Asianet Suvarna News Asianet Suvarna News

ಚೆನ್ನೈ ಮಳೆಯಿಂದ ಇಡಿ ದಾಳಿ ವಿಳಂಬ, ಕೇಂದ್ರ ಬಿಜೆಪಿ ಕುಟುಕಿದ ಪ್ರಕಾಶ್ ರಾಜ್‌ಗೆ ನಟ್ಟಿಗರ ಪ್ರಶ್ನೆ!

ಜಸ್ಟ್ ಆಸ್ಕಿಂಗ್ ಪ್ರಕಾಶ್ ರಾಜ್ ಇದೀಗ ಕೇಂದ್ರ ಬಿಜೆಪಿ ಸರ್ಕಾರವನ್ನು ಕುಟುಕಿದ್ದಾರೆ. ಚೆನ್ನೈನಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದ ವಿಮಾನ ನಿಲ್ದಾಣಗಳು ಜಲಾವೃತಗೊಂಡಿದೆ. ಹೀಗಾಗಿ ಇಡಿ ಅಧಿಕಾರಿಗಳು ದಾಳಿ ನಡೆಸಲು ಸಾಧ್ಯವಾಗುತ್ತಿಲ್ಲ ಎಂದು ಕುಟುಕಿದ್ದಾರೆ. ಪ್ರಕಾಶ್ ರಾಜ್ ಟ್ವೀಟ್‌ಗೆ ಭಾರಿ 

Chennai rain cyclone spoil My ED day Prakash Raj dig PM Modi BJP Govt ckm
Author
First Published Dec 4, 2023, 9:27 PM IST

ಚೆನ್ನೈ(ಡಿ.04) ಮೈಚುಂಗ್ ಚಂಡಮಾರುತದಿಂದ ತಮಿಳುನಾಡು, ಆಂಧ್ರ ಪ್ರದೇಶದ ಕೆಲ ಭಾಗದಲ್ಲಿ ಭಾರಿ ಮಳೆಯಾಗುತ್ತಿದೆ. ರಸ್ತೆಗಳು, ಕಾರುಗಳು ಕೊಚ್ಚಿ ಹೋಗಿದೆ. ವಿಮಾನ ನಿಲ್ದಾಣ, ರೈಲು ನಿಲ್ದಾಣಗಳು ಜಲಾವೃತಗೊಂಡಿದೆ. ಇದರ ಬೆನ್ನಲ್ಲೇ ನಟ ಪ್ರಕಾಶ್ ರಾಜ್ ಕೇಂದ್ರ ಬಿಜೆಪಿ ಸರ್ಕಾರವನ್ನು ಕುಟುಕಿದ್ದಾರೆ. ಭಾರಿ ಮಳೆ ಕಾರಣ ಇಡಿ ದಾಳಿ ವಿಳಂಬವಾಗಿದೆ. ಕೆಲ ದಿನಗಳ ಕಾಲ ಕಾಯಲೇಬೇಕು ಎಂದು ಪ್ರಕಾಶ್ ರಾಜ್ ಟ್ವೀಟ್ ಮಾಡಿದ್ದಾರೆ.

ಭಾರಿ ಮಳೆ ಬೆನ್ನಲ್ಲೇ ಚೆನ್ನೆ ವಿಮಾನ ನಿಲ್ದಾಣ ಸೇವೆ ಕುರಿತ ಮಾಹಿತಿಯನ್ನು ಹಂಚಿಕೊಂಡಿತ್ತು. ಇದೇ ಮಾಹಿತಿಯನ್ನು ಹಂಚಿಕೊಂಡ ಪ್ರಕಾಶ್ ರಾಜ್, ಪನೌತಿ ಹಾಗೂ ಭಕ್ತರಿಗೆ ಇಂದು ಅತ್ಯಂತ ದುಖದ ದಿನ. ನಾಳೆ ನನ್ನ ಇಡಿ ದಿನ. ಆದರೆ ಚೆನ್ನೈನಲ್ಲಿ ಸುರಿಯುತ್ತಿರುವ ಭಾರಿ ಮಳೆ ಹಾಗೂ ಮೈಚುಂಗ್ ಚಂಡಮಾರುತ ಎಲ್ಲಾ ಲೆಕ್ಕಾಚಾರ ಉಲ್ಟಾ ಮಾಡಿದೆ.ಹೀಗಾಗಿ ನೀವು ಕಾಯಲೇಬೇಕು ಎಂದು ಪ್ರಕಾಶ್ ರಾಜ್ ಟ್ವೀಟ್ ಮಾಡಿದ್ದಾರೆ.

