Asianet Suvarna News Asianet Suvarna News

ವಿದ್ಯಾರ್ಥಿನಿಯರ ವಿಡಿಯೋ ಲೀಕ್ ಕೇಸ್ ಹಿಂದೆ ಖಲಿಸ್ತಾನ್? ಪ್ರತಿಭಟನೆ ನಿಲ್ಲಿಸಲು ಕೆನಡಾದಿಂದ ಬೆದರಿಕೆ ಕರೆ!

ಚಂಡಿಘಡ ವಿದ್ಯಾರ್ಥಿನಿಯರು ಸ್ನಾನದ ವಿಡಿಯೋ ಲೀಕ್ ಕೇಸ್ ಇದೀಗ ಮತ್ತೊಂದು ತಿರುವು ಪಡೆದುಕೊಳ್ಳುವ ಸೂಚನೆ ಸಿಕ್ಕಿದೆ. ಇದು ಕೇವಲ ವಿದ್ಯಾರ್ಥಿನಿಯರ, ಬಾಯ್‌ಫ್ರೆಂಡ್ ನಡುವಿನ ಗುದ್ದಾಟವಾಗಿ ಮಾತ್ರ ಉಳಿದಿಕೊಂಡಿಲ್ಲ. ಇದೀಗ ಇದರ ಹಿಂದೆ ಖಲಿಸ್ತಾನ್ ಉಗ್ರರ ಕೈವಾಡದ ಶಂಕೆ ವ್ಯಕ್ತವಾಗಿದೆ.

Chandigarh video scandal case Khalistan terror Link came to light after girl students receive threat calls from Canada ckm
Author
First Published Sep 19, 2022, 8:47 PM IST

ಚಂಡಘಡ(ಸೆ.19): ಪಂಜಾಬ್ ಸೇರಿ ದೇಶವನ್ನೇ ಬಿಚ್ಚಿ ಬೀಳಿಸಿದ ಚಂಡೀಘಡ ವಿಶ್ವವಿದ್ಯಾಲಯದ ಹಾಸ್ಟೆಲ್ ವಿದ್ಯಾರ್ಥಿನಿಯರ ಖಾಸಗಿ ವಿಡಿಯೋ ಲೀಕ್ ಪ್ರಕರಣದ ಹಿಂದೆ ಉಗ್ರರ ಕೈವಾಡದ ಶಂಕೆ ಬಲಗೊಳ್ಳುತ್ತಿದೆ. 60ಕ್ಕೂ ಹೆಚ್ಚು ವಿದ್ಯಾರ್ಥಿನಿಯರ ಬಾತ್‌ರೂಂ ವಿಡಿಯೋ ಬಹಿರಂಗ ಪಡಿಸಿದ ಹಿಂದೆ ಅತೀ ದೊಡ್ಡ ಉಗ್ರ ಜಾಲವೊಂದು ಕೆಲಸ ಮಾಡುತ್ತಿರುವ ಮಾಹಿತಿ ಲಭ್ಯವಾಗಿದೆ. ವಿದ್ಯಾರ್ಥಿನಿಯರ ವಿಡಿಯೋ ಲೀಕ್ ಘಟನೆ ಹಾಗೂ ಕ್ರಮ ಪ್ರಶ್ನಿಸಿ ಕಾಲೇಜು ವಿದ್ಯಾರ್ಥಿಗಳು ಭಾರಿ ಪ್ರತಿಭಟನೆ ನಡೆಸುತ್ತಿದ್ದಾರೆ. ಈ ವೇಳೆ ವಿದ್ಯಾರ್ಥಿನಿಯರಿಗೆ ಕೆನಡಾದಂದ ಬೆದರಿಕೆ ಕರೆಯೊಂದು ಬಂದಿದೆ. ವಿಡಿಯೋ ಲೀಕ್ ವಿರೋಧಿಸಿ ನಡೆಸುತ್ತಿರುವ ಪ್ರತಿಭಟನೆಯನ್ನು ತಕ್ಷಣವೇ ಕೈಬಿಡಲು ಅನಾಮಿಕ ಕರೆಯಲ್ಲಿ ಬೆದರಿಕೆ ಹಾಕಲಾಗಿದೆ. ಇಲ್ಲದಿದ್ದರೆ, ಮತ್ತಷ್ಟು ವಿದ್ಯಾರ್ಥಿನಿಯರ ಖಾಸಗಿ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವುದಾಗಿ ಎಚ್ಚರಿಸಿದ್ದಾರೆ. ಈ ಕುರಿತು ಪ್ರತಿಭಟನಾ ನಿರತ ವಿದ್ಯಾರ್ಥಿನಿಯರು ತಮಗೆ ಬಂದಿರುವ ಕರೆ ಕುರಿತು ಮಾಹಿತಿ ನೀಡಿದ್ದಾರೆ. 

