ಅಂತಾರಾಷ್ಟ್ರೀಯ ಪ್ರಯಾಣಿಕರು ಲಗೇಜ್‌ನಲ್ಲಿ ಸ್ವೀಟ್ ತರೋಹಾಗಿಲ್ಲ, ವಿಮಾನನಿಲ್ದಾಣದ ಹೊಸ ರೂಲ್ಸ್!
ಶ್ರೀಲಂಕಾಕ್ಕೆ ತೆರಳುವ ಪ್ರಯಾಣಿಕರು ರಾತ್ರಿ ಉಡುಪುಗಳು ಮತ್ತು ಕಾಟನ್ ಸೀರೆಗಳನ್ನು ತಮ್ಮೊಂದಿಗೆ ಕೊಂಡೊಯ್ಯಲು ಚೆನ್ನೈ ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳು ಅನುಮತಿ ನೀಡಿಲ್ಲ.

ಚೆನ್ನೈ (ಅ.28): ಇಡೀ ದೇಶದ ಏರ್‌ಪೋರ್ಟ್‌ಗಳಲ್ಲಿ ಒಂದು ನಿಮಯವಾದರೆ, ಚೆನ್ನೈ ವಿಮಾನ ನಿಲ್ದಾಣ ತನ್ನದೇ ಆದ ಹೊಸ ಹೊಸ ನಿಯಮಗಳನ್ನು ಜಾರಿ ಮಾಡುತ್ತಿದೆ ಎಂದು ಸಾರ್ವಜನಿಕರು ಸೋಶಿಯಲ್ ಮೀಡಿಯಾದಲ್ಲಿ ಆಕ್ರೋಶ ಹೊರಹಾಕಿದ್ದಾರೆ. ಅದಕ್ಕೆ ಕಾರಣ, ಅಂತಾರಾಷ್ಟ್ರೀಯ ಪ್ರಯಾಣಿಕರು ತಮ್ಮ ಲಗೇಜ್‌ಗಳಲ್ಲಿ ಸ್ವೀಟ್ಸ್ ಬಾಕ್ಸ್ ತರಲು ಕೂಡ ಚೆನ್ನೈ ಏರ್‌ಪೋರ್ಟ್ ನಿಷೇಧ ಹೇರಿದೆ. ಇದರ ಬೆನ್ನಲ್ಲಿಯೇ ಚೆನ್ನೈ ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳ ವಿರುದ್ಧ ಅಸಮಾಧಾನ ತೋಡಿಕೊಂಡಿದ್ದಾರೆ. ಕಳೆದ ವಾರ ನಾಲ್ವರು ಪ್ರಯಾಣಿಕರು ಬ್ಯಾಂಕಾಕ್‌ಗೆ ತೆರಳಲು ಚೆನ್ನೈ ವಿಮಾನ ನಿಲ್ದಾಣಕ್ಕೆ ಬಂದಿದ್ದರು. ತಪಾಸಣೆ ವೇಳೆ ಕಸ್ಟಮ್ಸ್ ಅಧಿಕಾರಿಗಳು ಪ್ರಯಾಣಿಕರು ತಮ್ಮೊಂದಿಗೆ ಸ್ವೀಟ್ ಬಾಕ್ಸ್ ಗಳನ್ನು ಕೊಂಡೊಯ್ಯುತ್ತಿರುವುದು ಕಂಡು ಬಂದಿದ್ದು, ವಿಮಾನದೊಳಗೆ ಸಿಹಿತಿಂಡಿಗಳನ್ನು ಅನುಮತಿಸಲಾಗುವುದಿಲ್ಲ ಎಂದು ಅಧಿಕಾರಿಗಳು ಪ್ರಯಾಣಿಕರಿಗೆ ತಿಳಿಸಿದ್ದಾರೆ ಎನ್ನಲಾಗಿದೆ. ಹಬ್ಬದ ಹಿನ್ನೆಲೆಯಲ್ಲಿ ಚೆನ್ನೈನಿಂದ ಸಿಹಿತಿಂಡಿಗಳನ್ನು ತೆಗೆದುಕೊಂಡು ಹೋಗುತ್ತಿದ್ದೇವೆ ಎಂದು ಪ್ರಯಾಣಿಕರು ಅಧಿಕಾರಿಗಳಿಗೆ ವಿವರಿಸಲು ಪ್ರಯತ್ನಿಸಿದರು ಆದರೆ ಅಧಿಕಾರಿಗಳು ಪ್ರಯಾಣಿಕರಿಗೆ ಸಿಹಿತಿಂಡಿಗಳನ್ನು ಸಾಗಿಸಲು ಅವಕಾಶ ನೀಡಲಿಲ್ಲ ಮತ್ತು ನಂತರ ಅವರು ಟಿಕೆಟ್‌ಗಳನ್ನು ರದ್ದುಗೊಳಿಸಿದರು ಎಂದು ವರದಿಯಾಗಿದೆ.
