ಕಾನೂನುಗಳನ್ನು ಸರಳವಾಗಿ, ಭಾರತೀಯ ಭಾಷೆಯಲ್ಲಿ ಬರೆಯಲು ಸರ್ಕಾರ ಯತ್ನ: ಮೋದಿ
ಕಾನೂನುಗಳ ಕರಡು ಪ್ರತಿಯನ್ನು ಸರಳ ಮಾದರಿಯಲ್ಲಿ ಹಾಗೂ ಭಾರತೀಯ ಭಾಷೆಗಳಲ್ಲಿ ತಯಾರಿಸಲು ಕೇಂದ್ರ ಸರ್ಕಾರ ಪ್ರಮಾಣಿಕ ಪ್ರಯತ್ನ ಮಾಡುತ್ತಿದೆ. ಇದರಿಂದಾಗಿ ಇವುಗಳ ವ್ಯಾಪ್ತಿ ಮತ್ತಷ್ಟು ವಿಸ್ತಾರವಾಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಹೇಳಿದ್ದಾರೆ.

ನವದೆಹಲಿ: ಕಾನೂನುಗಳ ಕರಡು ಪ್ರತಿಯನ್ನು ಸರಳ ಮಾದರಿಯಲ್ಲಿ ಹಾಗೂ ಭಾರತೀಯ ಭಾಷೆಗಳಲ್ಲಿ ತಯಾರಿಸಲು ಕೇಂದ್ರ ಸರ್ಕಾರ ಪ್ರಮಾಣಿಕ ಪ್ರಯತ್ನ ಮಾಡುತ್ತಿದೆ. ಇದರಿಂದಾಗಿ ಇವುಗಳ ವ್ಯಾಪ್ತಿ ಮತ್ತಷ್ಟು ವಿಸ್ತಾರವಾಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಹೇಳಿದ್ದಾರೆ.
ಇಲ್ಲಿ ಆಯೋಜಿಸಲಾಗಿದ್ದ ಅಂತಾರಾಷ್ಟ್ರೀಯ ವಕೀಲರ ಸಮ್ಮೇಳನವನ್ನು (International Lawyers Conference) ಉದ್ಘಾಟಿಸಿ ಮಾತನಾಡಿದ ಅವರು, ‘ನಾವು ಕಾನೂನುಗಳನ್ನು 2 ವಿಧಾನದಲ್ಲಿ ಪ್ರಸ್ತುತ ಪಡಿಸಲು ಬಯಸುತ್ತೇವೆ. ಒಂದು ವಕೀಲರು ಮತ್ತು ಕಾನೂನು ತಜ್ಞರಿಗೆ ಅರ್ಥವಾಗುವ ಭಾಷೆಯಲ್ಲಿ ಮತ್ತು ಇನ್ನೊಂದು ಸಾಮಾನ್ಯ ಜನರಿಗೂ ಅರ್ಥವಾಗುವ ಭಾಷೆಯಲ್ಲಿ. ಈ ಮೂಲಕ ಕಾನೂನುಗಳು ತನ್ನದೇ ಎಂಬ ಭಾವನೆ ಸಾಮಾನ್ಯರಿಗೂ ಮೂಡಬೇಕು’ ಎಂದು ಹೇಳಿದರು.
