ನವದೆಹಲಿ(ಆ.29): ಕೊರೋನಾ ವೈರಸ್ ಕಾರಣ ಮಾರ್ಚ್ 25 ರಿಂದ ಭಾರತದಲ್ಲಿ ಲಾಕ್‌ಡೌನ್ ಹೇರಲಾಗಿತ್ತು. ಜೂನ್ ತಿಂಗಳಿಂದ ಲಾಕ್‌ಡೌನ್ ಹಂತ ಹಂತವಾಗಿ ತೆರವುಗೊಳಿಸಲಾಗುತ್ತಿದೆ. ಸದ್ಯ ಅನ್‌ಲಾಕ್ 3.0 ಚಾಲ್ತಿಯಲ್ಲಿದೆ. ಸೆಪ್ಟೆಂಬರ್‌ನಿಂದ ಅನ್‌ಲಾಕ್ 4.0 ಆರಂಭಗೊಳ್ಳುತ್ತಿದೆ. ಕೆಲ ಕ್ಷೇತ್ರಗಳಿಗೆ ಕೇಂದ್ರ ಸರ್ಕಾರ ಅನುಮತಿ ನೀಡಿದರೆ ಇನ್ನೂ ಕೆಲವು ಕ್ಷೇತ್ರಗಳಿಗೆ ಅನುಮತಿ ನಿರಾಕರಿಸಿದೆ. 

ಭಕ್ತರಿಗೆ ಶುಭಸುದ್ದಿ ಕೊಟ್ಟ ಮುಜರಾಯಿ ಇಲಾಖೆ, ಎಲ್ಲ ಸೇವೆಗಳಿಗೂ ಅವಕಾಶ.

ಅನ್‌ಲಾಕ್ 4.0 ಮಾರ್ಗಸೂಚಿಯಲ್ಲಿ ಹಳ್ಳಿ ಅಥವಾ ನಗರದಲ್ಲಿ ಲಾಕ್‌ಡೌನ್ ಮಾಡುವಂತಿಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟವಾಗಿ ಹೇಳಿದೆ.  ಮಾರ್ಚ್ ಅಂತಿಮ ವಾರದಿಂದ ಸ್ಥಗಿತಗೊಂಡಿರುವ ಮೆಟ್ರೋ ಸಂಚಾರಕ್ಕೆ ಅವಕಾಶ ನೀಡಲಾಗಿದೆ. ಸೆಪ್ಟೆಂಬರ್ 7 ರಿಂದ ದೇಶದಲ್ಲಿನ ಮೆಟ್ರೋ ರೈಲು ಸಂಚಾರ ಆರಂಭಿಸಲು ಅವಕಾಶ ನೀಡಲಾಗಿದೆ. 

ಅಂತರ್‌ ರಾಜ್ಯ ಪ್ರಯಾಣಿಕರಿಗೆ ಇದ್ದ ಎಲ್ಲಾ ಷರತ್ತುಗಳು‌ ರದ್ದು, ಸೀಲ್ ಇಲ್ಲ, ಕ್ವಾರಂಟೈನ್ ಇಲ್ಲ

ಶಾಲಾ-ಕಾಲೇಜುಗಳನ್ನು ಸೆಪ್ಟೆಂಬರ್ 30ರ ವರೆಗೆ ತೆರಯಲು ಅವಕಾಶವಿಲ್ಲ. ಶಾಲಾ ಮಕ್ಕಳು ಹಾಗೂ ವಿದ್ಯಾರ್ಥಿಗಳ ಆರೋಗ್ಯ ದೃಷ್ಟಿಯಿಂದ ಶಾಲಾ ಕಾಲೇಜು ಮೇಲಿನಿ ನಿರ್ಬಂಧ ಮುಂದುವರಿಸಲು ಕೇಂದ್ರ ನಿರ್ಧರಿಸಿದೆ.

ಸೆಪ್ಟೆಂಬರ್ 21 ರಿಂದ ಮನೋರಂಜನಾ, ಸಾಂಸ್ಕೃತಿಕ  ಕಾರ್ಯಕ್ರಮಗಳಿಗೆ ಅವಕಾಶ ನೀಡಲಾಗಿದೆ. ಆದೆರೆ ಥಿಯೇಟರ್, ಮಲ್ಟಿಪ್ಲೆಕ್ಸ್‌ ಸಿನಿಮಾ ಮಾಲ್‌ಗೆ ಅವಕಾಶ ನೀಡಿಲ್ಲ. ಇನ್ನೂ ಸ್ವಿಮ್ಮಿಂಗ್ ಪೂಲ್‌ಗೂ ಅವಕಾಶ ನೀಡಿಲ್ಲ.
 
ಅಂತರ್ ರಾಜ್ಯ ಸರಕು ಸಾಗಾಣೆಗೆ ಯಾವುದೇ ನಿರ್ಬಂಧವಿಲ್ಲ ಎಂದು ಅನ್‌ವಾಕ್ 4.0 ಮಾರ್ಗಸೂಚಿಯಲ್ಲಿ ಕೇಂದ್ರ ಸರ್ಕಾರ ಹೇಳಿದೆ. ಆದರೆ ಅಂತಾರಾಷ್ಟ್ರೀಯ ವಿಮಾನಯಾನದ ಮೇಲಿರುವ ನಿರ್ಬಂಧ ಮುಂದಿವರಿಸಲಾಗಿದೆ.

ಕ್ರೀಡೆ ಹಾಗೂ ಸಾಮಾಜಿಕ ಕಾರ್ಯಕ್ರಮಗಳಿಗೆ ಅವಕಾಶ ನೀಡಲಾಗಿದೆ. ಆದರೆ ಗರಿಷ್ಠ 100 ಜನರಿಗೆ ಮಾತ್ರ ಅವಕಾಶ ನೀಡಲಾಗಿದೆ. ಬಯಲು ರಂಗ ಮಂದಿರಕ್ಕೂ ಅವಕಾಶ ನೀಡಲಾಗಿದೆ.