 

ನಟ ಪ್ರಕಾಶ್ ರಾಜ್‌ಗೆ ಇಡಿ ಶಾಕ್, 100 ಕೋಟಿ ರೂ ಪ್ರಕರಣದಲ್ಲಿ ಸಮನ್ಸ್!

ಪ್ರಕಾಶ್ ರಾಜ್ ಟ್ವೀಟ್‌ಗೆ ಪರ ವಿರೋಧಗಳು ವ್ಯಕ್ತವಾಗಿದೆ. ಚೆನ್ನೈ ಮಳೆ, ಇಡಿ ದಾಳಿ, ಬಿಜೆಪಿ ನಡುವೆ ರಾಹುಲ್ ಗಾಂಧಿಯನ್ನು ಯಾಕೆ ತರುತ್ತಿದ್ದೀರಿ ಎಂದು ಕೆವಲರು ಪ್ರಕಾಶ್ ರಾಜ್ ಹಾಗೂ ಕಾಂಗ್ರೆಸ‌ನ್ನು ಕುಟುಕಿದೆ. ಪ್ರಕಾಶ್ ರಾಜ್ ತಮ್ಮ ಟ್ವೀಟ್‌ನಲ್ಲಿ ಪನೌತಿ ಹಾಗೂ ಭಕ್ತರಿಗೆ ದುಃಖದ ದಿನ ಎಂದು ಬರೆದಿದ್ದಾರೆ. ರಾಹುಲ್ ಗಾಂಧಿ ಇತ್ತೀಚಗೆ ಪ್ರಧಾನಿ ಮೋದಿಗೆ ಪನೌತಿ(ಅಪಶಕುನ) ಎಂದು ಕರೆದಿದ್ದರು. ಆದರೆ ಪಂಚ ರಾಜ್ಯ ಚುನಾವಣೆ ಬಳಿಕ ರಾಹುಲ್ ಗಾಂಧಿ ದೊಡ್ಡ ಪನೌತಿ ಎಂದು ಟ್ರೆಂಡ್ ಆಗಿತ್ತು.

 

 

ನವೆಂಬರ್ ತಿಂಗಳ ಆರಂಭದಲ್ಲಿ ತೆರಿಗೆ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ತಮಿಳುನಾಡಿನ ಲೋಕೋಪಯೋಗಿ ಸಚಿವ ಇ.ವಿ. ವೇಲು ಅವರ ಮನೆ ಹಾಗೂ ಅವರಿಗೆ ಸಂಬಂಧಿಸಿದ ಆಸ್ತಿಗಳ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿತ್ತು. ಚೆನ್ನೈ, ಕೊಯಮತ್ತೂರು, ಕರೂರು, ತಿರುವಣ್ಣಾಮಲೈ, ಬೆಂಗಳೂರು ಸೇರಿದಂತೆ ಹಲವು ಕಡೆ ಅಧಿಕಾರಿಗಳು ಶೋಧ ಕಾರ್ಯ ನಡೆಸಿದ್ದಾರೆ. ಶಿಕ್ಷಣ ಸಂಸ್ಥೆಗಳು, ಮರಳು ಕ್ವಾರಿ ಮತ್ತು ಕಟ್ಟಡ ನಿರ್ಮಾಣ ಹೆಸರಿನಲ್ಲಿ ಭಾರೀ ತೆರಿಗೆ ವಂಚನೆ ನಡೆಸಿದ ಆರೋಪದ ಹಿನ್ನೆಲೆಯಲ್ಲಿ ಈ ದಾಳಿ ನಡೆಸಲಾಗಿತ್ತು. 

ಮೋದಿಯನ್ನು ಈ ಪರಿ ಜಪಿಸ್ಬೇಡ ಪುಣ್ಯಾತ್ಮ, ಆಸ್ಪತ್ರೆ ಸೇರಬೇಕಾದೀತು... ಪ್ರಕಾಶ್​ ರಾಜ್​ಗೆ ನೆಟ್ಟಿಗರ ತರಾಟೆ

ಇವರು ಕೇಂದ್ರದ ತನಿಖಾ ಸಂಸ್ಥೆಗಳಿಂದ ದಾಳಿಗೊಳಗಾಗುತ್ತಿರುವ ತಮಿಳುನಾಡಿ ಮೂರನೇ ಸಚಿವರಾಗಿದ್ದಾರೆ. ಈ ಹಿಂದೆ ಸಚಿವ ಸೆಂಥಿಲ್‌ ಬಾಲಾಜಿ, ಪೊನ್ಮುಡಿ ನಿವಾಸದ ಮೇಲೆ ಇ.ಡಿ ದಾಳಿ ನಡೆಸಿತ್ತು. 

Follow Us:
Download App:
  • android
  • ios