ಇದೀಗ ವಿದ್ಯಾರ್ಥಿನಿಯರ ವಿಡಿಯೋ ಲೀಕ್ ಪ್ರಕರಣ(Chandigarh University MMS scandal) ಉಗ್ರರ ಲಿಂಕ್ ಶಂಕೆ ಬಲವಾಗುತ್ತದೆ. ಖಲಿಸ್ತಾನ ಉಗ್ರ(Khalistan Terror) ಸಂಘಟನೆಯಿಂದ ಈ ಕರೆ ಬಂದಿರುವ ಶಂಕೆ ಹೆಚ್ಚಾಗಿದೆ. ಕೆನಾಡದಲ್ಲಿ(Canada) ಖಲಿಸ್ತಾನ ಉಗ್ರ ಸಂಘಟನೆ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದೆ. ಈ ಉಗ್ರ ಸಂಘಟನೆಯ ಪ್ರಮುಖ ಮುಖಂಡರು ಕೆನಾಡದಲ್ಲೇ ಬೀಡು ಬಿಟ್ಟಿದ್ದಾರೆ. ಇದೀಗ ವಿದ್ಯಾರ್ಥಿನಿಯರ ವಿಡಿಯೋ ಲೀಕ್(Gilr Students Video Leak) ಪ್ರಕರಣದಲ್ಲಿ ಖಲಿಸ್ತಾನ ಉಗ್ರರ ಕೈವಾಡದ ಶಂಕೆ ಬಲಗೊಳ್ಳುತ್ತಿದೆ.

 

ಹಾಸ್ಟೆಲ್ ವಿದ್ಯಾರ್ಥಿನಿಯರ ಖಾಸಗಿ ವಿಡಿಯೋ ಲೀಕ್ ಪ್ರಕರಣ, ಶಿಮ್ಲಾ ಬಾಯ್‌ಫ್ರೆಂಡ್ ಅರೆಸ್ಟ್!

ಕೆನಾಡದಿಂದ ಆಗಮಿಸಿರುವ ಫೋನ್ ಬೆದರಿಕೆ ಕರೆ(Threat Call) ಕುರಿತು ಮಾಹಿತಿ ಕಲೆಹಾಕಲು ಪೊಲೀಸರು(Punjab Police) ಮುಂದಾಗಿದ್ದಾರೆ. 60ಕ್ಕೂ ಹೆಚ್ಚು ಖಾಸಗಿ ವಿಡಿಯೋಗಳು ಲೀಕ್ ಆಗಿರುವುದಾಗಿ ಆರೋಪ ಮಾಡಲಾಗಿದೆ. ಆದರೆ ಕಾಲೇಜು ಆಡಳಿತ ಮಂಡಳಿ ಹಾಗೂ ಪೊಲೀಸರು ಓರ್ವ ವಿದ್ಯಾರ್ಥಿನಿ ಮಾತ್ರ ವಿಡಿಯೋ ಲೀಕ್ ಮಾಡಿದ್ದಾಳೆ. ಸ್ವತಃ ಬಾಯ್‌ಫ್ರೆಂಡ್‌ಗೆ(Shimla Boyfriend) ವಿಡಿಯೋ ನೀಡಿದ್ದಾಳೆ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ.