ಫ್ಯಾಷನ್ ಲೋಕದಲ್ಲಿ ಹವಾ ಸೃಷ್ಟಿಸಿದ ಪುಟಾಣಿ ಮಾಡೆಲ್‌ಗಳ ಸುಂದರ ಫೋಟೋಗಳು
‘ನಮ್ಮ ಸರ್ಕಾರ ಕಾನೂನುಗಳನ್ನು ಸರಳೀಕರಿಸುತ್ತಿದೆ ಮತ್ತು ಇದು ಸಾಮಾನ್ಯರಿಗೂ ಅರ್ಥವಾಗುವಂತೆ ಮಾಡುವುದು ನಮ್ಮ ಉದ್ದೇಶವಾಗಿದೆ. ಆದರೆ ಈ ಮೊದಲು ವ್ಯವಸ್ಥೆ ಹೀಗಿರಲಿಲ್ಲ. ಇದನ್ನು ಬದಲಾಯಿಸಲು ಬಯಸುತ್ತೇವೆ. ಇದನ್ನು ಮೊದಲ ಬಾರಿಗೆ ದತ್ತಾಂಶ ಸುರಕ್ಷತಾ ಮಸೂದೆಯಲ್ಲಿ ನಾವು ಮಾಡಿದೆವು. ಸುಪ್ರೀಂಕೋರ್ಟ್ (Supreme Court) ಸಹ ಸ್ಥಳೀಯ ಭಾಷೆಗಳಿಗೆ ತೀರ್ಪುಗಳನ್ನು ಬದಲಿಸಲು ಒಪ್ಪಿಕೊಂಡಿತು. ಇತ್ತೀಚೆಗೆ ಬ್ರಿಟಿಷ್ ಕಾಲದ ಕಾನೂನುಗಳನ್ನು ಬದಲಾಯಿಸಿ, ಭಾರತೀಯ ನ್ಯಾಯ ಸಂಹಿತೆ, ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ ಮತ್ತು ಭಾರತೀಯ ಸಾಕ್ಷ್ಯ ಮಸೂದೆಗಳನ್ನು ಮಂಡಿಸಲಾಯಿತು ಎಂದು ಅವರು ಹೇಳಿದರು.
ಇದೇ ವೇಳೆ ಸೈಬರ್ ಭಯೋತ್ಪಾದನೆ (cyber terrorism) ಮತ್ತು ಅಕ್ರಮ ಹಣ ವರ್ಗಾವಣೆಗಳು (money laundering) ಜಾಗತಿಕ ಸಮಸ್ಯೆಯಾಗಿ ಮಾರ್ಪಟ್ಟಿವೆ. ಇವುಗಳಿಗೆ ನಾವು ಜಾಗತಿಕವಾಗಿಯೇ ಪರಿಹಾರವನ್ನು ಕಂಡುಕೊಳ್ಳಬೇಕು ಎಂದು ಅವರು ಹೇಳಿದರು.
ಪುಸ್ತಕದೊಳಗೆ ಫೋನ್: ಅಮ್ಮನಿಗೆ ಸಿಕ್ಕಿಬಿದ್ದ ಬಾಲಕ: ವೀಡಿಯೋ ನೋಡಿ ಮಗ ಇವತ್ತು ಸತ್ತಾ ಎಂದ ನೆಟ್ಟಿಗರು
ಇತಿಹಾಸದುದ್ದಕ್ಕೂ ಮಹಿಳಾ ನಾಯಕತ್ವದ ಶಕ್ತಿ ಸಾಬೀತು: ಮೋದಿ
ವಾರಾಣಸಿ: ಲೋಕಸಭೆ ಮತ್ತು ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ಒದಗಿಸುವ ಮಸೂದೆಗೆ ಸಿಕ್ಕಿದ ಗೆಲುವನ್ನು ಪ್ರಧಾನಿ ನರೇಂದ್ರ ಮೋದಿ (Prime Minister Narendra Modi) ಅವರು ಶನಿವಾರ ಮಹಿಳೆಯರಿಗೆ ಅರ್ಪಿಸಿದರು. ಅಲ್ಲದೇ ಇತಿಹಾಸದುದ್ದಕ್ಕೂ ಮಹಿಳಾ ನಾಯಕತ್ವದ ಶಕ್ತಿ ಸಾಬೀತಾಗಿದೆ ಎಂದು ಹೇಳಿದರು.
