Asianet Suvarna News Asianet Suvarna News

ಭಕ್ತರಿಗೆ ಶುಭಸುದ್ದಿ ಕೊಟ್ಟ ಮುಜರಾಯಿ ಇಲಾಖೆ, ಎಲ್ಲ ಸೇವೆಗಳಿಗೂ ಅವಕಾಶ

ಕೊರೋನಾ ಅನ್ ಲಾಕ್/ ಭಕ್ತರಿಗೆ ಶುಭಸುದ್ದಿ ನೀಡಿದ ಮುಜರಾಯಿ ಇಲಾಖೆ/ ಸೆಪ್ಟೆಂಬರ್ ಪ್ರಾರಂಭದಿಂದ ಎಲ್ಲಾ ಸೇವೆಗಳು ಪ್ರಾರಂಭ ಮಾಡಲು ಚಿಂತನೆ/ ಮುಜರಾಯಿ ಇಲಾಖೆ ಮುಂದಿದೆ ಪ್ರಸ್ತಾವನೆ/ಸರ್ಕಾರ ಅನುಮತಿ ನೀಡಿದ ಕೂಡಲೇ ದೇವಸ್ಥಾನಗಳಲ್ಲಿ ಎಲ್ಲಾ ಸೇವೆಗಳಿಗೆ ಅವಕಾಶ

karnataka muzrai department ready to open temples in September
Author
Bengaluru, First Published Aug 27, 2020, 5:45 PM IST

ಬೆಂಗಳೂರು(ಆಆ. 27)  ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಅನ್ ಲಾಕ್ ಘೋಷಣೆ ಮಾಡಿದ್ದು ಒಂದೊಂದೆ ಸಡಿಲಿಕೆ ನೀಡಿಕೊಂಡು ಬಂದಿವೆ.  ಇದೀಗ ಭಕ್ತರಿಗೆ ಮುಜರಾಯಿ ಇಲಾಖೆ ಶುಭಸುದ್ದಿಯೊಂದನ್ನು ನೀಡಿದೆ.

ದೇವಾಲಯದಲ್ಲಿ ಎಲ್ಲ ರೀತಿಯ ಪೂಜೆಗೂ ಅವಕಾಶ ನೀಡಲು ಮುಜರಾಯಿ ಇಲಾಖೆ ಮುಂದಾಗಿದೆ. ಕೊರೊನಾ ಹಿನ್ನೆಲೆಯಲ್ಲಿ ಸೇವೆಗಳು ಸ್ಥಗಿತವಾಗಿದ್ದವು. ಸೆಪ್ಟೆಂಬರ್ ಪ್ರಾರಂಭದಿಂದ ಎಲ್ಲಾ ಸೇವೆಗಳು ಪ್ರಾರಂಭ ಮಾಡಲು ಚಿಂತನೆ ನಡೆಸಲಾಗಿದೆ ಎಂಬ  ಮಾಹಿತಿ ಸಿಕ್ಕಿದೆ.

ದೇಗುಲಗಳ ಆದಾಯಕ್ಕೆ ಭಾರೀ ಇಳಿಮುಖ

ಮುಜರಾಯಿ ಇಲಾಖೆ ಮುಂದೆ ಪ್ರಸ್ತಾವನೆ ಇದ್ದು  ಸರ್ಕಾರ ಅನುಮತಿ ನೀಡಿದ ಕೂಡಲೇ ದೇವಸ್ಥಾನಗಳಲ್ಲಿ ಎಲ್ಲಾ ಸೇವೆಗಳಿಗೆ ಅವಕಾಶ ಸಿಗಲಿದೆ. ಕೊರೊನಾ ಮಾರ್ಗಸೂಚಿ ಪಾಲನೆ ಮಾಡಿಕೊಂಡು ಸೇವೆಗಳ ಆರಂಭಕ್ಕೆ ಮುಜರಾಯಿ ಇಲಾಖೆ ಚಿಂತನೆ ನಡೆದಿದೆ.

ಕ್ಷೀರಾಭಿಷೇಕ, ಕುಂಕುಮಾರ್ಚನೆ, ತುಲಾಭಾರ, ರುದ್ರಾಭಿಷೇಕ, ಪಂಚಾಮೃತ ಅಭಿಷೇಕ, ಉರುಳು ಸೇವೆ, ಮುಡಿ ಸೇವೆ ಸೇರಿದಂತೆ ಇನ್ನಿತರ ಸೇವೆಗಳು  ಆರಂಭವಾಗಲಿದೆ ಎಂದು ಮುಜರಾಯಿ ಇಲಾಖೆ ಮೂಲಗಳು ತಿಳಿಸಿವೆ.

Follow Us:
Download App:
  • android
  • ios