Asianet Suvarna News Asianet Suvarna News

Kerala Accident: ಮಾಡೆಲ್‌ಗಳಿಬ್ಬರ ಸಾವು ಪ್ರಕರಣಕ್ಕೆ ಬಿಗ್ ಟ್ವಿಸ್ಟ್, ಆರೋಪಿ ಮೊಬೈಲ್‌ನಲ್ಲಿ ಶಾಕಿಂಗ್ ವಿಡಿಯೋ!

* ಕೇರಳದ ಇಬ್ಬರು ಮಾಡೆಲ್‌ಗಳು ಅಪಘಾತಕ್ಕೆ ಬಲಿ

* ಪ್ರಕರಣದ ತನಿಖೆ ವೇಳೆ ಬಯಲಾಗುತ್ತಿದೆ ಶಾಕಿಂಗ್ ಅಂಶಗಳು

* ಡ್ರಗ್‌ ಪೆಡ್ಲರ್‌ನಿಂದ ತಪ್ಪಿಸಿಕೊಳ್ದಳುವ ಯತ್ನದಲ್ಲಿದ್ದರಾ ಮಾಡೆಲ್‌ಗಳು?

Chase by Audi driver caused accident that led to death of Kerala models Kochi Police pod
Author
Bangalore, First Published Dec 1, 2021, 12:41 PM IST
  • Facebook
  • Twitter
  • Whatsapp

ತಿರುವನಂತಪುರಂ(ಡಿ.01): ಕೇರಳದ ಮಾಡೆಲ್‌ಗಳಿಬ್ಬರು (Kerala Model) ಕಳೆದೊಂದು ತಿಂಗಳ ಹಿಂದೆ ಇಲ್ಲಿನ ವೈಟ್ಟಿಲದಲ್ಲಿ ಸಂಭವಿಸಿದ್ದ ಭೀಕರ ಕಾರು ಅಪಘಾತದಲ್ಲಿ (Accident) ಮೃತಪಟ್ಟಿದ್ದ ವಿಚಾರ ಎಲ್ಲರನ್ನೂ ಬೆಚ್ಚಿ ಬೀಳಿಸಿತ್ತು. ಅಪಘಾತದ ಬಳಿಕ ಪೊಲೀಸರು ಈ ಪ್ರಕರಣ ಸಂಬಂಧ ತನಿಖೆ ಆರಂಭಿಸಿದ್ದರು. ಮೇಲ್ನೋಟಕ್ಕೆ ಇದೊಂದು ರಸ್ತೆ ಅಪಘಾತದಂತೆ ಕಂಡು ಬಂದಿದ್ದರೂ, ದಿನಗಳೆದಂತೆ ಈ ಪ್ರಕರಣ ಸಂಬಂಧ ಶಾಕಿಂಗ್ ಮಾಹಿತಿಗಳು ಬಯಲಾಗುತ್ತಿವೆ. ಹೊಸ ತಿರುವುಗಳನ್ನು ಕಾಣುತ್ತಿರುವ ಈ ಪ್ರಕರಣ ನಿಜಕ್ಕೂ ಇದೊಂದು ಸಾಮಾನ್ಯ ರಸ್ತೆ ಅಪಘಾತವೇ ಅಥವಾ ಕೊಲೆಯಾ ಎಂಬ ಅನುಮಾನ ಮೂಡಿಸಿದೆ.

ಹೌದು ನವೆಂಬರ್ 1ರಂದು ಸಂಭವಿಸಿದ್ದ ಭೀಕರ ಅಪಘಾತದಲ್ಲಿ  2019 ರ ಮಿಸ್ ಕೇರಳ(Miss Kerala-2019) ವಿಜೇತೆ ಆನ್ಸಿ (Ansi Kabeer) ಮತ್ತು ರನ್ನರ್‌ ಅಪ್ ಅಂಜನಾ ಶಾಜನ್ (Anjana Shajahan) ಮೃತಪಟ್ಟಿದ್ದರು. ಆದರೆ ತನಿಖೆ ವೇಳೆ ಮಾಡೆಲ್​ಗಳು ಪಾಲ್ಗೊಂಡಿದ್ದ ಪಾರ್ಟಿ ನಡೆದ ಹೋಟೆಲ್​ ಮಾಲೀಕನ ನಡೆ ಹಾಗೂ ಅಪಘಾತಕ್ಕೀಡಾದ ಕಾರನ್ನು ಚೇಸ್​ ಮಾಡಿದ್ದ ಆಡಿ ಕಾರು ಪ್ರಕರಣವನ್ನು ನಿಗೂಢತೆಗೆ ದೂಡಿತ್ತು. ಹೀಗಿದ್ದರೂ ಇದೊಂದು ಕೊಲೆಯಲ್ಲ, ಮದ್ಯದ ಅಮಲಿನಲ್ಲಿ ಸಂಭವಿಸಿದ ಸಾಆಮಾಣಗ್ಯ ರಸ್ತೆ ಅಪಘಾತ ಎಂದು ಬಿಂಬಿಸುವ ಹಲವಾರು ಯತ್ನಗಳು ನಡೆದಿದ್ದವು. ಹೀಗಿರುವಾಗ ಅಪಘಾತಕ್ಕೀಡಾದ ಕಾರು ಚಾಲಕನ ಹೇಳಿಕೆ ಹಾಗೂ ಹೋಟೆಲ್​ ಮಾಲೀಕನ ಅನುಮಾನಾಸ್ಪದ ನಡೆ ಈ ಪ್ರಕರಣಕ್ಕೆ ಹೊಸ ತಿರುವು ನೀಡಿತ್ತು. ಆದರೀಗ ಆರೋಪಿಯೊಬ್ಬನ ಮೊಬೈಲ್‌ನಲ್ಲಿ ಲಭ್ಯವಾದ ವಿಡಿಯೋಗಳು ಮತ್ತೊಂದೇ ಕತೆ ಹೇಳುತ್ತಿವೆ. ಆರೋಪಿಯ ಫೋನ್‌ನಲ್ಲಿ ಲಭ್ಯವಾದ ಭಯಾನಕ ವಿಡಿಯೋಗಳು ಈ ಪ್ರಕರಣವನ್ನು ಮತ್ತಷ್ಟು ಗಂಭೀರವಾಗಿ ಪರಿಗಣಿಸುವಂತೆ ಮಾಡಿದೆ.

