Asianet Suvarna News Asianet Suvarna News

Farm Laws Repeal: 'ಪ್ರತಿಭಟನೆ ವೇಳೆ ಮೃತ ರೈತರ ಲೆಕ್ಕ ಇಲ್ಲ, ಪರಿಹಾರ ನೀಡಲ್ಲ!'

*ಲೋಕಸಭೆಯಲ್ಲಿ ಕೃಷಿ ಸಚಿವ ತೋಮರ್‌ ಸ್ಪಷ್ಟನೆ
*700 ರೈತರು ಸತ್ತಿದ್ದಾರೆ, ಲೆಕ್ಕ ಏಕಿಲ್ಲ: ಖರ್ಗೆ ಪ್ರಶ್ನೆ
*ಸರ್ಕಾರದ ಹೇಳಿಕೆ ರೈತರಿಗೆ ಮಾಡಿದ ಅವಮಾನ : ಖರ್ಗೆ!

Centre says no data on farmers death during farm laws protest so no compensation mnj
Author
Bengaluru, First Published Dec 2, 2021, 6:46 AM IST

ನವದೆಹಲಿ (ಡಿ. 02): ಮೂರು ಕೃಷಿ ಕಾಯ್ದೆಗಳನ್ನು ವಿರೋಧಿಸಿ (Farm Laws Repeal) ಕಳೆದೊಂದು ವರ್ಷದಿಂದ ದೇಶಾದ್ಯಂತ ನಡೆದ ಹೋರಾಟದಲ್ಲಿ ಯಾವುದೇ ರೈತರು ಸಾವನ್ನಪ್ಪಿದ (Farmers Daeth) ಬಗ್ಗೆ ತನ್ನ ಬಳಿ ಯಾವುದೇ ದಾಖಲೆಗಳಿಲ್ಲ ಎಂದು ಕೇಂದ್ರ ಸರ್ಕಾರ (Centre) ಸ್ಪಷ್ಟಪಡಿಸಿದೆ. ಈ ಮೂಲಕ ಹೋರಾಟಕ್ಕೆ ಮಡಿದ ರೈತರಿಗೆ ಪರಿಹಾರ ನೀಡುವ ಸಾಧ್ಯತೆಯನ್ನು ತಳ್ಳಿಹಾಕಿದೆ.‘ಕೃಷಿ ಹೋರಾಟದಲ್ಲಿ ಭಾಗಿಯಾದ ಎಷ್ಟುರೈತರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ? ಹೋರಾಟದಲ್ಲಿ ಎಷ್ಟುರೈತರು ಮಡಿದಿದ್ದಾರೆ? ಮಡಿದ ರೈತರ ಕುಟುಂಬಗಳಿಗೆ ಪರಿಹಾರ ನೀಡುವ ಯಾವುದಾದರೂ ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರ ಹೊಂದಿದೆಯೇ?’ ಎಂದು ಬುಧವಾರ ಲೋಕಸಭೆಯಲ್ಲಿ ಪ್ರಶ್ನೋತ್ತರ ಅವಧಿಯಲ್ಲಿ ಸರ್ಕಾರವನ್ನು ಪ್ರಶ್ನಿಸಲಾಗಿತ್ತು. 

ಇದಕ್ಕೆ ಉತ್ತರ ನೀಡಿದ ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್‌ ತೋಮರ್‌ (Narendar Singh Tomar)‘ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯವು, ವಿಷಯಕ್ಕೆ ಸಂಬಂಧಿಸಿದಂತೆ ಯಾವುದೇ ದಾಖಲೆಗಳನ್ನು ಹೊಂದಿಲ್ಲ. ಹೀಗಾಗಿ ಪರಿಹಾರದ ಪ್ರಶ್ನೆಯೇ ಉದ್ಭವಿಸದು’ ಎಂದು ಹೇಳಿದ್ದಾರೆ.

ಸರ್ಕಾರದ ಹೇಳಿಕೆ ರೈತರಿಗೆ ಮಾಡಿದ ಅವಮಾನ!

ಸರ್ಕಾರದ ಈ ಉತ್ತರಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ರಾಜ್ಯಸಭೆಯಲ್ಲಿನ ಕಾಂಗ್ರೆಸ್‌ನ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ, ‘ಕೇಂದ್ರ ಸರ್ಕಾರದ ಹೇಳಿಕೆ ರೈತರಿಗೆ ಮಾಡಿದ ಅವಮಾನ. ವಿವಾದಿತ 3 ಕೃಷಿ ಕಾಯ್ದೆಗಳ ವಿರುದ್ಧದ ಸುದೀರ್ಘ ಹೋರಾಟದಲ್ಲಿ 700ಕ್ಕೂ ಹೆಚ್ಚು ರೈತರು ಬಲಿಯಾಗಿದ್ದಾರೆ. ಆದರೆ ಕೇಂದ್ರ ಸರ್ಕಾರ ತನ್ನ ಬಳಿ ದಾಖಲೆ ಇಲ್ಲ ಎಂದು ಹೇಗೆ ಹೇಳುತ್ತದೆ’ ಎಂದು ಪ್ರಶ್ನಿಸಿದರು. 

Farm Laws: ಕೃಷಿ ಕಾನೂನು ರದ್ದುಗೊಳಿಸಿ, ಪ್ರತಿಭಟನೆಗಿಳಿದು ಅಪಹಾಸ್ಯಕ್ಕೀಡಾದ ಕಾಂಗ್ರೆಸ್!

