Asianet Suvarna News Asianet Suvarna News

ನವೆಂಬರ್ 30ರೊಳಗೆ ಶೇ 90 ರಷ್ಟು ಜನರಿಗೆ ಮೊದಲ ಡೋಸ್‌ ನೀಡಿ: ಕೇಂದ್ರದ ಸೂಚನೆ

*ಭಾರತ 100 ಕೋಟಿ ಲಸಿಕೆ ನೀಡುವ ಮೂಲಕ ವಿಶ್ವ ದಾಖಲೆ 
*ದೇಶದ 45 ಜಿಲ್ಲೆಗಳಲ್ಲಿ ಕೋವಿಡ್‌ ಲಸಿಕಾಕರಣ ಮಂದಗತಿ
*ನವೆಂಬರ ಅಂತ್ಯದಲ್ಲಿ ಶೇ90 ರಷ್ಟು ಜನರಿಗೆ ಮೊದಲ ಡೋಸ್‌ ನೀಡವಂತೆ ಕೇಂದ್ರ ಸೂಚನೆ 

central Govt asks states to Cover 90 percent with first dose by Nov 30
Author
Bengaluru, First Published Nov 6, 2021, 7:12 AM IST

ನವದೆಹಲಿ(ನ.6 ): ಭಾರತ 100 ಕೋಟಿ ಲಸಿಕೆ ನೀಡುವ ಮೂಲಕ ವಿಶ್ವ ದಾಖಲೆ ಮಾಡಿತ್ತು. 100 ಕೋಟಿ ಪೂರೈಸಿದ ಸಂದರ್ಭದಲ್ಲಿ ದೇಶದಲ್ಲಿ ಹಲವಾರು ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಈ ಮೂಲಕ ಕೊರೋನಾ (Corona) ವಿರುದ್ಧದ ಹೋರಾಟದಲ್ಲಿ ಭಾರತ ಮೈಲುಗಲ್ಲು ಸಾಧಿಸಿತ್ತು. ಈಗ ನವೆಂಬರ್ ಅಂತ್ಯದ ವೇಳೆಗೆ ಕನಿಷ್ಠ 90% ಮೊದಲ ಡೋಸ್ ಕೋವಿಡ್ ವ್ಯಾಕ್ಸಿನೇಷನ್ (Vaccination) ವ್ಯಾಪ್ತಿ ಸಾಧಿಸಲು ಕೇಂದ್ರ ಸರ್ಕಾರ ಎಲ್ಲಾ ರಾಜ್ಯಗಳಿಗೂ ಸೂಚನೆ ನೀಡಿದೆ. ಈಗಾಗಲೇ ಲಸಿಕೆ ನೀಡುವಿಕೆಯಲ್ಲಿ ಕಡಿಮೆ ದಾಖಲೆ ಮಾಡಿರುವ ರಾಜ್ಯಗಳು ಮನೆ ಮನೆಗೆ ತೆರಳಿ ಲಸಿಕೆ ನೀಡುವ ಕಾರ್ಯಕ್ರಮವನ್ನು ಆರಂಭ ಮಾಡಿವೆ. 

ಜನರ ಮನೆ ಮನೆಗೆ ಹೋಗಿ ಲಸಿಕೆ ಹಾಕಿ : ಪಿಎಂ ಮೋದಿ

ಇತ್ತೀಚೆಗೆ ದೇಶಾದ್ಯಂತ (India) ವಿವಿಧ ರಾಜ್ಯಗಳ 45 ಜಿಲ್ಲೆಗಳಲ್ಲಿ ಕೋವಿಡ್‌ ಲಸಿಕೆ (Covid vaccine) ವಿತರಣೆ ಪ್ರಮಾಣ ಕಡಿಮೆ ಇರುವುದರ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಕಳವಳ ವ್ಯಕ್ತಪಡಿಸಿದ್ದರು.  ಇಂಥ ಜಿಲ್ಲೆಗಳಲ್ಲಿ ಮನೆಮನೆಗೆ ತೆರಳಿ ಲಸಿಕೆ ನೀಡಬೇಕು ಎಂದು ಮೋದಿ ಸೂಚಿಸಿದ್ದರು. 

