Asianet Suvarna News Asianet Suvarna News

ಶೀಘ್ರ ಕೇಂದ್ರ ಸರ್ಕಾರದಿಂದ ಕರ್ನಾಟಕದ ಔಷಧಿ ಕಂಪನಿಗೆ ಬೀಗ

6 ಕಂಪನಿಗಳು ಮುಚ್ಚುವ ಹಂತದಲ್ಲಿ ಅಥವಾ ವ್ಯಾಜ್ಯದಲ್ಲಿದ್ದು, ಇವುಗಳಲ್ಲಿ ಕರ್ನಾಟಕ ಆ್ಯಂಟಿಬಯೋಟಿಕ್ಸ್‌ ಆ್ಯಂಡ್‌ ಫಾರ್ಮಸ್ಯುಟಿಕಲ್ಸ್‌ ಕಂಪನಿ ಕೂಡ ಸೇರಿದೆ ಎಂದಿದ್ದಾರೆ. ಈ ಕಂಪನಿ ಬೆಂಗಳೂರಿನ ಪೀಣ್ಯ ಹಾಗೂ ಧಾರವಾಡದ ಕೋಟೂರಿನಲ್ಲಿ ಘಟಕ ಹೊಂದಿದೆ.

Central Govt Likely To Shut down Karnataka Pharmaceutical Ram
Author
Bengaluru, First Published Sep 15, 2020, 9:25 AM IST

ನವದೆಹಲಿ (ಸೆ.15): 20 ಕೇಂದ್ರೀಯ ಸಾರ್ವಜನಿಕ ಸ್ವಾಮ್ಯದ ಕಂಪನಿಗಳ ಬಂಡವಾಳ ಹಿಂತೆಗೆತದ ಪ್ರಕ್ರಿಯೆ ಚಾಲ್ತಿಯಲ್ಲಿದೆ. 6 ಕಂಪನಿಗಳು ಮುಚ್ಚುವ ಹಂತದಲ್ಲಿ ಅಥವಾ ವ್ಯಾಜ್ಯದಲ್ಲಿವೆ ಎಂದು ಕೇಂದ್ರ ವಿತ್ತ ಖಾತೆ ರಾಜ್ಯ ಸಚಿವ ಅನುರಾಗ್‌ ಠಾಕೂರ್‌ ಹೇಳಿದ್ದಾರೆ. ಇವುಗಳಲ್ಲಿ ಕರ್ನಾಟಕದ 2 ಕಂಪನಿಗಳು ಸೇರಿವೆ.

ಲೋಕಸಭೆಗೆ ಲಿಖಿತ ಉತ್ತರ ನೀಡಿರುವ ಅವರು, 6 ಕಂಪನಿಗಳು ಮುಚ್ಚುವ ಹಂತದಲ್ಲಿ ಅಥವಾ ವ್ಯಾಜ್ಯದಲ್ಲಿದ್ದು, ಇವುಗಳಲ್ಲಿ ಕರ್ನಾಟಕ ಆ್ಯಂಟಿಬಯೋಟಿಕ್ಸ್‌ ಆ್ಯಂಡ್‌ ಫಾರ್ಮಸ್ಯುಟಿಕಲ್ಸ್‌ ಕಂಪನಿ ಕೂಡ ಸೇರಿದೆ ಎಂದಿದ್ದಾರೆ. ಈ ಕಂಪನಿ ಬೆಂಗಳೂರಿನ ಪೀಣ್ಯ ಹಾಗೂ ಧಾರವಾಡದ ಕೋಟೂರಿನಲ್ಲಿ ಘಟಕ ಹೊಂದಿದೆ.

ಸಂಸತ್ತಲ್ಲಿ ಹೊಸ ಇತಿಹಾಸ, ಸಂಸದರ ಮಧ್ಯೆ ಪ್ಲಾಸ್ಟಿಕ್ ಪರದೆ! ...

ಇನ್ನು ಬಂಡವಾಳ ಹಿಂತೆಗೆತ ಪ್ರಕ್ರಿಯೆಯಲ್ಲಿರುವ 20 ಕಂಪನಿಗಳ ಪಟ್ಟಿಯಲ್ಲಿ ಭದ್ರಾವತಿಯ ವಿಶ್ವೇಶ್ವರಯ್ಯ ಕಬ್ಬಿಣ ಹಾಗೂ ಉಕ್ಕು ಕಾರ್ಖಾನೆ (ವಿಐಎಸ್‌ಎಲ್‌) ಕೂಡ ಇದೆ ಎಂದು ಅವರು ಹೇಳಿದ್ದಾರೆ. ಏರ್‌ ಇಂಡಿಯಾ, ಪವನ್‌ ಹನ್ಸ್‌, ಭಾರತ್‌ ಪೆಟ್ರೋಲಿಯಂ ಕೂಡ ಬಂಡವಾಳ ಹಿಂತೆಗೆತದ ಪಟ್ಟಿಯಲ್ಲಿವೆ.

Follow Us:
Download App:
  • android
  • ios