* ಎರಡು ಬಾರಿ ಎಂಎಲ್ಎ ಆಗಿರೋರಿಗೆ ಉತ್ತರ ನೀಡಬೇಕಾ?* ಆರೋಪ ಮಾಡೋದೇ ಕಾಂಗ್ರೆಸ್‌ನ ಅಜ್ಮನ್ಮ ಸಿದ್ಧ ಹಕ್ಕು* ಬಿಟ್ ಕಾಯಿನ್ ಆರೋಪ ಕಾಂಗ್ರೆಸ್ ಟೂಲ್ ಕಿಟ್‌ನ ಮುಂದುವರಿದ ಭಾಗ
ಬೆಂಗಳೂರು(ನ.16): ಬಿಟ್ ಕಾಯಿನ್(Bitcoin) ಪ್ರಕರಣದ ತನಿಖೆ ಹಿನ್ನೆಲೆಯಲ್ಲಿ ಬೆಂಗಳೂರು ಪೊಲೀಸ್ ಕಮಿಷನರ್ ಕಚೇರಿ(Bengaluru Police Commissioner's Office) ಇಂಟರ್‌ಪೊಲ್‌ನ(Interpol) ನೆರವು ಕೇಳಿದ್ದರ ಬಗ್ಗೆ ಪ್ರಕಟಣೆ ಹೊರಡಿಸಿತ್ತು. ಇದರಲ್ಲಿ ದೂರಿನ ಸಾರಾಂಶವನ್ನ ಏಕೆ ಉಲ್ಲೇಖಿಸಿಲ್ಲ? ಅಂತ ಕಾಂಗ್ರೆಸ್ ನಾಯಕ ಪ್ರಿಯಾಂಕ ಖರ್ಗೆ ಅವರು ಪ್ರಶ್ನಿಸಿದ್ದಾರೆ.
ಈ ಸಂಬಂಧ ಇಂದು(ಮಂಗಳವಾರ) ಸಾಮಾಜಿಕ ಜಾಲತಾಣ ಟ್ವಿಟರ್‌ನಲ್ಲಿ(Twitter) ನವೆಂಬರ್ 13 ರಂದು ಹೊರಡಿಸಿದ ಪತ್ರಿಕಾ ಪ್ರಕಟಣೆಯನ್ನ ಉಲ್ಲೇಖಿಸಿರುವ ಪ್ರಿಯಾಂಕ ಖರ್ಗೆ(Priyank Kharge), ಕ್ರೈಂ ನಂ 3/2020 ರ ಪ್ರಕರಣ ಸಂಬಂಧ 28 ಏಪ್ರಿಲ್ 2021 ರಂದು ಬೆಂಗಳೂರು ಪೊಲೀಸ್ ಕಮಿಷನರ್ ಇಂಟರ್ ಪೊಲ್ ಗೆ ಪತ್ರ ಬರೆಯಲಾಗಿದೆ. ಆದರೆ, ಇದರಲ್ಲಿ ದೂರಿನ ಸಾರಾಂಶ ಉಲ್ಲೇಖಿಸಿಲ್ಲ ಏಕೆ..? ಅಂತ ಪ್ರಶ್ನೆ ಮಾಡಿದ್ದಾರೆ.
BitCoin Scam: ಕಾಂಗ್ರೆಸ್- ಬಿಜೆಪಿ ನಾಯಕರ 'ಬಿಟ್' ಬಡಿದಾಟ, ಕಾಯಿನ್ ಮಾತ್ರ ಸಿಗ್ತಿಲ್ಲ!
