Asianet Suvarna News Asianet Suvarna News

‘ಕಾವೇರಿ’, ‘ಕೃಷ್ಣಾ’ ಕೇಂದ್ರದ ಸುಪರ್ದಿಗೆ; ಅಚ್ಚರಿ ಮೂಡಿಸಿದೆ ಏಕಾಏಕಿ ತೀರ್ಮಾನ

‘ಕಾವೇರಿ’, ‘ಕೃಷ್ಣಾ’ ಕೇಂದ್ರದ ಸುಪರ್ದಿಗೆ | ಜಲಶಕ್ತಿ ಅಧೀನದಲ್ಲಿ ಕಾವೇರಿ ಪ್ರಾಧಿಕಾರ, ಕೃಷ್ಣಾ ಮಂಡಳಿ ಕಾರ್ಯ ನಿರ್ವಹಣೆ | ರಾಷ್ಟ್ರಪತಿಯಿಂದ ಆದೇಶ

Centre brings Krishna cauvery water management Authority under Jal Shakti Ministry
Author
Bengaluru, First Published Apr 29, 2020, 9:23 AM IST

ನವದೆಹಲಿ (ಏ. 29): ನದಿ ನೀರಿನ ಹಂಚಿಕೆಯನ್ನು ನಿರ್ಧಿರಿಸುವ ಮಹತ್ವದ ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರ ಮತ್ತು ಕೃಷ್ಣಾ ನದಿ ನಿರ್ವಹಣಾ ಮಂಡಳಿ ಇನ್ನು ಅಧಿಕೃತವಾಗಿ ಕೇಂದ್ರ ಸರ್ಕಾರದ ಜಲ ಶಕ್ತಿ ಸಚಿವಾಲಯದ ಅಧೀನದಲ್ಲಿ ಕಾರ್ಯ ನಿರ್ವಹಿಸಲಿದೆ.

ಈ ಬಗ್ಗೆ ರಾಷ್ಟ್ರಪತಿಗಳು ಅಧಿಕೃತ ಆದೇಶ ಹೊರಡಿಸಿದ್ದು, ಗೋದಾವರಿ ನದಿ ನಿರ್ವಹಣಾ ಮಂಡಳಿ, ಈಶಾನ್ಯ ಭಾರತ ಜಲ ಮತ್ತು ಭೂ ನಿರ್ವಹಣೆ ಪ್ರಾದೇಶಿಕ ಸಂಸ್ಥೆಗಳೂ ಜಲಶಕ್ತಿ ಸಚಿವಾಲಯದ ಅಧೀನಕ್ಕೆ ಬರಲಿವೆ ಎಂದು ತಿಳಿಸಲಾಗಿದೆ. ಭಾರತ ಸರ್ಕಾರದ (ನಡಾವಳಿ ಹಂಚಿಕೆ) ನಿಯಮ - 1961ರ ಎರಡನೇ ಶೆಡ್ಯೂಲ… ಅನ್ವಯ ಜಲಶಕ್ತಿ ಸಚಿವಾಲಯದ ಜಲ ಸಂಪನ್ಮೂಲಗಳು, ನದಿ ಅಭಿವೃದ್ಧಿ ಮತ್ತು ಗಂಗಾ ಪುನಶ್ಚೇತನ ಇಲಾಖೆಯ ಅಧೀನದಲ್ಲಿ ಕಾರ್ಯನಿರ್ವಹಿಸಲಿವೆ’ ಎಂದು ಆದೇಶದಲ್ಲಿ ವಿವರಿಸಲಾಗಿದೆ.

ಬಹುದಿನಗಳ ರೈತರ ಕನಸು ನನಸು: ಏಷ್ಯಾದಲ್ಲಿಯೇ ಅತ್ಯಂತ ಉದ್ದದ ಜಲಸೇತುವೆ ಲೋಕಾರ್ಪಣೆ

ಈ ಅಧಿಸೂಚನೆಯು ನಡಾವಳಿ ನಿಯಮಗಳನ್ನು ನಿಗದಿ ಪಡಿಸುವಂತಹದ್ದು. ಇದರರ್ಥ ಇನ್ನುಮುಂದೆ ಕಾವೇರಿ ಪ್ರಾಧಿಕಾರ, ಕೃಷ್ಣಾ ಮಂಡಳಿಯು ಕೇಂದ್ರ ಜಲ ಶಕ್ತಿ ಸಚಿವಾಲಯಕ್ಕೆ ವರದಿ ಮಾಡಬೇಕು ಎಂಬುದಾಗಿದೆ. ಪ್ರಾಧಿಕಾರದ ಮತ್ತು ಸ್ವತಂತ್ರ ತೀರ್ಮಾನ ಕೈಗೊಳ್ಳುವ ಪ್ರಕ್ರಿಯೆಗೆ ಇದರಿಂದ ಯಾವುದೇ ಅಡ್ಡಿಯಿಲ್ಲ. ಸಾಮಾನ್ಯವಾಗಿ ಒಂದು ಸಂಸ್ಥೆ ಕೇಂದ್ರ ಸರ್ಕಾರದ ಯಾವುದಾದರೂ ಸಚಿವಾಲಯದ ಅಧೀನದಲ್ಲಿ ಬರಲೇ ಬೇಕಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಇವುಗಳನ್ನು ಜಲಶಕ್ತಿ ಸಚಿವಾಲಯದ ಅಧೀನಕ್ಕೆ ತಂದಿದೆ ಎಂದು ರಾಜ್ಯದ ಪರ ಜಲ ವಿವಾದಗಳಲ್ಲಿ ವಾದ ಮಂಡನೆ ಮಾಡುವ ಹಿರಿಯ ವಕೀಲ ಮೋಹನ್‌ ಕಾತರಕಿ ಅಭಿಪ್ರಾಯಪಟ್ಟಿದ್ದಾರೆ.

