Asianet Suvarna News Asianet Suvarna News

ಪಿಂಚಣಿಗಾಗಿ ಕೊರಳಲ್ಲಿ ಹಾವು ಸುತ್ತಿಕೊಂಡು ಪ್ರತಿಭಟನೆ

ಆರು ತಿಂಗಳಿನಿಂದ ಮಾಸಾಶನ ನೀಡಿಲ್ಲವೆಂದು ಅಂಗವಿಕಲ ವ್ಯಕ್ತಿಯೊಬ್ಬರು ಕೊರಳಲ್ಲಿ ಹಾವು ಹಾಕಿ ಕೊಂಡು ಗುರುವಾರ ಪಟ್ಟ ಣಾದ್ಯಂತ ಸಂಚರಿಸುವ ಮೂಲಕ ವಿಭಿನ್ನ ಪ್ರತಿಭಟನೆ ನಡೆಸಿದರು.

Man Use snakes to protest In Gadag

ರೋಣ: ಆರು ತಿಂಗಳಿನಿಂದ ಮಾಸಾಶನ ನೀಡಿಲ್ಲವೆಂದು ಅಂಗವಿಕಲ ವ್ಯಕ್ತಿಯೊಬ್ಬರು ಕೊರಳಲ್ಲಿ ಹಾವು ಹಾಕಿ ಕೊಂಡು ಗುರುವಾರ ಪಟ್ಟ ಣಾದ್ಯಂತ ಸಂಚರಿಸುವ ಮೂಲಕ ವಿಭಿನ್ನ ಪ್ರತಿಭಟನೆ ನಡೆಸಿದರು. ಪಟ್ಟಣದ ಕಲ್ಯಾಣ ನಗರದ ನಿವಾಸಿ ವಿಕಲಚೇತನ ಮಕ್ತುಂಸಾಬ್ ರಾಜಾಖಾನ್ ಎಂಬಾತ ಮನೆಯೊಂದರ ಅಡಿಪಾಯ ತೆಗೆಯುತ್ತಿದ್ದಾಗ ಸಿಕ್ಕ ಹಾವನ್ನು ಹಿಡಿದು ಕೊರಳಲ್ಲಿ ಪಟ್ಟಣದಲ್ಲಿ ಸುತ್ತಾಡಿದ್ದಾನೆ. 

ಹಾವನ್ನು ಕೊರಳಿನಿಂದ ತೆಗೆಯುವಂತೆ ಜನರು ಹೇಳಿದರು ಆತ ತೆಗೆದಿಲ್ಲ. ಬಳಿಕ ತಹಸೀಲ್ದಾರ್ ಕಚೇರಿಗೆ ತೆರಳಿ ಪ್ರತಿಭಟನೆ ನಡೆಸಿದ್ದಾನೆ. ಕುಡಿದ ನಶೆಯಲ್ಲಿ ಈ ರೀತಿ ವರ್ತಿಸಿದ್ದು, ಜತೆಗೆ ಕುಷ್ಠರೋಗ ಇದ್ದವರಿಗೆ ಹಾವು ಕಚ್ಚುವುದಿಲ್ಲ ಎಂದು ತಿಳಿದು ಈ ರೀತಿಯಾಗಿ ಮಾಡಿದ್ದಾನೆ ಎಂದು ತಿಳಿದು ಬಂದಿದೆ.

ಕನ್ನಡಪ್ರಭದೊಂದಿಗೆ ಮಾತನಾಡಿದ ತಹಸೀಲ್ದಾರ್ ಶಿವಲಿಂಗಪ್ರಭು ವಾಲಿ, ಕೊರಳನಲ್ಲಿ ಹಾವು ಹಾಕಿಕೊಂಡು ನನ್ನ ಬಳಿ ಯಾವ ವ್ಯಕ್ತಿಯೂ ಬಂದಿಲ್ಲ. ಮಾಸಾಶನ ವಿಳಂಬದಿಂದ ಈ ರೀತಿಯಾಗಿ ಮಾಡಿದ್ದಾನೆ ಎಂದರೆ ಪರಿಶೀಲಿಸುವೆ ಎಂದರು. 

Follow Us:
Download App:
  • android
  • ios