Asianet Suvarna News Asianet Suvarna News

ಆದಿವಾಸಿ ಯೋಜನೆ ಮೂಲಕ ದೇಶದ ಎಲ್ಲ ಆದಿವಾಸಿ ಹಾಡಿಗಳ ಅಭಿವೃದ್ಧಿ ಸಂಕಲ್ಪ: ಪ್ರಧಾನಿ

‘ವಿಕಸಿತ ಭಾರತ ಸಂಕಲ್ಪ ಯಾತ್ರೆ’ ಎಂಬ ಆಂದೋಲನ ಹಾಗೂ ಆದಿವಾಸಿಗಳ ಕಲ್ಯಾಣ ಯೋಜನೆಗಳು (ಪಿವಿಟಿಜಿ ಮಿಷನ್)- ಕೇಂದ್ರದ 2 ಪ್ರಮುಖ ಕಾರ್ಯಕ್ರಮಗಳಾಗಿದ್ದು, ಮೋದಿ ಅವರು ಬುಟಕಟ್ಟು ಜನಾಂಗಗಳ ಆರಾಧ್ಯ ದೈವ ಬಿರ್ಸಾ ಮುಂಡಾ ಜನ್ಮದಿನಂದು ಆದಿವಾಸಿಗಳ ಬೀಡಾದ ಜಾರ್ಖಂಡ್‌ನ ಕುಂತಿಯಲ್ಲಿ ಇವುಗಳಿಗೆ ಚಾಲನೆ ಕೊಟ್ಟರು.

Central Scheme Privilege for All in Country through Vikasit Bharat Yatra PM Modi said after inaugurate Vikasit Bharat Sankalp Yatra Welfare schemes for tribals akb
Author
First Published Nov 16, 2023, 8:38 AM IST

ಕುಂತಿ (ಜಾರ್ಖಂಡ್): 2024ರ ಲೋಕಸಭೆ ಚುನಾವಣೆಗೂ ಮುನ್ನ ಕೇಂದ್ರ ಸರ್ಕಾರದ 2 ಮಹತ್ವದ ಯೋಜನೆಗಳಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಬುಧವಾರ ಇಲ್ಲಿ ಚಾಲನೆ ನೀಡಿದರು. ‘ವಿಕಸಿತ ಭಾರತ ಸಂಕಲ್ಪ ಯಾತ್ರೆ’ ಎಂಬ ಆಂದೋಲನ ಹಾಗೂ ಆದಿವಾಸಿಗಳ ಕಲ್ಯಾಣ ಯೋಜನೆಗಳು (ಪಿವಿಟಿಜಿ ಮಿಷನ್)- ಕೇಂದ್ರದ 2 ಪ್ರಮುಖ ಕಾರ್ಯಕ್ರಮಗಳಾಗಿದ್ದು, ಮೋದಿ ಅವರು ಬುಟಕಟ್ಟು ಜನಾಂಗಗಳ ಆರಾಧ್ಯ ದೈವ ಬಿರ್ಸಾ ಮುಂಡಾ ಜನ್ಮದಿನಂದು ಆದಿವಾಸಿಗಳ ಬೀಡಾದ ಜಾರ್ಖಂಡ್‌ನ ಕುಂತಿಯಲ್ಲಿ ಇವುಗಳಿಗೆ ಚಾಲನೆ ಕೊಟ್ಟರು.

ಈ ವೇಳೆ ಮಾತನಾಡಿದ ಮಾತನಾಡಿದ ಮೋದಿ, ‘ಪಿವಿಟಿಜಿ ಮಿಷನ್’ ಮತ್ತು ‘ವಿಕಸಿತ ಭಾರತ್ ಸಂಕಲ್ಪ ಯಾತ್ರೆ''ಯಂತಹ ಅಭಿಯಾನಗಳು ದೇಶವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುತ್ತವೆ ಎಂದು ಆಶಿಸಿದರು.
ಆದಿವಾಸಿಗಳು ದೇಶಕ್ಕೆ ಗಣನೀಯ ಕೊಡುಗೆ ನೀಡಿದ್ದರೂ ಅದಕ್ಕೆ ತಕ್ಕ ಮನ್ನಣೆ ಸಿಕ್ಕಿಲ್ಲ. ಆದರೆ, ರಾಷ್ಟ್ರದ ಅಭಿವೃದ್ಧಿಗಾಗಿ ಮಹಿಳೆಯರು, ರೈತರು, ಯುವಕರು ಮತ್ತು ಮಧ್ಯಮ ವರ್ಗ ಮತ್ತು ಬಡವರು - ಈ 4 ಆಧಾರ ಸ್ತಂಭಗಳನ್ನು ಬಲಗೊಳಿಸುವುದು ತೀರಾ ಅಗತ್ಯವಾಗಿದೆ. ಅದಕ್ಕೆತಕ್ಕಂತೆ ಆದಿವಾಸಿಗಳ ಬೀಡಾದ ಜಾರ್ಖಂಡ್‌ಗೆ ಕೇಂದ್ರ ಸರ್ಕಾರ ತುಂಬಾ ಆದ್ಯತೆ ನೀಡಿದೆ. ಜಾರ್ಖಂಡ್‌ಗೆ 50,000 ಕೋಟಿ ರು.ಗಳ ಯೋಜನೆಗಳ ಮಳೆ ಸುರಿಸಿದ್ದೇವೆ ಮತ್ತು ರಾಜ್ಯದ ಶೇ.100ರಷ್ಟು ರೈಲು ಮಾರ್ಗ ವಿದ್ಯುದ್ದೀಕರಣಗೊಂಡಿದ್ದು, ಸಂಪೂರ್ಣ ವಿದ್ಯುದೀಕರಣಗೊಂಡ ದೇಶದ ಮೊದಲ ರಾಜ್ಯವಾಗಿದೆ’ ಎಂದು ಬಣ್ಣಿಸಿದರು.

