ಶಾಲೆಯಿಂದ ಬರುತ್ತಿದ್ದ ಬಾಲಕಿಯ ಕೊಂಬಿನಿಂದ ಮೇಲೆಸೆದು ತುಳಿದಾಡಿದ ಹಸು : ವೀಡಿಯೋ
ಶಾಲೆಯಿಂದ ತನ್ನ ತಾಯಿ ಹಾಗೂ ತಮ್ಮನೊಂದಿಗೆ ಬರುತ್ತಿದ್ದ ಹುಡುಗಿಯೊಬ್ಬಳನ್ನು ಹಸುವೊಂದು ಕೊಂಬಿನಿಂದ ಎತ್ತಿ ಎಸೆದು ಹಿಗ್ಗಾಮುಗ್ಗಾ ತುಳಿದಾಡಿದ ಭೀಕರ ಘಟನೆ ತಮಿಳುನಾಡಿನಲ್ಲಿ ನಡೆದಿದೆ

ಚೆನ್ನೈ: ಶಾಲೆಯಿಂದ ತನ್ನ ತಾಯಿ ಹಾಗೂ ತಮ್ಮನೊಂದಿಗೆ ಬರುತ್ತಿದ್ದ ಹುಡುಗಿಯೊಬ್ಬಳನ್ನು ಹಸುವೊಂದು ಕೊಂಬಿನಿಂದ ಎತ್ತಿ ಎಸೆದು ಹಿಗ್ಗಾಮುಗ್ಗಾ ತುಳಿದಾಡಿದ ಭೀಕರ ಘಟನೆ ತಮಿಳುನಾಡಿನಲ್ಲಿ ನಡೆದಿದೆ. ಬಾಲಕಿಯೊಬ್ಬಳು ತನ್ನ ತಾಯಿ ಹಾಗೂ ತಮ್ಮನೊಂದಿಗೆ ಶಾಲೆಯಿಂದ ಮನೆಗೆ ಬರುತ್ತಿದ್ದ ವೇಳೆ ಅದೇ ದಾರಿಯಲ್ಲಿ ಬಾಲಕಿ ಸಾಗಿ ಬರುವುದಕ್ಕಿಂತ ಸ್ವಲ್ಪ ಮುಂದೆ ಹಸು ತನ್ನ ಕರುವಿನೊಂದಿಗೆ ಸಾಗುತ್ತಿತ್ತು. ಈ ವೇಳೆ ಹಸುವಿಗೆ ಏನಾಯಿತೋ ತಿಳಿಯದು ಒಮ್ಮೆಲೆ ತಿರುಗಿ ನಿಂತು ತನ್ನ ಹಿಂದೆ ಬರುತ್ತಿದ್ದ ಬಾಲಕಿ ಮೇಲೆರಗಿದೆ. ಮೊದಲಿಗೆ ಬಾಲಕಿಯನ್ನು ತನ್ನ ಕೊಂಬಿನಿಂದ ಎತ್ತಿ ಎಸೆದ ಹಸು ನಂತರ ಕೆಳಗೆ ಬಿದ್ದ ಆಕೆಯನ್ನು ಒಂದೇ ಸಮನೆ ತುಳಿದಾಡಿದೆ. ಈ ವೇಳೆ ಅಲ್ಲಿನ ನಿವಾಸಿಗಳು ದೂರದಿಂದೇ ಹಸುವನ್ನು ದೂರ ಓಡಿಸುವ ಪ್ರಯತ್ನವಾಗಿ ಹಸುವಿನ ಮೇಲೆ ಕಲ್ಲು ದೊಣ್ಣೆಗಳನ್ನು ಎಸೆದರು ಹಸು ಮಾತ್ರ ನಿಮಿಷಗಳ ಕಾಲ ಬಾಲಕಿಯನ್ನು ತುಳಿದು ತುಳಿದು ಹಾಕಿದೆ. ಈ ವೇಳೆ ಓಡಿಸಲು ಬಂದವರ ಮೇಲೂ ಹಸು (Cow attack) ದಾಳಿಗೆ ಮುಂದಾಗಿದೆ. ಕಡೆಗೂ ಅನೇಕರ ಪ್ರಯತ್ನದಿಂದ ಹಸುವನ್ನು ಓಡಿಸಲು ಜನ ಯಶಸ್ವಿಯಾಗಿದ್ದು, ಬಾಲಕಿ ಗಂಭೀರವಾಗಿ ಗಾಯಗೊಂಡಿದ್ದಾಳೆ.
