ಇ ಸಂಜೀವಿನಿ ಮೂಲಕ ಹಿರಿಯರಿಗೆ ಉಚಿತ ಚಿಕಿತ್ಸೆ; ಕೇಂದ್ರ ಸರ್ಕಾರದ ಮಹತ್ವದ ನಿರ್ಧಾರ!

ಕೊರೋನಾ ವೈರಸ್ ಕಾರಣ ಆರೋಗ್ಯ ಸಮಸ್ಯೆ ಎದುರಿಸುತ್ತಿರುವ ಹಲವು ಹಿರಿಯರು ಆಸ್ಪತ್ರೆಗೆ ತೆರಳಿ ವೈದ್ಯರ ಸಂಪರ್ಕಿಸಿ ಔಷಧಿ ಪಡೆಯಲು ಸಾಧ್ಯವಾಗುತ್ತಿಲ್ಲ. ಹಾಗಂತ ತಮ್ಮ ಆರೋಗ್ಯವನ್ನು ನಿರ್ಲಕ್ಷ್ಯಿಸಿದ್ದರೆ ಅಪಾಯ ಕಟ್ಟಿಟ್ಟ ಬುತ್ತಿ. ಇದಕ್ಕಾಗಿ ಕೇಂದ್ರ ಸರ್ಕಾರ  ಇ ಸಂಜೀವಿನಿ ಯೋಜನೆ ಪರಿಣಾಮಕಾರಿಯಾಗಿ ಜಾರಿಗೆ ತಂದಿದೆ.  

Central Govt launch esanjeevini free online doctor consultation for aged people

ನವದೆಹಲಿ(ಆ.07): ಕೊರೋನಾ ವೈರಸ್ ಕಾರಣ ಆರೋಗ್ಯ ಸಮಸ್ಯೆ ಎದುರಿಸುತ್ತಿರುವ ಹಿರಿಯರು ಆಸ್ಪತ್ರೆಗೆ ತೆರಳಲು ಸಾಧ್ಯವಾಗುತ್ತಿಲ್ಲ. ರಕ್ತದ ಒತ್ತಡ, ಡಯಾಬಿಟಿಸ್ ಸೇರಿದಂತೆ ವಯೋಸಹಜ ಖಾಯಿಲೆಯಿಂದ ಬಳಲುತ್ತಿರುವ ಹಲವರು ಪ್ರತಿ ತಿಂಗಳು ವೈದ್ಯರ ತಪಾಸಣೆ ಬಳಿಕ ಔಷಧಿ ಖರೀದಿ ಮಾಡಬೇಕಾದ ಅನಿವಾರ್ಯತೆ ಇದೆ. ಆದರೆ ಕೊರೋನಾ ಕಾರಣ ಆಸ್ಪತ್ರೆಯತ್ತ ಮಖ ಮಾಡುವುದು ದುಸ್ತರವಾಗಿದೆ. ಈ ಸಮಸ್ಯೆಗೆ ಪರಿಹಾರವಾಗಿ ಕೇಂದ್ರ ಸರ್ಕಾರ ಇ ಸಂಜೀವಿನಿ ಯೋಜನೆಯನ್ನು ತಂದಿದೆ.

ಹೆಚ್ಚುತ್ತಿದೆ ಸಣ್ಣ ವಯಸ್ಸಿಗೇ ಹೃದಯ ಸಮಸ್ಯೆ, ಕಾರಣಗಳು ಹಲವು

ತಲೆನೋವು, ಮೈಕೈ ನೋವು ಸೇರಿದಂತೆ ಆರೋಗ್ಯ ಸಮಸ್ಯೆಗಳಿಗೆ ಹಿರಿಯರು ನೇರವಾಗಿ ಆಸ್ಪತ್ರೆಗೆ ತೆರಳುವ ಅಗತ್ಯವಿಲ್ಲ. ಇದರ ಬದಲು ಇ ಸಂಜೀವಿನಿ(eSANJEEVANI) ಮೂಲಕ ಉಚಿತ ಚಿಕಿತ್ಸೆ ಸಿಗಲಿದೆ. ಇ ಸಂಜೀವಿನಿ ಮೂಲಕ ಮನೆಯಲ್ಲೇ ಕುಳಿತು ವೈದ್ಯರ ಜೊತೆ ಸಮಾಲೋಚನೆ ನಡೆಸಲು ಸಾಧ್ಯವಿದೆ. ವೈದ್ಯರು ವಿಡಿಯೋ ಕಾಲ್ ಮೂಲಕ ಸಂಪರ್ಕಿಸಿ ಪರಿಶೀಲನೆ ನಡೆಸಲಿದ್ದಾರೆ. ಸಮಸ್ಯೆಗೆ ಔಷಧಿ ನೀಡಲಿದ್ದಾರೆ. ಎಲ್ಲವೂ ಅಂತರ್ಜಾಲದ ಮೂಲಕವೇ ನಡೆಯಲಿದೆ.

ಬಿಸಿ ನೀರು ಕುಡಿದರೆ ದೇಹದ ತೂಕ ಕಡಿಮೆ ಆಗುತ್ತಾ?