ಮಾಜಿ ಮಿಸ್‌ ಕೇರಳ ಆನ್ಸಿ ಅಪಘಾತಕ್ಕೆ ಬಲಿ, ವಿಷ ಸೇವಿಸಿದ ತಾಯಿ!

ಸದ್ಯ ಆರೋಪಿ ಅಪಘಾತವಾದ ದಿನ ಮಾಡೆಲ್​ಗಳ ಕಾರು ಹಿಂಬಾಲಿಸಿದ್ದ ಶಂಕಿತ ಡ್ರಗ್ಸ್​ ಪೆಡ್ಲರ್​ ಸೈಜು ಥಾಂಕಚನ್​ ಮೊಬೈಲ್​ನಲ್ಲಿ ಪ್ರಕರಣಕ್ಕೆ ಬೇಕಾದ ಮಹತ್ವದ ಮಾಹಿತಿ ಕೇರಳ ಪೊಲೀಸರಿಗೆ ಸಿಕ್ಕಿದೆ. ಅಲ್ಲದೇ ಫೋರ್ಟ್​ ಕೊಚ್ಚಿಯಲ್ಲಿರುವ ನಂ. 18 ಹೋಟೆಲ್​ನಲ್ಲಿ ಆಯೋಜಿಸಲಾಗಿದ್ದ ಡಿಜೆ ಪಾರ್ಟಿಯಲ್ಲಿ ಪಾಲ್ಗೊಂಡಿದ್ದವರ ಮೊಬೈಲ್​ಗಳಿಂದಲೂ ಅನೇಕ ವಿಡಿಯೋಗಳನ್ನು ಸಂಗ್ರಹಿಸಲಾಗಿದೆ. ಆರೋಪಿ ಸೈಜು ಕೂಡಾ ಅಂದಿನ ಆ ಪಾರ್ಟಿಯಲ್ಲಿ ಪಾಲ್ಗೊಂಡಿದ್ದ. ಪಾರ್ಟಿ ಮುಗಿದ ಬೆನ್ನಲ್ಲೇ ಮಾಡೆಲ್​ಗಳಿಬ್ಬರನ್ನು ಸೈಜು ತನ್ನ ಐಷಾರಾಮಿ ಆಡಿ ಕಾರಿನಲ್ಲಿ ಹಿಂಬಾಲಿಸಿದ್ದ. ಇದರ ಬೆನ್ನಲ್ಲೇ ಆನ್ಸಿ ಹಾಗೂ ಅಂಜನಾ ಕಾರು ಅಪಘಾತಕ್ಕೀಡಾಗಿ ಇಬ್ಬರೂ ಮೃತಪಟ್ಟಿದ್ದರು.

ಸೈಜು ಮೊಬೈಲ್‌ನಲ್ಲಿ ಸಿಕ್ಕಿ ವಿಡಿಯೋಗಳಲ್ಲೇನಿದೆ?

