Kerala financial crisis: 5 ಸಾವಿರ ಕೋಟಿ ಸಾಲ ನೀಡಲು ಸಿದ್ಧ, ಅದಕ್ಕೆ ಷರತ್ತುಗಳಿವೆ ಎಂದ ಕೇಂದ್ರ!

ಕೇರಳದ ವೆಚ್ಚದ ಪ್ರವೃತ್ತಿಯನ್ನು ಗಮನಿಸಿದರೆ, FY 2024-25 ರ ಮೊದಲ ಒಂಬತ್ತು ತಿಂಗಳಲ್ಲಿ 6,664 ಕೋಟಿ ರೂಪಾಯಿಗಳ ಸಾಲವನ್ನು ಪಡೆಯುವ ಮೂಲಕ ರಾಜ್ಯ ಸರ್ಕಾರವು ತನ್ನ ಹಣಕಾಸು ನಿರ್ವಹಣೆ ಮಾಡುವುದು ಕಷ್ಟಕರ ಎಂದು ಕೇಂದ್ರ ತಿಳಿಸಿದೆ.

Centre says ready to allow loan of Rs 5000 crore to Kerala financial crisis san

ನವದೆಹಲಿ (ಮಾ.14):2023-24ರ ಆರ್ಥಿಕ ವರ್ಷದಲ್ಲಿ (ಎಫ್‌ವೈ) ಕೇರಳಕ್ಕೆ ಹೆಚ್ಚುವರಿ ಸಾಲ ನೀಡುವುದೂ ಇಲ್ಲ ಎಂದು ಹೇಳಿದ್ದ  ಕೇಂದ್ರ ಸರಕಾರವು, ಕೆಲವು ಷರತ್ತುಗಳಿಗೆ ಒಳಪಟ್ಟು 5,000 ಕೋಟಿ ರೂಪಾಯಿ ಸಾಲ ಪಡೆಯಲು ಕೇರಳ ಸರಕಾರಕ್ಕೆ ಅವಕಾಶ ನೀಡಲು ಸಿದ್ಧ ಎಂದು ಸುಪ್ರೀಂ ಕೋರ್ಟ್‌ಗೆ ಬುಧವಾರ ತಿಳಿಸಿದೆ.  ಕೇರಳ ಸರ್ಕಾರದ ಪರ ವಾದ ಮಂಡಿಸಿದ ಹಿರಿಯ ವಕೀಲ ಕಪಿಲ್ ಸಿಬಲ್ ಅವರು ನ್ಯಾಯಮೂರ್ತಿಗಳಾದ ಸೂರ್ಯಕಾಂತ್ ಮತ್ತು ಕೆ ವಿ ವಿಶ್ವನಾಥನ್ ಅವರ ಪೀಠದ ಮುಂದೆ 5,000 ಕೋಟಿ ರೂಪಾಯಿಗಳು ನಮ್ಮ ಸರ್ಕಾರಕ್ಕೆ ಎಲ್ಲಿಗೂ ಸಾಲೋದಿಲ್ಲ ನಮಗೆ ಕನಿಷ್ಠ 10 ಸಾವಿರ ಕೋಟಿಯ ಅವಶ್ಯಕತೆ ಇದೆ ಎಂದು ಹೇಳಿದ್ದರು. ತನ್ನ ಸಾಲದಲ್ಲಿ ಕೇಂದ್ರದ ಹಸ್ತಕ್ಷೇಪವನ್ನು ಆರೋಪಿಸಿ ಕೇರಳದ ಮೂಲ ದಾವೆಯ ವಿಚಾರಣೆಗೆ ನ್ಯಾಯಾಲಯವು ಮಾರ್ಚ್ 21 ರಂದು ದಿನಾಂಕವನ್ನು ನಿಗದಿ ಮಾಡಿದೆ.ಕೇಂದ್ರದ ಪರ ವಾದ ಮಂಡಿಸಿದ ಹೆಚ್ಚುವರಿ ಸಾಲಿಸಿಟರ್ ಜನರಲ್ ಎನ್ ವೆಂಕಟರಾಮನ್ ಅವರು, ನ್ಯಾಯಾಲಯದ ಸಲಹೆಯನ್ನು ಪರಿಗಣಿಸಿ 5 ಸಾವಿರ ಕೋಟಿ ರೂಪಾಯಿ ಸಾಲಕ್ಕೆ ಒಪ್ಪಿಗೆ ನೀಡಲು ಸರ್ಕಾರ ಸಿದ್ಧವಿದೆ ಎಂದು ತಿಳಿಸಿದರು.

"ಇದು ಅತ್ಯಂತ ವಿಶೇಷ ಕ್ರಮವಾಗಿದೆ, ಕೇರಳ ರಾಜ್ಯವು ತನ್ನ ಆರ್ಥಿಕ ಬಿಕ್ಕಟ್ಟಿನಿಂದ ಹೊರಬರಲು ಇದು ಸಹಾಯ ಮಾಡುತ್ತದೆ ಮತ್ತು ಪಿಂಚಣಿ, ಸಂಬಳ ಮತ್ತು ಇತರ ಬದ್ಧ ವೆಚ್ಚಗಳ ಪಾವತಿಯ ಆರ್ಥಿಕ ವರ್ಷದ ಅಂತ್ಯದ ಹೊಣೆಗಾರಿಕೆಗಳನ್ನು ಪೂರೈಸಲು ಸಹಾಯ ಮಾಡುತ್ತದೆ" ಎಂದು ಅವರು ಹೇಳಿದ್ದಾರೆ.

