ಬೆಂಗಳೂರು ಹಾಗೂ ಚೆನ್ನೈ ನಡುವಿನ 350 ಕಿಲೋಮೀಟರ್‌ ದೂರ ಪ್ರಯಾಣಿಸಲು ಪ್ರಸ್ತುತ ಕನಿಷ್ಠ ಏಳೂವರೆ ಗಂಟೆಗಳು ಬೇಕು. ಆದರೆ, ಐಐಟಿ ಮದ್ರಾಸ್‌ನ ವಿದ್ಯಾರ್ಥಿಗಳು ಮಾಡಿರುವ ಹೊಸ ಆವಿಷ್ಕಾರದಲ್ಲಿ ಕೇಔಲ 30 ನಿಮಿಷದಲ್ಲಿ ಈ ದೂರವನ್ನು ಪ್ರಯಾಣ ಮಾಡಬಹುದಾಗಿದೆ.

ಬೆಂಗಳೂರು (ಅ.10): ಕರ್ನಾಟಕದ ರಾಜಧಾನಿ ಹಾಗೂ ತಮಿಳುನಾಡಿನ ರಾಜಧಾನಿ ನಡುವೆ 350 ಕಿಲೋಮೀಟರ್‌ ಅಂತರವಿದೆ. ಪ್ರಸ್ತುತ ಈ ಎರಡೂ ಮೆಟ್ರೋ ನಗರಗಳ ದೂರವನ್ನು ಕ್ರಮಿಸಲು ಏಳೂವರೆ ಗಂಟೆಗಳ ಸಮಯ ಬೇಕಾಗುತ್ತದೆ. ಆದರೆ, ಹೊಸ ಆವಿಷ್ಕಾರದಲ್ಲಿ ಚೆನ್ನೈ ಮತ್ತು ಬೆಂಗಳೂರಿನ ನಡುವಿನ ಪ್ರಯಾಣ ಕೇವಲ 30 ನಿಮಿಷಕ್ಕೆ ಇಳಿಯಲಿದೆ. ಇದು ನಿಮಗೆ ಅಚ್ಚರಿ ಅನಿಸಬಹುದು. ಆದರೆ, ಈ ಆವಿಷ್ಕಾರ ನಡೆದಿರುವುದು ನಿಜ. ಪಾರ್ಶಿಯಲ್‌ ವಾಕ್ಯುಮ್‌ ಟ್ಯೂಬ್‌ನ ಮೂಲಕ ಚೆನ್ನೈ ಹಾಗೂ ಬೆಂಗಳೂರು ನಡುವಿನ 350 ಕಿಲೋಮೀಟರ್‌ ದೂರವನ್ನು ಕೇವಲ 30 ನಿಮಿಷಗಳಲ್ಲಿ ಪ್ರಯಾಣ ಮಾಡಬಹುದಾಗಿದೆ. ಚೆನ್ನೈನಿಂದ ಬರುವ ತನ್ನ ಸಂಬಂಧಿಗಳಿಗಾಗಿ ಬೆಂಗಳೂರಿನಲ್ಲಿ ಅಡುಗೆ ತಯಾರಿ ಮಾಡುವ ಹೊತ್ತಿಗಾಗಲೇ ಈ ಸಂಬಂಧಿಗಳು ಬೆಂಗಳೂರಿಗೆ ಬಂದು ಮುಟ್ಟಿರುತ್ತಾರೆ. ಮೂಲಮಾದರಿಯ ಹೈಪರ್‌ಲೂಪ್ ಪಾಡ್ ಅನ್ನು ಬಳಸಿಕೊಂಡು, ಐಐಟಿ ಮದ್ರಾಸ್‌ನ ಇನೋವೇಟಿವ್‌ ಟೀಮ್‌ ಪ್ರಯಾಣಿಕರನ್ನು 25 ನಿಮಿಷಗಳಲ್ಲಿ ಚೆನ್ನೈನಿಂದ ಬೆಂಗಳೂರಿಗೆ ಸಾಗಿಸುವ ಗುರಿಯನ್ನು ಹೊಂದಿದೆ. ‘ಆವಿಷ್ಕಾರ್ ಹೈಪರ್‌ಲೂಪ್’ ಎಂದು ಇದಕ್ಕೆ ಹೆಸರಿಡಲಾಗಿದ್ದು, ಒಮ್ಮೆ ಇದು ಬಳಕೆಗೆ ಯೋಗ್ಯವಾದಲ್ಲಿ ಇದು ಇಡೀ ಭಾರತಕ್ಕೆ ಹೆಮ್ಮೆ ಪಡುವಂಥ ವಿಚಾರವಾಗಿದೆ. ಎಲಾನ್‌ ಮಸ್ಕ್‌ ಮಾಲೀಕತ್ವದ ಸ್ಪೇಸ್‌ಎಕ್ಸ್ ಇಂಟರ್‌ನ್ಯಾಶನಲ್ ಹೈಪರ್‌ಲೂಪ್ ಪಾಡ್ ಸ್ಪರ್ಧೆಯ ಫೈನಲ್ಸ್‌ಗೆ ಭಾರತದಿಂದ ಸಲ್ಲಿಕೆಯಾದ ಏಕೈಕ ಪಾಡ್‌ ಇದಾಗಿತ್ತು. ಎಡಿನ್‌ಬರ್ಗ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಆವಿಷ್ಕಾರ್‌ ಹೈಪರ್‌ಲೂಪ್‌ ಪಾಡ್‌ ಪ್ರಶಸ್ತಿಯನ್ನೂ ಗೆದ್ದುಕೊಂಡಿತ್ತು.

