ಕೇಂದ್ರ ಸರ್ಕಾರದಿಂದಲೇ ಕ್ರಿಪ್ಟೋಕರೆನ್ಸಿ: ಖಾಸಗಿ ಕ್ರಿಪ್ಟೋ ಕರೆನ್ಸಿ ನಿಷೇಧ?

*ವಿಎಚ್‌ಪಿ ನಾಯಕನ ಪತ್ರಕ್ಕೆ ಕೇಂದ್ರ ಉತ್ತರ
*ಸರ್ಕಾದಿಂದಲೇ ಶೀಘ್ರದಲ್ಲೇ ಡಿಜಿಟಲ್‌ ಕರೆನ್ಸಿ?
*ಖಾಸಗಿ ಕ್ರಿಪ್ಟೋ ಕರೆನ್ಸಿಗೆ ಕಾನೂನಾತ್ಮಕ ಒಪ್ಪಿಗೆ ಇಲ್ಲ

center to put ban on private cryptocurrency says report mnj

ನವದೆಹಲಿ(ನ.17): ಕರ್ನಾಟಕದಲ್ಲಿ ಬಿಟ್‌ ಕಾಯಿನ್‌ (Bit Coin) ವಿಚಾರ ಬಿಜೆಪಿ (BJP) ಮತ್ತು ವಿಪಕ್ಷ ಕಾಂಗ್ರೆಸ್‌ (Congress) ಮಧ್ಯೆ ರಾಜಕೀಯ ವಾಕ್ಸಮರಕ್ಕೆ ಕಾರಣವಾಗಿರುವ ಬೆನ್ನಲ್ಲೇ, ಶೀಘ್ರದಲ್ಲೇ ಸರ್ಕಾರಿ ಕ್ರಿಪ್ಟೋ ಕರೆನ್ಸಿ (Cryptocurrency) ಜಾರಿಗೆ ತರಲಾಗುತ್ತದೆ. ಜತೆಗೆ ಖಾಸಗಿ ಕ್ರಿಪ್ಟೋ ಕರೆನ್ಸಿಗಳನ್ನು ರದ್ದು ಮಾಡಲಾಗುತ್ತದೆ ಎಂಬ ಸುಳಿವನ್ನು ಕೇಂದ್ರ ವಿತ್ತ ಸಚಿವಾಲಯ (Finance Ministry) ನೀಡಿದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.

ಇತ್ತೀಚೆಗಷ್ಟೇ ವಿಶ್ವ ಹಿಂದೂ ಪರಿಷತ್‌ ನಾಯಕ ಗಿರೀಶ್‌ ಭಾರದ್ಜಾಜ್‌ (Girish Bhardwaj), ಭಯೋತ್ಪಾದನೆ, ಮಾದಕ ವಸ್ತು ಮತ್ತು ಇನ್ನಿತರ ದೇಶ ವಿರೋಧಿ ಚಟುವಟಿಕೆಗಳಿಗೆ ಕಾರಣವಾಗಬಹುದಾದ ಕ್ರಿಪ್ಟೋ ಕರೆನ್ಸಿಗಳನ್ನು ರದ್ದುಗೊಳಿಸಬೇಕು ಎಂದು ಕೇಂದ್ರಕ್ಕೆ ಒತ್ತಾಯಿಸಿದ್ದರು. ಇದಕ್ಕೆ ನ.10ರಂದು ಉತ್ತರ ರೂಪದ ಪತ್ರ ಬರೆದಿರುವ ಕೇಂದ್ರದ ಕರೆನ್ಸಿ ಉಪ ನಿರ್ದೇಶಕ ಸಂಜು ಯಾದವ್‌ ಅವರು, ‘ದೇಶದಲ್ಲಿ ಎಲ್ಲಾ ಖಾಸಗಿ ಕ್ರಿಪ್ಟೋ ಕರೆನ್ಸಿಗಳನ್ನು ಕಾನೂನಾತ್ಮಕವಾಗಿ ಒಪ್ಪಿಲ್ಲ. ಆದರೆ ಸರ್ಕಾರವೇ ಶೀಘ್ರದಲ್ಲೇ ಡಿಜಿಟಲ್‌ ಕರೆನ್ಸಿಯನ್ನು ಜಾರಿಗೆ ತರಬಹುದು. ಉಳಿದ ಕ್ರಿಪ್ಟೋ ಕರೆನ್ಸಿ ನಿಷೇಧ ಮಾಡಬಹುದು’ ಎಂದು ಹೇಳಿದ್ದಾರೆ. ಆರ್‌ಬಿಐ ಕೂಡ ಈ ಹಿಂದೆ, ಸರ್ಕಾರದ ಕ್ರಿಪ್ಟೋ ಕರೆನ್ಸಿ ಜಾರಿಗೆ ಬರಬಹುದು ಎಂದಿತ್ತು.

