Asianet Suvarna News Asianet Suvarna News

ಮಾಜಿ ಮಿಸ್‌ ಕೇರಳ ಆನ್ಸಿ ಅಪಘಾತಕ್ಕೆ ಬಲಿ, ವಿಷ ಸೇವಿಸಿದ ತಾಯಿ!

* ಕೇರಳದ ಮಾಜಿ ಸುಂದರಿ ಅನ್ಸಿ ಕಬೀರ್ ಕಾರು ಅಪಘಾತದಲ್ಲಿ ಸಾವು

* ಆಘಾತ ತಡೆಯಲಾರದೆ ಆನ್ಸಿ ತಾಯಿ ಆತ್ಮಹತ್ಯೆಗೆ ಯತ್ನ

* ಅಟ್ಟಿಂಗಲ್‌ನ ಆಲಂಕೋಡ್‌ನ ಪಾಲಂಕೋಣಂ ಮೂಲದ ಅನ್ಸಿ ಕಬೀರ್‌

Ansi Kabeer mother consumes poison on hearing about her death in car accident pod
Author
Bangalore, First Published Nov 1, 2021, 3:19 PM IST
  • Facebook
  • Twitter
  • Whatsapp

ತಿರುವನಂತಪುರಂ(ನ.01): ಕೇರಳದ ಮಾಜಿ ಸುಂದರಿ ಅನ್ಸಿ ಕಬೀರ್((Ansi Kabeer) ಕಾರು ಅಪಘಾತದಲ್ಲಿ(Accident) ಸಾವನ್ನಪ್ಪಿದ್ದಾರೆ. ಹೀಗಿರುವಾಗ ಈ ಆಘಾತಕಾರಿ ವಿಚಾರ ತಿಳಿದ ಆಕೆಯ ತಾಯಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಅಟ್ಟಿಂಗಲ್‌ನ ಆಲಂಕೋಡ್‌ನ ಪಾಲಂಕೋಣಂ ಮೂಲದ ಅನ್ಸಿ ಕಬೀರ್‌ನ ತಾಯಿ ರಜೀನಾ ತಮ್ಮ ಕಾಟೇಜ್‌ನಲ್ಲಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಅವರನ್ನು ಪೊಲೀಸರು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. 2019 ರ ಮಿಸ್ ಕೇರಳ(Miss Kerala-2019) ವಿಜೇತೆ ಆನ್ಸಿ ಮತ್ತು ರನ್ನರ್‌ ಅಪ್ ಅಂಜನಾ ಶಾಜನ್ ಇಂದು ಬೆಳಿಗ್ಗೆ ವೈಟ್ಟಿಲದಲ್ಲಿ ಕಾರು ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ.

ಅನ್ಸಿ ಸ್ಥಳದಲ್ಲೇ ಮೃತಪಟ್ಟಿದ್ದಾರೆನ್ನಲಾಗಿದೆ. ಹೀಗಿದ್ದರೂ ಈ ಮಾಹಿತಿ ಆಕೆಯ ಮನೆಯವರೆಗೆ ತಲುಪಿಸಲು ಸಾಧ್ಯವಾಗಿರಲಿಲ್ಲ. ಹೀಗಿರುವಾಗ ಅನ್ಸಿಯ ಸ್ನೇಹಿತೆ ಪಕ್ಕದ ಮನೆಗೆ ಕರೆ ಮಾಡಿ ಮಾಹಿತಿ ನೀಡಿದ್ದಾಳೆ. ಇನ್ನು ನೆರೆ ಮನೆಯವರು ಕರೆ ಮಾಡುವ ಮುನ್ನವೇ ಮಾಹಿತಿ  ಪಡೆದ ಆಕೆಯ ತಾಯಿ ಈ ಆಘಾತ ತಡೆಯಲಾರದೆ ವಿಷ ಸೇವಿಸಿದ್ದಾರೆ. ಇನ್ನು ನೆರೆಹೊರೆಯವರು ಅನ್ಸಿ ಅವರ ಮನೆಗೆ ಮಾಹಿತಿ ತಿಳಿಸಲು ಧಾವಿಸಿದ್ದಾರೆ, ಆದರೆ ಅಲ್ಲಿ ಯಾರೂ ಬಾಗಿಲು ತೆರೆಯಲಿಲ್ಲ. ಈ ಬಗ್ಗೆ ಪೊಲೀಸರಿಗೆ ದೂರು ನೀಡಲಾಗಿದೆ. ಆದರೆ ಪೊಲೀಸರು ಬರುವ ಮೊದಲು ಅದೇಗೋ ಬಾಗಿಲು ತೆರೆದ ರಜೀನಾ ವಾಂತಿ ಮಾಡಿಕೊಂಡಿದ್ದಾಳೆ. ಸ್ಥಳಕ್ಕೆ ಧಾವಿಸಿದ ಪೊಲೀಸರು ರಜೀನಾಳನ್ನು ತಿರುವನಂತಪುರದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಇನ್ನು ಅನ್ಸಿ ತಂದೆ ಕಬೀರ್ ವಿದೇಶದಲ್ಲಿದ್ದಾರೆ.

ಭೀಕರ ರಸ್ತೆ ಅಪಘಾತ: ಮಾಜಿ ಮಿಸ್ ಕೇರಳ ಅನ್ಸಿ ಕಬೀರ್, ರನ್ನರ್ ಅಪ್ ಅಂಜನಾ ಬಲಿ!

