ಬಿಸಿ ನೀರು ಕುಡಿದರೆ ದೇಹದ ತೂಕ ಕಡಿಮೆ ಆಗುತ್ತಾ?
ನಮ್ಮ ಉಳಿವಿಗಾಗಿ ನೀರು ಬಹಳ ಅವಶ್ಯಕವೆಂದು ನಮಗೆಲ್ಲರಿಗೂ ತಿಳಿದಿದೆ. ಬಾಯಾರಿಕೆಯನ್ನು ನೀಗಿಸುವುದಕ್ಕೆ ಮಾತ್ರವಲ್ಲ, ದೇಹದ ಸರಿಯಾಗಿ ಕೆಲಸ ಮಾಡಲು ಹಾಗೂ ರೋಗ ಮುಕ್ತವಾಗಿಡಲು ನೀರು ಅಗತ್ಯ. ದೇಹದ ತೂಕ ಇಳಿಸಲು ಸಹ ನೀರು ಕುಡಿಯುವುದು ಸಹಾಯಕಾರಿ. ಬಿಸಿನೀರು ಕುಡಿದರೆ ದೇಹದ ತೂಕ ಕಡಿಮೆ ಆಗಲು ಸಹಾಯ ಆಗುತ್ತಾ?
ನಮ್ಮ ದೇಹದ ಸುಮಾರು 70% ರಷ್ಟು ನೀರಿನಿಂದ ಕೂಡಿದೆ ಹಾಗೂ ದೇಹದ ವ್ಯವಸ್ಥೆಯು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುವಂತೆ ಮಾಡುತ್ತದೆ, ಆದ್ದರಿಂದ ಪ್ರತಿಯೊಬ್ಬ ವ್ಯಕ್ತಿಯು ಪ್ರತಿದಿನ 2-3 ಲೀಟರ್ ನೀರನ್ನು ಸೇವಿಸುವುದು ಅತ್ಯಗತ್ಯ.
ತಣ್ಣನೆ ಮತ್ತು ಬಿಸಿನೀರು ಎರಡೂ ತಮ್ಮದೇ ಆದ ಬಾಧಕಗಳನ್ನು ಹೊಂದಿವೆ. ತೀವ್ರವಾದ ವರ್ಕೌಟ್ ನಂತರ ತಣ್ಣಗಾಗಲು ಒಂದು ಲೋಟ ತಣ್ಣೀರು ನಿಮಗೆ ಸಹಾಯ ಮಾಡುತ್ತದೆ, ಆದರೆ ಬಿಸಿನೀರು ದೇಹದಿಂದ ಟಾಕ್ಸಿನ್ ಹೊರಹಾಕಲು ಸಹಾಯ ಮಾಡುವುದರೊಂದಿಗೆ ಆಹಾರವನ್ನು ಉತ್ತಮವಾಗಿ ಜೀರ್ಣಿಸಿಕೊಳ್ಳಲು ಅನುವು ಮಾಡಿಕೊಡುತ್ತದೆ.
ಇದಲ್ಲದೆ, ಕುಡಿಯುವ ನೀರು ವಿಶೇಷವಾಗಿ ಬಿಸಿನೀರು ತೂಕ ಕರಗಿಸಲು ಸಹಾಯ ಮಾಡುತ್ತದೆ. ಅದು ನಿಜವೇ?
ಹೆಚ್ಚು ನೀರು ಕುಡಿಯುವುದರಿಂದ ಒಬ್ಬ ವ್ಯಕ್ತಿಯು ತೂಕ ಕಳೆದು ಕೊಳ್ಳುತ್ತಾನೆ. ಇದಕ್ಕೆ ಕಾರಣವೆಂದರೆ ನೀರು ಹೊಟ್ಟೆ ತುಂಬಿರುವ ಫೀಲ್ ನೀಡುತ್ತದೆ, ಪೋಷಕಾಂಶಗಳನ್ನು ಹೀರಿಕೊಳ್ಳಲು ದೇಹಕ್ಕೆ ಸಹಕರಿಸುತ್ತದೆ. ವಿಷಕಾರಿ ತ್ಯಾಜ್ಯವನ್ನು ಹೊರಹಾಕುತ್ತದೆ, ಎಂದು ಸಂಶೋಧನೆಯೊಂದು ಹೇಳಿದೆ.
2003ರಲ್ಲಿ ಪ್ರಕಟವಾದ ಮತ್ತೊಂದು ಅಧ್ಯಯನದ ಪ್ರಕಾರ, ಬಿಸಿನೀರನ್ನು ಕುಡಿಯುವುದರಿಂದ ತೂಕ ಇಳಿಸುವ ಪ್ರಕ್ರಿಯೆಯನ್ನು ಹೆಚ್ಚಿಸಬಹುದು. ಊಟಕ್ಕೆ ಮುಂಚಿತವಾಗಿ 500 ಮಿಲಿ ನೀರನ್ನು ಕುಡಿಯುವುದು ಮೆಟಾಬಾಲಿಸಮ್ 30% ಹೆಚ್ಚಿಸುತ್ತದೆ.