ಬಿಟ್‌ ಕಾಯಿನ್ ಅಂದ್ರೇನು?

ಬಿಟ್‌ಕಾಯಿನ್ ಎನ್ನುವುದು 2009 ರಲ್ಲಿ ರಚಿಸಲಾದ ಡಿಜಿಟಲ್ ಕರೆನ್ಸಿಯಾಗಿದೆ.  ಸಂತೋಷಿ ನಕಮೋಟೋ ಎಂಬ ಕಾವ್ಯನಾಮದ ಸಂಸ್ಥೆಯೊಂದು ಬಿಟ್ ಕಾಯಿನ್ ವ್ಯವಸ್ಥೆಯನ್ನು ಪರಿಚಯಿಸಿದ್ದು, ಬಿಟ್ ಕಾಯಿನ್ ಅಂದ್ರೆ ಕಣ್ಣಿಗೆ ಕಾಣಲ್ಲ. ಅದೊಂದು ಡಿಜಿಟಲ್ ಕರೆನ್ಸಿ. ಇದು ಆನ್‌ಲೈನ್ ಮತ್ತು ಇಟ್ಟಿಗೆ ಮತ್ತು ಗಾರೆ ಖರೀದಿಗೆ ಬಳಸುವ ಸಂಸ್ಕರಿಸಿದ ಡೇಟಾ ಬ್ಲಾಕ್‌ಗಳಿಂದ ಮಾಡಲ್ಪಟ್ಟ ಡಿಜಿಟಲ್ ಕ್ರಿಪ್ಟೋ ಕರೆನ್ಸಿಯಾಗಿದೆ.

Bitcoin Scam: ಕಾಂಗ್ರೆಸ್‌-ಬಿಜೆಪಿ ನಾಯಕರ ಮಧ್ಯೆ ವಾಗ್ಯುದ್ಧ..!

ಸಾಂಪ್ರದಾಯಿಕ ಆನ್‌ಲೈನ್ ಪಾವತಿ ಕಾರ್ಯವಿಧಾನಗಳಿಗಿಂತ ಕಡಿಮೆ ವಹಿವಾಟು ಶುಲ್ಕದ ಭರವಸೆಯನ್ನು ಬಿಟ್‌ಕಾಯಿನ್ ನೀಡುತ್ತದೆ ಮತ್ತು ಇದನ್ನು ಸರ್ಕಾರ ನೀಡುವ ಕರೆನ್ಸಿಗಳಿಗಿಂತ ಭಿನ್ನವಾಗಿ ವಿಕೇಂದ್ರೀಕೃತ ಪ್ರಾಧಿಕಾರವು ನಿರ್ವಹಿಸುತ್ತದೆ. ಬಿಟ್‌ಕಾಯಿನ್‌ಗಳು ಸೀಮಿತವಾಗಿರುವುದರಿಂದ ಮತ್ತು ಅವುಗಳ ಮೌಲ್ಯವನ್ನು ಮಾರುಕಟ್ಟೆ ಶಕ್ತಿಗಳು ನಿರ್ಧರಿಸುವುದರಿಂದ, ಬಿಟ್‌ಕಾಯಿನ್‌ಗಳನ್ನು ಸಹ ವಿವಿಧ ವಿನಿಮಯ ಕೇಂದ್ರಗಳಲ್ಲಿನ ಷೇರುಗಳಂತೆ ವ್ಯಾಪಾರ ಮಾಡಲಾಗುತ್ತದೆ. ಬಿಟ್‌ಕಾಯಿನ್‌ಗಳನ್ನು ಯಾವುದೇ ಬ್ಯಾಂಕುಗಳು ಅಥವಾ ಸರ್ಕಾರಗಳು ನೀಡುವುದಿಲ್ಲ ಅಥವಾ ಬೆಂಬಲಿಸುವುದಿಲ್ಲ, ಅಥವಾ ವೈಯಕ್ತಿಕ ಬಿಟ್‌ಕಾಯಿನ್‌ಗಳು ಸರಕುಗಳಂತೆ ಮೌಲ್ಯಯುತವಾಗಿರುವುದಿಲ್ಲ.

