Asianet Suvarna News Asianet Suvarna News

ಮೊದಲನೇ ಡೋಸ್ ಲಸಿಕೆ ಮಹತ್ವ ತೆರೆದಿಟ್ಟ ಹಿರಿಯ ಅಧಿಕಾರಿ, ಹೊಸ ಗುರಿ

* ದೇಶದ ಎಲ್ಲ ನಾಗರಿಕರಿಗೂ ಕನಿಷ್ಠ ಪಕ್ಷ ಮೊದಲನೇ ಡೋಸ್ ನೀಡಲೇಬೇಕು
* ಮೊದಲನೇ ಡೋಸ್ ಮತ್ತು ಎರಡನೇ ಡೋಸ್ ನಡುವಿನ ಅಂತರ ಹೆಚ್ಚಳ
* ಮೊದಲನೇ ಡೋಸ್ ನೀಡಿಕೆ  ಅತ್ಯಗತ್ಯ ಎಂದ ತಜ್ಞರು

Ensure everyone gets at least 1 vaccine dose says a senior government official mah
Author
Bengaluru, First Published Jun 1, 2021, 11:19 PM IST

ನವದೆಹಲಿ(ಜೂ. 01)  ಕೊರೋನಾ ಲಸಿಕೆ ವಿಚಾರದಲ್ಲಿ ಸರ್ಕಾರದ ಹಿರಿಯ ಅಧಿಕಾರಿಗಳು ಪ್ರಮುಖ ವಿಚಾರವೊಂದನ್ನು ಹೇಳಿದ್ದಾರೆ. ಕನಿಷ್ಠ ಪಕ್ಷ ದೇಶದ ಪ್ರತಿಯೊಬ್ಬ ನಾಗರಿಕನಿಗೂ ಮೊದಲ ಡೋಸ್ ಲಸಿಕೆಯನ್ನಾದರೂ ನೀಡಬೇಕು ಎಂದಿದ್ದಾರೆ.

ಒಂದು ಕಡೆ ಲಸಿಕೆ ಕೊರತೆ ಮಾತುಗಳು ಕೇಳಿಬರುತ್ತಲೇ ಇವೆ. ಇನ್ನೊಂದು ಕಡೆ ತಜ್ಞರು   ಮೊದಲನೇ ಡೋಸ್ ಮತ್ತು ಎರಡನೇ ಡೋಸ್ ನಡುವಿನ ಅಂತರ ಹೆಚ್ಚಿಸಿದ್ದಾರೆ.

ಜೂನ್ ತಿಂಗಳಿನಲ್ಲೀಯೆ ಸ್ಫುಟ್ನಿಕ್ ಲಭ್ಯ

ಎಲ್ಲರಿಗೂ ಮೊದಲನೇ ಡೋಸ್ ತಲುಪಿಸುವುದು ಸದ್ಯ ನಮ್ಮ ಮುಂದೆ ಇರುವ ಗುರಿ ಎಂದು ತಿಳಿಸಿದ್ದಾರೆ.  ವಿದೇಶಗಳಲ್ಲಿ ಲಸಿಕೆ ನೀಡಿಕೆ  ಮತ್ತು ನಂತರದ ಬೆಳವಣಿಗೆ ಆಧರಿಸಿ ಈ  ಮಾತು ಹೇಳಲಾಗಿದೆ.

ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರೀಸರ್ಚ್ ನ ನಿರ್ದೇಶಕ ಡಾ. ಬಲರಾಮ್ ಭಾರ್ಗವ ಸಹ ಇದೇ ವಿಚಾರವನ್ನು ಹೇಳಿದ್ದು ವೈರಸ್ ವಿರುದ್ಧ ಹೋರಾಡಲು ದೇಹ ಸಿದ್ಧವಾಗುವಂತೆ ಮಾಡಬೇಕು ಎಂದು ತಿಳಿಸಿದ್ದಾರೆ.

ಲಸಿಕೆ ನೀಡಿಕೆ ಮತ್ತು ಫಲಿತಾಂಶಗಳ ಬಗ್ಗೆಯೂ ಸಂಶೋಧನೆಗಳು ಬೇರೆ ಬೇರೆ ಮಾತು ಹೇಳಿವೆ. ಆ ವಿಚಾರಗಳು ಏನೇ ಇದ್ದರೂ ಎಲ್ಲರಿಗೂ ಮೊದಲನೇ ಡೋಸ್ ಲಭ್ಯವಾಗಲೇಬೇಕು ಎಂದಿದ್ದಾರೆ. 

"

 

Follow Us:
Download App:
  • android
  • ios