Asianet Suvarna News Asianet Suvarna News

Coronavirus; ತುರ್ತು ಬಳಕೆಗೆ ಅನುಮತಿ ಕೇಳಿದ ನೋವಾವ್ಯಾಕ್ಸ್.. ಪರಿಣಾಮಕಾರಿ ಲಸಿಕೆ!

* ತುರ್ತು ಬಳಕೆಗೆ ಅನುಮತಿ ನೀಡಿತ್ತು ಕೇಳಿದ ನೋವಾವಾಕ್ಸ್ 
* ವಿಶ್ವ ಆರೋಗ್ಯ ಸಂಸ್ಥೆಗೆ ದಾಖಲಾತಿ ಸಲ್ಲಿಕೆ
* ಅತಿ ಹೆಚ್ಚು ಪರಿಣಾಮಕಾರಿ ಎಂದು ಕರೆಸಿಕೊಂಡಿದೆ
*ಭಾರತದ  ಕೋವ್ಯಾಕ್ಸಿನ್ ತುರ್ತು ಬಳಕೆಗೆ ಅನುಮತಿ ಸಿಕ್ಕಿತ್ತು

Novavax files for emergency use listing of Covid-19 vaccine with WHO mah
Author
Bengaluru, First Published Nov 5, 2021, 11:33 PM IST
  • Facebook
  • Twitter
  • Whatsapp

ನವದೆಹಲಿ(ನ. 05)    ನಿರೀಕ್ಷೆ ಮಾಡಿದಂತೆ ವಿಶ್ವ ಆರೋಗ್ಯ ಸಂಸ್ಥೆ (WHO) ತಾಂತ್ರಿಕ ಸಲಹಾ ಮಂಡಳಿ  ಕೋವ್ಯಾಕ್ಸಿನ್ (Covaxin)  ತುರ್ತು ಬಳಕೆಗೆ ಅನುಮತಿ ನೀಡಿತ್ತು. ಅದಾದ ನಂತರ ಈಗ ನೋವಾವಾಕ್ಸ್ ( Novavax ) ಸರದಿ ಬಂದಿದೆ. 

ಕೋವಿಡ್-19 ಲಕ್ಷಣಗಳ (Coronavirus) ವಿರುದ್ಧ ಕೋವಾಕ್ಸಿನ್ ಶೇ.77.8 ರಷ್ಟು ಪರಿಣಾಮಕಾರಿಯಾಗಿದೆ ಮತ್ತು ವೈರಸ್‌ನ ಹೊಸ ಡೆಲ್ಟಾ ರೂಪದ ವಿರುದ್ಧ ಶೇ.65.2 ರಷ್ಟು ಪರಿಣಾಮಕಾರಿಯಾಗಿದೆ ಎಂದು ಭಾರತ್ ಬಯೋಟೆಕ್ ಜೂನ್‌ನಲ್ಲಿ ತಿಳಿಸಿತ್ತು. ಇದೇ ಕಾರಣಕ್ಕೆ ಮೊನ್ನೆ ಮೊನ್ನೆಯಷ್ಟೆ Covaxin  ತುರ್ತು ಬಳಕೆಗೆ ವಿಶ್ವ ಆರೋಗ್ಯ ಸಂಸ್ಥೆ (WHO)  ಒಪ್ಪಿಗೆ ನೀಡಿತ್ತು.

Novavax ಎಲ್ಲ ದಾಖಲಾತಿ ಕ್ರಮಗಳನ್ನು ಪೂರೈಸಿದ್ದು World Health Organization ಗೆ ಸಲ್ಲಿಕೆ ಮಾಡಿದೆ. Novavax  ಜತೆ ಭಾರತದ ಸೇರಂ ಸಂಸ್ಥೆ 
(Serum Institute of India) ಲಸಿಕೆ ತಯಾರಿಕೆಯಲ್ಲಿ ಕೈಜೋಡಿಸಿತ್ತು. ಇಂಡೋಷಿಯಾದಲ್ಲಿ ಮೊದಲ ಬಳಕೆಗೆ ಅನುಮತಿ ಸಿಗುವ ಸಾಧ್ಯತೆ ಇದೆ.

NVX-CoV2373 ಅಥವಾ ನೋವಾವಾಕ್ಸ್ ನ್ಯಾನೊ ಪಾರ್ಟಿಕಲ್ ಪ್ರೋಟೀನ್ ಆಧಾರಿತ ಕೊರೋನಾ ಲಸಿಕೆ ಇದಾಗಿದೆ.  3ನೇ ಹಂತದ ಕ್ಲಿನಿಕಲ್ ಟ್ರಯಲ್‌ನಲ್ಲಿ ರೂಪಾಂತರಿ ಹಾಗೂ ಕೊರೋನಾದಿಂದ ತೀವ್ರವಾಗಿ ಅಸ್ವಸ್ಥಗೊಂಡವರಿಗೆ ಶೇ. 100 ರಷ್ಟು ರಕ್ಷಣೆ ಒದಗಿಸಿದೆ. 3ನೇ ಹಂತದ ಕ್ಲಿನಿಕಲ್ ಪ್ರಯೋಗದ ಸರಾಸರಿ ಫಲಿತಾಂಶದಲ್ಲಿ ಕೋವಿಡ್ ವಿರುದ್ಧ ನೋವಾವಾಕ್ಸ್ ಶೇಕಡಾ 90.4 ರಷ್ಟು ಪರಿಣಾಮಕಾರಿ ಅನ್ನೋದು ದಾಖಲಾಗಿತ್ತು.

