Asianet Suvarna News Asianet Suvarna News

Online gaming: ಆನ್‌ಲೈನ್‌ ಗೇಮ್ಸ್‌ಗೆ ಶೀಘ್ರ ಕೇಂದ್ರದ ಹೊಸ ಕಡಿವಾಣ: ರಾಜೀವ್ ಚಂದ್ರಶೇಖರ್

  • ಆನ್‌ಲೈನ್‌ ಗೇಮ್‌ ಕಂಪನಿಗಳಿಗೆ ಕೇಂದ್ರ ಮೂಗುದಾರ
  •  ಗೇಮಿಂಗ್‌ ಕಂಪನಿಗಳ ವಿಳಾಸ ಭಾರತದಲ್ಲೂ ಇರಬೇಕು
  • ಸ್ವಯಂ ನಿಯಂತ್ರಣ, ಆಟಗಾರರ ಪರಿಶೀಲನೆ ಆಗಬೇಕು
  • ನೆಲದ ಎಲ್ಲ ಕಾನೂನು ಅನ್ವಯ: ಕರಡು ನಿಯಮ ಪ್ರಕಟ
Central government to regulate online games soon rav
Author
First Published Jan 3, 2023, 8:50 AM IST

ಪಿಟಿಐ ನವದೆಹಲಿ (ಜ.3) : ಎಗ್ಗಿಲ್ಲದೆ ಬೆಳೆಯುತ್ತಿರುವ, ಕೆಲವು ರಾಜ್ಯಗಳು ನಿಷೇಧಿಸಿದರೂ ಕಾನೂನು ಸಮರದಲ್ಲಿ ಗೆದ್ದು ಕಾರ್ಯಾಚರಣೆ ಪುನಾರಂಭಿಸಿರುವ ಆನ್‌ಲೈನ್‌ ಗೇಮಿಂಗ್‌ ಕಂಪನಿಗಳಿಗೆ ಕೇಂದ್ರ ಸರ್ಕಾರ ಮೂಗುದಾರ ಹಾಕಲು ಮುಂದಾಗಿದೆ. ಈ ಕಂಪನಿಗಳು ಸ್ವಯಂ ನಿಯಂತ್ರಣ ವ್ಯವಸ್ಥೆಯನ್ನು ಅಳವಡಿಸಿಕೊಳ್ಳಬೇಕು. ಆಟಗಾರರ ಕಡ್ಡಾಯ ಪರಿಶೀಲನೆ ಮಾಡಬೇಕು ಹಾಗೂ ಗೇಮಿಂಗ್‌ ಕಂಪನಿಗಳು ಭಾರತೀಯ ವಿಳಾಸ ಹೊಂದಿರಬೇಕು ಎಂಬ ನಿಯಮ ರೂಪಿಸಲು ಹೊರಟಿದೆ.

ಈ ಸಂಬಂಧ ಸೋಮವಾರ ಎಲೆಕ್ಟ್ರಾನಿಕ್ಸ್‌ ಹಾಗೂ ಮಾಹಿತಿ ತಂತ್ರಜ್ಞಾನ ಸಚಿವಾಲಯ(Ministry of Electronics and Information Technology) ಕರಡು ನಿಯಮಗಳನ್ನು ಪ್ರಕಟಿಸಿದೆ. ಜ.17ರವರೆಗೂ ಇದಕ್ಕೆ ಸಾರ್ವಜನಿಕರು ತಮ್ಮ ಸಲಹೆ ನೀಡಬಹುದಾಗಿದೆ.

Prime Minister's vision for 2023 : ಈ ವರ್ಷ 1 ಲಕ್ಷ ಕೋಟಿ ರು. ಮೊಬೈಲ್‌ ರಫ್ತು ಗುರಿ: ರಾಜೀವ್ ಚಂದ್ರಶೇಖರ್

ಸಾಮಾಜಿಕ ಜಾಲತಾಣ(Social media)ಗಳಿಗಾಗಿ ಕೇಂದ್ರ ಸರ್ಕಾರ 2021ರಲ್ಲಿ ಮಾಹಿತಿ ತಂತ್ರಜ್ಞಾನ ನಿಯಮ ತಂದಿದ್ದು, ಆ ನಿಯಮಗಳು ಆನ್‌ಲೈನ್‌ ಗೇಮಿಂಗ್‌ ಕಂಪನಿ(online gaming company)ಗಳಿಗೂ ಅನ್ವಯವಾಗಲಿವೆ. ನೆಲದ ಕಾನೂನುಗಳನ್ನು ಆನ್‌ಲೈನ್‌ ಗೇಮಿಂಗ್‌ ಕಂಪನಿಗಳು ಪಾಲಿಸಬೇಕು. ಜೂಜು ಅಥವಾ ಬೆಟ್ಟಿಂಗ್‌ ಅನ್ನು ನಿಯಂತ್ರಿಸುವ ಅಥವಾ ಸ್ಪರ್ಧಿಗಳು ಕನಿಷ್ಠ ವಯಸ್ಸು ನಿರ್ಧರಿಸುವ ಕಾನೂನುಗಳನ್ನೂ ಪಾಲಿಸಬೇಕಾಗುತ್ತದೆ ಎಂದು ಕರಡು ನಿಯಮ ಹೇಳುತ್ತದೆ.

ಗೇಮಿಂಗ್‌ ಕಂಪನಿಗಳ ಬಳಕೆದಾರರು ಜೂಜು ಅಥವಾ ಬೆಟ್ಟಿಂಗ್‌ ಕಾನೂನು ಸೇರಿದಂತೆ ಭಾರತೀಯ ಕಾಯ್ದೆಗಳಿಗೆ ತಕ್ಕುದಲ್ಲದ ರೀತಿಯಲ್ಲಿ ಆನ್‌ಲೈನ್‌ ಗೇಮ್‌ ಬಿತ್ತರಿಸುವುದು, ಪ್ರದರ್ಶಿಸುವುದು, ಅಪ್‌ಲೋಡ್‌ ಮಾಡುವುದು, ಪ್ರಕಟಿಸುವುದು, ಪ್ರಸಾರ ಮಾಡುವುದು ಅಥವಾ ಹಂಚಿಕೊಳ್ಳುವ ಕೆಲಸಗಳನ್ನು ಮಾಡುವಂತಿಲ್ಲ. ಠೇವಣಿ ಹಿಂತೆಗೆತ ಅಥವಾ ಮರುಪಾವತಿ, ಬಹುಮಾನದ ಮೊತ್ತ ನಿಗದಿ, ವಿತರಣೆ, ಶುಲ್ಕ, ಇತರೆ ಶುಲ್ಕ ಸ್ವೀಕಾರ, ಕೆವೈಸಿ ಪ್ರಕ್ರಿಯೆ ಮತ್ತಿತರ ವಿಚಾರಗಳಿಗೆ ಸಂಬಂಧಿಸಿದ ತಮ್ಮ ನೀತಿಗಳನ್ನು ಬಳಕೆದಾರರಿಗೆ ನೀಡಬೇಕು ಎಂದು ಕರಡು ನಿಯಮ ವಿವರಿಸುತ್ತದೆ.ಟ್ವಿಟರಲ್ಲಿ ಭಾರತದ ತಪ್ಪಾದ ಭೂಪಟ ಪೋಸ್ಟ್: ವಾಟ್ಸಾಪ್‌ಗೆ ಸಚಿವ ರಾಜೀವ್‌ ಎಚ್ಚರಿಕೆ

Follow Us:
Download App:
  • android
  • ios