Asianet Suvarna News Asianet Suvarna News

ಮತ್ತೆ ರೈಲು ಹಳಿ ತಪ್ಪಿಸಲು ಯತ್ನ: ಸಿಮೆಂಟ್ ಬ್ಲಾಕ್ ಇಟ್ಟು ಕಿಡಿಗೇಡಿಗಳ ದುಷ್ಕೃತ್ಯ

ರಾಜಸ್ಥಾನದ ಅಜ್ಮೇರ್ ಬಳಿ ಸರಕು ಸಾಗಣೆ ರೈಲು ಹಳಿ ತಪ್ಪಿಸಲು ಕಿಡಿಗೇಡಿಗಳು ಸಿಮೆಂಟ್ ಬ್ಲಾಕ್‌ಗಳನ್ನು ಹಳಿ ಮೇಲೆ ಇರಿಸಿದ್ದರು. ಈ ಘಟನೆಯಿಂದ ಯಾವುದೇ ಅನಾಹುತ ಸಂಭವಿಸಿಲ್ಲ ಮತ್ತು ಪೊಲೀಸರು ತನಿಖೆ ಆರಂಭಿಸಿದ್ದಾರೆ. ಈ ಘಟನೆಯು ಉತ್ತರ ಪ್ರದೇಶದಲ್ಲಿ ಇದೇ ರೀತಿಯ ಘಟನೆ ನಡೆದ ಕೆಲವೇ ದಿನಗಳಲ್ಲಿ ನಡೆದಿದೆ.

Cement Blocks Used to attempt train derail in ajmer mrq
Author
First Published Sep 11, 2024, 8:44 AM IST | Last Updated Sep 11, 2024, 8:44 AM IST

ಜೈಪುರ: ಉತ್ತರ ಪ್ರದೇಶದಲ್ಲಿ ರೈಲು ಹಳಿ ತಪ್ಪಿಸುವುದಕ್ಕೆ ಕಿಡಿಗೇಡಿಗಳು ದುಷ್ಕೃತ್ಯ ನಡೆಸಿದ ಬೆನ್ನಲ್ಲೇ ಮತ್ತೊಂದು ಇಂಥದ್ದೇ ಪ್ರಕರಣ ರಾಜಸ್ಥಾನದಲ್ಲಿ ನಡೆದಿದೆ. ಅಜ್ಮೇರ್‌ ಬಳಿ ಸರಕು ಸಾಗಣೆ ಕಾರಿಡಾರ್ ಮೇಲೆ ಕಿಡಿಗೇಡಿಗಳು 2 ಸಿಮೆಂಟ್‌ ಬ್ಲಾಕ್‌ಗಳನ್ನಿಟ್ಟು, ಗೂಡ್ಸ್‌ ರೈಲು ಹಳಿ ತಪ್ಪಿಸುವುದಕ್ಕೆ ಯತ್ನಿಸಿದ್ದಾರೆ.

ಭಾನುವಾರ ತಡರಾತ್ರಿ ಸರದ್ನಾ ಮತ್ತು ಬಂಗಡ್‌ ನಿಲ್ದಾಣಗಳ ನಡುವೆ ರೈಲು ಹಳಿಯಲ್ಲಿ ಇರಿಸಲಾಗಿದ್ದ ಸಿಮೆಂಟ್‌ ಬ್ಲಾಕ್‌ಗೆ ಗೂಡ್ಸ್‌ ರೈಲು ಡಿಕ್ಕಿಯಾಗಿದೆ. ಆದರೆ ಯಾವುದೇ ಅನಾಹುತ ಸಂಭವಿಸಿಲ್ಲ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಕಿಡಿಗೇಡಿಗಳ ಪತ್ತೆಗೆ ಯತ್ನಿಸುತ್ತಿದ್ದಾರೆ.

ವಂದೇ ಭಾರತ್ ರೈಲನ್ನು ಗೂಡ್ಸ್‌ ರೈಲಿನ ಎಂಜಿನ್‌ನಿಂದ ಎಳೆಸಿದ್ರು: ವಿಡಿಯೋ ನೋಡಿ

ಸೋಮವಾರ ಉತ್ತರ ಪ್ರದೇಶದಲ್ಲಿ ಕಾಳಿಂದಿ ಎಕ್ಸ್‌ಪ್ರೆಸ್‌ ಸಂಚರಿಸುತ್ತಿದ್ದ ರೈಲು ಮಾರ್ಗದ ಹಳಿ ಮೇಲೆ ದುಷ್ಕರ್ಮಿಗಳು ಎಲ್‌ಪಿಜಿ ಸಿಲಿಂಡರ್, ಪೆಟ್ರೋಲ್‌ ಬಾಟೆಲ್‌, ಬೆಂಕಿ ಪೊಟ್ಟಣ ಇರಿಸಿದ್ದರು. ರೈಲು ಸಿಲಿಂಡರ್‌ಗೆ ಡಿಕ್ಕಿ ಹೊಡೆದಿತ್ತು. ಆದರೆ ಹಳಿ ತಪ್ಪಿರಲಿಲ್ಲ.

ದೇಶದ ಹಲವೆಡೆ ಪ್ಯಾಸೆಂಜರ್ ರೈಲುಗಳ ವಿಧ್ವಂಸಕ ಘಟನೆಗಳ ನಡುವೆ, ವಂದೇ ಭಾರತ್ ರೈಲಿನ ಕಿಟಕಿಯ ಗಾಜನ್ನು ಸುತ್ತಿಗೆಯಿಂದ ವ್ಯಕ್ತಿಯೊಬ್ಬ ಒಡೆದಿರುವ ವಿಡಿಯೋ ಇದೀಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಆದರೆ, ಈ ಘಟನೆ ಎಲ್ಲಿ ಮತ್ತು ಯಾವಾಗ ನಡೆದಿದೆ ಎಂಬುದು ಸದ್ಯಕ್ಕೆ ಸ್ಪಷ್ಟವಾಗಿಲ್ಲ. ಅನೇಕ ಟ್ವೀಟರ್‌ ಖಾತೆದಾರರು, ಆತನನ್ನು ಗುರುತಿಸಿ ಬಂಧಿಸುವಂತೆ ಆಗ್ರಹಿಸಿದ್ದಾರೆ. ಇದಕ್ಕೆ ರೈಲ್ವೆ ಇಲಾಖೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಹಳಿ ಮೇಲೆ ಸಿಲಿಂಡರ್, ಪೆಟ್ರೋಲ್ ಬಾಂಬ್ ಇರಿಸಿ ರೈಲು ಸ್ಪೋಟಕ್ಕೆ ಯುತ್ನ; ತಪ್ಪಿದ ಭಾರೀ ಅನಾಹುತ

Latest Videos
Follow Us:
Download App:
  • android
  • ios