Asianet Suvarna News Asianet Suvarna News

ಕೇಂದ್ರದಲ್ಲಿ ಕರ್ನಾಟಕಕ್ಕೆ 5,000 ಕೋಟಿ ಅನುದಾನ!

* ಕೇಂದ್ರದ ಮಹತ್ವಾಕಾಂಕ್ಷಿ ‘ಜಲಜೀವನ ಮಿಷನ್‌’ ಯೋಜನೆ

* ಜಲಜೀವನ ಮಿಷನ್‌ ಯೋಜನೆಯಡಿಕರ್ನಾಟಕಕ್ಕೆ 5,000 ಕೋಟಿ ಅನುದಾನ

* ಅನುದಾನ ನೀಡಿಕೆಯಲ್ಲಿ ಕಳೆದ ವರ್ಷಕ್ಕಿಂತ 4 ಪಟ್ಟು ಹೆಚ್ಚು

Centre allocates Rs 5000 cr to Karnataka for Jal Jeevan Mission pod
Author
Bangalore, First Published Jul 9, 2021, 3:13 PM IST

ನವದೆಹಲಿ(ಜು.09): ಕೇಂದ್ರದ ಮಹತ್ವಾಕಾಂಕ್ಷಿ ‘ಜಲಜೀವನ ಮಿಷನ್‌’ ಯೋಜನೆಯಡಿ ಕರ್ನಾಟಕಕ್ಕೆ 2021-22ನೇ ಸಾಲಿನಲ್ಲಿ ಪ್ರಧಾನಿ ಮೋದಿ ನೇತೃತ್ವದ ಸರ್ಕಾರ 5 ಸಾವಿರ ಕೋಟಿ ರು. ಅನುದಾನ ನೀಡಿದೆ.

ಈ ಸಂಬಂಧ ಗುರುವಾರ ಹೇಳಿಕೆ ಬಿಡುಗಡೆ ಮಾಡಿರುವ ಕೇಂದ್ರ ಜಲಶಕ್ತಿ ಇಲಾಖೆ, 2020-21ನೇ ಸಾಲಿನಲ್ಲಿ 1189.40 ಕೋಟಿ ರು. ಬಿಡುಗಡೆ ಮಾಡಲಾಗಿತ್ತು. 2021-22ನೇ ಸಾಲಿನಲ್ಲಿ ಕರ್ನಾಟಕಕ್ಕೆ 5008.79 ಕೋಟಿ ರು. ಅನುದಾನ ನೀಡಲಾಗಿದೆ. ತನ್ಮೂಲಕ ಕಳೆದ ವರ್ಷಕ್ಕಿಂತ ಈ ವರ್ಷ ಕರ್ನಾಟಕಕ್ಕೆ ನಾಲ್ಕು ಪಟ್ಟು ಹೆಚ್ಚು ಅನುದಾನ ನೀಡಿದಂತಾಗಿದೆ.

ಕರ್ನಾಟಕದಲ್ಲಿ ಒಟ್ಟಾರೆ 91.19 ಲಕ್ಷ ಮನೆಗಳ ಪೈಕಿ 2019ರ ಆಗಸ್ಟ್‌ ವೇಳೆಗೆ 29.96 ಲಕ್ಷ(ಶೇ.32.86) ಮನೆಗಳಿಗೆ ನಲ್ಲಿ ನೀರಿನ ವ್ಯವಸ್ಥೆ ಕಲ್ಪಿಸಲಾಗಿತ್ತು. ಇನ್ನು ಜಲಜೀವನ ಮಿಷನ್‌ ಯೋಜನೆ ಆರಂಭದ ವೇಳೆಗೆ 24.51 ಲಕ್ಷ ಮನೆಗಳಿಗೆ ನಲ್ಲಿ ನೀರಿನ ವ್ಯವಸ್ಥೆ ಮಾಡಲಾಗಿದೆ ಎಂದು ಸರ್ಕಾರ ಮಾಹಿತಿ ನೀಡಿದೆ.

2024ರ ಅವಧಿ ವೇಳೆಗೆ ಪ್ರತಿ ಗ್ರಾಮದ ಮನೆಗಳಿಗೆ ನಲ್ಲಿ ನೀರು ಪೂರೈಸಬೇಕು ಎಂಬುದು ಕೇಂದ್ರ ಸರ್ಕಾರದ ಉದ್ಧೇಶವಾಗಿದೆ.

ಕಳೆದ 22 ತಿಂಗಳಲ್ಲಿ 5.44 ಲಕ್ಷ ಮನೆಗಳಿಗೆ ನಲ್ಲಿ ಸಂಪರ್ಕ ಕಲ್ಪಿಸಲಾಗಿದ್ದು, 2021-22ನೇ ಸಾಲಿನಲ್ಲಿ 25.17 ಲಕ್ಷ ಮನೆಗಳಿಗೆ ನಲ್ಲಿ ಸಂಪರ್ಕ ಮತ್ತು 2022-23ನೇ ಸಾಲಿನಲ್ಲಿ 17.93 ಲಕ್ಷ ಮನೆಗಳಿಗೆ ಮತ್ತು 2023-24 ಸಾಲಿನಲ್ಲಿ ಗ್ರಾಮೀಣ ಪ್ರದೇಶದ 19.93 ಲಕ್ಷ ಮನೆಗಳಿಗೆ ನಲ್ಲಿ ಸಂಪರ್ಕ ಕಲ್ಪಿಸುವುದು ಕೇಂದ್ರದ ಗುರಿಯಾಗಿದೆ.

Follow Us:
Download App:
  • android
  • ios