ನವದೆಹಲಿ(ಮೇ.12): SpO2 ಆಧಾರಿತ ಆಮ್ಲಜನಕ ಪೂರೈಕೆ ವ್ಯವಸ್ಥೆಯಿಂದ ರೋಗಿಗಳಿಗೆ ಆಮ್ಲಜನಕ ನೀಡುವಿಕೆ ಮಟ್ಟ ನಿಯಂತ್ರಿಸುವ ಹಾಗೂ ಚಿಕಿತ್ಸಾ ರೋಗಿಯನ್ನು ಹೈಪೋಕ್ಸಿಯಾ ಸ್ಥಿತಿಗೆ ಹೋಗದಂತೆ ತಡೆಯಬಲ್ಲ ಆಕ್ಸಿಕೇರ್ ಯುನಿಟನ್ನು ಭಾರತದ ರಕ್ಷಣಾ ಸಂಶೋಧನಾ ಮತ್ತು ಅಭಿವೃದ್ಧಿ ಸಂಸ್ಥೆ(DRDO) ಪಡಿಸಿದೆ. ಇದೀಗ ಕೇಂದ್ರ ಸರ್ಕಾರ DRDO ಅಭಿವೃದ್ಧಿ ಪಡಿಸಿದ 1.50 ಲಕ್ಷ ಆಕ್ಸಿಕೇರ್ ಯುನಿಟ್ ಖರೀದಿಗೆ ಅನುಮೋದನೆ ನೀಡಿದೆ. 

ಎಕ್ಸ್‌ರೇ ನೋಡಿ ಸೋಂಕು ಪತ್ತೆ: ಸಿ.ಟಿ.ಸ್ಕ್ಯಾನ್‌ಗಿಂತ ಅಗ್ಗ, ಹೆಚ್ಚು ಪರಿಣಾಮಕಾರಿ!.

ಕೋವಿಡ್ -19 ಸೋಂಕಿತರ ಚಿಕಿತ್ಸೆಗೆ ನೆರವಾಗಲು ಪಿಎಂ-ಕೇರ್ಸ್ ನಿಧಿಯಡಿ  322.5 ಕೋಟಿ ರೂಪಾಯಿ ವೆಚ್ಚದಲ್ಲಿ ಖರೀದಿ ಮಾಡಲಾಗುತ್ತದೆ. ಈ ಮೂಲಕ ಕೊರೋನಾ ಸೋಂಕಿತರ ಶೀಘ್ರವಾಗಿ ಗುಣಮುಖವಾಗಲು ನೆರವಾಗುತ್ತಿದೆ. ದೇಶದಲ್ಲಿ ಕೊರೋನಾ ಸೋಂಕಿತರ ಚಿಕಿತ್ಸೆ ಸವಾಲಾಗಿರುವ ಸಂದರ್ಭದಲ್ಲಿ ಕೇಂದ್ರ ಈ ಆಕ್ಸಿಕೇರ್ ಯುನಿಟ್ ಖರೀದಿಸುತ್ತಿದೆ.

ಕೊರೋನಾ ತುರ್ತು ಚಿಕಿತ್ಸೆಗೆ ಬಂತು ದೇಶೀ ಔಷಧ: DRDO 2-DG ಔಷಧ ಎಲ್ಲಿ ಸಿಗುತ್ತದೆ?

ಸೇನೆಯಲ್ಲಿ ಹೆಚ್ಚಾಗಿ ಈ ಆಕ್ಸಿಕೇರ್ ಯುನಿಟ್ ಬಳಸಲಾಗುತ್ತದೆ. ಹೆಚ್ಚಿನ ಎತ್ತರದ ಪ್ರದೇಶದಲ್ಲಿ ನಿಯೋಜಿಸಲ್ಪಟ್ಟಿರುವ ಸೈನಿಕರಿಗೆ ಈ ಆಕ್ಸಿಕೇರ್ ಯುನಿಟ್ ಅಭಿವೃದ್ಧಿ ಪಡಿಸಲಾಗಿದೆ. ಎತ್ತರ ಪ್ರದೇಶದಲ್ಲಿ ದೇಹಕ್ಕೆ ಸರಿಯಾದ ಪ್ರಮಾಣದಲ್ಲಿ ಆಕ್ಸಿನ್ ಪೂರೈಕೆ ಕಷ್ಟ. ಹೀಗಾಗಿ ಈ ಕಿಟ್ ಯೋಧರಿಗೆ ನೆರವಾಗುತ್ತದೆ. ಇದೀಗ ಈ ಕಿಟ್ ಕೋವಿಡ್ ಸೋಂಕಿತರಿಗೆ ಹೆಚ್ಚು ನೆರವಾಗಲಿದೆ ಎಂದು ಡಿಆರ್‌ಡಿಓ ಹೇಳಿದೆ.