ಎರ್ನಾಕುಲಂನ(Ernakulam) ವೈಟ್ಟಿಲಾದಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಮಾಜಿ ಮಿಸ್ ಕೇರಳ ಆನ್ಸಿ ಕಬೀರ್ (Ansi Kabeer) ಮತ್ತು ರನ್ನರ್ ಅಪ್ ಅಂಜನಾ ಶಾಜನ್ (Anjana Shajan) ಮೃತಪಟ್ಟಿದ್ದಾರೆ. ಎರ್ನಾಕುಲಂನ ವೈಟ್ಟಿಲಾದಲ್ಲಿ ಬೈಕ್‌ಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋದ ಸಂದರ್ಭದಲ್ಲಿ ಕಾರು ಪಲ್ಟಿಯಾಗಿದೆ. 

 2019 ರ ಸೌಂದರ್ಯ ಸ್ಪರ್ಧೆಯಲ್ಲಿ ಅನ್ಸಿ ಮತ್ತು ಅಂಜನಾ ವಿಜೇತರು ಮತ್ತು ರನ್ನರ್ ಅಪ್ ಆಗಿದ್ದರು. 25 ವರ್ಷದ ಅನ್ಸಿ ತಿರುವನಂತಪುರಂನ ಅಲಂಕೋಡ್‌ ಹಾಗೂ 26 ವರ್ಷದ ಅಂಜನಾ ತ್ರಿಶೂರ್‌ ಮೂಲದವರು. ಬೆಳಗಿನ ಜಾವ ಒಂದು ಗಂಟೆ ಸುಮಾರಿಗೆ ಈ ದುರಂತ ಸಂಭವಿಸಿದೆ.

ಕೇರಳದ ವೈಟ್ಟಿಲ ಹಾಲಿಡೇ ಇನ್ ಮುಂದೆ ಈ ಅಪಘಾತ ಸಂಭವಿಸಿದೆ. ಬೈಕ್ ಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋದ ವೆಳೆ ಈ ದುರ್ಘಟನೆ ಸಂಭವಿಸಿರುವುದುಸ್ಪಷ್ಟವಾಗಿದೆ. ಕಾರಿನಲ್ಲಿ ಒಟ್ಟು ನಾಲ್ಕು ಜನರಿದ್ದರು. ಇವರಲ್ಲಿ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದು, ಇಬ್ಬರು ಗಾಯಗೊಂಡಿದ್ದಾರೆ. ಇವರಲ್ಲಿ ಒಬ್ಬರ ಸ್ಥಿತಿ ಗಂಭೀರವಾಗಿದೆ. ಇಬ್ಬರಿಗೂ ಎರ್ನಾಕುಲಂ ವೈದ್ಯಕೀಯ ಕೇಂದ್ರದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. 

ಸ್ಕೂಟರ್‌ಗೆ ಲಾರಿ ಡಿಕ್ಕಿ ಹೊಡೆದು 14 ವರ್ಷದ ಬಾಲಕಿ ಸಾವು!

ಎಲೆಕ್ಟ್ರಿಕ್ ಸ್ಕೂಟರ್‌ಗೆ ಲಾರಿ ಡಿಕ್ಕಿ ಹೊಡೆದ ಪರಿಣಾಮ 14 ವರ್ಷದ ಬಾಲಕಿ ಸಾವನ್ನಪ್ಪಿದ್ದಾಳೆ. ಕೋಝಿಕ್ಕೋಡ್ ಪೆರಂಬ್ರಾದಲ್ಲಿ ಈ ಘಟನೆ ನಡೆದಿದೆ. ಮೃತರನ್ನು ಕೆಪಿಸಿಸಿ ಕಾರ್ಯದರ್ಶಿ ಸತ್ಯನ್ ಕಾಂಗಿಯಾಡ್ ಅವರ ಪುತ್ರಿ ಅಹಲ್ಯಾ ಕೃಷ್ಣ (14) ಎಂದು ಗುರುತಿಸಲಾಗಿದೆ. ಅಹಲ್ಯಾ ಪೆರಂಬ್ರಾದ ಸೇಂಟ್ ಫ್ರಾನ್ಸಿಸ್ ಶಾಲೆಯ 10ನೇ ತರಗತಿ ವಿದ್ಯಾರ್ಥಿನಿ. ಕೋಝಿಕ್ಕೋಡ್‌ನ ಕೂತಲಿಯ ಆರೆ ರಾಂಡ್‌ನಲ್ಲಿ ಈ ದುರ್ಘಟನೆ ನಡೆದಿದೆ.

ಇಂದು ಬೆಳಗ್ಗೆ 11 ಗಂಟೆ ಸುಮಾರಿಗೆ ಈ ದುರ್ಘಟನೆ ನಡೆದಿದೆ. ಎದುರಿಗೆ ಬರುತ್ತಿದ್ದ ಲಾರಿಗೆ ದಾರಿ ಮಾಡಿಕೊಡುವಾಗ ಅಹಲ್ಯಾಗೆ ಸ್ಕೂಟರ್ ಡಿಕ್ಕಿ ಹೊಡೆದಿದೆ. ಕೋಝಿಕ್ಕೋಡ್ ಡಿಸಿಸಿಯಲ್ಲಿ ಇಂದಿರಾಗಾಂಧಿ ಪುಣ್ಯಸ್ಮರಣೆಗೆ ಸಿದ್ಧತೆ ನಡೆಸುತ್ತಿದ್ದಾಗ ಸತ್ಯನ್ ಕಾಂಗಿ ಅವರಿಗೆ ಮಗಳ ಸಾವಿನ ಸುದ್ದಿ ತಿಳಿದಿದೆ

Follow Us:
Download App:
  • android
  • ios