Novavax  ಎಲ್ಲ ರಾಷ್ಟ್ರಗಳ ಆರೋಗ್ಯ  ಸಚಿವಾಲಯದೊಂದಿಗೆ ನಿಕಟ ಸಂಪರ್ಕ ಇಟ್ಟುಕೊಂಡು ಕೆಲಸ ಮಾಡುತ್ತಿದೆ. ಅತಿ ಹೆಚ್ಚು ಪರಿಣಾಮಕಾರಿ ಎಂಬ ಹೆಗ್ಗಳಿಕೆಯನ್ನು ತನ್ನದಾಗಿಸಿಕೊಳ್ಳುವತ್ತ ಹೆಜ್ಜೆ ಇಡುತ್ತಿದೆ.

ಕೋವ್ಯಾಕ್ಸಿನ್‌ಗೆ ವಿಶ್ವ ಆರೋಗ್ಯ ಸಂಸ್ಥೆ ಮಾನ್ಯತೆ ನೀಡಿದ ಬೆನ್ನಲ್ಲೇ, ಮಕ್ಕಳಿಗೆ ನೀಡಲು ಅಭಿವೃದ್ಧಿಪಡಿಸಲಾಗಿರುವ ಕೋವ್ಯಾಕ್ಸಿನ್‌ (Covaxin) ಲಸಿಕೆಗೂ ತ್ವರಿತ ಅನುಮೋದನೆ ಸಾಧ್ಯತೆ ದಟ್ಟವಾಗಿದೆ ಎಂದು ಡಬ್ಲ್ಯೂಎಚ್‌ಒ (WHO) ಮುಖ್ಯ ವಿಜ್ಞಾನಿ ಸೌಮ್ಯ ಸ್ವಾಮಿನಾಥನ್‌  (Soumya Swaminathan) ತಿಳಿಸಿದ್ದರು. ಮಕ್ಕಳಿಗೆ ಕೋವ್ಯಾಕ್ಸಿನ್‌ ನೀಡಲು ಅನುಮತಿಗಾಗಿ ಈಗ ಹೆಚ್ಚು ಸಮಯ ಕಾಯಬೇಕಾಗಿಲ್ಲ. ಸರಿಯಾದ ದತ್ತಾಂಶವನ್ನು ಒದಗಿಸಿದರೆ ಶೀಘ್ರವೇ ಮಕ್ಕಳಿಗೆ ನೀಡಲು ಮಾನ್ಯತೆ ದೊರೆಯಲಿದೆ ಎಂದಿದ್ದರು.

ನೈಟ್ ಕರ್ಫ್ಯೂ ಆದೇಶ ಹಿಂಪಡೆದ ರಾಜ್ಯ ಸರ್ಕಾರ

 ಜಿ 20 ನಲ್ಲಿ ಶೃಂಗಸಭೆಯಲ್ಲಿ ಭಾಗವಹಿಸಿದ್ದ ಪ್ರಧಾನಿ ನರೇಂದ್ರ ಮೋದಿ(PM Narendra Modi) ಅಗ್ರ ನಾಯಕರೊಂದಿದೆ ಮಾತನಾಡಿದ್ದರು.  ಜಿ 20 ಶೃಂಗಸಭೆಯ ಮೊದಲ ಅಧಿವೇಶನದಲ್ಲಿ ಜಾಗತಿಕ ಆರ್ಥಿಕತೆ ಮತ್ತು ಜಾಗತಿಕ ಆರೋಗ್ಯದ ಕುರಿತು ಮಾತನಾಡಿದ ಪ್ರಧಾನಿ ಮೋದಿ, ಕರೋನಾ ಜಾಗತಿಕ ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡಲು ಎಲ್ಲರೂ ಒಂದಾಬೇಕು ಎಂದು ತಿಳಿಸಿದ್ದರು.

ಯಾರೂ ಊಹಿಸಿರದ ರೀತಿ ಭಾರತ ನೂರು ಕೋಟಿ ಲಸಿಕೆ ನೀಡಿಕೆ ಸಾಧನೆ ಮಾಡಿ ಮುಂದುವರಿಯುತ್ತಲೇ ಇದೆ. ಪ್ರಧಾನಿ ಮೋದಿ ದೇಶದ ಜನರನ್ನು, ಕೊರೋನಾ ವೀರರನ್ನು ಅಭಿನಂದಿಸಿದ್ದರು. 

Follow Us:
Download App:
  • android
  • ios