Asianet Suvarna News Asianet Suvarna News

Amit shah visit puducherry ಸಂಸ್ಕೃತಿಯಿಂದ ಒಟ್ಟಾಗಿರುವ ಏಕೈಕ ದೇಶ ಭಾರತ, ಅಮಿತ್ ಶಾ!

 -ಭಾರತ ಭೌಗೋಳಿಕ ಸಾಂಸ್ಕೃತಿಕ ದೇಶ, ಅಮಿತ್‌ ಶಾ
 -ಅರವಿಂದರ 150ನೇ ಜನ್ಮದಿನಾಚರಣೆಯಲ್ಲಿ ಗೃಹಮಂತ್ರಿ ಅಭಿಮತ
 - ದೇಶ ಸಂವಿಧಾನದ ಆಧಾರದ ಮೇಲೆ ನಡೆಯುತ್ತದೆ

Subramania Bharathi epitome of patriotism  unity and social reforms says Amit shah ckm
Author
Bengaluru, First Published Apr 25, 2022, 4:44 AM IST

ಪುದುಚೆರಿ(ಏ.25): ದೇಶದಲಿರುವ ಎಲ್ಲಾ ಸಮುದಾಯವನ್ನು ಒಟ್ಟು ಸೇರಿಸಿರುವ ಸಾಮಾನ್ಯ ಅಂಶವೆಂದರೆ ಅದು ಸಂಸ್ಕೃತಿ. ಹಾಗಾಗಿ ಭಾರತ ಒಂದು ಭೌಗೋಳಿಕ ಸಾಂಸ್ಕೃತಿಕ ದೇಶ. ಇಲ್ಲಿ ಎಲ್ಲಾ ಸಮಸ್ಯೆಗಳು ತನಾಗಿಯೇ ಪರಿಹಾರವಾಗುತ್ತವೆ ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಭಾನುವಾರ ಹೇಳಿದ್ದಾರೆ.

ಪುದುಚೆರಿಯಲ್ಲಿ ಆಯೋಜಿಸಿದ್ದ ಶ್ರೀ ಅರವಿಂದರ 150ನೇ ಜನ್ಮ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಅರವಿಂದ ಅವರ ಕೊಡುಗೆಗಳು ಭಾರತವನ್ನು ಅರ್ಥ ಮಾಡಿಕೊಳ್ಳಲು ಸಹಕಾರಿಯಾಗಿದೆ ಎಂದು ಹೇಳಿದರು. ‘ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ, ದ್ವಾರಕದಿಂದ ಬಂಗಾಳದವರೆಗೆ ದೇಶವನ್ನು ಒಂದುಗೂಡಿಸಿರುವುದು ಸಂವಿಧಾನ, ಇಡೀ ದೇಶ ಅದರ ಆಧಾರದ ಮೇಲೆ ನಡೆಯುತ್ತಿದೆ. ಇದಲ್ಲದೇ ಭಾರತವನ್ನು ಒಂದುಗೂಡಿಸಿರುವುದು ಸಂಸ್ಕೃತಿ, ಒದು ದೇಶದ ಆತ್ಮ. ಅರಬಿಂದೋ ಅವರನ್ನು ಓದುತ್ತಾ ಹೋದಂತೆ ಇದು ಅರ್ಥವಾಗುತ್ತದೆ ಎಂದು ಅವರು ಹೇಳಿದರು.

ಇಂಗ್ಲೀಷ್‌ಗೆ ಹಿಂದಿ ಪರ್ಯಾಯ ಅಂತ ಸ್ವೀಕರಿಸಿ: ಅಮಿತ್ ಶಾ 'ಹಿಂದಿ' ಹೇಳಿಕೆಗೆ ಜೋಶಿ ಬೆಂಬಲ!