ತಮ್ಮ ಸ್ವಕ್ಷೇತ್ರವಾದ ವಾರಾಣಸಿಯಲ್ಲಿ ಸರ್ವ ಮಹಿಳಾ ಸಮಾವೇಶದಲ್ಲಿ (Sarva Mahila Samavesh) ಮಾತನಾಡಿದ ಅವರು, ‘ಮಹಿಳಾ ನಾಯಕತ್ವ ಎಂಬುದು ಇಡೀ ಪ್ರಪಂಚಕ್ಕೆ ಹೊಸ ವಿಷಯವಾಗಿರಬಹುದು ಆದರೆ ಭಾರತೀಯರು ಶಿವನಿಗೂ ಮೊದಲು ಪಾರ್ವತಿಗೆ, ಗಂಗೆಗೆ ಪೂಜೆ ಮಾಡುತ್ತಾರೆ. ಸ್ವಾತಂತ್ರ್ಯ ಹೋರಾಟದಿಂದ ಚಂದ್ರಯಾನದ ಯಶಸ್ಸಿನವರೆಗೆ ನಾವು ಮಹಿಳೆಯರ ಶಕ್ತಿಯನ್ನು ನಾವು ನೋಡಿದ್ದೇವೆ ಎಂದು ಅವರು ಹೇಳಿದರು.
ಇದೇ ವೇಳೆ ನಾರಿಶಕ್ತಿ ವಂದನಾ ಅಧಿನಿಯಮವನ್ನು (Nari Shakti Vandana Act) ಉಲ್ಲೇಖಿಸಿದ ಅವರು, ಈ ಮಸೂದೆ ಕಳೆದ 3 ದಶಕಗಳಿಂದ ನೆನೆಗುದಿಗೆ ಬಿದ್ದಿತ್ತು. ಆದರೆ ನಾವು ಇದನ್ನು ಜಾರಿ ಮಾಡಿದೆವು. ಈ ಮಸೂದೆ ಜಾರಿಯಾಗಿದ್ದರ ಶ್ರೇಯ ಸಂಪೂರ್ಣವಾಗಿ ನಿಮಗೆ ಸಲ್ಲಬೇಕು. ದೇಶದ ಮಹಿಳೆಯರೆಲ್ಲಾ ಒಂದಾದ ಕಾರಣ ವಿಪಕ್ಷಗಳು ಹೆದರಿ ಈ ಮಸೂದೆಗೆ ಬೆಂಬಲ ಸೂಚಿಸಿದವು ಎಂದು ಅವರು ಹೇಳಿದರು.
ಓರ್ವ ಪತ್ನಿ ತೊರೆದವ, ಇನ್ನೋರ್ವನಿಗೆ ಪತ್ನಿಯೇ ಇಲ್ಲ: ಕಾಂಗ್ರೆಸ್ ಅಧ್ಯಕ್ಷ ಆಕ್ಷೇಪಾರ್ಹ ಮಾತು
ವಾರಾಣಾಸಿಗೆ ಆಗಮಿಸಿದ ಪ್ರಧಾನಿ ಮೋದಿ ಅವರಿಗೆ ಮಹಿಳೆಯರು ಪುಷ್ಪವೃಷ್ಟಿಗರೆಯುವ ಮೂಲಕ ಸ್ವಾಗತಿಸಿದರು. ಇದೇ ವೇಳೆ ಮಾತನಾಡಿದ ಅವರು, ಕಾಶಿಯ ಭೂಮಿ ಕೂಷ್ಮಾಂಡಾ, ಶೃಂಗಾರ ಗೌರಿ, ಅನ್ನಪೂರ್ಣ, ಗಂಗಾ ಮಾತೆಯರ ಭೂಮಿಯಾಗಿದೆ. ಅವರೆಲ್ಲರ ವೈಭವ ಇಲ್ಲಿನ ಭೂಮಿಯಲ್ಲಿ ಬೆರೆತಿದೆ. ಅಲ್ಲದೇ ಈ ಭೂಮಿ ಅಹಿಲ್ಯಾಬಾಯಿ ಹೋಳ್ಕರ್ ಅವರ ಭೂಮಿಯಾಗಿದೆ. ಹೀಗಾಗಿಯೇ ಮಸೂದೆ ಪಾಸ್ ಆದ ಬಳಿಕ ನಿಮ್ಮೆಲ್ಲರ ಆಶೀರ್ವಾದ ಪಡೆದುಕೊಳ್ಳಲು ನಾನು ಇಲ್ಲಿಗೆ ಬಂದಿದ್ದೇನೆ ಎಂದು ಹೇಳಿದರು.