Coronavirus; ತುರ್ತು ಬಳಕೆಗೆ ಅನುಮತಿ ಕೇಳಿದ ನೋವಾವ್ಯಾಕ್ಸ್.. ಪರಿಣಾಮಕಾರಿ ಲಸಿಕೆ!

ಕಳೆದ ತಿಂಗಳು ನಡೆದ ವರ್ಚುವಲ್ ಸಭೆಯಲ್ಲಿ (Virtual Meet) ಈ ಸಲಹೆಯನ್ನು ನೀಡಲಾಗಿತ್ತು ಮತ್ತು ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್ ನಂತರ ರಾಜ್ಯಗಳಿಗೆ ಪ್ರತ್ಯೇಕವಾಗಿ ಪತ್ರ ಬರೆದು ಈ ವಿಚಾರವಾಗಿ ನಿರಂತರ ಪ್ರಯತ್ನಗಳನ್ನು ಮಾಡುವಂತೆ ಕೇಳಿಕೊಂಡಿದ್ದರು. ಅಕ್ಟೋಬರ್ 18, 2021 ರಂದು ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳೊಂದಿಗೆ ನಡೆದ ವೀಡಿಯೋ ಕಾನ್ಫರೆನ್ಸ್‌ನಲ್ಲಿ, ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ನವೆಂಬರ್ ಅಂತ್ಯದ ವೇಳೆಗೆ 1 ನೇ ಡೋಸ್‌ನ ಸುಮಾರು 90% ವ್ಯಾಪ್ತಿಯನ್ನು ಸಾಧಿಸಲು ಮತ್ತು 2 ನೇ ಡೋಸ್‌ಅನ್ನು (2nd Dose) ಸರಿಯಾದ ಸಮಯಕ್ಕೆ ನೀಡಬೇಕೆಂದು ತಿಳಿಸಲಾಗಿತ್ತು. "ಎಲ್ಲಾ ವಯಸ್ಕ ನಾಗರಿಕರಿಗೆ ಸಂಪೂರ್ಣ ಲಸಿಕೆಯನ್ನು ಸರಿಯಾದ ಸಮಯಕ್ಕೆ ನೀಡಲು ಮತ್ತು ಅದನ್ನು ಶೀಘ್ರವಾಗಿ ಕಾರ್ಯಗತಗೊಳಿಸಲು  ಸಂಬಂಧಿಸಿದ ಅಧಿಕಾರಿಗಳಿಗೆ ನಿರ್ದೇಶಿಸಿ ಹಾಗೂ 2 ನೇ ಡೋಸ್ ಪ್ರಗತಿಯನ್ನು ನೀವು ಮತ್ತು ನಿಮ್ಮ ತಂಡವು ಪ್ರತಿದಿನವೂ ಪರಿಶೀಲಿಸುತ್ತದೆ ಎಂದು ನಾನು ನಿರೀಕ್ಷಿಸುತ್ತೇನೆ" ಎಂದು ರಾಜೇಶ್ ಭೂಷಣ್ (Rajesh Bhushan)  ಪತ್ರದಲ್ಲಿ ತಿಳಿಸಿದ್ದರು.

ನಾವು ವೇಗವಾಗಿ ಲಸಿಕೆ ನೀಡಲು ಪ್ರಯತ್ನಿಸಬೇಕು!