ಏಕಾಏಕಿ ತೀರ್ಮಾನ:

ಆದರೆ ಪ್ರಾಧಿಕಾರದ ರಚನೆ ಮತ್ತು ಅಧಿಕಾರದ ಬಗ್ಗೆ ಸುಪ್ರೀಂ ಕೋರ್ಟ್‌ ತೀರ್ಮಾನ ಪ್ರಕಟಿಸಿದೆ. ಸುಪ್ರೀಂ ಕೋರ್ಟಿನ ತೀರ್ಪಿನಲ್ಲಿ ಈ ಬಗ್ಗೆ ವಿವರಗಳಿದ್ದು ಅದೇ ರೀತಿ ಕಾವೇರಿ ಪ್ರಾಧಿಕಾರ ಕೆಲಸ ಮಾಡುತ್ತಿದೆ. ಇಂತಹ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಪ್ರತ್ಯೇಕ ನಡಾವಳಿ ನಿಯಮ ರೂಪಿಸುವ ಅಗತ್ಯ ಏನಿತ್ತು? ಒಂದು ವೇಳೆ ಇಂತಹ ನಿಯಮ ರೂಪಿಸುವಂತಿದ್ದರೆ ಸುಪ್ರೀಂ ಕೋರ್ಟಿನ ಗಮನಕ್ಕೆ ತರಬಹುದಿತ್ತು, ರಾಜ್ಯ ಸರ್ಕಾರಗಳಿಗೂ ಮಾಹಿತಿ ಕೊಡಬಹುದಿತ್ತು. ಏಕಾಏಕಿ ಈ ತೀರ್ಮಾನ ಹೊರ ಬಿದ್ದಿದೆ ಎಂದು ಜಲ ವಿವಾದಗಳ ಬಗ್ಗೆ ಖಚಿತ ಮಾಹಿತಿಗಳಿರುವ ರಾಜ್ಯದ ಹಿರಿಯ ಅಧಿಕಾರಿಯೊಬ್ಬರು ಆತಂಕ ವ್ಯಕ್ತಪಡಿಸಿದ್ದಾರೆ.

ಲಾಕ್‌ಡೌನ್‌ ಎಫೆಕ್ಟ್‌: ಕೇಂದ್ರದಿಂದ ಮೂರು ತಿಂಗಳ ಪಿಎಫ್‌ ವಂತಿಗೆ ಪಾವತಿ

ಕಾವೇರಿ ನಿರ್ವಹಣಾ ಪ್ರಾಧಿಕಾರದ ಬಗ್ಗೆ 2018ರಲ್ಲಿ ಸುಪ್ರೀಂ ಕೋರ್ಟ್‌ ನೀಡಿದ್ದ ಕಾವೇರಿ ತೀರ್ಪಿನಲ್ಲಿ ಉಲ್ಲೇಖವಿದ್ದು ಇದೇ ತೀರ್ಪಿನಡಿ 2018ರ ಜೂನ್‌ನಲ್ಲಿ ಪ್ರಾಧಿಕಾರದ ರಚನೆಯಾಗಿದ್ದು ಕಳೆದೆರಡು ವರ್ಷಗಳಿಂದ ಕಾವೇರಿ ನೀರನ್ನು ಕರ್ನಾಟಕ, ತಮಿಳುನಾಡು, ಪಾಂಡಿಚೇರಿ ಮತ್ತು ಕೇರಳದ ಮಧ್ಯೆ ಹಂಚುವ ಜವಾಬ್ದಾರಿ ನಿರ್ವಹಿಸುತ್ತಿದೆ. ಕೃಷ್ಣಾ ಜಲ ನಿರ್ವಹಣಾ ಮಂಡಳಿಯು 2014ರ ಆಂಧ್ರ ಪ್ರದೇಶ ಮರು ವಿಂಗಡಣೆ ಕಾಯ್ದೆಯಡಿ ರಚನೆಯಾಗಿದೆ.

Follow Us:
Download App:
  • android
  • ios