ಚಿಕಿತ್ಸೆ ವೇಳೆ ಸ್ಟಿರಾಯಿಡ್‌ ದುರುಪಯೋಗ, ಇದೇ ಬ್ಲ್ಯಾಕ್‌ ಫಂಗಸ್‌ಗೆ ಕಾರಣ: ಏಮ್ಸ್

 * ಕೋವಿಡ್‌ ಸೋಂಕಿತರ ಚಿಕಿತ್ಸೆ ವೇಳೆ ಸ್ಟಿರಾಯಿಡ್‌ಗಳನ್ನು ದುರುಪಯೋಗ

* ಸೋಂಕಿತರಿಗೆ ಸ್ಟಿರಾಯ್ಡ್‌ ಬಳಕೆ ಬ್ಲ್ಯಾಕ್‌ ಫಂಗಸ್‌ಗೆ ಕಾರಣ

* ಏಮ್ಸ್‌ ಮುಖ್ಯಸ್ಥ ಡಾ. ರಣದೀಪ್‌ ಗುಲೇರಿಯಾ ಎಚ್ಚರಿಕೆ

AIIMS chief Dr Guleria warns of surge in fungal infection in Covid patients pod

ನವದೆಹಲಿ(ಮೇ.16): ಕೋವಿಡ್‌ ಸೋಂಕಿತರ ಚಿಕಿತ್ಸೆ ವೇಳೆ ಸ್ಟಿರಾಯಿಡ್‌ಗಳನ್ನು ದುರುಪಯೋಗದಿಂದಲೇ ಕೊರೋನಾ ಸೋಂಕಿತರಲ್ಲಿ ಬ್ಲ್ಯಾಕ್‌ ಫಂಗಸ್‌ ಸೋಂಕಿನ ಸಮಸ್ಯೆ ಹೆಚ್ಚಲು ಕಾರಣ ಎಂದು ದೆಹಲಿಯ ಪ್ರತಿಷ್ಠಿತ ಏಮ್ಸ್‌ ಸಂಸ್ಥೆ ಮುಖ್ಯಸ್ಥ ಡಾ. ರಣದೀಪ್‌ ಗುಲೇರಿಯಾ ಹೇಳಿದ್ದಾರೆ.

"

ಈ ಬಗ್ಗೆ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಗುಲೇರಿಯಾ ಅವರು, ‘ಕಪ್ಪು ಶಿಲೀಂಧ್ರ ಎಂಬುದು ಹೊಸದಾಗಿ ಹುಟ್ಟಿಕೊಂಡಿರುವ ಸಮಸ್ಯೆಯೇನಲ್ಲ. ಆದರೆ ಕೊರೋನಾ ವೈರಸ್‌ ಹಾಗೂ ಸೋಂಕಿತರ ಗುಣಮುಖಕ್ಕಾಗಿ ಬಳಸಲಾಗುತ್ತಿರುವ ಚಿಕಿತ್ಸಾ ವಿಧಾನಗಳಿಂದ ಸೋಂಕಿತರಲ್ಲಿ ಬ್ಲಾಕ್‌ ಫಂಗಸ್‌ ಸಮಸ್ಯೆ ತೀವ್ರಗೊಂಡಿದೆ’ ಎಂದರು.

"

ಗಾಳಿ, ಮಣ್ಣು, ಕೆಲವೊಮ್ಮೆ ನಮ್ಮ ಆಹಾರದಲ್ಲೂ ಫಂಗಸ್‌ ಇರುತ್ತದೆ. ಆದರೆ ಈ ವೈರಸ್‌ ತೀವ್ರತೆ ಅಷ್ಟೇನೂ ಇಲ್ಲ. ಆದಾಗ್ಯೂ ಡಯಾಬೆಟಿಕ್‌ ಸೇರಿ ಇನ್ನಿತರ ಆರೋಗ್ಯ ಸಮಸ್ಯೆ ಹೊಂದಿದವರು ಹಾಗೂ ಸ್ಟೀರಾಯ್ಡ್‌ಗಳನ್ನು ತೆಗೆದುಕೊಂಡ ಕೊರೋನಾ ಸೋಂಕಿತರಿಗೆ ಫಂಗಸ್‌ ಕಾಣಿಸಿಕೊಳ್ಳಲಿದೆ. ಸ್ಟೀರಾಯ್ಡ್‌ಗಳ ತಪ್ಪು ಬಳಕೆ ತಡೆದಲ್ಲಿ ಬ್ಲ್ಯಾಕ್‌ಫಂಗಸ್‌ ಸಮಸ್ಯೆ ತಡೆಯಬಹುದು. ಕೆಲ ರಾಜ್ಯಗಳಲ್ಲಿ ಕೊರೋನಾ ಚಿಕಿತ್ಸೆ ಪಡೆಯುತ್ತಿರುವ 400-500 ಮಂದಿ ಫಂಗಸ್‌ಗೆ ತುತ್ತಾದ ಬಗ್ಗೆ ವರದಿಯಾಗುತ್ತಿದೆ. ಶಿಲೀಂಧ್ರದಿಂದ ಮಾನಸಿಕ ಅಸ್ವಸ್ತತೆ ಮತ್ತು ಸಾವಿಗೂ ಕಾರಣವಾಗಲಿದೆ ಎಂದು ಎಚ್ಚರಿಸಿದರು.

ಸೋಂಕಿನ ಸೌಮ್ಯ ಲಕ್ಷಣ ಹೊಂದಿರುವವರಿಗೂ ಆರಂಭದಲ್ಲೇ ಸ್ಟಿರಾಯ್ಡ್‌ಗಳನ್ನು ಬಳಕೆ ಮಾಡುತ್ತಿರುವ ಕಾರಣವೇ, ಈ ಬಾರಿ ಕೊರೋನಾ ಸೋಂಕಿತರಲ್ಲಿ ಆಕ್ಸಿಜನ್‌ ಬೇಡಿಕೆ ಹೆಚ್ಚಾಗಲು ಕಾರಣ ಎಂದು ಕೆಲ ದಿನಗಳ ಹಿಂದೆ ಗುಲೇರಿಯಾ ಎಚ್ಚರಿಸಿದ್ದರು.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona

Latest Videos
Follow Us:
Download App:
  • android
  • ios