ಇಡೀ ಪ್ರಪಂಚದಲ್ಲಿ ಸಂಸ್ಕೃತಿಯಿಂದ ಒಟ್ಟಾಗಿರುವ ಏಕೈಕ ದೇಶವೆಂದರೆ ಅದು ಭಾರತ. ವೇದಗಳು ಮತ್ತು ಸಂಸ್ಕೃತಿ ದೇಶಕ್ಕೆ ಯಾವುದೇ ಗಡಿಗಳನ್ನು ನಿಗದಿಪಡಿಸಿಲ್ಲ. ನಾವು ಇಡೀ ವಿಶ್ವದ ಒಳಿತಿಗಾಗಿ ಕೆಲಸ ಮಾಡುತ್ತೇವೆ ಎಂದು ಅವರು ಹೇಳಿದರು. ಇದೇ ಸಮಯದಲ್ಲಿ ಶಾ ಅವರು ಮಹಾಕವಿ ಭಾರತೀಯ ಮೆಮೊರಿಯಲ್‌ ವಸ್ತು ಸಂಗ್ರಹಾಲಯಕ್ಕೆ ಭೇಟಿ ನೀಡಿದರು.

ಅಮಿತ್ ಶಾ ಆಗಮಿಸುತ್ತಿದ್ದಂತೆ ಕೆಲ ಸಂಘಟನೆಗಳು ಹಿಂದಿ ಹೇರಿಕೆ ವಿರುದ್ಧ ಪ್ರತಿಭಟನೆ ನಡೆಸಿತು. ಕರ್ನಾಟಕದ ಹಲವೆಡೆ ಈಗಾಗಲೇ ಹಿಂದಿ ಹೇರಿಕೆ ವಿರುದ್ಧ ಪ್ರತಿಭಟನೆಗಳು ನಡೆದಿದೆ. 

Fortunate to have visited the Mahakavi Bharathiyar Memorial Museum in Puducherry.

Subramania Bharathi is the epitome of patriotism, unity & social reforms. His patriotic songs motivated countless people to join the Indian freedom movement. His ideas continue to motivate us all. pic.twitter.com/I4m3C3hgJx

— Amit Shah (@AmitShah) April 24, 2022

 

ಹಿಂದಿ ಹೇರಿಕೆ ಖಂಡಿಸಿ ಪ್ರತಿಭಟನೆ
ಹಿಂದಿ ಹೇರಿಕೆಯನ್ನು ಖಂಡಿಸಿ ಕರ್ನಾಟಕ ಜನಪರ ವೇದಿಕೆಯು ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ಕೇಂದ್ರ ಸರ್ಕಾರದ ವಿರುದ್ಧ  ಪ್ರತಿಭಟನೆ ನಡೆಸಿತು.

ಗೇಟ್‌ಪಾಸ್ ಭೀತಿ: ಅಮಿತ್‌ ಶಾ ಗಮನ ಸೆಳೆಯಲು ಪೈಪೋಟಿಗೆ ಬಿದ್ದ ಬಿಜೆಪಿ ಸಚಿವರು

ವೇದಿಕೆ ರಾಜ್ಯಾಧ್ಯಕ್ಷ ಕೆರೆ ಚಳವಳಿ ರಮೇಶಗೌಡ ಮಾತನಾಡಿ, ಕೇಂದ್ರ ಗೃಹ ಸಚಿವ ಅಮಿತ್‌ ಶಾ ಇಂಗ್ಲೀಷ್‌ ಭಾಷೆಗೆ ಪರ್ಯಾಯ ಸಂಪರ್ಕ ಭಾಷೆಯನ್ನಾಗಿ ಹಿಂದಿಯನ್ನು ಒಪ್ಪಿಕೊಳ್ಳುವಂತೆ ಕರೆ ಕೊಟ್ಟಿದ್ದಾರೆ. ಇದು ಪ್ರಾದೇಶಿಕ ಭಾಷೆಗಳನ್ನು ಹಿಂದಿಯ ಅಡಿಯಾಳನ್ನಾಗಿಸುವ ಹುನ್ನಾರವಾಗಿದೆ. ಮುಂದೆ ಹಿಂದಿಯನ್ನೇ ರಾಷ್ಟ್ರ ಭಾಷೆಯಾಗಿಸುವ ತಯಾರಿಯೂ ಕೇಂದ್ರ ಸರ್ಕಾರದಿಂದ ನಡೆಯುತ್ತಿದೆ. ಈ ಕುರಿತು ಪ್ರಾದೇಶಿಕ ಭಾಷೆಗಳನ್ನೇ ತನ್ನ ಜೀವಾಳವಾಗಿಸಿಕೊಂಡಿರುವ ದಕ್ಷಿಣ ಭಾರತದ ರಾಜ್ಯದ ಜನ ಎಚ್ಚರಿಕೆ ವಹಿಸಬೇಕು. ಸ್ವಾಭಿಮಾನದಿಂದ ಮುಂದೆ ಬಂದು ಹಿಂದಿ ಹೇರಿಕೆಯನ್ನು ವಿರೋಧಿಸಬೇಕು ಎಂದು ಕರೆಕೊಟ್ಟರು.