ಆ ಬಳಿಕ ಈ ನಾಲ್ವರು ಪ್ರಯಾಣಿಕರು ಚೆನ್ನೈನಿಂದ ದೇಶೀಯ ವಿಮಾನದಲ್ಲಿ ಮುಂಬೈಗೆ ಪ್ರಯಾಣ ಬೆಳೆಸಿದರು ಮತ್ತು ಅಲ್ಲಿಂದ ಬ್ಯಾಂಕಾಕ್‌ಗೆ ತೆರಳಿದರು ಮತ್ತು ಸ್ವೀಟ್ ಬಾಕ್ಸ್‌ಗಳನ್ನು ಸಾಗಿಸುವುದನ್ನು ಮುಂಬೈ ಕಸ್ಟಮ್ಸ್ ಅಲ್ಲಿ ತಡೆಯಲಿಲ್ಲ. ಅದೇ ರೀತಿ ಶ್ರೀಲಂಕಾಕ್ಕೆ ತೆರಳುವ ಪ್ರಯಾಣಿಕರು ರಾತ್ರಿ ಉಡುಪುಗಳು ಮತ್ತು ಕಾಟನ್ ಸೀರೆಗಳನ್ನು ತಮ್ಮೊಂದಿಗೆ ಕೊಂಡೊಯ್ಯಲು ಚೆನ್ನೈ ವಿಮಾನ ನಿಲ್ದಾಣದ ಕಸ್ಟಮ್ಸ್ ಅನುಮತಿ ನೀಡುತ್ತಿಲ್ಲ.
ಸಾಮಾನ್ಯವಾಗಿ, ಶ್ರೀಲಂಕಾದ ಜನರ ಸಂಬಂಧಿಕರು ಹಬ್ಬದ ಋತುವಿನಲ್ಲಿ ಚೆನ್ನೈನಿಂದ ಉಡುಪುಗಳು ಮತ್ತು ಕಾಟನ್ ಸೀರೆಗಳನ್ನು ದೊಡ್ಡ ಪ್ರಮಾಣದಲ್ಲಿ ತೆಗೆದುಕೊಂಡು ಹೋಗುತ್ತಾರೆ. ಈಗ ಕಸ್ಟಮ್ಸ್ ಪ್ರಯಾಣಿಕರಿಗೆ ಹೊಚ್ಚಹೊಸ ಬಟ್ಟೆಗಳನ್ನು ತಮ್ಮೊಂದಿಗೆ ಶ್ರೀಲಂಕಾಕ್ಕೆ ಕೊಂಡೊಯ್ಯಲು ಅವಕಾಶ ನೀಡುತ್ತಿಲ್ಲ. ಈ ಘಟನೆಗಳ ನಂತರ ಅಂತರಾಷ್ಟ್ರೀಯ ಪ್ರಯಾಣಿಕರು ಬೆಂಗಳೂರು, ಕೊಚ್ಚಿ ಮತ್ತು ತಿರುವನಂತಪುರಂಗಳಿಗೆ ಹೆಚ್ಚಾಗಿ ಪ್ರಯಾಣಿಸುತ್ತಿದ್ದಾರೆ ಮತ್ತು ಅಲ್ಲಿಂದ ಅವರು ಅಂತರರಾಷ್ಟ್ರೀಯ ಪ್ರಯಾಣಿಕರಾಗಿ ಪ್ರಯಾಣಿಸುತ್ತಿದ್ದಾರೆ. ಎಲ್ಲ ವಿಮಾನ ನಿಲ್ದಾಣಗಳಿಗೂ ಕಸ್ಟಮ್ಸ್ ನಿಯಮಗಳು ಸಾಮಾನ್ಯ ಆದರೆ ಇಲ್ಲಿ ಚೆನ್ನೈನಲ್ಲಿ ಅಧಿಕಾರಿಗಳು ತಮಗೆ ಬೇಕಾದಂತೆ ನಿಯಮಗಳನ್ನು ಬದಲಾಯಿಸುತ್ತಿದ್ದಾರೆ ಎಂದು ಪ್ರಯಾಣಿಕರು ಬೇಸರ ವ್ಯಕ್ತಪಡಿಸಿದ್ದಾರೆ.
ಕೇವಲ 30 ನಿಮಿಷದಲ್ಲಿ ಬೆಂಗಳೂರಿನಿಂದ ಚೆನ್ನೈಗೆ ಪ್ರಯಾಣ, ಇದು ಸಾಧ್ಯ ಎಂದು ತೋರಿಸಿದ ಐಐಟಿ ಮದ್ರಾಸ್!
ಈ ವಿಚಾರವಾಗಿ ಚೆನ್ನೈ ವಿಮಾನ ನಿಲ್ದಾಣದ ಕಸ್ಟಮ್ಸ್ ಅನ್ನು ಸಂಪರ್ಕಿಸಿದಾಗ, ಅಧಿಕಾರಿಗಳು ಇಲ್ಲಿ ವಿಮಾನ ನಿಲ್ದಾಣದಲ್ಲಿ ಸರ್ಕಾರದ ನಿಯಮಗಳನ್ನು ಮಾತ್ರ ಅನುಸರಿಸುತ್ತಿದ್ದಾರೆ ಮತ್ತು ದೇಶದ ಇತರ ವಿಮಾನ ನಿಲ್ದಾಣಗಳು ಅನುಸರಿಸುವ ಮಾನದಂಡಗಳ ಬಗ್ಗೆ ಅವರಿಗೆ ತಿಳಿದಿಲ್ಲ ಎಂದು ಹೇಳಿದ್ದಾರೆ.
ಗೆಳೆಯನಿಗೆ 2 ಸಾವಿರ ಟ್ರಾನ್ಸ್‌ಫಾರ್ ಮಾಡಿದವನ ಖಾತೆಗೆ ಬಂದು ಬಿತ್ತು 753 ಕೋಟಿ..!