23 ಸಾವಿರ ಕೋಟಿ ರೂಪಾಯಿ ವಂಚನೆ ಪ್ರಕರಣಕ್ಕೆ ಪೊಲೀಸ್ ಕಮಿಷನರ್ ಕಚೇರಿಗೆ ನೆರವು ಬೇಕೇ..?. ಸರ್ಕಾರ(Government of Karnataka) ಬಿಟ್ ಕಾಯಿನ್ ಹಗರಣ ಪ್ರಕರಣದಲ್ಲಿ ಮುಚ್ಚು ಮರೆ ಮಾಡುತ್ತಿರುವುದು ಏಕೆ..? ಅಂತ ರಾಜ್ಯ ಸರ್ಕಾರದ ವಿರುದ್ಧ ಪ್ರಿಯಾಂಕ ಖರ್ಗೆ ಕಿಡಿಕಾರಿದ್ದಾರೆ. ಬಿಟ್ ಕಾಯಿನ್ ವಿಚಾರಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್(Congress) ನಾಯಕರ ವಿರುದ್ಧ ಹರಿಹಾಯ್ದ ಕ್ಯಾಪ್ಟನ್ ಗಣೇಶ್ ಕಾರ್ಣಿಕ್(Ganesh Karnik) ಅವರು, ಪ್ರಿಯಾಂಕ ಖರ್ಗೆಗೆ ಪ್ರಚಾರದ ಹಪಹಪಿಗಾಗಿ ಆಧಾರರಹಿತ ಆರೋಪಗಳನ್ನ(Allegation) ಮಾಡುತ್ತಿದ್ದಾರೆ. ಖರ್ಗೆ ಕುಟುಂಬ 50 ಸಾವಿರ ಕೋಟಿ ಆಸ್ತಿ ಹೊಂದಿದೆಯಂತೆ. ಆ ಹಣವನ್ನು ಬಿಟ್ ಕಾಯಿನ್ ಮೂಲಕ ತೊಡಗಿಸುವ ಪ್ರಯತ್ನ ಮಾಡಿದ್ರು ಎನ್ನುವ ಸುದ್ದಿಯೂ ಇದೆ. ಬಿಟ್‌ಕಾಯಿನ್ ಕೇಸ್ ಆಗಿದ್ದು 2016ರಲ್ಲಿ ಆಗ ಪ್ರಿಯಾಂಕ ಖರ್ಗೆ ಐಟಿಬಿಟಿ ಸಚಿವರಾಗಿದ್ದರು ಅಂತ ಹೇಳಿದ್ದಾರೆ.
Bitcoin scam;ಇಲ್ಲದ 'ಬಿಟ್' ವಿವಾದ ಜೀವಂತವಾಗಿಡಲು 'ಕೈ' ಯತ್ನ ಎಂದ ಸಿಎಂಗೆ ಕಾಂಗ್ರೆಸ್ ತಿರುಗೇಟು!
ಡಿ.ಕೆ.ಶಿವಕುಮಾರ್ ಮೇಲೆ ಅನುಕಂಪ ಇದೆ
ಕೆಪಿಸಿಸಿ(KPCC) ಅಧ್ಯಕ್ಷ ಡಿ.ಕೆ.ಶಿವಕುಮಾರ್(DK Shivakumar) ಮೇಲೆ ನನಗೆ ಅನುಕಂಪ ಇದೆ. ಅವರು ಅಧ್ಯಕ್ಷ ಆದಾಗಿಂದ ಒಂದು ದಿನ ಸಿದ್ದರಾಮಯ್ಯ(Siddaramaiah) ಅವರಿಗೆ ನಿದ್ದೆ ಮಾಡೋಕೆ ಬಿಟ್ಟಿಲ್ಲ. ಇದು ಕಾಂಗ್ರೆಸ್ ಆಂತರಿಕ ವಿಚಾರವಾಗಿದೆ. ಡಿಕೆಶಿಯನ್ನ ಮೂಲೆಗುಂಪು ಮಾಡುವ ಸಲುವಾಗಿ ಸಿದ್ದರಾಮಯ್ಯ ಬಿಟ್ ಕಾಯಿನ್ ವಿಚಾರವನ್ನ ಪ್ರಸ್ತಾಪ ಮಾಡುತ್ತಿದ್ದಾರೆ. ಆ ಮೂಲಕ ಹೈಕಮಾಂಡ್ ನಾಯಕರ ಮುಂದೆ ತಾನು ಬಿಂಬಿಸಿಕೊಳ್ಳೋದು ಅವರ ಪ್ಲಾನ್ ಆಗಿದೆ. ಡಿಕೆಶಿಯನ್ನ ಸೈಡ್ ಲೈನ್ ಮಾಡುವ ಹುನ್ನಾರ ಇದಾಗಿದೆ. ಪ್ರಿಯಾಂಕ ಖರ್ಗೆ ಐಟಿ ಸಚಿವ ಆಗಿದ್ದಾಗ ಕೀ ಪಡೆಯೋಕೆ ಹೋಗಿದ್ರು. ಹೇಗೆ ಬಿಟ್ ಕಾಯಿನ್ ಬಳಸಬೇಕು ಎಂದು ತಿಳಿಯಲು ಪ್ರಿಯಾಂಕ ಖರ್ಗೆ ಶ್ರೀಕಿನಾ(Shreeki) ಭೇಟಿ ಮಾಡಿದ್ದರು ಅಂತ ಗಣೇಶ್ ಕಾರ್ಣಿಕ್ ಆರೋಪಿಸಿದ್ದಾರೆ.
