ಪಾಕಿಸ್ತಾನದ ತಾಕತ್ತನ್ನು ನಾನೇ ನೋಡ್ಕೊಂಡು ಬಂದಿದ್ದೇನೆ: ಕಾಂಗ್ರೆಸ್‌ಗೆ ತಿವಿದ ಪ್ರಧಾನಿ ನರೇಂದ್ರ ಮೋದಿ
ಪಾಕಿಸ್ತಾನ ಪರಮಾಣು ಬಾಂಬ್ ಹೊಂದಿರುವ ದೇಶ, ಭಾರತ ಅದನ್ನು ಗೌರವಿಸಬೇಕು ಎಂದು ಹಿರಿಯ ಕಾಂಗ್ರೆಸ್ ನಾಯಕ ಮಣಿಶಂಕರ್ ಅಯ್ಯರ್ ಅವರ ಹೇಳಿಕೆಗೆ ಪ್ರಧಾನಿ ಮೋದಿ ವ್ಯಂಗ್ಯವಾಡಿದರು. ಪಾಕಿಸ್ತಾನದ ಶಕ್ತಿಯನ್ನು ನಾನೇ ಸ್ವತಃ ನೋಡ್ಕೊಂಡು ಬಂದಿದ್ದೇನೆ ಎಂದು ಹೇಳಿದ್ದಾರೆ.
ನವದೆಹಲಿ (ಮೇ.23): ಇಂಡಿಯಾ ಟಿವಿಯ ಅಧ್ಯಕ್ಷ ಮತ್ತು ಪ್ರಧಾನ ಸಂಪಾದಕ ರಜತ್ ಶರ್ಮಾ ಅವರೊಂದಿಗೆ ವಿಶೇಷ ಸಂದರ್ಶನದಲ್ಲಿ ಪ್ರಧಾನಿ ನರೇಂದ್ರ ಮೋದಿ, ಹಿರಿಯ ಕಾಂಗ್ರೆಸ್ ನಾಯಕ ಮಣಿಶಂಕರ್ ಅಯ್ಯರ್ ಅವರ “ಪಾಕಿಸ್ತಾನದ ಬಳಿ ಪರಮಾಣು ಬಾಂಬ್ ಇದೆ ಎಂಬ ಕಾರಣಕ್ಕೆ ಭಾರತ ಗೌರವಿಸಬೇಕು” ಎಂಬ ಹೇಳಿಕೆಗೆ ತಿರುಗೇಟು ನೀಡಿದ್ದಾರೆ. ನಾನು ಸ್ವತಃ ಲಾಹೋರ್‌ಗೆ ಹೋಗಿ ಪಾಕಿಸ್ತಾನದ ತಾಕತ್ತು ಏನು ಅನ್ನೋದನ್ನ ಪರೀಕ್ಷೆ ಮಾಡಿದ್ದೇನೆ ಎಂದು ಹೇಳಿದ್ದಾರೆ. ಪಾಕಿಸ್ತಾನದ ಬಳಿ ಅಣುಬಾಂಬ್ ಇದೆ ಎಂಬ ಕಾರಣಕ್ಕೆ ನಾವು ಭಯಪಡಬೇಕು ಎಂಬ ಕಾಂಗ್ರೆಸ್ ನಾಯಕ ಮಣಿಶಂಕರ್ ಅಯ್ಯರ್ ಅವರ ಹೇಳಿಕೆಗೆ ನಿಮ್ಮ ಅಭಿಪ್ರಾಯವೇನು ಅನ್ನೋದಕ್ಕೆ ಉತ್ತರ ನೀಡಿದ ಪ್ರಧಾನಿ ನರೇಂದ್ರ ಮೋದಿ, ಪಾಕಿಸ್ತಾನದ ತಾಕತ್ತು ಏನು ಅನ್ನೋದನ್ನ ಸ್ವತಃ ನಾನೇ ಲಾಹೋರ್‌ಗೆ ಹೋಗಿ ನೋಡಿಕೊಂಡು ಬಂದಿದ್ದೇನೆ ಎಂದು ಹೇಳುವ ಮೂಲಕ ಕಾಂಗ್ರೆಸ್‌ಗ ತಿರುಗೇಟು ನೀಡಿದರು.