ವಿಕಸಿತ ಭಾರತ ಯಾತ್ರೆ:
ವಿಕಸಿತ ಭಾರತ ಸಂಕಲ್ಪ ಯಾತ್ರೆ ಮೂಲಕ, ಈವರೆಗೂ ಜನಧನ( Jandhan), ಸುಕನ್ಯಾ ಸಮೃದ್ಧಿಯಂಥ (sukhanya Samrudhi) ಕೇಂದ್ರ ಸರ್ಕಾರದ ವಿವಿಧ ಯೋಜನೆಗಳ ಫಲವು ಯಾರಿಗೆ ಸಿಕ್ಕಿಲ್ಲವೋ ಅವರಿಗೆಲ್ಲ ಆ ಸೌಲಭ್ಯಗಳು ದೊರಕುವಂತಾಗಬೇಕು ಎಂಬ ಉದ್ದೇಶ ಇರಿಸಿಕೊಳ್ಳಲಾಗಿದೆ. 2024ರ ಜ.25ರೊಳಗೆ ಎಲ್ಲ ಕೇಂದ್ರೀಯ ಯೋಜನೆಗಳ ಸೌಲಭ್ಯವನ್ನು ಜನರಿಗೆ ತಲುಪಿಸುವ ಗುರಿ ಹೊಂದಲಾಗಿದ್ದು, ಅಂದು ಯಾತ್ರೆಯು ಸಮಾಪನಗೊಳ್ಳಲಿದೆ. ಯಾತ್ರೆಯು 2.7 ಲಕ್ಷ ಗ್ರಾಮ ಪಂಚಾಯ್ತಿಗಳು ಹಾಗೂ 15 ಸಾವಿರ ನಗರಾಡಳಿತಗಳನ್ನು ತಲುಪಲಿದೆ.

ಆದಿವಾಸಿಗಳ ಕಲ್ಯಾಣ ಯೋಜನೆ:

ಆದಿವಾಸಿಗಳ ಕಲ್ಯಾಣ (Tribal welfare)ಯೋಜನೆಗೆ ‘ನಿರ್ದಿಷ್ಟ ದುರ್ಬಲ ಆದಿವಾಸಿ ಗುಂಪು’ ಆಂದೋಲನ (PVTG Mission) ಎಂದು ಹೆಸರಿಸಲಾಗಿದೆ. ದೇಶದ 18 ರಾಜ್ಯಗಳ 220 ಜಿಲ್ಲೆಗಳ 22,544 ಹಳ್ಳಿಗಳಲ್ಲಿ 75 ಅತಿ ದುರ್ಬಲ ಆದಿವಾಸಿ ಜನಾಂಗಗಳು (ಪಿವಿಟಿಜಿ) ಇದ್ದು, ಇವರ ಒಟ್ಟು ಜನಸಂಖ್ಯೆ 28 ಲಕ್ಷವಾಗಿದೆ. 24,000 ಕೋಟಿ ರು.ಗಳ ಈ ಯೋಜನೆಯು ಈ ದುರ್ಬಲ ಆದಿವಾಸಿ ಜನಾಂಗಗಳ ಸಮಗ್ರ ಅಭಿವೃದ್ಧಿಯತ್ತ ಗಮನ ಹರಿಸಲಿದೆ.

ಬುಡಕಟ್ಟು ಜನಾಂಗದವರು ಚದುರಿದ, ದೂರದ ಮತ್ತು ಪ್ರವೇಶಿಸಲಾಗದ ವಾಸಸ್ಥಳಗಳಲ್ಲಿ ವಾಸಿಸುತ್ತಾರೆ. ಅರಣ್ಯ ಪ್ರದೇಶಗಳಲ್ಲಿರುತ್ತಾರೆ. ಆದ್ದರಿಂದ ಇಂಥ ಕುಟುಂಬಗಳ ಸಮಗ್ರ ಅಭಿವೃದ್ಧಿಯೇ ಮಿಷನ್‌ನ ಉದ್ದೇಶವಾಗಿದೆ. ಆದಿವಾಸಿಗಳಿಗೆ ಮೂಲಭೂತ ಸೌಕರ್ಯಗಳಾದ ರಸ್ತೆ ಮತ್ತು ಟೆಲಿಕಾಂ ಸಂಪರ್ಕ, ವಿದ್ಯುತ್, ಸುರಕ್ಷಿತ ವಸತಿ, ಶುದ್ಧ ಕುಡಿಯುವ ನೀರು, ನೈರ್ಮಲ್ಯ, ಶಿಕ್ಷಣ, ಆರೋಗ್ಯ ಮತ್ತು ಪೋಷಣೆ ಮತ್ತು ಸುಸ್ಥಿರ ಜೀವನೋಪಾಯದ ಅವಕಾಶಗಳನ್ನು ಈ ಯೋಜನೆ ಮೂಲಕ ನೀಡಲಾಗುತ್ತದೆ.

3ನೇ ಬಾರಿ ಮೋದಿ ಪ್ರಧಾನಿಯಾಗಲು ಕುರುಡುಮಲೆ ಗಣಪತಿಗೆ ವಿಜಯೇಂದ್ರ ವಿಶೇಷ ಪೂಜೆ

Follow Us:
Download App:
  • android
  • ios