Asianet Suvarna News Asianet Suvarna News

ಅಲ್ಪಸಂಖ್ಯಾತರಿಗೆ ಭಾರತಕ್ಕಿಂತ ಉತ್ತಮ ದೇಶವಿಲ್ಲ: ಜಾಗತಿಕ ಅಲ್ಪಸಂಖ್ಯಾತರ ಬಗ್ಗೆ ಸಿಪಿಎ ವರದಿ!

ಭಾರತದಲ್ಲಿ ಅಲ್ಪಸಂಖ್ಯಾತರ ಮೇಲೆ ದೌರ್ಜನ್ಯವಾಗುತ್ತಿದೆ, ಅಹಿಷ್ಣುತೆ ಅಂತೆಲ್ಲಾ ಭಾಷಣ ಬಿಗಿಯುತ್ತಿದ್ದ ಬುದ್ದಿಜೀವಿಗಳ ಮುಖಕ್ಕೆ ಹೊಡೆಯುವಂಥ ವರದಿಯನ್ನು ಜಾಗತಿಕ ಅಲ್ಪಸಂಖ್ಯಾತರ ಕುರಿತಾಗಿ ಸೆಂಟರ್‌ ಫಾರ್‌ ಪಾಲಿಸಿ ಅನಾಲಿಸಿಸ್‌ ನೀಡಿದೆ. ಇದರ ಪ್ರಕಾರ, ಜಗತ್ತಿನಲ್ಲಿ ಅಲ್ಪ ಸಂಖ್ಯಾತರಿಗೆ ಭಾರತಕ್ಕಿಂತ ಉತ್ತಮವಾದ ದೇಶವಿಲ್ಲ ಎಂದು ತಿಳಿಸಿದೆ.
 

Center for Policy Analysis on global minorities  India is the best for minorities san
Author
First Published Feb 7, 2023, 11:32 PM IST

ನವದೆಹಲಿ (ಫೆ.7): ಭಾರತದಲ್ಲಿ ಅಲ್ಪಸಂಖ್ಯಾತರಿಗೆ ಸ್ವಾತಂತ್ರ್ಯವಿಲ್ಲ, ದೇಶದಲ್ಲಿ ಅಹಿಷ್ಣುತೆ ತಾಂಡವವಾಡುತ್ತಿದೆ. ಅಲ್ಪಸಂಖ್ಯಾತರನ್ನು 2ನೇ ದರ್ಜೆಯ ನಾಗರಿಕರನ್ನಾಗಿ ನೋಡಲಾಗುತ್ತಿದೆ ಎನ್ನುವ ಬುದ್ಧಿಜೀವಿಗಳ ಆರೋಪಗಳಲ್ಲಿ ಯಾವುದೇ ಸತ್ಯಾಂಶವಿಲ್ಲ ಎನ್ನುವಂಥ ವರದಿ ಬಿಡುಗಡೆಯಾಗಿದೆ. ಜಗತ್ತಿನ ಅಲ್ಪಸಂಖ್ಯಾತರ ಕುಡಿತಾಗಿ ಸೆಂಟರ್‌ ಫಾರ್‌ ಪಾಲಿಸಿ ಅನಾಲಿಸಿಸ್‌ (ಸಿಪಿಎ) ತನ್ನ ವರದಿಯನ್ನು ನೀಡಿದೆ. ಭಾರತದಲ್ಲಿ ಅಲ್ಪಸಂಖ್ಯಾತರನ್ನು ತುಳಿಯಲಾಗುತ್ತಿದೆ ಎಂದು ಪಾಕಿಸ್ತಾನ ಬೇಕಾಬಿಟ್ಟಿಯಾಗಿ ಹೇಳುತ್ತದೆ. ಕಾಶ್ಮೀರದ ಬಗ್ಗೆ ಆಧಾರ ರಹಿತ ಹೇಳಿಕೆಗಳನ್ನು ನೀಡುತ್ತಲೇ ದೇಶದಲ್ಲಿ ಅಲ್ಪಸಂಖ್ಯಾತರನ್ನು ಕೆರಳಿಸುವ ಕೆಲಸವನ್ನು ಪಾಕ್ ಮಾಡುತ್ತಿದೆ. ಅದರೊಂದಿಗೆ ಪಾಕ್‌ ಮಾತನ್ನು ನಂಬುವ ಹಲವು ಇಸ್ಲಾಮಿಕ್ ರಾಷ್ಟ್ರಗಳು ಸಿಪಿಎ ವರದಿಯನ್ನು ಖಂಡಿತಾ ಓದಬೇಕು. ಜಾಗತಿಕ ಅಲ್ಪಸಂಖ್ಯಾತರ ಕುರಿತಾದ ನೀತಿ ವಿಶ್ಲೇಷಣೆಯ ಕೇಂದ್ರದ (ಸಿಪಿಎ ವರದಿ) ವರದಿಯು ಧಾರ್ಮಿಕ ಅಲ್ಪಸಂಖ್ಯಾತರ ಬಗ್ಗೆ ಒಳಗೊಳ್ಳುವ ಕ್ರಮಗಳಿಗಾಗಿ 110 ದೇಶಗಳಲ್ಲಿ ಭಾರತವನ್ನು ನಂಬರ್ ಒನ್ ಎಂದು ಹೇಳಿದೆ. ಸೆಂಟರ್ ಫಾರ್ ಪಾಲಿಸಿ ಅನಾಲಿಸಿಸ್ (CPA) ಭಾರತದ ಪಾಟ್ನಾದಲ್ಲಿ ಕೇಂದ್ರ ಕಚೇರಿಯನ್ನು ಹೊಂದಿರುವ ಸಂಶೋಧನಾ ಕೇಂದ್ರವಾಗಿದೆ. 110 ದೇಶಗಳಲ್ಲಿ ಭಾರತವು ಧಾರ್ಮಿಕ ಅಲ್ಪಸಂಖ್ಯಾತರ ಅತ್ಯುತ್ತಮ ಸ್ಥಾನಮಾನವನ್ನು ಹೊಂದಿದೆ. ಅದರ ನಂತರದ ಸ್ಥಾನದಲ್ಲಿ ದಕ್ಷಿಣ ಕೊರಿಯಾ, ಜಪಾನ್, ಪನಾಮ ಮತ್ತು ಅಮೆರಿಕ ದೇಶಗಳಿವೆ.