ಚೆನ್ನೈನ (Chennai) ಎಂಎಂಡಿಎ ಕಾಲೋನಿಯಲ್ಲಿ (MMDA colony) ಈ ಘಟನೆ ನಡೆದಿದೆ. ಎರಡು ದಿನಗಳ ಹಿಂದೆ ಈ ಘಟನೆ ನಡೆದಿದ್ದು, ಈಗ ಆ ದೃಶ್ಯದ ಭಯಾನಕ ವೀಡಿಯೋ ವೈರಲ್ ಆಗಿದೆ. ಎಂಎಂಡಿಎ ಕಾಲೋನಿಯ ಇಲಾಂಗೋ ಸ್ಟ್ರೀಟ್‌ನಲ್ಲಿ ಘಟನೆ ನಡೆದಿದ್ದು, ಘಟನೆಯಲ್ಲಿ ಗಾಯಗೊಂಡ ಬಾಲಕಿಯನ್ನು ಆಯೇಶಾ ಎಂದು ಗುರುತಿಸಲಾಗಿದೆ. ಆರನೇ ತರಗತಿಯಲ್ಲಿ ಓದುತ್ತಿದ್ದ ಈಕೆ ತನ್ನ ತಾಯಿ ಹಾಗೂ ತಮ್ಮನೊಂದಿಗೆ ಶಾಲೆಯಿಂದ ಬರುತ್ತಿದ್ದ ವೇಳೆ ಅವಘಡ ಸಂಭವಿಸಿದೆ. ಕೂಡಲೇ ಬಾಲಕಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಪ್ರಸ್ತುತ ಆಕೆಯ ಸ್ಥಿತಿ ಸ್ಥಿರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಹಸುವಿನ ಮಾಲೀಕರ ವಿರುದ್ಧ ಪ್ರಕರಣ ದಾಖಲಾಗಿದೆ.
ಶಾಲೆ ಮುಂದೆ ರೌಡಿಗಳ ಅಟ್ಟಹಾಸ: ಪುಟ್ಟ ಮಗನ ಮುಂದೆ ಅಪ್ಪನ ಮೇಲೆ ಭೀಕರ ದಾಳಿ: ವೀಡಿಯೋ
ತಾಯಿ ಹಾಗೂ ಮಗ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದರೆ ಇತ್ತ ಬಾಲಕಿ ಹಸುವಿನ ಆಕ್ರೋಶಕ್ಕೆ ತುತ್ತಾಗಿದ್ದಾಳೆ. ತಮ್ಮಷ್ಟಕ್ಕೇ ತಾವು ಹೋಗುತ್ತಿದ್ದವರ ಮೇಲೆ ಹಸು ಏಕೆ ಹೀಗೆ ಭೀಕರವಾಗಿ ದಾಳಿ ಮಾಡಿದೆ ಎಂಬುದೇ ಅರ್ಥವಾಗುತ್ತಿಲ್ಲ. ಘಟನೆಗೆ ಸಂಬಂಧಿಸಿದಂತೆ ಚೆನ್ನೈ ಕಾರ್ಪೋರೇಷನ್ ಅಧಿಕಾರಿಗಳು ಈ ಹಸುವನ್ನು ಸೆರೆ ಹಿಡಿದು ಎಫ್‌ಐಆರ್ ದಾಖಲಿಸಿದ್ದಾರೆ. ಅದರ ಮಾಲೀಕ ವಿವೇಕ್ ಎಂಬುವವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ರೈಲ್ವೆ ರಕ್ಷಣಾ ಪಡೆ ಸಿಬ್ಬಂದಿಯಿಂದ ರೈಲಿನಲ್ಲಿ ಗುಂಡಿನ ದಾಳಿ: ಪೊಲೀಸ್ ಅಧಿಕಾರಿ ಸೇರಿ ನಾಲ್ವರು ಬಲಿ