ಬೆಂಗಳೂರು, (ಜೂನ್.15): ರಾಜ್ಯದಲ್ಲಿ 'ಮಾಸ್ಕ್' ಡೇ ಎಂಬ ವಿನೂತನ ಕಾರ್ಯಕ್ರಮ ಮಾಡುವುದಾಗಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಘೊಷಿಸಿದ್ದಾರೆ.

ಇಂದು (ಸೋಮವಾರ) ಗೃಹ ಕಚೇರಿ ಕೃಷ್ಣಾದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ, ಇದೇ ಬರುವ ಗುರುವಾರ ಮಾಸ್ಕ್ ಡೇ ಎಂಬ ವಿನೂತನ ಕಾರ್ಯಕ್ರಮ ಮಾಡಲಾಗುತ್ತದೆ. ವಿಧಾನಸೌಧದ ಅಂಬೇಡ್ಕರ್ ಪ್ರತಿಮೆ ಬಳಿ ಕಾರ್ಯಕ್ರಮ ನಡೆಯಲಿದೆ ಎಂದು ಸ್ಪಷ್ಟಪಡಿಸಿದರು.

ನವೆಂಬರ್‌ನಲ್ಲಿ ಜೋರಾಗಲಿದೆಯಂತೆ ಕೊರೊನಾ ಸುನಾಮಿ; ಶ್ವಾಸಕೋಶ ತಜ್ಞರ ಅಭಿಪ್ರಾಯವಿದು! 

ಮಾಸ್ಕ್ ಹಾಕಿಕೊಂಡು ಸಾಮಾಜಿಕ ಕಾಯ್ದುಕೊಂಡು ನಡಿಗೆ ಮೂಲಕ ಜಾಗೃತಿ ಮೂಡಿಸುತ್ತೇವೆ. ಮಾಸ್ಕ್ ಕಡ್ಡಾಯಗೊಳಿಸುವ ನಿಟ್ಟಿನಲ್ಲಿ ಜನರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ಇದರಲ್ಲಿ ಚಿತ್ರ ನಟರು, ಣ್ಯರು ಭಾಗವಹಿಸಿಲಿದ್ದಾರೆ ಎಂದು ಸಿಎಂ ಹೇಳಿದರು.

ಮತ್ತೆ ಲಾಕ್‌ಡೌನ್ ಇಲ್ಲ
ಇದೇ ವೇಳೆ ಮತ್ತೆ ಲಾಕ್‌ಡೌನ್ ಎನ್ನುವ ಸುದ್ದಿ ಗರಿದಾಡುತ್ತಿರುವುದಕ್ಕೆ ಪ್ರತಿಕ್ರಿಯಿಸಿದ ಸಿಎಂ, ರಾಜ್ಯದಲ್ಲಿ ಮತ್ತೆ ಲಾಕ್‌ಡೌನ್ ಜಾರಿಗೊಳಿಸುವ ಯೋಚನೆ ಇಲ್ಲ. ವಾರಾಂತ್ಯದ ಕರ್ಫ್ಯೂ ಜಾರಿಯೂ ಮಾಡುವುದಿಲ್ಲ. ಪ್ರಧಾನಿ ಮೋದಿ ಜೊತೆ ಸಂವಾದ್ ವೇಳೆ ಮತ್ತಷ್ಟು ವಿನಾಯಿತಿ ಕೋರಲಾಗುವುದು ಎಂದು ಸ್ಪಷ್ಟಪಡಿಸಿದರು.

ಇನ್ನು ಸುದ್ದಿಗೋಷ್ಠಿಯಲ್ಲಿ ರಾಜ್ಯದಲ್ಲಿ ಕೊರೋನಾ ಸ್ಥಿತಿಗತಿ ಬಗ್ಗೆ ಮಾಹಿತಿ ಹಂಚಿಕೊಂಡಿದ್ದು, ಅದು ಈ ಕೆಳಗಿನಂತಿದೆ.

*ಮಹಾರಾಷ್ಟ್ರದಿಂದ ಬರೋರಿಗೆ 7 ದಿನ ಇನ್ಸ್ಟಿಟ್ಯೂಟಷನ್ ಕ್ವಾರಂಟೈನ್, 7 ದಿನ ಹೋಮ್ ಕ್ವಾರಂಟೈನ್.
* ಚೆನ್ನೈ ದೆಹಲಿಯಿಂದ ಬರೋರಿಗೆ 3 ದಿನ ಇನ್ಸ್ಟಿಟ್ಯೂಟಷನ್ ಕ್ವಾರಂಟೈನ್, 3 ದಿನ ಹೋಮ್ ಕ್ವಾರಂಟೈನ್.
* ಈವರೆಗೆ ರಾಜ್ಯದಲ್ಲಿ 7000 ಕೇಸುಗಳಿದ್ದು, ಈ ಪೈಕಿ 3955 ಜನರು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.
* 71 ಲ್ಯಾಬ್‌ಗಳಿದ್ದು, ಇದರಲ್ಲಿ 30 ಖಾಸಗಿ ಲ್ಯಾಬ್ ಗಳು
* ಒಟ್ಟಾರೇ 4,4o,684 ಪರೀಕ್ಷೆಗು ನಡೆದಿವೆ.
* ಇದುವರೆಗೆ ರಾಜ್ಯದಲ್ಲಿ 2956 ಅಕ್ಟೀವ್ ಕೇಸ್ ಇದೆ.
* ಬೆಂಗಳೂರಿನಲ್ಲಿ ಒಟ್ಟು 697 ಕೇಸ್‌ಗಳಿವೆ, ಸಾವಿನ ಸಂಖ್ಯೆ 36.
*ರೋಗ ಲಕ್ಷಣಗಳಿಲ್ಲದೇ ಸೋಂಕು ಹರಿಡುತ್ತಿರುವ ಪ್ರಕರಣಗಳು ಶೇ.93ರಷ್ಟು.
* ರೋಗ ಲಕ್ಷಣಗಳ ಕಂಡು ಬಂದಿರುವುದು ಕೇವಲ ಶೇ.7ರಷ್ಟಿದೆ.
* 10 ಸಾವಿರ ಜನರಲ್ಲಿ 7300 ಟೆಸ್ಟ್‌ಗಳನ್ನ ಮಾಡಲಾಗುತ್ತಿದೆ.
* ಸ್ಟೇಟ್ ಮಾರ್ಟಲಿಟಿ ರೇಟ್ 1.2%.
* ಸ್ಟೇಟ್ ರಿಕವರಿ ರೇಟ್ 56% ಇದೆ.