Asianet Suvarna News Asianet Suvarna News

Bitcoin scam;ಇಲ್ಲದ 'ಬಿಟ್‌' ವಿವಾದ ಜೀವಂತವಾಗಿಡಲು 'ಕೈ' ಯತ್ನ ಎಂದ ಸಿಎಂಗೆ ಕಾಂಗ್ರೆಸ್ ತಿರುಗೇಟು!

  • ಬಿಟ್‌ಕಾಯಿನ್ ಹೆಸರಲ್ಲಿ ಕಾಂಗ್ರೆಸ್ ರಾಜಕೀಯ ಎಂದ ಬಸವರಾಜ್ ಬೊಮ್ಮಾಯಿ
  • ಇಲ್ಲದ ವಿವಾದವನ್ನು ಜೀವಂತವಾಗಿಡುವ ಪ್ರಯತ್ನ ಎಂದು ಸಿಎಂ
  • ಬಿಟ್‌ಕಾಯಿನ್‌ ಬಗ್ಗೆ ಕಟೀಲ್‌ ಮೌನ ಮುರಿಯಲಿ ಎಂದು ಪ್ರಿಯಾಂಕ್‌ ಸವಾಲು
     
Congress of playing politics over alleged Bitcoin scam says CM Basavaraj Bommai ckm
Author
Bengaluru, First Published Nov 16, 2021, 5:58 AM IST
  • Facebook
  • Twitter
  • Whatsapp

ಬೆಂಗಳೂರು(ನ.16): ಬಿಟ್‌ಕಾಯಿನ್‌ ಬಗ್ಗೆ ಇಲ್ಲದ ವಿವಾದವನ್ನು ಪದೇ ಪದೇ ಪ್ರಸ್ತಾಪಿಸಿ ಅದನ್ನು ಜೀವಂತವಾಗಿಡುವ ಪ್ರಯತ್ನವನ್ನು ಕಾಂಗ್ರೆಸ್‌ ಮಾಡುತ್ತಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕಿಡಿಕಾರಿದ್ದಾರೆ. ಸೋಮವಾರ ತಿರುಪತಿಯಿಂದ ವಾಪಸಾದ ಬಳಿಕ ತಮ್ಮ ನಿವಾಸದ ಬಳಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಕಾಂಗ್ರೆಸ್‌ ಮಾಡಿರುವ ಆರೋಪಗಳು ಇಲ್ಲದ ವಿವಾದವನ್ನು ಜೀವಂತವಾಗಿಡುವ ಪ್ರಯತ್ನ. ಇದು ರಾಜಕೀಯ ಬಿಟ್ಟರೆ ಬೇರೇನೂ ಅಲ್ಲ. ಪ್ರತಿಪಕ್ಷದ ಬಳಿ ದಾಖಲೆಗಳಿದ್ದರೆ ತನಿಖಾ ಸಂಸ್ಥೆಗಳಿಗೆ ಸಲ್ಲಿಸುವಂತೆ ಈಗಾಗಲೇ ಹೇಳಿದ್ದೇನೆ. ದಾಖಲೆಗಳಿದ್ದರೆ ಜಾರಿ ನಿರ್ದೇಶನಾಲಯ ಅಥವಾ ಇತರೆ ತನಿಖಾ ಸಂಸ್ಥೆಗಳಿಗೆ ನೀಡಲಿ. ನಾವು ಈ ಬಗ್ಗೆ ಗಂಭೀರವಾಗಿ ತನಿಖೆ ನಡೆಸುತ್ತಿದ್ದೇವೆ ಎಂದು ಹೇಳಿದರು.