ಜೊತೆಗೆ ಕೇವಲ 700 ರೈತರ ಮಾಹಿತಿ ಕಲೆಹಾಕಲು ಸಾಧ್ಯವಾಗದ ಕೇಂದ್ರ ಸರ್ಕಾರ ಕೊರೋನಾ ಬಿಕ್ಕಟ್ಟಿನ (Corona Crisis) ವೇಳೆ ಲಕ್ಷಾಂತರ ಜನರ ದಾಖಲೆಗಳನ್ನು ಹೇಗೆ ಕ್ರೋಢೀಕರಿಸಿತು. ಕೊರೋನಾ ಕಾರಣಕ್ಕೆ ಕಳೆದ 2 ವರ್ಷಗಳಿಂದ 50 ಲಕ್ಷ ಜನರು ಜೀವನ ಕಳೆದುಕೊಂಡಿದ್ದಾರೆ. ಆದರೆ ಸರ್ಕಾರ ಮಾತ್ರ 4 ಲಕ್ಷ ಜನ ಕೋವಿಡ್‌ಗೆ ಬಲಿಯಾಗಿದ್ದಾರೆ (Covid 19 Death) ಎಂದು ಸುಳ್ಳು ಲೆಕ್ಕ ನೀಡುತ್ತಿದೆ ಎಂದು ದೂರಿದರು. ಇದಕ್ಕೂ ಮುನ್ನ ಲೋಕಸಭೆಯಲ್ಲಿ ಗೊತ್ತುವಳಿಯೊಂದನ್ನು ಮಂಡಿಸಿದ ಕಾಂಗ್ರೆಸ್‌ನ ಮನೀಶ್‌ ತಿವಾರಿ, ‘ಕೃಷಿ ಹೋರಾಟದಲ್ಲಿ ಮಡಿದ ರೈತರ ದಾಖಲೆಗಳನ್ನು ಸಂಗ್ರಹಿಸಲು ಸರ್ಕಾರಕ್ಕೆ ಸೂಚಿಸಬೇಕು ಮತ್ತು ಅವರಿಗೆ ತಲಾ 5 ಕೋಟಿ ರು. ಪರಿಹಾರ ನೀಡಬೇಕು’ ಎಂದು ಮನವಿ ಮಾಡಿದರು.

ಕೃಷಿ ಕಾಯ್ದೆ ರದ್ದು ಮಸೂದೆಗೆ ರಾಷ್ಟ್ರಪತಿ ಅನುಮೋದನೆ!

ಪ್ರಧಾನಿ ನರೇಂದ್ರ ಮೋದಿ(Narendra Modi) ಭರವಸೆ ನೀಡಿದಂತೆ ವಿವಾದಿತ ಮೂರು ಕೃಷಿ ಕಾಯ್ದೆ(Farm Laws) ರದ್ದು ಅದಿಕೃತಗೊಂಡಿದೆ. ರಾಷ್ಟ್ರಪತಿ ರಾಮನಾಥ್ ಕೋವಿಂದ್(Ram Nath Kovind) ಕೃಷಿ ಕಾಯ್ದೆ ರದ್ದು ಮಸೂದೆಗೆ ಅನುಮೋದನೆ ನೀಡಿದ್ದಾರೆ. ಜೊತೆಗೆ ಕಾಯ್ದೆ ರದ್ದತಿ ಕುರಿತು ಅಧಿಸೂಚನೆ ಹೊರಡಿಸಿದ್ದಾರೆ. ಆದರೆ ರೈತ ಸಂಘಟೆನೆಗಳು ಹೊಸ 6 ಬೇಡಿಕೆ ಮುಂದಿಟ್ಟುಕೊಂಡು ಪ್ರತಿಭಟನೆ ಮುಂದುವರಿಸಿದೆ.

Winter Session: ಸರ್ಕಾರ ಪ್ರಶ್ನೆಗಳಿಗೆ ಉತ್ತರಿಸಲು ಸಿದ್ಧ, ಪ್ರತಿಪಕ್ಷಗಳಿಗಿರಲಿ ತಾಳ್ಮೆ ಎಂದ ಮೋದಿ

ಪ್ರಧಾನಿ ನರೇಂದ್ರ ಮೋದಿ ಭರವಸೆ ನೀಡಿದಂತೆ ಚಳಿಗಾಲದ ಅಧಿವೇಶನದಲ್ಲಿ(winter session) ಮೂರು ಕೃಷಿ ಕಾಯ್ದೆ ಹಿಂಪಡೆಯುವ ಕಾನೂನು ಪ್ರಕ್ರಿಯೆ ಆರಂಭಗೊಂಡಿತ್ತು. ಮೊದಲು ಲೋಕಸಭೆ( Lok Sabha) , ಬಳಿಕ ರಾಜ್ಯಸಭೆಯಲ್ಲಿ(Rajya Sabha) ಧ್ವನಿಮತದ ಮೂಲಕ ಕೃಷಿ ಮಸೂದೆ ಹಿಂಪಡೆಯಲು ಅಂಗೀಕಾರ ನೀಡಲಾಗಿತ್ತು. ಈ ಪ್ರಕ್ರಿಯೆ ಬಳಿಕ ಇಂದು ರಾಮನಾಥ್ ಕೋವಿಂದ್ ಕೃಷಿ ಮಸೂದೆ ಹಿಂಪಡೆಯಲು ಅಂಕಿತ ಹಾಕಿದ್ದಾರೆ.

Follow Us:
Download App:
  • android
  • ios