ಗೆಳೆಯನಿಗೆ 2 ಸಾವಿರ ಟ್ರಾನ್ಸ್‌ಫಾರ್ ಮಾಡಿದವನ ಖಾತೆಗೆ ಬಂದು ಬಿತ್ತು 753 ಕೋಟಿ..!
ಗೆಳೆಯನೋರ್ವನ ಖಾತೆಗೆ 2 ಸಾವಿರ ರೂಪಾಯಿ ಹಾಕಿದ ವ್ಯಕ್ತಿಗೆ ಲಾಟರಿ ಮಗುಚಿದಂತಾಗಿದೆ. ಶನಿವಾರ ಚೆನ್ನೈ ಮೂಲದ ವ್ಯಕ್ತಿಯೊಬ್ಬರು ತಮ್ಮ ಗೆಳೆಯನ ಖಾತೆಗೆ 2 ಸಾವಿರ ರೂಪಾಯಿಯನ್ನು ವರ್ಗಾವಣೆ ಮಾಡಿದ್ದರು. ಇದಾದ ನಂತರ ಇವರ ಖಾತೆಗೆ 753 ರೂಪಾಯಿ ಬಂದು ಬಿದ್ದಿದ್ದು ಆತ ಅಚ್ಚರಿಗೊಂಡಿದ್ದಾನೆ.

ಚೆನ್ನೈ: ಗೆಳೆಯನೋರ್ವನ ಖಾತೆಗೆ 2 ಸಾವಿರ ರೂಪಾಯಿ ಹಾಕಿದ ವ್ಯಕ್ತಿಗೆ ಲಾಟರಿ ಮಗುಚಿದಂತಾಗಿದೆ. ಶನಿವಾರ ಚೆನ್ನೈ ಮೂಲದ ವ್ಯಕ್ತಿಯೊಬ್ಬರು ತಮ್ಮ ಗೆಳೆಯನ ಖಾತೆಗೆ 2 ಸಾವಿರ ರೂಪಾಯಿಯನ್ನು ವರ್ಗಾವಣೆ ಮಾಡಿದ್ದರು. ಇದಾದ ನಂತರ ಇವರ ಖಾತೆಗೆ 753 ರೂಪಾಯಿ ಬಂದು ಬಿದ್ದಿದ್ದು ಆತ ಅಚ್ಚರಿಗೊಂಡಿದ್ದಾನೆ. ನಗರದ ಪಾರ್ಮರ್ಸಿಯಲ್ಲಿ ಕೆಲಸ ಮಾಡುತ್ತಿದ್ದ ಮುಹಮ್ಮದ್ ಇದ್ರಿಸ್ ಎಂಬುವವರು ತಮ್ಮ ಸ್ನೇಹಿತನೋರ್ವನ ಬ್ಯಾಂಕ್ ಖಾತೆಗೆ ತಮ್ಮ ಕೊಟಕ್ ಮಹೀಂದ್ರ ಬ್ಯಾಂಕ್ ಖಾತೆಯಿಂದ ಶುಕ್ರವಾರ ಹಣ ವರ್ಗಾವಣೆ ಮಾಡಿದ್ದರು. ಇದಾದ ನಂತರ ಅವರು ತಮ್ಮ ಖಾತೆಯಲ್ಲಿ ಬ್ಯಾಲೆನ್ಸ್ ಎಷ್ಟಿದೆ ಎಂದು ಚೆಕ್ ಮಾಡಿದಾಗ ಅಚ್ಚರಿಗೊಳ್ಳುವ ಸರದಿ ಅವರದಾಗಿತ್ತು.
ನಮ್ಮ ಯುದ್ಧ ನಾವೇ ಮಾಡುತ್ತೇವೆ: ಸುತ್ತಲೂ ಶತ್ರುಗಳನ್ನೇ ಹೊಂದಿರುವ ಪುಟ್ಟದೇಶ ಇಸ್ರೇಲ್‌ನ ಆತ್ಮವಿಶ್ವಾಸದ ನುಡಿ
ಬ್ಯಾಂಕ್ ಬ್ಯಾಲೆನ್ಸ್ ಚೆಕ್ ಮಾಡಿದಾಗ ಅಲ್ಲಿ 753 ಕೋಟಿ ರೂಪಾಯಿ ಇರುವುದು ಕಂಡು ಅವರು ಶಾಕ್‌ಗೆ ಒಳಗಾಗಿದ್ದರು. ಈ ವಿಚಾರವನ್ನು ಅವರು ಕೂಡಲೇ ಬ್ಯಾಂಕ್‌ನ ಗಮನಕ್ಕೆ ತಂದಿದ್ದಾರೆ. ಕೂಡಲೇ ಬ್ಯಾಂಕ್ ಇವರ ಖಾತೆಯನ್ನು ಸೀಜ್ ಮಾಡಿದ್ದು, ಬಳಿಕ ತಾಂತ್ರಿಕ ತೊಂದರೆಯ ಕಾರಣದಿಂದ ನಿಮ್ಮ ಖಾತೆಗೆ ಇಷ್ಟೊಂದು ಮೊತ್ತದ ಹಣ ಬಂದಿದೆ ಎಂದು ಮಾಹಿತಿ ನೀಡಿದೆ.
