ನವದೆಹಲಿ(ಡಿ.15): ಕಳೆದ ಒಂದು ವರ್ಷದಿಂದ ಇಡೀ ವಿಶ್ವವನ್ನು ಬಾಧಿಸುತ್ತಿರುವ ಕೊರೋ ನಾ ವೈರಸ್ ಪ್ರಕರಣಗಳ ಸಂಖ್ಯೆ ಭಾರತ ದಲ್ಲಿ 1 ಕೋಟಿಯತ್ತ ಸಮೀಪಿಸುತ್ತಿದೆ.

ಸೋಮವಾರ ರಾತ್ರಿವರೆಗಿನ ಅಂಕಿ ಸಂಖ್ಯೆಗಳ ಅನ್ವಯ ದೇಶದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 99.06 ಲಕ್ಷಕ್ಕೆ ಏರಿಕೆ ಆಗಿದೆ. ಹೀಗಾಗಿ ಇನ್ನು 2-3 ದಿನದಲ್ಲಿ ಕೊರೋನಾ ಕೇಸ್ 1 ಕೋಟಿ ತಲುಪುವ ನಿರೀಕ್ಷೆ ಇದೆ. ಇದೇ ವೇಳೆ ಕೊರೋನಾಕ್ಕೆ 1.43 ಲಕ್ಷ ಜನರು ಬಲಿಯಾಗಿದ್ದಾರೆ.

ಒಟ್ಟಾರೆ ಸೋಂಕಿತರ ಪಟ್ಟಿಯಲ್ಲಿ ಭಾರತ ವಿಶ್ವ ನಂ.2 ಸ್ಥಾನದಲ್ಲಿದ್ದರೆ, ಸಾವಿನ ಸಂಖ್ಯೆ ಯಲ್ಲಿ ವಿಶ್ವ ನಂ.3 ಸ್ಥಾನದಲ್ಲಿದೆ. ಇದೇ ವೇಳೆ ಸೋಂಕಿನಿಂದ ಚೇತರಿಸಿಕೊಂಡವರ ಸಂಖ್ಯೆ 93.88 ಲಕ್ಷಕ್ಕೆ ಏರಿಕೆ ಆಗಿದ್ದು, ಚೇತರಿಕೆ ಪ್ರಮಾಣ ಶೇ.94.98ಕ್ಕೆ ಏರಿಕೆ ಆಗಿದೆ. 30ರಂದು ಕೇರಳದಲ್ಲಿ ಮೊದಲ ಕೇಸ್ ದಾಖಲಾಗಿತ್ತು.ಅದೇ ರೀತಿ ಮಾ.13 ರಂದು ಕರ್ನಾಟಕದ ಕಲಬುರಗಿಯಲ್ಲಿ ಕೊರೋನಾಕ್ಕೆ ಮೊದಲ ಬಲಿ ಸಂಭವಿಸಿತ್ತು.