ನವದೆಹಲಿ(ಮೇ.16): ದೇಶದಲ್ಲಿ ಕೊರೋನಾ ವೈರಸ್ ಪ್ರಕರಣ ಸಂಖ್ಯೆ ಹೆಚ್ಚಾಗುತ್ತಿದೆ. ಅದರಲ್ಲೂ ಗ್ರಾಮೀಣ ಪ್ರದೇಶದಲ್ಲಿ ಕೊರೋನಾ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ. ಹೀಗಾಗಿ ಪ್ರಧಾನಿ ನರೇಂದ್ರ ಮೋದಿ ಕೋವಿಡ್ ಹೆಚ್ಚಿರುವ ಜಿಲ್ಲೆಗಳ ಜಿಲ್ಲಾಧಿಕಾರಿಗಳ ಜೊತೆ ಸಂವಾದ ನಡೆಸಿದ್ದಾರೆ. ಈ ಸಂವಾದದ ಬಳಿಕ ಕೇಂದ್ರ ಆರೋಗ್ಯ ಇಲಾಖೆ ಹೊಸ ಮಾರ್ಗಸೂಚಿ ಬಿಡುಗಡೆ ಮಾಡಿದೆ.

ಯೋಗಿ ಸೇರಿ ನಾಲ್ವರು ಸಿಎಂಗಳ ಜೊತೆ ಮೋದಿ ಮಾತು, ಕೊರೋನಾ ಬಗ್ಗೆ ಮಾಹಿತಿ!

ಕೊರೋನಾ ನಿಯಂತ್ರಣಕ್ಕೆ ಅಗತ್ಯ ಮೂಲಭೂತ ಸೌಕರ್ಯ ಮಾಡಿಕೊಳ್ಳಲು ಕಟ್ಟು ನಿಟ್ಟಾಗಿ ಸೂಚಿಸಲಾಗಿದೆ. ಹೆಲ್ತ್ ಕೇರ್ ಸೌಲಭ್ಯ ಹೆಚ್ಚಿಸಲು ಮಾರ್ಗಸೂಚಿಯಲ್ಲಿ ಹೇಳಲಾಗಿದೆ. ಕೇಂದ್ರ ಆರೋಗ್ಯ ಇಲಾಖೆ ಬಿಡುಗಡೆ ಮಾಡಿರುವ ನೂತನ ಕೊರೋನಾ ಗೈಡ್‌ಲೈನ್ಸ್‌ ಪ್ರಮುಖಾಂಶಗಳು ಇಲ್ಲಿವೆ.

ಚಿಕಿತ್ಸೆ ವೇಳೆ ಸ್ಟಿರಾಯಿಡ್‌ ದುರುಪಯೋಗ, ಇದೇ ಬ್ಲ್ಯಾಕ್‌ ಫಂಗಸ್‌ಗೆ ಕಾರಣ: ಏಮ್ಸ್

  • ಗ್ರಾಮೀಣ ಭಾಗದಲ್ಲಿನ ಕೊರೋನಾ ಸೋಂಕಿತರಿಗೆ ತ್ವರಿತ ಹಾಗೂ ಸೂಕ್ತ ಚಿಕಿತ್ಸೆ ನೀಡಲು ಎಲ್ಲಾ ವ್ಯವಸ್ಥೆ ಮಾಡಿಕೊಳ್ಳಲು ಸೂಚನೆ.
  • ಗ್ರಾಮೀಣ ಪ್ರದೇಶದಲ್ಲಿ ಕನಿಷ್ಠ 30 ಹಾಸಿಗೆಯ ಕೊರೋನಾ ಕೇರ್ ಸೆಂಟರ್ ಇರುವಂತೆ ಕ್ರಮ ಕೈಗೊಳ್ಳಿ
  • ಕೋವಿಡ್ ಲಕ್ಷಣವಿಲ್ಲದ,  ಇತರೆ ಕಾಯಿಲೆಗಳು, ಸಣ್ಣ ಪ್ರಮಾಣದ ಸೋಂಕಿನ ಲಕ್ಷಣಗಳು ಇದ್ದವರಿಗೆ ಹೋಂ ಅಸೋಲೇಷನ್ ಬೇಡ, ಕೇರ್ ಸೆಂಟರ್‌ನಲ್ಲಿ ಚಿಕಿತ್ಸೆ ನೀಡಿ
  • ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ರ್ಯಾಪಿಡ್ ಆ್ಯಂಟಿಜೆನ್ ಟೆಸ್ಟ್ ಕಿಟ್ ಇರುವಂತೆ ನೋಡಿಕೊಳ್ಳಬೇಕು
  • ಕೊರೋನಾ ಪರೀಕ್ಷಾ ಕಾರ್ಯದ ವೇಗ ಹೆಚ್ಚಿಸಿ, ಸೋಂಕಿತರಿಗೆ ಸೂಕ್ತ ಚಿಕಿತ್ಸೆ ನೀಡಲು ವ್ಯವಸ್ಥೆ ಮಾಡಿಕೊಳ್ಳಿ
  • ಆಶಾ ಕಾರ್ಯಕರ್ತೆಯರು, ಗ್ರಾಮೀಣ ಆರೋಗ್ಯ ಕಾರ್ಯಕರ್ತರ ಸಹಾಯದಿಂದ ಗ್ರಾಮದ ಜನರಲ್ಲಿ ಕೊರೋನಾ ಹಾಗೂ ಆರೋಗ್ಯ ಸಮಸ್ಯೆ ಪತ್ತೆ ಹಚ್ಚಿ
  • ಕೊರೋನಾ ಸೋಂಕಿತ ಆಕ್ಸಿಜನ್ ಪ್ರಮಾಣ ಕಡಿಮೆ ಇದ್ದರೆ, ತಕ್ಷಣ ಜಿಲ್ಲಾ ಕೇಂದ್ರಗಳಿಗೆ ಸೋಂಕಿತರನ್ನು ಕಳಹಿಸಬೇಕು
  • ಪ್ರತಿ ಪ್ರಾಥಮಿಕ ಕೇಂದ್ರಗಳಲ್ಲಿ OPD, SARI, ILI ವೈದ್ಯಕೀಯ ಸಲಕರಣೆ ಸೌಲಭ್ಯ ಇರುವಂತೆ ನೋಡಿಕೊಳ್ಳಿ

ಗ್ರಾಮೀಣ ಭಾಗದಲ್ಲಿನ ಕೊರೋನಾ ಸೋಂಕು ಹರಡುವಿಕೆ ತಡೆಯಲು ಕೇಂದ್ರ ಆರೋಗ್ಯ ಇಲಾಖೆ ಈ ಮಾರ್ಗಸೂಚಿ ಬಿಡುಗಡೆ ಮಾಡಿದೆ. ಈ ಮೂಲಕ ದೇಶದಲ್ಲಿ ಹೆಚ್ಚಾಗುತ್ತಿರುವ ಕೊರೋನಾಗೆ ಕಡಿವಾಣ ಹಾಕಲು ಮುಂದಾಗಿದೆ.