ಸರ್ಕಾರದ ಅಂಕಿಅಂಶಗಳ ಪ್ರಕಾರ, ಭಾರತದ ಜನಸಂಖ್ಯೆಯ ಕನಿಷ್ಠ 78% ಜನರು ಕೋವಿಡ್ -19 ಲಸಿಕೆಯ ಮೊದಲ ಡೋಸ್ ಅನ್ನು ಪಡೆದಿದ್ದಾರೆ ಮತ್ತು 38% ಜನರಿಗೆ ಸಂಪೂರ್ಣವಾಗಿ ಲಸಿಕೆ ಹಾಕಲಾಗಿದೆ. " ಲಸಿಕೆ ಪಡೆದವರ ಒಂದು ನಿರ್ದಿಷ್ಟ ಶೇಕಡಾವಾರು ಜನಸಂಖ್ಯೆಯನ್ನು ಲೆಕ್ಕ ಮಾಡಲು ಜಾಗತಿಕವಾಗಿ ಯಾವುದ ಅಂಕಿ ಅಂಶ ಲಭ್ಯವಿಲ್ಲ. ಯಾವುದೇ ದೇಶವು ಸಂಪೂರ್ಣ ಲಸಿಕಾಕರಣ ಸಾಧಿಸಿದರೆ ಅದು ಅಗತ್ಯ ಸುರಕ್ಷತೆಯನ್ನು ಒದಗಿಸುತ್ತದೆ. ಆದರೆ ತಾತ್ತ್ವಿಕವಾಗಿ, ಜನಸಂಖ್ಯೆಯ ಶೇ90-95 ರಷ್ಟು ಜನರಿಗೆ ಲಸಿಕೆಯನ್ನು ನೀಡಬೇಕು ಆದರೆ ಅದು ತಕ್ಷಣವೇ ಸಾಧ್ಯವಿಲ್ಲ, ಆದ್ದರಿಂದ, ನಾವು ಸಾಧ್ಯವಾದಷ್ಟು ಹೆಚ್ಚು ಮತ್ತು ಸಾಧ್ಯವಾದಷ್ಟು ವೇಗವಾಗಿ ಲಸಿಕೆ ನೀಡಲು ಪ್ರಯತ್ನಿಸಬೇಕು ”ಎಂದು ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಪಬ್ಲಿಕ್‌ ಹೆಲ್ತ್‌ನ ಎಪಿಡೆಮಿಯಾಲಜಿ ( epidemiology) ವಿಭಾಗದ ಮುಖ್ಯಸ್ಥ ಡಾ.ಗಿರಿಧರ ಬಾಬು ಹೇಳಿದರು. 

ದೇಶದ 45 ಜಿಲ್ಲೆಗಳಲ್ಲಿ ಕೋವಿಡ್‌ ಲಸಿಕಾಕರಣ ಮಂದಗತಿ

Co-WIN ಡ್ಯಾಶ್‌ಬೋರ್ಡ್ ಪ್ರಕಾರ, ಭಾರತದ ವಿವಧ ರಾಜ್ಯಗಳಲ್ಲಿ ಮೊದಲ ಡೋಸ್‌ಗಳ ವ್ಯಾಪ್ತಿಯು ಶೇ61 ರಿಂದ ಶೇ100 ರಷ್ಟಿದೆ. ಭಾರತದಲ್ಲಿ ಪ್ರಸ್ತುತ 45 ಜಿಲ್ಲೆಗಳು ಕಡಿಮೆ ಲಸಿಕೆ ನೀಡಿವೆ ಎಂದು ಸರ್ಕಾರದ ಅಂಕಿಅಂಶಗಳು ತೋರಿಸುತ್ತವೆ, ಅವುಗಳು ಇನ್ನೂ ತಮ್ಮ ವಯಸ್ಕ ಜನಸಂಖ್ಯೆಯ ಅರ್ಧಕ್ಕಿಂತ ಹೆಚ್ಚು ಜನರಿಗೆ ಒಂದೇ ಒಂದು ಲಸಿಕೆ ನೀಡದ ಕಾರಣ ಲಸಿಕೆ ಕವರೇಜ್‌ನಲ್ಲಿ ಭಾರೀ ಮಂದಗತಿಯನ್ನು ಕಾಣುತ್ತಿವೆ. ಅರುಣಾಚಲ ಪ್ರದೇಶದ 6 ಜಿಲ್ಲೆಗಳು, ಅಸ್ಸಾಂ, ಛತ್ತೀಸ್‌ಗಢ , ಹರಿಯಾಣ, ಮಿಜೋರಾಂ, ತಮಿಳುನಾಡು  ಮತ್ತು ದೆಹಲಿಯ ತಲಾ ಒಂದು ಜಿಲ್ಲೆಗಳು, ಜಾರ್ಖಂಡ್ , ನಾಗಾಲ್ಯಾಂಡ್ ಮತ್ತು ಮಣಿಪುರದ  ತಲಾ 8, ಮಹಾರಾಷ್ಟ್ರದ 5, ಮೇಘಾಲಯದ 4 ಜಿಲ್ಲೆಗಳು ಲಸಿಕಾರಣದಲ್ಲಿ ಮಂದಗತಿಯಲ್ಲಿ ಸಾಗುತ್ತಿವೆ.

Follow Us:
Download App:
  • android
  • ios