2024-25ರ ಮೊದಲ ಒಂಬತ್ತು ತಿಂಗಳಿಗೆ ಕೇರಳದ ನಿವ್ವಳ ಸಾಲದ ಸೀಲಿಂಗ್‌ನಿಂದ (ಎನ್‌ಬಿಸಿ) ಈ 5,000 ಕೋಟಿ ರೂ.ಗಳನ್ನು ಕಡಿತಗೊಳಿಸಲಾಗುವುದು ಎಂಬ ಷರತ್ತುಗಳಿಗೆ ಒಳಪಟ್ಟಿರುತ್ತದೆ ಎಂದು ಎಎಸ್‌ಜಿ ಹೇಳಿದೆ. ಅಲ್ಲದೆ, FY 2024-25 ರಲ್ಲಿ ರಾಜ್ಯಕ್ಕೆ ಯಾವುದೇ ತಾತ್ಕಾಲಿಕ ಸಾಲವನ್ನು ನೀಡಲಾಗುವುದಿಲ್ಲ ಮತ್ತು 2024-25 ರಲ್ಲಿ ಸಾಲಕ್ಕೆ ಒಪ್ಪಿಗೆಯನ್ನು ರಾಜ್ಯ ಸರ್ಕಾರದಿಂದ ನಿಗದಿತ ಮಾಹಿತಿ ಮತ್ತು ದಾಖಲೆಗಳ ಸ್ವೀಕೃತಿಯ ಮೇಲೆ ಮಾತ್ರ ನೀಡಲಾಗುತ್ತದೆ ಎಂದು ತಿಳಿಸಿದ್ದಾರೆ.

ಕೇರಳದ ವೆಚ್ಚದ ಪ್ರವೃತ್ತಿಯನ್ನು ಗಮನಿಸಿದರೆ, FY 2024-25 ರ ಮೊದಲ ಒಂಬತ್ತು ತಿಂಗಳಲ್ಲಿ 6,664 ಕೋಟಿ ರೂಪಾಯಿಗಳ ಸಾಲವನ್ನು ಪಡೆಯುವ ಮೂಲಕ ರಾಜ್ಯ ಸರ್ಕಾರವು ತನ್ನ ಹಣಕಾಸು ನಿರ್ವಹಣೆ ಮಾಡುವುದು ಕಷ್ಟಕರ ಎಂದು ಕೇಂದ್ರ ತಿಳಿಸಿದೆ. FY 2023-24 ರಲ್ಲಿ, ಆರ್ಥಿಕ ವರ್ಷದ ಮೊದಲ ಒಂಬತ್ತು ತಿಂಗಳಿಗೆ ರಾಜ್ಯಕ್ಕೆ ಒಟ್ಟು ಸಾಲದ ಒಪ್ಪಿಗೆ 21,852 ಕೋಟಿ ರೂಪಾಯಿಗಳನ್ನು ನೀಡಲಾಗಿದೆ, ಅಂದರೆ ತಿಂಗಳಿಗೆ ಸರಾಸರಿ 2,428 ಕೋಟಿ ರೂಪಾಯಿ ಆಗಿದೆ.

ಕೇರಳ ಸ್ಟೋರಿ ಬಳಿಕ ಲೋಕಸಭಾ ಚುನಾವಣೆ ಹೊತ್ತಲ್ಲಿ ಮೆಹಬೂಬ ತೆರೆಗೆ, ಮುಸ್ಲಿಮರ ಆಕ್ರೋಶ!

ಸಾಲಕ್ಕೆ ಒಪ್ಪಿಗೆ ನೀಡುವ ವಿಚಾರದಲ್ಲಿ ಕೇಂದ್ರವು ಏಕರೂಪದ, ತಾರತಮ್ಯರಹಿತ ವಿಧಾನವನ್ನು ಅಳವಡಿಸಿಕೊಂಡಿದೆ ಎಂದು ಎಎಸ್‌ಜಿ ಹೇಳಿದೆ. ಕೇರಳದ ಆರ್ಥಿಕ ಬಿಕ್ಕಟ್ಟನ್ನು ಎದುರಿಸಲು ಮಾರ್ಚ್ 31 ರೊಳಗೆ ಒಂದು ಬಾರಿ ಬೇಲ್‌ಔಟ್ ಪ್ಯಾಕೇಜ್ ಅನ್ನು ಒದಗಿಸುವುದನ್ನು ಪರಿಗಣಿಸುವಂತೆ ಸುಪ್ರೀಂ ಕೋರ್ಟ್ ಕೇಳಿದ ಒಂದು ದಿನದ ನಂತರ ಕೇಂದ್ರದ ಪ್ರತಿಕ್ರಿಯೆ ಬಂದಿದೆ.

ಸಿಎಎ ಅನುಷ್ಠಾನಕ್ಕೆ ಪಾಕ್‌ ನಿರಾಶ್ರಿತ ಹಿಂದೂಗಳು ಹರ್ಷ: ಕೇರಳದಲ್ಲಿ ಜಾರಿ ಮಾಡಲ್ಲ ಎಂದ ಸಿಎಂ ಪಿಣರಾಯಿ

Latest Videos
Follow Us:
Download App:
  • android
  • ios