ಕೊರೋನಾ ಏರಿಕೆ; ಕೇಂದ್ರದಿಂದ ಕೇರಳಕ್ಕೆ ಖಡಕ್ ಎಚ್ಚರಿಕೆ!

* ಕೇರಳದಲ್ಲಿ ನಿಯಂತ್ರಣಕ್ಕೆ ಬಾರದ ಕೊರೋನಾ
* ಕೇರಳಕ್ಕೆ ಖಡಕ್ ಎಚ್ಚರಿಕೆ ರವಾನಿಸಿದ ಕೇಂದ್ರ
* ನಿಯಮಗಳನ್ನು ಸರಿಯಾಗಿ ಪಾಲನೆ ಮಾಡಿ
* ಮೈಕ್ರೋ ಕಂಟೋನ್ಮೆಂಟ್ ಜೋನ್ ಗೆ ಒತ್ತು ನೀಡಿ

Centre warns Kerala govt about rise in Covid cases mah

ನವದೆಹಲಿ(ಸೆ. 01)  ಕೇರಳದಲ್ಲಿ ಕೊರೋನಾ ಸ್ಫೋಟವಾಗಿದೆ. ನಿಯಂತ್ರಣಕ್ಕೆ ಬರುತ್ತಿಲ್ಲ. ಇಡೀ ದೇಶದಲ್ಲಿ ಕೊರೋನಾ ಆತಂಕಕ್ಕೆ ಕೇರಳ ಕಾರಣವಾಗಿದೆ. ಈ ನಡುವೆ  ಕೇರಳ ಸರ್ಕಾರಕ್ಕೆ ಕೇಂದ್ರ ಸರ್ಕಾರ ಖಡಕ್ ವಾರ್ನಿಂಗ್ ಕೊಟ್ಟಿದೆ.

ಶೇ.85 ಸೋಂಕಿತರು ಮನೆಗಳಲ್ಲಿ ಇದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ. ಕೇಂದ್ರ ನಿರ್ದೇಶನಗಳನ್ನು ಕೇರಳ ಸರ್ಕಾರ  ಕಡೆಗಣಿಸಿದಂತೆ ಕಾಣುತ್ತಿದೆ. ಮೈಕ್ರೋ ಕಂಟೋನ್ಮೆಂಟ್ ಜೋನ್ ಗೆ ಒತ್ತು ನೀಡುತ್ತಿಲ್ಲ. ಕೇರಳದ ನಿರ್ಲಕ್ಷ್ಯ ಅಕ್ಕ-ಪಕ್ಕ ರಾಜ್ಯಗಳ ಮೇಲೆ ಪ್ರಭಾವ ತೋರುತ್ತಿದೆ  ಎಂದು ಕೇಂದ್ರ ಹೇಳಿದೆ.

ಇನ್ನು ಮುಂದೆ ಪಿಪಿಇ ಕಿಟ್ ಧರಿಸುವ ಅಗತ್ಯ ಇಲ್ಲ

ಕೇರಳ ವಾರದ ಪಾಸಿಟಿವ್ ದರ ಶೇ.14 ರಿಂದ 19ರ ತನಕ ಇದೆ ಎಂದು ಆತಂಕ ವ್ಯಕ್ತಪಡಿಸಿದ ಕೇಂದ್ರ ಸರ್ಕಾರ ಈ ಕೂಡಲೇ ನಿಯಂತ್ರಣ ಅಗತ್ಯ,ತುರ್ತು ಕ್ರಮ ಕೈಗೊಳ್ಳಲು ಸೂಚನೆ ನೀಡಿದೆ.

ದೇಶದಲ್ಲಿನ 2,10,040 ಪ್ರಕರಣಗಳಲ್ಲಿ ಕೇರಳವು ಅತಿ ಹೆಚ್ಚು ಸಕ್ರಿಯ ಪ್ರಕರಣಗಳನ್ನು  (57 ಶೇಕಡಾ) ಹೊಂದಿದೆ ನಂತರದ ಸ್ಥಾನದಲ್ಲಿ ಮಹಾರಾಷ್ಟ್ರ (55,359) ಇದೆ. ಈ ಎರಡು ರಾಜ್ಯಗಳು ದೇಶ  72 ಶೇಕಡಾ ಸಕ್ರಿಯ ಪ್ರಕರಣಗಳನ್ನು ಹೊಂದಿವೆ.  ಮೊದಲನೇ ಅಲೆಯನ್ನು ಯಶಸ್ವಿಗಾಗಿ ನಿಭಾಯಿಸಿದ್ದ ಕೇರಳ ಈಗ ತೀವ್ರ ಸಂಕಷ್ಟ ಅನುಭವಿಸುತ್ತಿದೆ. ಕರ್ನಾಟಕ ಮತ್ತು ಕೇರಳ ಗಡಿಯನ್ನು ಬಂದ್ ಮಾಡಬೇಕು ಎಂಬ ಮಾತುಗಳು ಕೇಳಿ ಬಂದಿವೆ.

Latest Videos
Follow Us:
Download App:
  • android
  • ios