭಟನೆ ನಡೆಸಿತು. ಇದೇ ಕೆಲಸವನ್ನು ಕಾಂಗ್ರೆಸ್ ಈಶಾನ್ಯ ರಾಜ್ಯಗಳಲ್ಲಿ ಮಾಡುತ್ತಿದೆ ಎಂದು ಮೋದಿ ಹರಿಹಾಯ್ದರು.
ಈ ಮಧ್ಯೆ CAB ವಿರುದ್ಧ ಈಶಾನ್ಯ ರಾಜ್ಯಗಳಲ್ಲಿ ಪ್ರತಿಭಟನೆ ಮುಂದುವರೆದಿದೆ. ಅಸ್ಸಾಂ, ಮೇಘಾಲಯ ಸೇರಿದಂತೆ ಇತರೆಡೆಯೂ ಹಿಂಸಾತ್ಮಕ ಪ್ರತಿಭಟನೆ ನಡೆಯುತ್ತಿದೆ.
ಇತ್ತ ದೆಹಲಿಯಲ್ಲೂ CAB ವಿರುದ್ಧ ಪ್ರತಿಭಟನೆ ನಡೆಯುತ್ತಿದ್ದು, ಹಲವು ಬಸ್’ಗಳಿಗೆ ಪ್ರತಿಭಟನಾಕಾರರಿಗೆ ಬೆಂಕಿ ಹಚ್ಚಿದ್ದಾರೆ.
ಮೋದಿ ಸರ್ಕಾರ ದೇಶವನ್ನು ಒಡೆಯುತ್ತಿದೆ: ಸೋನಿಯಾ ವಾಗ್ದಾಳಿ!