2009ರಲ್ಲಿ  ಇದೀಗ ಮಾರ್ಚ್‌ 2021ರ ಅಂಕಿಅಂಶವನ್ನು ನೋಡಿದರೆ ಇಡೀ ವಿಶ್ವದಲ್ಲಿ ಒಟ್ಟು 18.6 ದಶ ಲಕ್ಷ ಬಿಟ್ ಕಾಯಿನ್‌ಗಳು ಬಳಕೆಯಲ್ಲಿವೆ. ಇದರ ಒಟ್ಟು ಮಾರುಕಟ್ಟೆ ಮೌಲ್ಯ 927 ಬಿಲಿಯನ್ ಅಮೆರಿಕನ್ ಡಾಲರ್.

ಬಿಟ್ ಕಾಯಿನ್‌ಗಳನ್ನು ಹೇಗೆ ಖರ್ಚು ಮಾಡಬಹುದು? 

ಇದೊಂದು ಡಿಜಿಟಲ್ ಹಣಕಾಸು ಅಥವಾ ಡಿಜಿಟಲ್ ಕರೆನ್ಸಿ ಆಗಿದೆ. ಅಂದರೆ ಆನ್ಲೈನ್ ಮೂಲಕ ಪಾವತಿಸಲು ನಿಜವಾದ ನಾಣ್ಯವನ್ನು ನೀಡಬೇಕಾಗಿಲ್ಲ. ಇಂದು ಸುಮಾರು 800ರಷ್ಟು ಇಂತಹ ಕ್ರಿಪ್ಟೋಕರೆನ್ಸಿ (cryptocurrency) ಗಳಿವೆ. ಈ ತಂತ್ರಜ್ಞಾನವನ್ನು ಬ್ಲಾಕ್ಚೈನ್ (blockchain) ಎಂಬ ನೂತನ ವಿಧಾನದ ಆಧಾರದಲ್ಲಿ ಸಾರ್ವಜನಿಕರಿಗೆ ಮಿಥ್ಯಾಹಣದ ಮೂಲಕ ಸುಲಭವಾಗಿ ತಮ್ಮ ಹಣಕಾಸಿನ ವ್ಯವಹಾರಗಳನ್ನು ವಿಶ್ವಮಟ್ಟದಲ್ಲಿ ನಡೆಸಲು ಸಾಧ್ಯವಾಗುತ್ತದೆ.

Bitcoin scam;ಇಲ್ಲದ 'ಬಿಟ್‌' ವಿವಾದ ಜೀವಂತವಾಗಿಡಲು 'ಕೈ' ಯತ್ನ ಎಂದ ಸಿಎಂಗೆ ಕಾಂಗ್ರೆಸ್ ತಿರುಗೇಟು!

ಕ್ರಿಪ್ಟೋ ಕರೆನ್ಸಿಯ ಮಾರುಕಟ್ಟೆ ದರವು ಬೇಡಿಕೆ ಹಾಗೂ ಲಭ್ಯತೆ ಆಧಾರದ ಮೇಲೆ ಏರಿಳಿಕೆಯಾಗುತ್ತೆ.. ಅಂದರೆ, ಬೇಡಿಕೆ ಹೆಚ್ಚಾದಂತೆ ಬೆಲೆಯೂ ಹೆಚ್ಚಾಗುತ್ತೆ. ಒಂದು ಕಂಪನಿಯ ಕ್ರಿಪ್ಟೋ ಕರೆನ್ಸಿಗೂ ಮತ್ತೊಂದು ಕಂಪನಿಯ ಕರೆನ್ಸಿಗೂ ಮೌಲ್ಯ ಹೆಚ್ಚು ಕಮ್ಮಿ ಆಗುತ್ತಿರುತ್ತದೆ.

Latest Videos
Follow Us:
Download App:
  • android
  • ios