Asianet Suvarna News Asianet Suvarna News

ಕೊರೋನಾ ರೋಗಿಗೆ ಚೆನ್ನೈನಲ್ಲಿ ಏಷ್ಯಾದ ಮೊದಲ ಶ್ವಾಸಕೋಶ ಕಸಿ!

ಕೊರೋನಾ ರೋಗಿಗೆ ಚೆನ್ನೈನಲ್ಲಿ ಏಷ್ಯಾದ ಮೊದಲ ಶ್ವಾಸಕೋಶ ಕಸಿ!| ಗುರುಗ್ರಾಮ ಉದ್ಯಮಿಗೆ ಮರುಜೀವ

Chennai Doctors Perform Asia First Lung Transplant On Covid Survivor
Author
Bangalore, First Published Aug 30, 2020, 10:28 AM IST

ಚೆನ್ನೈ/ ಮುಂಬೈ(ಆ.30): ಕೊರೋನಾ ವೈರಸ್‌ನಿಂದ ಬಳಲುತ್ತಿದ್ದ ಗುರುಗ್ರಾಮ ಮೂಲದ 48 ವರ್ಷದ ಉದ್ಯಮಿಯೊಬ್ಬರಿಗೆ ಮೆದುಳು ನಿಷ್ಕಿ್ರಯಗೊಂಡ ವ್ಯಕ್ತಿಯೊಬ್ಬನ ಶ್ವಾಸಕೋಶವನ್ನು ಯಶಸ್ವಿಯಾಗಿ ಕಸಿ ಮಾಡುವ ಮೂಲಕ ಚೆನ್ನೈನ ಎಂಜಿಎಂ ಆಸ್ಪತ್ರೆ ಹೊಸ ಇತಿಹಾಸವೊಂದನ್ನು ನಿರ್ಮಿಸಿದೆ.

ದೇಶದಲ್ಲೀಗ 20 ಲಕ್ಷ ಮಂದಿ ಕೊರೋನಾ ಸೋಂಕಿತರು..!

ಕೊರೋನಾದಿಂದ ತೀವ್ರವಾಗಿ ಘಾಸಿಯಾದ ಶ್ವಾಸಕೋಶವನ್ನು ತೆಗೆದು ಇನ್ನೊಬ್ಬ ವ್ಯಕ್ತಿಯ ಶ್ವಾಸಕೋಶವನ್ನು ಜೋಡಿಸುವ ಶಸ್ತ್ರ ಚಿಕಿತ್ಸೆಯನ್ನು ನೆರವೇರಿಸಿದ್ದು ಏಷ್ಯಾದಲ್ಲೇ ಪ್ರಥಮ. ಶಸ್ತ್ರ ಚಿಕಿತ್ಸೆಗೆ ಒಳಗಾದ ಉದ್ಯಮಿ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಕೊರೋನಾ ಸೋಂಕಿಗೆ ತುತ್ತಾದ ರೋಗಿಗಳನ್ನು ಬದುಕಿಸಲು ಅಂಗಾಂಗ ಕಸಿ ಹೊಸ ಆಶಾವಾದನ್ನು ಹುಟ್ಟುಹಾಕಿದೆ.

ಶಸ್ತ್ರ ಚಿಕಿತ್ಸೆ ಹೇಗೆ?:

ಚೆನ್ನೈನ ಗ್ಲೆನೆಗಲ್ಸ್‌ ಗ್ಲೋಬಲ್‌ ಆಸ್ಪತ್ರೆಯಲ್ಲಿ ಮೆದುಳು ನಿಷ್ಕಿ್ರಯಗೊಂಡ 34 ವರ್ಷದ ವ್ಯಕ್ತಿಯ ಹೃದಯ, ಶ್ವಾಸಕೋಶ, ಚರ್ಮವನ್ನು ವಿವಿಧ ಆಸ್ಪತ್ರೆಗಳ ರೋಗಿಗಳಿಗೆ ನೀಡಲು ಮೃತನ ಪತ್ನಿ ಒಪ್ಪಿಗೆ ಸೂಚಿಸಿದ್ದಳು. ಈ ಹಿನ್ನೆಲೆಯಲ್ಲಿ ಎಂಜಿಎಂ ಆಸ್ಪತ್ರೆಯಲ್ಲಿ ಹೃದಯ ಮತ್ತು ಶ್ವಾಸಕೋಶ ಕಸಿ ಚಿಕಿತ್ಸೆಯನ್ನು ನೆರವೇರಿಸಲಾಗಿತ್ತು. ಗುರುಗ್ರಾಮ ಮೂಲದ ಉದ್ಯಮಿಗೆ ಆ.27ರಂದು ನಡೆಸಿದ ಶ್ವಾಸಕೋಶ ಕಸಿ ಯಶಸ್ವಿಯಾಗಿದ್ದು, ಎರಡೂ ಶ್ವಾಸಕೋಶಗಳು ಕಾರ್ಯನಿರ್ವಹಿಸುತ್ತಿವೆ ಎಂದು ವೈದ್ಯರು ತಿಳಿಸಿದ್ದಾರೆ.

ಮಾಸ್ಕ್ ಡೇ, ಮತ್ತೆ ಲಾಕ್‌ಡೌನ್ ಬಗ್ಗೆ ಬಿಎಸ್‌ವೈ ಸುದ್ದಿಗೋಷ್ಠಿಯ ಪ್ರಮುಖಾಂಶಗಳು..!

ಜೂ.8ರಂದು ಸೋಂಕಿಗೆ ತುತ್ತಾಗಿದ್ದ ಉದ್ಯಮಿಯ ಶ್ವಾಸಕೋಶಕ್ಕೆ ತೀವ್ರ ಹಾನಿ ಸಂಭವಿಸಿತ್ತು. ತೀವ್ರ ಉಸಿರಾಟ ತೊಂದರೆ ಹಿನ್ನೆಲೆಯಲ್ಲಿ ಅವರನ್ನು ಗಾಜಿಯಾಬಾದ್‌ನಿಂದ ಚೆನ್ನೈನ ಎಂಜಿಎಂ ಆಸ್ಪತ್ರೆಗೆ ಏರ್‌ಲಿಫ್ಟ್‌ ಮಾಡಲಾಗಿತ್ತು. ವೆಂಟಿಲೇಟರ್‌ ವ್ಯವಸ್ಥೆಯಲ್ಲಿರುವ ಉದ್ಯಮಿ ಶಸ್ತ್ರಚಿಕಿತ್ಸೆಯ ಬಳಿಕ ಚೇತರಿಸಿಕೊಳ್ಳುತ್ತಿದ್ದಾರೆ.

Follow Us:
Download App:
  • android
  • ios