ಬಿಟ್ ಕಾಯಿನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಬಿಜೆಪಿ ವಕ್ತಾರ ಮಹೇಶ್(Mahesh), ಬಿಟ್ ಕಾಯಿನ್ ಆರೋಪ ಕಾಂಗ್ರೆಸ್ ಟೂಲ್ ಕಿಟ್‌ನ ಮುಂದುವರಿದ ಭಾಗವಾಗಿದೆ. ಈ ಬಗ್ಗೆ ಡಿ.ಕೆ. ಶಿವಕುಮಾರ್ ಏಕೆ ಮಾತನಾಡುತ್ತಿಲ್ಲ. ಡಿಕೆಶಿನಾ ಕಟ್ಟಿ ಹಾಕಿದ್ದು ಯಾರು?. ಸಿದ್ದರಾಮಯ್ಯಗೆ ಧಮ್ ಇದ್ರೆ ಸಾರ್ವಜನಿಕವಾಗಿ ಚರ್ಚೆಗೆ ಬನ್ನಿ. ಬಿಜೆಪಿ ಚರ್ಚೆಗೆ ಸಿದ್ಧವಿದೆ. ಸರ್ಕಾರವನ್ನು ಅಭದ್ರ ಮಾಡಲು ಕಾಂಗ್ರೆಸ್ ಪ್ಲಾನ್ ಮಾಡಿದೆ ಅಂತ ಹೇಳಿದ್ದಾರೆ.
ದಾಖಲೆ ಇದ್ರೆ ಬಿಡುಗಡೆ ಮಾಡಲಿ:
ಬಿಟ್ ಕಾಯಿನ್ ಆರೋಪ ಪ್ರತ್ಯಾರೋಪ ವಿಚಾರದ ಬಗ್ಗೆ ಮಾತನಾಡಿದ ಸಚಿವ ಬಿ.ಸಿ.ಪಾಟೀಲ್(BC Patil) ಅವರು, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್(Nalin Kumar Kateel) ಅವರು ಪಾರ್ಟಿ ಕೆಲಸದಲ್ಲಿ ಬ್ಯುಸಿ ಇರ್ತಾರೆ. ನೀವು (ಕಾಂಗ್ರೆಸ್) ನಿರುದ್ಯೋಗಿ ಆಗಿದ್ರಿ ಎಂದು ನಮ್ಮ ಅಧ್ಯಕ್ಷರು ಉತ್ತರ ನೀಡಬೇಕಾ?. ಇದನ್ನ ಬಿಟ್ ಕಾಯಿನ್ ಅನ್ನುವ ಬದಲು ಬೆಟ್ ಕಾಯಿನ್ ಪ್ರಕರಣವಾಗಿದೆ. ಕಾಂಗ್ರೆಸ್‌ನವರು ಅದ್ರಲ್ಲಿ ಮೇಲೆ ಬೆಟ್ ಮಾಡೋಕೆ ಹೊರಟಿದ್ದಾರೆ. ಅದನ್ನ ಉಪಯೋಗಿಸಿಕೊಂಡು ಬಿಜೆಪಿ ಸರ್ಕಾರಕ್ಕೆ(BJP Government) ಕೆಟ್ಟ ಹೆಸರು ತರೋಕೆ ಹೊರಟಿದ್ದಾರೆ. 