 60 ವಿದ್ಯಾರ್ಥಿನಿಯರ ಸ್ನಾನ ದೃಶ್ಯ ಸೆರೆ ಆರೋಪ
ಪಂಜಾಬ್‌ನ ಮೊಹಾಲಿಯಲ್ಲಿರುವ ಚಂಡೀಗಢ ವಿಶ್ವವಿದ್ಯಾಲಯದಲ್ಲಿ 60ಕ್ಕೂ ಹೆಚ್ಚು ವಿದ್ಯಾರ್ಥಿನಿಯರ ಸ್ನಾನ ಮಾಡುತ್ತಿರುವ ವಿಡಿಯೋಗಳು ಸಾಮಾಜಿಕ ಜಾಲತಾಣಗಳಿಗೆ ಅಪ್‌ಲೋಡ್‌ ಆಗಿವೆ ಎಂಬ ವದಂತಿ ಹರಡಿ ತೀವ್ರ ಕೋಲಾಹಲ ಸೃಷ್ಟಿಯಾದ ಘಟನೆ ನಡೆದಿದೆ. ಘಟನೆಯ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ವಿಶ್ವವಿದ್ಯಾಲಯದ ಕ್ಯಾಂಪಸ್‌ನಲ್ಲಿ ಶನಿವಾರ ಮಧ್ಯರಾತ್ರಿ ದಿಢೀರ್‌ ಪ್ರತಿಭಟನೆ ನಡೆಸಿದ್ದು, ಮುಖ್ಯಮಂತ್ರಿ ಭಗವಂತ್‌ ಮಾನ್‌ ಇಡೀ ಪ್ರಕರಣದ ಕುರಿತು ತನಿಖೆಗೆ ಆದೇಶಿಸಿದ್ದಾರೆ. ರಾಷ್ಟ್ರೀಯ ಮಹಿಳಾ ಆಯೋಗ ಕೂಡ ಘಟನೆ ಕುರಿತು ವರದಿ ಬಯಸಿ ನೋಟಿಸ್‌ ಜಾರಿ ಮಾಡಿದೆ.

 

ಲೇಡಿಸ್ ಹಾಸ್ಟೆಲ್‌ನ ಬಾತ್‌ರೂಮ್ ವಿಡಿಯೋ ಲೀಕ್: ಬೀದಿಗಳಿದ ವಿದ್ಯಾರ್ಥಿನಿಯರು

4000 ವಿದ್ಯಾರ್ಥಿನಿಯರು ಇರುವ ವಿಶ್ವವಿದ್ಯಾಲಯದ ಓರ್ವ ವಿದ್ಯಾರ್ಥಿನಿಯೇ 60ಕ್ಕೂ ಹೆಚ್ಚು ವಿದ್ಯಾರ್ಥಿನಿಯರ ಅಶ್ಲೀಲ ವಿಡಿಯೋ ಚಿತ್ರೀಕರಿಸಿದ್ದಾಳೆ. ಬಳಿಕ ವಿಡಿಯೋ ಬಿಡುಗಡೆ ಮಾಡದಿರಲು ಉಳಿದ ವಿದ್ಯಾರ್ಥಿನಿಯರಿಂದ ಹಣ ಕೇಳಿದ್ದಾಳೆ. ಅಲ್ಲದೆ ಆಕೆ ಈ ಫೋಟೋಗಳನ್ನು ಶಿಮ್ಲಾದಲ್ಲಿರುವ ತನ್ನ ಸ್ನೇಹಿತನಿಗೆ ರವಾನಿಸಿದ್ದು, ಆತ ಅವುಗಳನ್ನು ಜಾಲತಾಣದಲ್ಲಿ ಸೋರಿಕೆ ಮಾಡಿದ್ದಾನೆ ಎಂಬ ಸುದ್ದಿ ಹಬ್ಬಿ ಶನಿವಾರ ವಿದ್ಯಾರ್ಥಿನಿಯರಲ್ಲಿ ಭಾರೀ ಆತಂಕಕ್ಕೆ ಕಾರಣವಾಗಿತ್ತು.

Follow Us:
Download App:
  • android
  • ios