2015ರಲ್ಲಿ ಪಾಕಿಸ್ತಾನಕ್ಕೆ ಭೇಟಿ ನೀಡಿದ ಕ್ಷಣವನ್ನು ವಿವರಿಸಿದ ಪ್ರಧಾನಿ ನರೇಂದ್ರ ಮೋದಿ, ನಾನು ಪಾಕಿಸ್ತಾನಕ್ಕೆ ಭೇಟಿ ನೀಡಿದಾಗ ಹಲವು ಪತ್ರಕರ್ತರು ನನಗೆ ಪ್ರಶ್ನೆ ಮಾಡಿದ್ದರು. 'ಓಹ್ ದೇವರೆ, ನೀವು ಪಾಕಿಸ್ತಾನಕ್ಕೆ ವೀಸಾ ಇಲ್ಲದೆ ಹೇಗೆ ಬಂದಿದ್ದೀರಿ ಎಂದು ಕೇಳಿದ್ದರು. ಅದಕ್ಕೆ ನಾನು ಹಿಂದೊಮ್ಮೆ ಈ ದೇಶವೂ ನಮ್ಮದೇ ಆಗಿತ್ತು ಎಂದು ಉತ್ತರಿಸಿದ್ದೆ ಎಂದು ಮೋದಿ ಹೇಳಿದ ಬೆನ್ನಲ್ಲಿಯೇ ಭಾರತ ಮಂಟಪಂನಲ್ಲಿದ್ದ ಜನರು ಕರತಾಡನ ಮಾಡಿದ್ದಾರೆ.
ಸಂದರ್ಶನದ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರು ಆರ್ಟಿಕಲ್ 370 ರದ್ದತಿ ಬಗ್ಗೆ ಮಾತನಾಡಿದ್ದಾರೆ, ಅವರು (ಪ್ರಧಾನಿ) ನರೇಂದ್ರ ಮೋದಿ ಅವರು ಮುಸ್ಲಿಂ ಮೀಸಲಾತಿ ವಿರುದ್ಧ ಬಹಿರಂಗವಾಗಿ ಮಾತನಾಡುತ್ತಿದ್ದಾರೆ ಎಂದು ಪ್ರತಿಪಕ್ಷಗಳ ಆರೋಪದ ಬಗ್ಗೆಯೂ ಮಾತನಾಡಿದರು.
ಪಾಕಿಸ್ತಾನಕ್ಕೆ ಗೌರವ ನೀಡೋದನ್ನ ಭಾರತ ಕಲಿಯಬೇಕು ಅಂದ್ರಲ್ಲ ಕಾಂಗ್ರೆಸ್ ನಾಯಕ ಮಣಿಶಂಕರ್ ಅಯ್ಯರ್
ವಿದೇಶಾಂಗ ನೀತಿಯ ವಿಷಯದಲ್ಲಿ ವಿರೋಧ ಪಕ್ಷಗಳು ತಮ್ಮನ್ನು ಹೇಗೆ ಪ್ರಶ್ನಿಸುತ್ತಿದ್ದವು ಎಂಬುದನ್ನು ನೆನಪಿಸಿಕೊಂಡ ಪ್ರಧಾನಮಂತ್ರಿ ಮತ್ತು ತಮ್ಮಿಂದಗ ವಿದೇಶಾಂಗ ನೀತಿಯನ್ನು ನಿರ್ವಹಣೆ ಮಾಡಲು ಸಾಧ್ಯವೇ ಎಂದು ಇವರು ಅನುಮಾನ ಪಟ್ಟಿದ್ದರು. ಆದರೆ, ನಾನು ವಿಶ್ವ ನಾಯಕರೊಂದಿಗೆ ಅಧಿಕೃತ ಸಂಬಂಧ ಮಾತ್ರವಲ್ಲದೆ, ವೈಯಕ್ತಿಕ ಸಂಬಂಧವನ್ನೂ ಬೆಳೆಸಿಕೊಂಡಿದ್ದರ ಬಗ್ಗೆ ಮಾತನಾಡಿದರು.
ನಾವೇನು ಫ್ರಿಡ್ಜ್‌ನಲ್ಲಿಡಲು ಅಣುಬಾಂಬ್ ತಯಾರಿಸಿದ್ದೀವಾ? ಮಣಿಶಂಕರ್ ಎಚ್ಚರಿಕೆಗೆ ಯೋಗಿ ತಿರುಗೇಟು!