ಥಾಯ್ಲೆಂಡ್‌ನಿಂದ 402 ಊಸರವಳ್ಳಿ ಮರಿಗಳ ಸ್ಮಗ್ಲಿಂಗ್, ಚೆನ್ನೈ ವಿಮಾನ ನಿಲ್ದಾಣದಲ್ಲಿ ಅರೆಸ್ಟ್!
ಬಣ್ಣ ಬಣ್ಣದ ಊಸರವಳ್ಳಿ ಮರಿಗಳನ್ನು ಥಾಯ್ಲೆಂಡ್‌ನಿಂದ ಕಳ್ಳಸಾಗಣೆ ಮಾಡಿದ ವ್ಯಕ್ತಿಯನ್ನು ಚೆನ್ನೈ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿದೆ. ಈತನಿಂದ ಊಸರವಳ್ಳಿ ಮರಿಗಳನ್ನು ರಕ್ಷಿಸಲಾಗಿದೆ.
ಚೆನ್ನೈ(ಜು.08) ಕಳ್ಳಸಾಗಣೆ ಯಾವ ಮಟ್ಟದಲ್ಲಿ ನಡೆಯುತ್ತೆ ಅನ್ನೋದು ಊಹಿಸಲು ಅಸಾಧ್ಯ. ಚಿನ್ನ ಸ್ಮಗ್ಲಿಂಗ್ ಹೊಸತೇನಲ್ಲ. ಇದರ ಜೊತೆಗೆ ಅಮೆ, ಹಾವು ಸೇರಿದಂತೆ ಇತರ ಸರಿಸೃಪಗಳನ್ನು ಕಳ್ಳಸಾಗಣೆ ಮಾಡಲಾಗುತ್ತದೆ. ಇದೀಗ ಥಾಯ್ಲೆಂಡ್‌ನಿಂದ ಚೆನ್ನೈ ವಿಮಾನ ನಿಲ್ದಾಣಕ್ಕ ಬಂದಿಳಿದ ವ್ಯಕ್ತಿಯನ್ನು ಕಸ್ಟಮ್ಸ್ ಅಧಿಕಾರಿಗಳು ಬಂಧಿಸಿದ್ದಾರೆ. ಈತನಿಂದ ಬರೋಬ್ಬರಿ 402 ಬಣ್ಣ ಬಣ್ಣದ ಊಸರವಳ್ಳಿ ಮರಿಗಳನ್ನು ವಶಪಡಿಸಿಕೊಳ್ಳಲಾಗಿದೆ.
ಸ್ಮಗ್ಲರ್ ಅತೀಕ್ ಅಹಮ್ಮದ್ ಥಾಯ್ಲೆಂಡ್‌ನ ಬ್ಯಾಂಗ್‌ಕಾಕ್ ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳ ಕಣ್ತಪ್ಪಿಸಿ ಚೆನ್ನೈಗೆ ಬಂದಿಳಿದಿದ್ದಾನೆ.ಆದರೆ ಚೆನ್ನೈ ಅಧಿಕಾರಿಗಳು ಈತನ ಬಂಧಿಸಿದ್ದಾರೆ. ಬರೋಬ್ಬರಿ 402 ಊಸರವಳ್ಳಿ ಮರಿಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಪೈಕಿ 67 ಊಸರವಳ್ಳಿ ಮರಿಗಳು ಮೃತಪಟ್ಟಿದೆ. ಕಾರ್ಟನ್ ಬಾಕ್ಸ್ ಮೂಲಕ ಕಳ್ಳಸಾಗಣೆ ಮಾಡಲಾಗಿದೆ.
ಡ್ರಗ್ಸ್ ಸ್ಮಗ್ಲಿಂಗ್ ಮಾಡುತ್ತಿದ್ದ ಮಗನನ್ನೇ ಪೊಲೀಸರಿಗೆ ಹಿಡಿದು ಕೊಟ್ಟ ತಾಯಿ!