ಪ್ರತಿದಿನ ಬೆಳಿಗ್ಗೆ ಅಥವಾ ದಿನವಿಡೀ ಬಿಸಿ ಅಥವಾ ಬೆಚ್ಚಗಿನ ನೀರನ್ನು ಕುಡಿಯುವುದರಿಂದ ತೂಕ ಇಳಿಸುವ ಪ್ರಕ್ರಿಯೆಗೆ ಮೂರು ವಿಧಗಳಲ್ಲಿ ಸಹಾಯವಾಗುತ್ತದೆ.
ಬಿಸಿನೀರು ಕುಡಿಯುವುದರಿಂದ ನಿಮ್ಮ ದೇಹದ ಉಷ್ಣತೆ ಬದಲಾಗುತ್ತದೆ. ನೀರಿನ ಬೆಚ್ಚಗಿನ ತಾಪಮಾನವನ್ನು ಸರಿದೂಗಿಸಲು, ನಮ್ಮ ದೇಹವು ಆಂತರಿಕ ತಾಪಮಾನವನ್ನು ಕಡಿಮೆ ಮಾಡುತ್ತದೆ ಮತ್ತು ಚಯಾಪಚಯವನ್ನು ಸಕ್ರಿಯಗೊಳಿಸುತ್ತದೆ.
ದೇಹದಲ್ಲಿನ ಕೊಬ್ಬನ್ನು ಒಡೆಯುತ್ತದೆ ಮತ್ತು ಅವುಗಳನ್ನು ಅಣುಗಳಾಗಿ ಪರಿವರ್ತಿಸುತ್ತದೆ, ಇದರಿಂದಾಗಿ ನಿಮ್ಮ ಜೀರ್ಣಾಂಗ ವ್ಯವಸ್ಥೆಗೆ ಫ್ಯಾಟ್ ಬರ್ನ್ ಸುಲಭಗೊಳಿಸುತ್ತದೆ.
ಹಸಿವನ್ನು ನೀಗಿಸಲು ಬೆಚ್ಚಗಿನ ನೀರು ಸಹಾಯ ಮಾಡುತ್ತದೆ. ನಿಮ್ಮ ಊಟಕ್ಕೆ 30 ನಿಮಿಷಗಳ ಮೊದಲು ಒಂದು ಲೋಟ ಬೆಚ್ಚಗಿನ ನೀರನ್ನು ಕುಡಿದರೆ ನಿಮ್ಮ ಕ್ಯಾಲೊರಿ ಬರ್ನ್ ಆಗುವುದರಲ್ಲಿ ಅನುಮಾನವೇ ಇಲ್ಲ.
ಜೀರ್ಣಕ್ರಿಯೆಯ ಪ್ರಕ್ರಿಯೆಯ ಸುಗಮವಾಗಿಸಲು ನೀರು ಏಜೆಂಟ್ ಆಗಿ ಕಾರ್ಯನಿರ್ವಹಿಸುತ್ತದೆ. ಇದು ನಮಗೆ ಜೀರ್ಣಿಸಿಕೊಳ್ಳಲು ಕಷ್ಟಪಡುವ ಆಹಾರ ಕಣಗಳನ್ನು ಸಹ ಕರಗಿಸಿ ಜೀರ್ಣಕ್ರಿಯೆಯನ್ನು ಸುಗಮಗೊಳಿಸುತ್ತದೆ.
ಬಿಸಿನೀರು ನಿಮ್ಮ ನರಮಂಡಲವನ್ನು ಶಾಂತಗೊಳಿಸುತ್ತದೆ. ನಿಮ್ಮ ನರಮಂಡಲವು ಶಾಂತವಾಗಿದ್ದಾಗ, ನೀವು ಕಡಿಮೆ ನೋವುಗಳನ್ನು ಅನುಭವಿಸುವುದಲ್ಲದೆ, ದಿನವಿಡೀ ಶಾಂತವಾಗಿರಲು ನಿಮಗೆ ಸಹಾಯ ಮಾಡುತ್ತದೆ.
ಮಲಬದ್ಧತೆಯನ್ನು ನಿವಾರಿಸಲು ಸಹಾಯ ಮಾಡುತ್ತದೆ. ಬಿಸಿನೀರು ನಿಮ್ಮ ಕರುಳನ್ನು ಸಂಕುಚಿತಗೊಳಿಸುತ್ತದೆ, ಇದು ಕರುಳಿನಲ್ಲಿನ ಅಡಚಣೆಯನ್ನು ಕಡಿಮೆ ಮಾಡಿ ಮಲ ವಿಸರ್ಜನೆ ಸುಲಭಗೊಳಿಸುತ್ತದೆ.
ಕುಡಿಯುವ ನೀರು ವ್ಯಕ್ತಿಯ ದೇಹದ ಉಷ್ಣತೆಯನ್ನು ಹೆಚ್ಚಿಸಿ ಬೆವರುವಂತೆ ಮಾಡುತ್ತದೆ. ಬೆವರುವಿಕೆಯ ರಂಧ್ರಗಳಿಂದ ಟಾಕ್ಸಿನ್ ಹೊರಹಾಕುತ್ತದೆ