ಕಾಂಗ್ರೆಸ್ ಪಕ್ಷ ವಿವಾದಗಳನ್ನು ಜೀವಂತಾಗಿಡುತ್ತದೆ. ಇಲ್ಲದ ವಿವಾದವೊಂದನ್ನು ಸೃಷ್ಟಿಸಿ ರಾಜಕೀಯ ನಡೆಸುತ್ತಿದೆ. ಇದು ಕಾಂಗ್ರೆಸ್ ರಾಜಕೀಯ ಎಂದು ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ.  ಈ ಸಮಸ್ಯೆಯನ್ನು ಕಾಂಗ್ರೆಸ್ ಸರ್ಕಾರ ತನಿಖೆ ಮಾಡದೆ ಬಿಟ್ಟಿದ್ದ ಯಾಕೆ? ಎಂದು ಪ್ರಶ್ನಿಸಿದ್ದರು. ಇದೀಗ ಆರೋಪ ಪ್ರತ್ಯಾರೋಪಗಳ ಸರಮಾಲೆ ಮುಂದುವರಿದಿದೆ. ಕಾಂಗ್ರೆಸ್ ಹಾಗೂ ಬಿಜೆಪಿ ವಾಕ್ಸಮರ್ ಎಲ್ಲಿಗೆ ತಲುಪುತ್ತದೆ ಅನ್ನೋ ಕುತೂಹಲ ಮನೆ ಮಾಡಿದೆ.

Bitcoin Scam: ಸಿದ್ದರಾಮಯ್ಯಗೆ ಅನುಮಾನ, ಶ್ರೀಕಿಗೆ ಪೊಲೀಸ್ ಭದ್ರತೆ ನೀಡುವಂತೆ ಒತ್ತಾಯ

ಬಿಟ್‌ಕಾಯಿನ್‌ ಬಗ್ಗೆ ಕಟೀಲ್‌ ಮೌನ ಮುರಿಯಲಿ: ಪ್ರಿಯಾಂಕ್‌
ಬಿಟ್‌ಕಾಯಿನ್‌ ವಿಚಾರದಲ್ಲಿ ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಅವರು ತಮ್ಮ ಮೌನ ಮುರಿಯಬೇಕು. ಇಲ್ಲದಿದ್ದರೆ ಅವರ ನಿಗೂಢ ಮೌನದ ಬಗ್ಗೆ ಜನರು ತಪ್ಪು ತಿಳಿಯಬಹುದು ಎಂದು ಮಾಜಿ ಸಚಿವ ಪ್ರಿಯಾಂಕ ಖರ್ಗೆ ವ್ಯಂಗ್ಯವಾಡಿದ್ದಾರೆ.

ಈ ಬಗ್ಗೆ ಟ್ವೀಟ್‌ ಮಾಡಿರುವ ಅವರು, ಬಿಟ್‌ಕಾಯಿನ್‌ ವಿಚಾರದಲ್ಲಿ ರಾಜ್ಯ ಬಿಜೆಪಿ ಅಧ್ಯಕ್ಷರು ಮೌನವಾಗಿರುವುದನ್ನು ನೋಡಿ ನನಗೆ ಆಶ್ಚರ್ಯವಾಗಿದೆ. ಆಡಳಿತ ಪಕ್ಷದ ಅಧ್ಯಕ್ಷರಾಗಿ ಅವರಿಗೆ ಬಿಟ್‌ ಕಾಯಿನ್‌ ವಿಚಾರದಲ್ಲಿ ಸಾಕಷ್ಟುಮಾಹಿತಿ ಇರುತ್ತದೆ ಎಂಬುದು ನನಗೆ ಖಾತ್ರಿಯಿದೆ. ಅವರು ತಮ್ಮ ಮೌನ ಮುರಿಯಬೇಕು. ಇಲ್ಲವಾದಲ್ಲಿ ಅವರ ‘ನಿಗೂಢ ಮೌನ’ದ ಬಗ್ಗೆ ಜನರು ತಪ್ಪು ತಿಳಿಯಬಹುದು ಎಂದು ಹೇಳಿದ್ದಾರೆ.

What Is Bitcoin: ರಾಜ್ಯ ರಾಜಕೀಯದಲ್ಲಿ ಬಿರುಗಾಳಿ ಎಬ್ಬಿಸಿದ ಬಿಟ್‌ ಕಾಯಿನ್ ಅಂದ್ರೇನು?ಇಲ್ಲಿದೆ ಮಾಹಿತಿ