ಇತ್ತೀಚೆಗೆ ಇಂತಹ ಪ್ರಕರಣಗಳು ಹೆಚ್ಚಾಗಿ ನಡೆಯುತ್ತಿವೆ. ಯಾರದೋ ಖಾತೆಗೆ ಕೋಟ್ಯಾಂತರ ಹಣ ಬಂದು ಬಿದ್ದು ಅವರನ್ನು ಕೆಲಕಾಲ ಆತಂಕ ಅಚ್ಚರಿಗೆ ಒಳಗಾಗುವಂತೆ ಮಾಡುತ್ತಿದೆ. ಇದಕ್ಕೂ ಮೊದಲು ಚೆನ್ನೈನ ಟಾಕ್ಸಿ ಚಾಲಕರೊಬ್ಬರ ಖಾತೆಗೆ 9 ಸಾವಿರ ಕೋಟಿ ರೂಪಾಯಿ ಇದೇ ರೀತಿ ಕ್ರೆಡಿಟ್ ಆಗಿತ್ತು. ಈತ ತನ್ನ ಖಾತೆಯಲ್ಲಿದ್ದ 21 ಸಾವಿರ ರೂಪಾಯಿ ಹಣವನ್ನು ತನ್ನ ಸ್ನೇಹಿತನಿಗೆ ವರ್ಗಾವಣೆ ಮಾಡಿದ 30 ನಿಮಿಷದ ನಂತರ ಈ ಘಟನೆ ನಡೆದಿತ್ತು. ಬ್ಯಾಂಕ್ ತಮಿಳುನಾಡುವಿನ ಖಾತೆಯಲ್ಲಿ ಈ ಘಟನೆ ನಡೆದಿದ್ದು, ಕೂಡಲೇ ಬ್ಯಾಂಕ್ ತನ್ನ ತಪ್ಪನ್ನು ಅರಿತು ಅವರ ಖಾತೆಯಿಂದ ಹಣವನ್ನು ವಾಪಸ್ ಪಡೆದಿತ್ತು.
ಹೆಂಗಸರು ಮಕ್ಕಳ ಮೇಲೆ ಹಮಾಸ್ ಉಗ್ರರ ರಕ್ಕಸ ಕೃತ್ಯಗಳು: ಬಾಲಕಿಯ ಕೊಂದು ಸ್ವರ್ಗ ಸೇರಿತು ಎಂದರು
ಸುಧೀರ್ಘ ಕೆಲಸದಿಂದ ಸ್ವಲ್ಪ ಕಾಲ ವಿಶ್ರಾಂತಿಗಾಗಿ ಮಧ್ಯಾಹ್ನ ಮಲಗಿದ್ದ ವೇಳೆ ನನಗೆ ಮೆಸೇಜ್ ಬಂದಿತ್ತು. ತಮಿಳುನಾಡು ಮರ್ಕೆಂಟೈಲ್ ಬ್ಯಾಂಕ್‌ನಿಂದ ಬ್ಯಾಂಕ್‌ನಿಂದ ಬಂದ ಸಂದೇಶದಲ್ಲಿದ್ದ ಇಷ್ಟು ದೊಡ್ಡ ಮೊತ್ತ ನೋಡಿ ನಾನು ಅಚ್ಚರಿಗೊಂಡಿದೆ, ಅಷ್ಟೊಂದು ಸೊನ್ನೆಗಳನ್ನು ಹೊಂದಿರುವ ಕಾರಣ ನಾನು ಅದನ್ನು ಎಷ್ಟು ಮೊತ್ತ ಎಂದು ಓದಲು ಕೂಡ ಸಾಧ್ಯವಿರಲಿಲ್ಲ ಎಂದು ಅವರು ಹೇಳಿಕೊಂಡಿದ್ದರು.