ಇ ಸೌಲಭ್ಯದಿಂದ ಆರೋಗ್ಯ ಸಮಸ್ಯೆ ಎದುರಿಸುತ್ತಿರುವವರು ಯಾವುದೇ ಆತಂಕವಿಲ್ಲದೆ ಮನೆಯಲ್ಲಿ ಚಿಕಿತ್ಸೆ ಪಡೆಯಬಹುದು. ಇತ್ತ ವೈದ್ಯರು ವಿಡಿಯೋ ಕಾಲ್ ಮೂಲಕ ಪರಿಶೀಲನೆ ನಡೆಸಿ ಔಷಧಿ ಬರೆದು ಕೊಡಲಿದ್ದಾರೆ. ಇ ಪ್ರಿಸ್‌ಕ್ರಿಪ್ಶನ್ ಮೊಬೈಲ್‌ಗೆ ಕಳುಹಿಸಿ ಕೊಡಲಿದ್ದಾರೆ. ಇ ಪ್ರಿಸ್‌ಕ್ರಿಪ್ಶನ್ ತೋರಿಸಿ ಮೆಡಿಕಲ್‌ನಿಂದ ಔಷಧಿ ಪಡೆಯಬಹದು. 

ಇ ಸಂಜೀವಿನಿ ವೆಬ್‌ಸೈಟನ್ನು  ಗೂಗಲ್ ಕ್ರೂಮ್ ಅಥವಾ ಆ್ಯಪ್ ಡೌನ್ಲೋಡ್ ಮಾಡಿ ಈ ಉಚಿತ ವೈದ್ಯಕೀಯ ಸೇವೆಯನ್ನು ಪಡೆದುಕೊಳ್ಳಬಹುದು.  

ಇ ಸಂಜೀವಿನ ಸೇವೆ ಪಡೆದುಕೊಳ್ಳುವುದು ಹೇಗೆ?

  • ಇ ಸಂಜೀವಿನಿ ವೆಬ್‌ಸೈಟ್ ಅಥವಾ ಆ್ಯಪ್ ಮೂಲಕ ರೋಗಿ ಅಥವಾ ಆರೋಗ್ಯ ಸಮಸ್ಯೆ ಎದುರಿಸುತ್ತಿರವ ಹಿರಿಯ ನಾಗರಿಕರು ನೋಂದಣಿ ಮಾಡಿಕೊಳ್ಳಬೇಕು
  • ನಿಮ್ಮ ಮೊಬೈಲ್ ನಂಬರ್ ನಮೂದಿಸಬೇಕು
  • ಮೊಬೈಲ್ ನಂಬರ್‌ಗೆ ಬರುವ OTP(ಒನ್ ಟೈಮ್ ಪಾಸ್‌ವರ್ಡ್)‌ನ್ನು ವೆಬ್‌ಸೈಟ್ ಅಥವಾ ಆ್ಯಪ್‌ನಲ್ಲಿ ನಮೂದಿಸಬೇಕು
  • ರೋಗಿಯ ವಿವರ, ವಿಳಾಸ, ಜಿಲ್ಲೆಯನ್ನು ಸ್ಪಷ್ಟವಾಗಿ ನಮೂದಿಸಬೇಕು 

ಎಲ್ಲಾ ವಿವರಗಳನ್ನು ಸಲ್ಲಿಕೆ ಮಾಡಿದ ಬಳಿಕ ವೈದ್ಯರು ನಮೂದಿಸಿದ ಮೊಬೈಲ್ ನಂಬರ್‌ಗೆ ವಿಡಿಯೋ ಕಾಲ್ ಮಾಡಲಿದ್ದಾರೆ. ಆನ್‌ಲೈನ್ ಮೂಲಕ ಸಮಸ್ಯೆಗೆ ಉತ್ತರ ನೀಡಲಿದ್ದಾರೆ. ಇದು ಸಂಪೂರ್ಣ ಉಚಿತವಾಗಿದೆ. ವಾರದ ಎಲ್ಲಾ ದಿನದಲ್ಲಿ ಈ ಸೌಲಭ್ಯ ಲಭ್ಯವಿದೆ. ಬೆಳಗ್ಗೆ 10 ಗಂಟೆಯಿಂದ ಸಂಜೆ 3 ಗಂಟೆ ವರೆಗೆ ಇ ಸಂಜೀವಿನಿ ವೈದ್ಯಕೀಯ ಸೇವೆ  ಲಭ್ಯವಿದೆ.

ಹೆಚ್ಚಿನ ವಿವರಗಳಿಗೆ ಸರ್ಕಾರದ eSanjeevaniopd.in ವೈಬ್‌ಸೈಟ್ ಭೇಟಿ ನೀಡಿ

ಅಥವೂ ಗೂಗಲ್ ಪ್ಲೇ ಸ್ಟೋರ್ ಮೂಲಕ ಡೌನ್ಲೋಡ್ ಮಾಡಿಕೊಳ್ಳಬಹುದು

Latest Videos
Follow Us:
Download App:
  • android
  • ios