ಈ ಕುರಿತು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಪ್ರತಿಕ್ರಿಯೆ ನೀಡಿ್ದ್ದಾರೆ. ನಮ್ಮ ಪಕ್ಷದ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಹಸುವಿನಂಥ ಮನುಷ್ಯ. ಅವರಿಗೆ ಭ್ರಷ್ಟಾಚಾರದ ಕಲ್ಪನೆಯೇ ಇಲ್ಲ ಎಂದಿದ್ದಾರೆ. ಸೋಮವಾರ ಪಕ್ಷದ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಟೀಲ್‌ ಅವರದ್ದು ಸೌಮ್ಯ ಸ್ವಭಾವ. ಅವರು ಸಂಘಟನೆಯಲ್ಲೇ ತಮ್ಮನ್ನು ಪೂರ್ಣ ಪ್ರಮಾಣದಲ್ಲಿ ತೊಡಗಿಸಿಕೊಂಡಿದ್ದಾರೆ. ಎಂದರು.

ಕ್ರಿಪ್ಟೋ: ನಿವೃತ್ತ ಜಡ್ಜ್‌ ನೇತೃತ್ವದ ತನಿಖೆಗೆ ಆಗ್ರಹ
ಕೋಲಾರ: ಬಿಟ್‌ಕಾಯಿನ್‌ ಪ್ರಕರಣದಲ್ಲಿ ಯಾರೇ ಭಾಗಿಯಾಗಿದ್ದರೂ ತಪ್ಪಿತಸ್ಥರ ವಿರುದ್ಧ ಕ್ರಮ ಆಗಲಿ, ಹೈಕೋರ್ಟ್‌ನ ಹಾಲಿ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ತನಿಖೆಯಾಗಲಿ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ, ಮಾಜಿ ಸಚಿವ ರಾಮಲಿಂಗಾರೆಡ್ಡಿ ಆಗ್ರಹಿಸಿದರು. ಬಿಟ್‌ಕಾಯಿನ್‌ ಹಗರಣದ ವಿಚಾರದಲ್ಲಿ ಬಿಜೆಪಿ ಸರ್ಕಾರದ ತನಿಖೆ ಮೇಲೆ ನಮಗೆ ನಂಬಿಕೆಯಿಲ್ಲ. ಹಾಗಾಗಿ ನ್ಯಾಯಾಂಗ ತನಿಖೆಗೆ ಕಾಂಗ್ರೆಸ್‌ ಆಗ್ರಹಿಸುತ್ತಿದೆ ಎಂದು ತಿಳಿಸಿದರು. ಬಿಟ್‌ಕಾಯಿನ್‌ ಹಗರಣದಲ್ಲಿ ನಿಷ್ಪಕ್ಷಪಾತವಾಗಿ ತನಿಖೆಯಾಗಲಿ, ಇದರಲ್ಲಿ ಕಾಂಗ್ರೆಸ್‌ ಅವಧಿ ಹಾಗೂ ಬಿಜೆಪಿ ಅವಧಿಯೆಂಬ ಚರ್ಚೆ ಬೇಡ. ಪ್ರಕರಣದಲ್ಲಿ ಕಾಂಗ್ರೆಸ್‌ನವರ ಪಾತ್ರವಿದ್ದರೂ ಬಂಧಿಸಿ ವಿಚಾರಣೆ ನಡೆಸಲಿ ಎಂದರು.

ಕಾಂಗ್ರೆಸ್‌ನವರ ಮಕ್ಕಳು ಈ ಹಗರಣದಲ್ಲಿ ಭಾಗಿಯಾಗಿದ್ದಾರೆಂಬ ಬಿಜೆಪಿ ಆರೋಪಕ್ಕೆ ತಿರುಗೇಟು ನೀಡಿದ ಅವರು, 2016ರಲ್ಲಿ ನಡೆದದ್ದು ಗಲಾಟೆ ಮಾತ್ರ. ಅದು ಬಿಟ್ಟು ಗಲಾಟೆ ಪ್ರಕರಣಕ್ಕೂ ಬಿಟ್‌ಕಾಯಿನ್‌ಗೂ ಯಾವುದೇ ಸಂಬಂಧ ಇಲ್ಲ ಎಂದು ಬಿಜೆಪಿಯವರ ಆರೋಪಕ್ಕೆ ತಿರುಗೇಟು ನೀಡಿದರು.
 

Follow Us:
Download App:
  • android
  • ios