ಅಸ್ಪೃಶ್ಯರೆಂದು ಕೋವಿಂದ್‌ಗೆ ಸಂಸತ್ ಶಂಕುಸ್ಥಾಪನೆಗೆ ಆಹ್ವಾನ ನೀಡಿರಲಿಲ್ಲ: ಖರ್ಗೆ ಆರೋಪ
ಅಸ್ಪೃಶ್ಯರು ಎಂಬ ಕಾರಣಕ್ಕೆ ನೂತನ ಸಂಸತ್ ಭವನಕ್ಕೆ ಅಡಿಪಾಯ ಹಾಕುವ ಸಮಾರಂಭಕ್ಕೆ ಅಂದಿನ ರಾಷ್ಟ್ರಪತಿಗಳಾಗಿದ್ದ ರಾಮ್‌ನಾಥ್ ಕೋವಿಂದ್‌ರನ್ನು ಮೋದಿ ಸರ್ಕಾರ ಆಹ್ವಾನಿಸಿರಲಿಲ್ಲ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (AICC President Mallikarjuna Kharge) ಕಿಡಿಕಾರಿದ್ದಾರೆ.

ಜೈಪುರ: ಅಸ್ಪೃಶ್ಯರು ಎಂಬ ಕಾರಣಕ್ಕೆ ನೂತನ ಸಂಸತ್ ಭವನಕ್ಕೆ ಅಡಿಪಾಯ ಹಾಕುವ ಸಮಾರಂಭಕ್ಕೆ ಅಂದಿನ ರಾಷ್ಟ್ರಪತಿಗಳಾಗಿದ್ದ ರಾಮ್‌ನಾಥ್ ಕೋವಿಂದ್‌ರನ್ನು ಮೋದಿ ಸರ್ಕಾರ ಆಹ್ವಾನಿಸಿರಲಿಲ್ಲ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (AICC President Mallikarjuna Kharge) ಕಿಡಿಕಾರಿದ್ದಾರೆ.
ರಾಜಸ್ಥಾನದ (Rajasthan) ಜೈಪುರದಲ್ಲಿ(Jaipur) ಶುಕ್ರವಾರ ನಡೆದ ಕಾಂಗ್ರೆಸ್ ರ್‍ಯಾಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರದ ವಿರುದ್ಧ ಹರಿಹಾಯ್ದ ಅವರು ‘ಒಂದು ವೇಳೆ ಅಸ್ಪೃಶ್ಯರು ಅಡಿಪಾಯ ಹಾಕಿದರೆ ಮತ್ತೆ ಅದನ್ನು ಗಂಗಾಜಲದಿಂದ ತೊಳೆಯಬೇಕಿತ್ತು’ ಎಂದು ವ್ಯಂಗ್ಯವಾಡಿದರು.
ಅಮ್ಮನ ಪ್ರೀತಿಗೆ ಸರಿಸಾಟಿ ಎಲ್ಲಿ? ಮರಿಗಳಿಗಾಗಿ ಚಿಕನ್ ಪ್ಯಾಕೇಟನ್ನೇ ಎಗರಿಸಿದ ತಾಯಿ ಬೆಕ್ಕು
ಅಲ್ಲದೇ ‘ನೂತನ ಸಂಸತ್ ಭವನದ (new Parliament House)ಉದ್ಘಾಟನೆಗೆ ನಟರು ಸೇರಿದಂತೆ ಅನೇಕರನ್ನು ಆಹ್ವಾನಿಸಲಾಯಿತು. ಆದರೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಆಹ್ವಾನಿಸಲಿಲ್ಲ. ಇದು ರಾಷ್ಟ್ರಪತಿಗಳಿಗೆ (President Draupadi Murmu) ಮಾಡಿದ ಅವಮಾನ. ಮಹಿಳೆಯರಿಗೆ ಮೀಸಲಾತಿ ನೀಡಲು ಬಿಜೆಪಿ ಬಯಸುವುದಿಲ್ಲ. ಆದರೆ ಮಹಿಳಾ ಮೀಸಲಾತಿ ಜಾರಿಗೆ ತಂದ ಉದ್ದೇಶವೇನು? ನಾನು ರಾಹುಲ್ ಗಾಂಧಿ (Rahul Gandhi) ಮತ್ತು ಸೋನಿಯಾ ಗಾಂಧಿಯವರು ಒಟ್ಟಿಗೆ ‘ಇಂಡಿಯಾ’ ಮೈತ್ರಿ ಕಲ್ಪನೆಯನ್ನು ಮುಂದಿಟ್ಟ ಬಳಿಕ ಅವರಿಗೆ ಮಹಿಳಾ ಮೀಸಲಾತಿ ಬಗ್ಗೆ ಯೋಚನೆ ಬಂದಿದೆ. ಕಾಂಗ್ರೆಸ್ ವಿರುದ್ಧ ಜಾರಿ ನಿರ್ದೇಶನಾಲಯ (ಇಡಿ), ಆದಾಯ ತೆರಿಗೆ ಇಲಾಖೆ ಮತ್ತು ಕೇಂದ್ರೀಯ ತನಿಖಾ ದಳಗಳಲ್ಲಿ ತಲಾ ಒಬ್ಬರನ್ನು ಪ್ರಧಾನಿ ಮೋದಿ ಕಣಕ್ಕಿಳಿಸಿದ್ದಾರೆ’ ಎಂದು ವಾಗ್ದಾಳಿ ನಡೆಸಿದ್ದಾರೆ.
ಓರ್ವ ಪತ್ನಿ ತೊರೆದವ, ಇನ್ನೋರ್ವನಿಗೆ ಪತ್ನಿಯೇ ಇಲ್ಲ: ಕಾಂಗ್ರೆಸ್ ಅಧ್ಯಕ್ಷ ಆಕ್ಷೇಪಾರ್ಹ ಮಾತು
ಫ್ಯಾಷನ್ ಲೋಕದಲ್ಲಿ ಹವಾ ಸೃಷ್ಟಿಸಿದ ಪುಟಾಣಿ ಮಾಡೆಲ್‌ಗಳ ಸುಂದರ ಫೋಟೋಗಳು