ಸೈಜು ಮೊಬೈಲ್​ನಿಂದ ಸಿಕ್ಕ ವಿಡಿಯೋಗಳಲ್ಲಿ ಇತರ ಅನೇಕ ಯುವತಿಯ ವಿಡಿಯೋಗಳೂ ಇರುವುದು ಪತ್ತೆಯಾಗಿದೆ. ಯುವತಿಯರಿಗೆ ಡ್ರಗ್ಸ್​ ನೀಡಿ, ಮತ್ತು ಬರಿಸಿ ಅವರ ಮೇಲೆ ಲೈಂಗಿಕ ದೌರ್ಜನ್ಯ ಎಸಗುವ ವಿಡಿಯೋ ಇರುವುದಾಗಿ ತನಿಖಾಧಿಕಾರಿಗಳು ಹೇಳಿದ್ದಾರೆ. ಮೊಬೈಲ್ ಫೋನ್‌ನಲ್ಲಿರುವ ದೃಶ್ಯಗಳ ಪ್ರಕಾರ ಕೊಚ್ಚಿಯ ಅನೇಕ ಐಷಾರಾಮಿ ಹೋಟೆಲ್‌ಗಳಲ್ಲಿ ರಾತ್ರಿ ನಡೆಯುತ್ತಿದ್ದ ಪಾರ್ಟಿಗಳಿಗೆ ಸೈಜು ಪ್ರಮುಖ ಆಯೋಜಕನಾಗಿದ್ದ ಎಂಬ ಪೊಲೀಸರ ಹಿಂದಿನ ಅನುಮಾನಗಳಿಗೆ ಪುಷ್ಠಿ ನೀಡಿದೆ. ಅಲ್ಲದೆ, ಪಾರ್ಟಿಯಲ್ಲಿ ಭಾಗವಹಿಸುತ್ತಿದ್ದವರಿಗೆ ಡ್ರಗ್ಸ್​ ಕೂಡ ಈತನೇ ಪೂರೈಸುತ್ತಿದ್ದ ಎಂಬುವುದೂ ತಿಳಿದು ಬಂದಿದೆ.

ಪ್ರಸ್ತುತ ಆರೋಪಿ ಸೈಜು ಪೊಲೀಸ್​ ಕಸ್ಟಡಿಯಲ್ಲಿದ್ದು, ಭಾನುವಾರ ಆತನನ್ನು ವಿವರಣಾತ್ಮಕವಾಗಿ ವಿಚಾರಣೆ ನಡೆಸಲಾಗಿದೆ. ಮೊಬೈಲ್​ನಲ್ಲಿ ಪತ್ತೆಯಾದ ವಿಡಿಯೋದಲ್ಲಿ ಇರುವವರ ಬಗ್ಗೆ ಮಾಹಿತಿ ನೀಡಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ. ಅಲ್ಲದೇ, ಸೈಜುವಿನ ವಾಟ್ಸಾಪ್ ಚಾಟ್ಮತ್ತು ಫೋನ್​ ಕಾಲ್​ ರೆಕಾರ್ಡ್ಸ್​ಗಳನ್ನು ಕೂಡ ಪೊಲೀಸರು ಪರೀಕ್ಷಿಸುತ್ತಿದ್ದಾರೆ. ಇನ್ನು ಆರೋಪಿ ಸೈಜು ಮಾಡೆಲ್​ಗಳ ಕಾರನ್ನು ಚೇಸ್ ಮಾಡಿರುವುದು ಕೂಡ ದುರುದ್ದೇಶದಿಂದ ಎಂಬ ಮಾಹಿತಿ ವಿಚಾರಣೆ ವೇಳೆ ಪೊಲೀಸರಿಗೆ ಸಿಕ್ಕಿ ಲಭ್ಯವಾಗಿದೆ.

ಇನ್ನು ಆರೋಪಿ ಸೈಜು ಮಾಡೆಲ್‌ಗಳಿಗೆ ಏರು ಧನಿಯಲ್ಲಿ ರಾತ್ರಿ ವೇಳೆ ತನ್ನ ಮನೆ ಅಥವಾ ಹೋಟೆಲ್‌ನಲ್ಲಿ ಉಳಿದುಕೊಂಡು ಮರುದಿನ ಬೆಳಗ್ಗೆ ತಮ್ಮ ಮನೆಗಳಿಗೆ ಪ್ರಯಾಣ ಮುಂದುವರಿಸುವಂತೆ ಹೇಳಿದ್ದ ಎಂದು ಪೊಲೀಸರಿಗೆ ವಿಚಾರಣೆ ವೇಳೆ ದೃಢಪಟ್ಟಿದೆ. ಅವನ ಹಿಡಿತದಿಂದ ಪಾರಾಗಲು ಯುವತಿಯರು ಹೋಟೆಲ್​ನಿಂದ ಅವಸರದಿಂದ ತೆರಳಿದ್ದರು. ಹೀಗಿರುವಾಗ ಮಾರ್ಗ ಮಧ್ಯೆ ಅಪಘಾತವವಾಗಿದೆ ಎನ್ನಲಾಗಿದೆ. ಅಲ್ಲದೇ ಮಾಡೆಲ್‌ಗಳ ಕಾರನ್ನು ಹಿಂಬಾಲಿಸಲು ಸೈಜು ಬಳಸುತ್ತಿದ್ದ ಐಷಾರಾಮಿ ಕಾರನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಕಾರಿನಲ್ಲಿದ್ದ ಡಿಜೆ ಪಾರ್ಟಿಗಳಲ್ಲಿ ಸಾಮಾನ್ಯವಾಗಿ ಬಳಸುವ ಸ್ಪೀಕರ್ ಮತ್ತು ಆಲ್ಕೋಹಾಲ್ ಅಳತೆಯ ಕಪ್‌ಗಳೂ ಪೊಲೀಸರ ಕೈ ಸೇರಿವೆ.
 

Follow Us:
Download App:
  • android
  • ios