ಕೇಂದ್ರ ಸರ್ಕಾರ ಪ್ರತಿಪಾದಿಸುವ ತ್ರಿಭಾಷಾ ಸೂತ್ರವು ದಕ್ಷಿಣ ಭಾರತದ ರಾಜ್ಯಗಳಿಗೆ ಸೀಮಿತವಾಗಿದೆ. ಹಿಂದಿ ಬಳಸುವ ಉತ್ತರ ರಾಜ್ಯಗಳು ದ್ವಿಭಾಷಾ ಸೂತ್ರದಲ್ಲಿ(ಇಂಗ್ಲಿಷ್‌ ಮತ್ತು ಹಿಂದಿ) ಮುಂದುವರೆದಿವೆ. ತಮಿಳುನಾಡು ತ್ರಿಭಾಷಾ ಸೂತ್ರವನ್ನು ತಿರಸ್ಕರಿಸಿ ತಮಿಳು ಮತ್ತು ಇಂಗ್ಲೀಷ್‌ ಅನ್ನು ಉಳಿಸಿಕೊಂಡಿತು. ಪದ್ಯಗಳು ಹಿಂದಿಯಲ್ಲಿವೆ ಎಂಬ ಕಾರಣಕ್ಕಾಗಿ ರಾಷ್ಟ್ರೀಯ ಕೆಡೆಟ್‌ ಕಾಫ್ಸ್‌ರ್‍(ಎನ್‌ಸಿಸಿ) ಕೂಡ ತಮಿಳುನಾಡು ರದ್ದು ಮಾಡಿತ್ತು. ದೇಶದ ಉಳಿದ ಭಾಗಗಳು ತ್ರಿಭಾಷಾ ಸೂತ್ರವನ್ನು ಒಪ್ಪಿದವು. ಸದ್ಯ ಉತ್ತರ ಭಾರತದ ಬಹುತೇಕ ರಾಜ್ಯಗಳು ಹಿಂದಿ ಬಳಸುತ್ತವೆ. ಆದರೆ, ದಕ್ಷಿಣ ಭಾರತ ರಾಜ್ಯಗಳು ಹಿಂದಿ ಒಪ್ಪಿಕೊಳ್ಳುವ ಮನಸ್ಥಿಯಲ್ಲಿ ಇಲ್ಲ ಎಂದು ತಿಳಿಸಿದರು.

ಬಹುಭಾಷೆಯ ಒಕ್ಕೂಟ ವ್ಯವಸ್ಥೆ ಭಾರತ ಹೊಂದಿದೆ. ಯಾವುದೇ ಕಾರಣಕ್ಕೂ ಆಡಳಿತದಲ್ಲಿ ಪ್ರಾದೇಶಿಕ ಭಾಷೆ ಜತೆ ಇಂಗ್ಲೀಷ್‌ ಹೊರತಾಗಿ ಹಿಂದಿ ಬಳಸಲು ರಾಜ್ಯ ಸರ್ಕಾರಗಳು ಮುಂದಾಗಬಾರದು. ಹಿಂದಿ ಭಾಷಿಕವಲ್ಲದ ರಾಜ್ಯಗಳು ಸಂಪರ್ಕ ಭಾಷೆಯನ್ನಾಗಿ ಇಂಗ್ಲೀಷ್‌ ಬಳಸಲು ಸದ್ಯ ಇರುವ ಅವಕಾಶ ಮುಂದುವರೆಯಬೇಕು ಎಂದು ಒತ್ತಾಯಿಸಿದರು.

Follow Us:
Download App:
  • android
  • ios