ಹೈಪರ್‌ಲೂಪ್‌ ಟ್ರಾನ್ಸ್‌ಪೋರ್ಟ್‌ಅನ್ನು ಭವಿಷ್ಯದ ಸಾರಿಗೆ ಎಂದು ಪರಿಗಣನೆ ಮಾಡಲಾಗಿದೆ. ಹೈಪರ್‌ಲೂಪ್‌ ಎನ್ನುವುದು ವಿಮಾನಗಳಗೆ ವಿರುದ್ಧವಾಗಿ ಅತಿವೇಗವಾಗಿ ಟ್ರಾನ್ಸ್‌ಪೋರ್ಟ್‌ಗೆ ನೆರವಾಗಬಲ್ಲ ಸಾರಿಗೆ. ವಿಮಾನಗಳು ಹೆಚ್ಚಿನ ವೇಗದಲ್ಲಿ ಪ್ರಯಾಣಿಸಬಹುದು. ಆದರೆ, ಸಾಕಷ್ಟು ಶಬ್ದ ಹಾಗೂ ವಾಯುಮಾಲೀನ್ಯವನ್ನು ಇದು ಉಂಟುಮಾಡುತ್ತದೆ. ಅಲ್ಲದೆ, ವಿಮಾನ ನಿಲ್ದಾಣಗಳಂಥ ಸಾಕಷ್ಟು ಮೂಲಸೌಕರ್ಯಗಳ ಅಗತ್ಯವಿರುತ್ತದೆ. ಆದರೆ, ಹೈಪರ್‌ಲೂಪ್‌ ಎನ್ನುವುದು ಟ್ರೇನ್‌ ರೀತಿಯ ವ್ಯವಸ್ಥೆಯ ವಿಮಾನ ಪ್ರಯಾಣ ಎನ್ನಬಹುದಾಗಿದೆ.

ಹೈಪರ್‌ಲೂಪ್ ಪಾಡ್‌ಗಳು ನಿರ್ವಾತ ಟ್ಯೂಬ್‌ಗಳ ಒಳಗೆ ಪ್ರಯಾಣ ಮಾಡುತ್ತವೆ. ಏಕೆಂದರೆ ಅವುಗಳು ಗಂಟೆಗೆ 1200 ಕಿಮೀ ವೇಗದಲ್ಲಿ ಪ್ರಯಾಣ ಮಾಡಯತ್ತದೆ. ಅಚ್ಚರಿ ಏನೆಂದರೆ, ಇದು ಯಾವುದೇ ರಿತಿಯ ಇಂಗಾಲವನ್ನು ಹೊರಸೂಸುವುದಿಲ್ಲ. ಆಗಮನ ಹಾಗೂ ನಿರ್ಗಮನವನ್ನು ಮೊಸಲದೇ ಯೋಜನೆ ಮಾಡಿದ್ದರೆ, ಪ್ರಯಾಣಿಕರು ಗಣನೀಯ ಪ್ರಮಾಣದ ಸಮಯವನ್ನು ಉಳಿಸಬಹುದಾಗಿದೆ.

