ಚಂಡೀಗಢದಲ್ಲಿ ಭಾರಿ ಮಳೆಯಿಂದಾಗಿ ರಸ್ತೆಯೊಂದು ಕುಸಿದು ಬೈಕ್ ಸವಾರನೊಬ್ಬ ಅಪಾಯಕ್ಕೆ ಸಿಲುಕಿದ ಘಟನೆ ನಡೆದಿದೆ. ಅಗ್ನಿಶಾಮಕ ದಳದವರು ಸಕಾಲಕ್ಕೆ ಆಗಮಿಸಿ ಸವಾರನನ್ನು ರಕ್ಷಿಸಿದ್ದಾರೆ. ಈ ಘಟನೆ ಕಳಪೆ ಕಾಮಗಾರಿಯ ಬಗ್ಗೆ ಚರ್ಚೆಗೆ ಕಾರಣವಾಗಿದೆ.

ಚಂಡೀಗಢ: ಚಂಡೀಗಢದಲ್ಲಿ ಭಾರಿ ಮಳೆಗೆ ರಸ್ತೆಯೊಂದು ಬಾಯ್ತೆರೆದುಕೊಂಡಿದ್ದು, ಬೈಕ್ ಸವಾರನೋರ್ವ ಈ ಹೊಂಡಕ್ಕೆ ಬೈಕ್ ಸಹಿತ ಬಿದ್ದಂತಹ ಘಟನೆ ಚಂಡೀಗಢದಲ್ಲಿ ಘಟನೆ ನಡೆದಿದೆ. ಇದರ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಚಂಡೀಗಢದ ಸೆಕ್ಟರ್ 48ರಲ್ಲಿ ಈ ಘಟನೆ ನಡೆದಿದೆ. ನಂತರ ಅಗ್ನಿ ಶಾಮಕ ಸಿಬ್ಬಂದಿ ಯುವಕ ಹಾಗೂ ಆತನ ಬೈಕ್‌ ಎರಡನ್ನೂ ಮೇಲೆತ್ತಿ ಯುವಕನ ರಕ್ಷಣೆ ಮಾಡಿದ್ದಾರೆ. ಈ ರಕ್ಷಣಾ ಕಾರ್ಯಾಚರಣೆಯ ವೀಡಿಯೋ ವೈರಲ್ ಆಗಿದೆ.

ಎಲ್ಲೆಡೆ ಸುರಿಯುತ್ತಿರುವ ಭಾರಿ ಮಳೆ ಕಳಪೆ ಕಾಮಗಾರಿಗಳನ್ನು ತೊಳೆದುಕೊಂಡು ಹೋಗುತ್ತಿದ್ದ, ಆಯಾಯ ಸರ್ಕಾರ, ಜನಪ್ರತಿನಿಧಿಗಳ ಬಣ್ಣ ಬಯಲು ಮಾಡುತ್ತಿದೆ. ಅದೇ ರೀತಿ ಚಂಡೀಗಢದಲ್ಲಿ ಧಾರಕಾರ ಸುರಿದ ಮಳೆಗೆ ರಸ್ತೆಯಲ್ಲಿ ಆಚಾನಕ್ ಆಗಿ ಹೊಂಡ ನಿರ್ಮಾಣವಾಗಿದೆ. ಇದರ ಅರಿವಿರದ ಬೈಕ್ ಸವಾರ ವೇಗವಾಗಿ ಬಂದು ರಸ್ತೆಯಲ್ಲಿದ್ದ ಹೊಂಡಕ್ಕೆ ಬಿದ್ದಿದ್ದಾನೆ. ಅದೃಷ್ಟವಶಾತ್ ಪ್ರಾಣಹಾನಿಯಾಗದೇ ಆತ ಬದುಕುಳಿದಿದ್ದಾನೆ.

ರಸ್ತೆಯ ನಡುವಿನ ಈ ಹೊಂಡದ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಕಳಪೆ ಕಾಮಗಾರಿಯ ಬಗ್ಗೆ ಭಾರಿ ಆಕ್ರೋಶ ವ್ಯಕ್ತವಾಗುತ್ತಿದೆ.

@journalistbhatt ಎಂಬ ಖಾತೆಯಿಂದ ಈ ವೀಡಿಯೋ ಪೋಸ್ಟ್ ಮಾಡಲಾಗಿದೆ.

ಚಂಡೀಗಢದಲ್ಲಿ ಇಲ್ಲಿವರೆಗೆ ಇಂತಹ ಪರಿಸ್ಥಿತಿ ಬಂದಿರಲಿಲ್ಲ ಎಂದು ಒಬ್ಬು ಕಾಮೆಂಟ್ ಮಾಡಿದ್ದಾರೆ. ಚಂಡೀಗಢದ ಕಾಂಗ್ರೆಸ್ ಮತ್ತು ಬಿಜೆಪಿಯ ಅಧಿಕೃತ ಖಾತೆಗಳಿಗೆ ಟ್ಯಾಗ್ ಮಾಡಿದ ಅವರು, ಎಲ್ಲಾ ಇಲಾಖೆಗಳಲ್ಲಿನ ಭ್ರಷ್ಟಾಚಾರದ ದೂರುಗಳು ವಿಜಿಲೆನ್ಸ್, ಆಡಳಿತಾಧಿಕಾರಿ ಮತ್ತು ಆಡಳಿತವನ್ನು ತಲುಪುತ್ತಿವೆ. ಆದರೆ ಯಾರ ವಿರುದ್ಧವೂ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಅವರು ಕಾಮೆಂಟ್ ಮಾಡಿದ್ದಾರೆ.

Scroll to load tweet…