ಜೀವಂತ ಊಸರವಳ್ಳಿ ಮರಿಗಳನ್ನು ರಕ್ಷಿಸಿದ ಅಧಿಕಾರಿಗಳ ತಂಡ, ವನ್ಯಪ್ರಾಣಿ ಅಪರಾಧ ನಿಯಂತ್ರಣ ವಿಭಾಗ ಅಧಿಕಾರಿಗಳಿಗೆ ಹಸ್ತಾಂತರಿಸಿದ್ದಾರೆ. ಈ ಮರಿಗಳಿಗೆ ಗಾಳಿಯಾಡುವ ಬಾಕ್ಸ್‌ಗಳಲ್ಲಿ ಇಡಲಾಗಿದೆ. ಬಳಿಕ ನೀರು ಸೇರಿದಂತೆ ಆಹಾರ ನೀಡಲಾಗಿದೆ. ಈ ಕುರಿತು ಥಾಯ್ಲೆಂಡ್ ಅಧಿಕಾರಿಗಳಿಗೆ ಮಾಹಿತಿ ನೀಡಿ, ಚೆನ್ನೈ ವಿಮಾನ ನಿಲ್ದಾಣದಿಂದ ವಿಮಾನದ ಮೂಲಕ ಜೀವಂತ ಊಸರವಳ್ಳಿ ಮರಿಗಳನ್ನು ಥಾಯ್ಲೆಂಡ್‌ಗೆ ಮರಳಿಸಲಾಗಿದೆ.
ಅತೀಕ್ ಅಹಮ್ಮದ್ ಚೆನ್ನೈ ವಿಮಾನ ನಿಲ್ದಾಣಕ್ಕೆ ಬಂದಿಳಿದ ಬೆನ್ನಲ್ಲೆ ನಿರಾಳರಾಗಿದ್ದಾನೆ. ಥಾಯ್ಲೆಂಡ್‌ನಿಂದ ಎಸ್ಕೇಪ್ ಆದ ತನಗೆ ಚೆನ್ನೈನಲ್ಲಿ ಅಧಿಕಾರಿಗಳ ಕಣ್ತಪ್ಪಿಸಿ ಕಳ್ಳಸಾಗಣೆ ನಡೆಸಲು ಸಾಧ್ಯ ಎಂದುಕೊಂಡಿದ್ದಾನೆ. ಆದರೆ ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ. 402 ಊಸರವಳ್ಳಿಗಳ ಪೈಕಿ 222 ಹಸಿರು ಬಣ್ಣದ ಊಸರವಳ್ಳಿ, 112 ಆರೇಂಜ್ ಬಣ್ಣ, 7 ಹಳದಿ ಹಾಗೂ 53 ನೀಲಿ ಬಣ್ಣದ ಊಸರವಳ್ಳಿಗಳಾಗಿವೆ.
ಅತೀಕ್ ಅಹಮ್ಮದ್‌ನ ಬಂಧಿಸಿದ ಅಧಿಕಾರಿಗಳು ವಿಚಾರಣೆ ಆರಂಭಿಸಿದ್ದಾರೆ. ಇದೀಗ ಅತೀಕ್ ಹಿಸ್ಟರಿ ತೆಗೆಯಲು ಮುಂದಾಗಿದ್ದಾರೆ. ಈತ ಇದಕ್ಕೂ ಮೊದಲು ಬೇರೆ ಬೇರೆ ವಿಮಾನ ನಿಲ್ದಾಣಗಳಲ್ಲಿ ಬಂದಿಳಿದಿರುವ ಮಾಹಿತಿ ಲಭ್ಯವಾಗಿದೆ. ಬ್ಯಾಂಗ್‌ಕಾಕ್‍ನಿಂದ ಭಾರತ ಹಲವು ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆಗಿದ್ದಾನೆ. ಇದು ಅಧಿಕಾರಿಗಳ ಅನುಮಾನ ಹೆಚ್ಚಿಸಿದೆ.ಇದೇ ರೀತಿ ಹಲವು ಕಳ್ಳಸಾಗಣೆ ನಡೆಸಿರುವ ಸಾಧ್ಯತೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ. ಸದ್ಯ ನ್ಯಾಯಾಂಗ ಬಂಧನದಲ್ಲಿರುವ ಅತೀಕ್ ಅಹಮ್ಮದ್ ಕುರಿತ ತನಿಖೆಯನ್ನು ಪೊಲೀಸರು ಚುರುಕುಗೊಳಿಸಿದ್ದಾರೆ.
ಗುದನಾಳದಲ್ಲಿ 1 ಕೆಜಿ ಚಿನ್ನ ಕಳ್ಳಸಾಗಾಣೆ; ಏರ್ ಇಂಡಿಯಾ ಗಗನಸಖಿ ಸೆರೆ!