2018 ರಲ್ಲಿ ಆಗಿತ್ತು ಅಂತ ಹೇಳ್ತಿದ್ದಾರೆ ಹಾಗಿದ್ರೆ ಯಾಕೆ ಆಗ ಸುಮ್ಮನೆ ಕೂತಿದ್ದರು. ಎಲೆಕ್ಷನ್ ಹತ್ತಿರ ಬರ್ತಿದೆ ಅಂತ ಹೀಗೆಲ್ಲ ಬೆಸ್ ಲೆಸ್ ಆರೋಪ ಮಾಡ್ತಿದ್ದಾರೆ. ದಾಖಲೆ ಇದ್ದರೆ ಬಿಡುಗಡೆ ಮಾಡಲಿ. ಅದನ್ನ ಯಾಕೆ ಹೇಳಿ ಬಿಡುಗಡೆ ಮಾಡಬೇಕು. ಇದು ಒಂಥರ ಬ್ಲಾಕ್ ಮೇಲಿಂಗ್(Blackmail) ಆಗಿದೆ. ಇಬ್ಬರ ಹೆಸರಿದೆ ಅಂತ ಬ್ಲಾಕ್ ಮೇಲಿಂಗ್ ಮಾಡ್ತಿದ್ದಾರಾ?. ಏನ್ ರೋಲ್ ಕಾಲ್ ಮಾಡ್ತಿದ್ದಾರಾ ಅಥಾವ ಬ್ಲ್ಯಾಕ್ ಮೇಲಿಂಗ್ ಮಾಡ್ತಿದ್ದಾರಾ ಗೊತ್ತಿಲ್ಲ. ಹೆಸರು ಗೊತ್ತಿದ್ದರೆ ಹೇಳಲಿ ಅಂತ ತಿಳಿಸಿದ್ದಾರೆ.
ನಳಿನ್ ಕುಮಾರ್ ಕಟೀಲ್ ಮೌನವಾಗಿರೋದ್ಯಾಕೆ ಎಂದು ಪ್ರಿಯಾಂಕಾ ಖರ್ಗೆ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಸಚಿವ ಬಿ.ಸಿ. ಪಾಟೀಲ್ ಅವರು, ಪ್ರಿಯಾಂಕ ಖರ್ಗೆ ಹೇಳಿದ್ದಾರೆ ಅಂತ ಅದಕ್ಕೆಲ್ಲ ರಾಜ್ಯಾಧ್ಯಕ್ಷರು ಉತ್ತರ ಕೊಡೋದಕ್ಕೆ ಆಗೋದಿಲ್ಲ. ಇನ್ನು ದೊಡ್ಡ ಖರ್ಗೆಯವರು ಹೇಳಿದ್ರೆ ಹೇಳಬಹುದು. ಒಂದು ಲೆವಲ್ ಅಂತ ಇರುತ್ತೆ. ಆದರೆ ಪ್ರಿಯಾಂಕ ಖರ್ಗೆ ಈಗಿನ್ನು ಎರಡು ಬಾರಿ ಎಂಎಲ್ಎ ಆಗಿರೋರಿಗೆ ಉತ್ತರ ನೀಡಬೇಕಾ?. ಎಲ್ಲಾ ಸ್ಟೇಟ್ ಲೇವಲ್ ಲೀಡರ್ಸ್ ಗಳು ಪ್ರಿಯಾಂಕ ಖರ್ಗೆಯವರ ಪ್ರಶ್ನೆಗೆ ಬಿಜೆಪಿ ರಾಜ್ಯಾಧ್ಯಕ್ಷರು ಉತ್ತರ ಕೊಡುವ ಅವಶ್ಯಕತೆ ಇಲ್ಲ. ಕೇಳುವವರು ಕೇಳಿದ್ರೆ ಹೇಳ್ತಾರೆ. ಮೌನವಾಗಿದ್ರೆ ಮೌನ ಅಂತೀರಾ ಮಾತನಾಡಿದ್ರೆ ಜಾಸ್ತಿ ಮಾತನಾಡಿದ್ದೀರಾ ಅಂತೀರಾ. ಆರೋಪ ಮಾಡೋದು ಕಾಂಗ್ರೆಸ್‌ನ ಅಜ್ಮನ್ಮ ಸಿದ್ಧ ಹಕ್ಕು ಆಗಿದೆ. ಇದನ್ನ ಕಾಂಗ್ರೆಸ್‌ನವರು ತಿಳಿದುಕೊಂಡು ಬಿಟ್ಟಿದ್ದಾರೆ ಅಂತ ಲೇವಡಿ ಮಾಡಿದ್ದಾರೆ.