ಭಾಗಶಃ ವಾಕ್ಯೂಮ್‌ ಟ್ಯೂಬ್‌ನಲ್ಲಿ ಹೈ ಸ್ಪೀಡ್‌ನಲ್ಲಿ ಪ್ರಯಾಣ ಮಾಡುವ ಕನಸನ್ನು ಐಐಟಿ ಮದ್ರಾಸ್‌ನ ಆವಿಷ್ಕಾರ್‌ ಹೈಪರ್‌ಲೂಪ್‌ ನಿಜ ಮಾಡಿದೆ. ಈ ಕುರಿತಂತೆ ಮಾತನಾಡಿರುವ ಪ್ರಾಜೆಕ್ಟ್‌ನ ವಿದ್ಯಾರ್ಥಿ ತಂಡದ ನಾಯಕಿ ಮೇಧಾ ಕೊಮ್ಮಜೋಸ್ಯುಲಾ,'ಈ ವರ್ಷ ನಮ್ಮ ಯೋಚನೆಯನ್ನು ವ್ಯಾಲಿಡೇಟ್‌ ಮಾಡುವ ತೀರಾ ಸನಿಹಕ್ಕೆ ಬಂದಿದ್ದೆವು. ನಮ್ಮ ಕಲ್ಪನೆಯಲ್ಲಿರುವ ಈ ಪ್ರಯೋಗವನ್ನು ಭೌತಿಕ ಪ್ರಯೋಗದೊಂದಿಗೆ ಸಾಬೀತುಪಡಿಸುವ ಹಾದಿಯಲ್ಲಿದ್ದೇವೆ' ಎಂದು ತಿಳಿಸಿದ್ದಾರೆ. ನಾವು ಈಗ ಸಾಗುತ್ತಿರುವ ವೇಗದಲ್ಲಿಯೇ ನಮ್ಮ ಕೆಲಸವನ್ನು ಮುಂದುವರಿಸಿದರೆ, ಖಂಡಿತಾ ಮುಂದಿನ 10 ವರ್ಷಗಳಲ್ಲಿ ನಾವು ನಮ್ಮ ಮೊದಲ ಹೈಪರ್‌ಲೂಪ್‌ ರೈಲನ್ನು ನಿರ್ಮಿಸಲು ಸಾಧ್ಯವಾಗುತ್ತದೆ ಎಂದು ಹೇಳಿದ್ದಾರೆ. 

ಜಗತ್ತಿನ ಮೊದಲ ಹೈಪರ್‌ಲೂಪ್‌ ಭಾರತದಲ್ಲಿ? ಏನಿದು? ಇಲ್ಲಿದೆ ಮಾಹಿತಿ

ಹೈಪರ್‌ಲೂಪ್‌ ಪಾಡ್‌ ಬಜೆಟ್‌:ಈ ಯೋಜನೆಗೆ ಈಗಾಗಲೇ ದೊಡ್ಡ ಮಟ್ಟದ ಬೆಂಬಲ ಸಿಕ್ಕಿದೆ.. ಕಳೆದ ವರ್ಷ, ಸಂಸ್ಥೆಯು ಸಂಶೋಧನೆಯನ್ನು ಪ್ರಸ್ತಾಪಿಸಿದ ನಂತರ ರೈಲ್ವೇ ಸಚಿವಾಲಯವು ಐಐಟಿ-ಮದ್ರಾಸ್‌ಗೆ 8.34 ಕೋಟಿ ರೂ. ಅನುದಾನವನ್ನು ನೀಡಿದೆ.

ಕೇವಲ 10 ನಿಮಿಷದಲ್ಲಿ ಬೆಂಗಳೂರು ಏರ್‌ಪೋರ್ಟ್‌ಗೆ ಪ್ರಯಾಣ!