ಕೊನೆಯ ಸ್ಥಾನದಲ್ಲಿ ಅಫ್ಘಾನಿಸ್ತಾನ, ಸೊಮಾಲಿಯಾ: ಮಾಲ್ಡೀವ್ಸ್, ಅಫ್ಘಾನಿಸ್ತಾನ ಮತ್ತು ಸೊಮಾಲಿಯಾ ಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿವೆ ಎಂದು ವರದಿ ಹೇಳಿದೆ, ಯುಕೆ ಮತ್ತು ಯುಎಇ 54 ಮತ್ತು 61 ನೇ ಸ್ಥಾನದಲ್ಲಿವೆ. CPA (Center for Policy Analysis ) ವರದಿಯ ಪ್ರಕಾರ, ಭಾರತದ ಅಲ್ಪಸಂಖ್ಯಾತ ನೀತಿಯು ಹೆಚ್ಚುತ್ತಿರುವ ವೈವಿಧ್ಯತೆಗೆ ಒತ್ತು ನೀಡುತ್ತದೆ. ಭಾರತದ ಸಂವಿಧಾನವು ಸಂಸ್ಕೃತಿ ಮತ್ತು ಶಿಕ್ಷಣದಲ್ಲಿ ಧಾರ್ಮಿಕ ಅಲ್ಪಸಂಖ್ಯಾತರ ಪ್ರಗತಿಗೆ ವಿಶೇಷ ನಿಬಂಧನೆಗಳನ್ನು ಹೊಂದಿದೆ. ವರದಿಯ ಪ್ರಕಾರ, ಭಾಷಾ ಮತ್ತು ಧಾರ್ಮಿಕ ಅಲ್ಪಸಂಖ್ಯಾತರನ್ನು ಉತ್ತೇಜಿಸಲು ಯಾವುದೇ ಇತರ ದೇಶಗಳ ಸಂವಿಧಾನದಲ್ಲಿ ಇಷ್ಟು ಸ್ಪಷ್ಟವಾದ ಅವಕಾಶಗಳಿಲ್ಲ ಎನ್ನಲಾಗಿದೆ.

ಮೋದಿ ವಿರುದ್ಧ ಬಿಬಿಸಿ ಸಾಕ್ಷ್ಯಚಿತ್ರ ಪ್ರದರ್ಶನ ನಿಷೇಧ ಪ್ರಶ್ನಿಸಿ ಸುಪ್ರೀಂಗೆ ಅರ್ಜಿ: ಮುಂದಿನ ವಾರ ವಿಚಾರಣೆ

ಯಾವುದೇ ಧಾರ್ಮಿಕ ಪಂಥದ ಮೇಲೆ ನಿರ್ಬಂಧಗಳಿಲ್ಲ: ಇತರ ದೇಶಗಳಂತೆ ಭಾರತದಲ್ಲಿ ಯಾವುದೇ ಧಾರ್ಮಿಕ ಪಂಥದ ಮೇಲೆ ಯಾವುದೇ ನಿರ್ಬಂಧಗಳಿಲ್ಲ ಎಂಬುದನ್ನು ವರದಿಯು ಎತ್ತಿ ತೋರಿಸಿದೆ. ಯುಎನ್ ಭಾರತದ ಅಲ್ಪಸಂಖ್ಯಾತ ನೀತಿಯನ್ನು ಇತರ ದೇಶಗಳಿಗೆ ಮಾದರಿಯಾಗಿ ಬಳಸಬಹುದು. ಏಕೆಂದರೆ ಭಾರತ ಬಳಸುವ ಮಾದರಿಯಬಹು ಧರ್ಮಗಳು ಮತ್ತು ಅವರ ಪಂಗಡಗಳ ವಿರುದ್ಧ ತಾರತಮ್ಯದ ಕೊರತೆಯನ್ನು ತೋರಿಸುತ್ತದೆ.

BBC Documentary Row: ಭಾರತದ ವಿರುದ್ಧ 'ಬಿಬಿಸಿ' ವಿಷ ಕಾರುವುದು ಏಕೆ?: ಸಾಕ್ಷ್ಯಚಿತ್ರದ ಹಿಂದಿನ ಅಸಲಿಯತ್ತು ಏನು?

ವರದಿಯು ಭಾರತದ ಅಲ್ಪಸಂಖ್ಯಾತ ನೀತಿಯನ್ನು ಎತ್ತಿ ತೋರಿಸುತ್ತದೆ, ಇದನ್ನು ಕಾಲಕಾಲಕ್ಕೆ ಪರಿಶೀಲಿಸಬೇಕು ಮತ್ತು ಮರುಪರಿಶೀಲಿಸುವ ಅಗತ್ಯವಿದೆ. ಘರ್ಷಣೆಗಳಿಂದ ತನ್ನ ದೇಶವನ್ನು ಮುಕ್ತವಾಗಿಡಲು ಭಾರತ ಬಯಸಿದ್ದಲ್ಲಿ, ಅದು ಅಲ್ಪಸಂಖ್ಯಾತರ ಕಡೆಗೆ ತನ್ನ ವಿಧಾನವನ್ನು ತರ್ಕಬದ್ಧಗೊಳಿಸಬೇಕು ಎಂದು ಹೇಳಿದೆ. ಸಿಪಿಎ ರಚಿಸಿದ ಜಾಗತಿಕ ಅಲ್ಪಸಂಖ್ಯಾತರ ವರದಿಯು ವಿವಿಧ ದೇಶಗಳಲ್ಲಿನ ಅಲ್ಪಸಂಖ್ಯಾತರ ಮೇಲಿನ ತಾರತಮ್ಯದ ಬಗ್ಗೆ ವಿಶ್ವ ಸಮುದಾಯಕ್ಕೆ ಅವರ ನಂಬಿಕೆಯ ಆಧಾರದ ಮೇಲೆ ಶಿಕ್ಷಣ ನೀಡುವ ಗುರಿಯನ್ನು ಹೊಂದಿದೆ. ಸಂಶೋಧನೆಯು ವಿವಿಧ ಧಾರ್ಮಿಕ ಗುಂಪುಗಳು ಮತ್ತು ಪಂಗಡಗಳು ಅಂತರರಾಷ್ಟ್ರೀಯ ಮಟ್ಟದಲ್ಲಿ ವ್ಯವಹರಿಸುವ ಸಮಸ್ಯೆಗಳನ್ನು ಪರಿಗಣಿಸುತ್ತದೆ.

Follow Us:
Download App:
  • android
  • ios