ವಂದೇ ಭಾರತ್ ರೈಲನ್ನು ಗೂಡ್ಸ್‌ ರೈಲಿನ ಎಂಜಿನ್‌ನಿಂದ ಎಳೆಸಿದ್ರು: ವಿಡಿಯೋ ನೋಡಿ

ಎಂಜಿನ್‌ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡ ಕಾರಣ ವಂದೇ ಭಾರತ್ ಎಕ್ಸ್‌ಪ್ರೆಸ್‌ ರೈಲು ಉತ್ತರ ಪ್ರದೇಶದಲ್ಲಿ ಸ್ಥಗಿತಗೊಂಡಿದೆ. ಗೂಡ್ಸ್‌ ರೈಲಿನ ಎಂಜಿನ್‌ ಸಹಾಯದಿಂದ ರೈಲನ್ನು ಎಳೆದುಕೊಂಡು ಹೋಗಲಾಗಿದೆ. ಈ ರೈಲಿನಲ್ಲಿ ಸುಮಾರು 730 ಪ್ರಯಾಣಿಕರು ಪ್ರಯಾಣಿಸುತ್ತಿದ್ದರು.

Vande Bharat Express Train pulled by Goods railway engine mrq

ಲಖನೌ: ಎಂಜಿನ್‌ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡು ವಂದೇಭಾರತ ಎಕ್ಸ್‌ಪ್ರೆಸ್‌ ರೈಲು ಉತ್ತರ ಪ್ರದೇಶದ ಎಟಾ ಜಿಲ್ಲೆಯಲ್ಲಿ ನಿಲುಗಡೆ ಆಗಿದ್ದು, ಅದನ್ನು ಗೂಡ್ಸ್‌ ರೈಲಿನ ಎಂಜಿನ್‌ ಸಹಾಯದಿಂದ ಎಳೆಸಿದ ವಿಚಿತ್ರ ಪ್ರಸಂಗ ಸೋಮವಾರ ನಡೆದಿದೆ.

ದೆಹಲಿಯಿಂದ ವಾರಾಣಸಿಗೆ ತೆರಳುತ್ತಿದ್ದ ವಂದೇ ಭಾರತ್ ರೈಲಿನ ಎಂಜಿನ್‌ನಲ್ಲಿ ಬೆಳಿಗ್ಗೆ 9.15ರ ಸುಮಾರಿಗೆ ತಾಂತ್ರಿಕ ದೋಷ ಕಂಡುಬಂದಿದೆ. ಎಂಜಿನಿಯರ್‌ಗಳು ಸಮಸ್ಯೆಯನ್ನು ಪರಿಹರಿಸಲು ಪ್ರಯತ್ನಿಸಿದರೂ ಸಾಧ್ಯವಾಗಿಲ್ಲ. ಆದ್ದರಿಂದ 10.24ಕ್ಕೆ ಗೂಡ್ಸ್‌ ರೈಲಿನ ಎಂಜಿನ್‌ ಮುಖಾಂತರ ಭರ್ತಾನಾ ರೈಲು ನಿಲ್ದಾಣದ ವರೆಗೆ ಎಳೆದುಕೊಂಡು ಬರಲಾಗಿದೆ. ನಂತರ ಅನ್ಯ ರೈಲಲ್ಲಿ ಪ್ರಯಾಣಿಕರನ್ನು ಕಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ರೈಲಿನಲ್ಲಿ ಸುಮಾರು 730 ಪ್ರಯಾಣಿಕರು ಪ್ರಯಾಣಿಸುತ್ತಿದ್ದರು.

ಬೆಂಗಳೂರಿನ BEMLನಲ್ಲಿ ವಂದೇ ಭಾರತ್ ಸ್ಲೀಪರ್ ರೈಲು ಅನಾವರಣ

ಶೀಘ್ರದಲ್ಲಿಯೇ ಕರ್ನಾಟಕಕ್ಕೆ ಮತ್ತೊಂದು ವಂದೇ ಭಾರತ್

ರಾಜ್ಯಕ್ಕೆ ಮತ್ತೊಂದು ವಂದೇ ಭಾರತ್‌ ರೈಲು ಸೇವೆ ದೊರೆತ್ತಿದ್ದು, ಶೀಘ್ರದಲ್ಲಿಯೇ ಹುಬ್ಬಳ್ಳಿ-ಪುಣೆ ನಡುವೆ ಸಂಚಾರ ಆರಂಭಿಸಲಿದೆ. ಈ ಬಗ್ಗೆ ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ಅವರ ಮನವಿಗೆ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಒಪ್ಪಿಗೆ ಸೂಚಿಸಿದ್ದಾರೆ. ಹೊಸದಾಗಿ ಆರಂಭವಾಗಲಿರುವ ರೈಲು ಹುಬ್ಬಳ್ಳಿ, ಧಾರವಾಡ, ಬೆಳಗಾವಿ, ಮೀರಜ್, ಸಾಂಗ್ಲಿ, ಸತಾರಾ, ಪುಣೆಯಲ್ಲಿ ನಿಲುಗಡೆ ಆಗಲಿದೆ.

ಹುಬ್ಬಳ್ಳಿ-ಪುಣೆ ಮಧ್ಯೆ ಆದಷ್ಟು ಬೇಗ ವಂದೇ ಭಾರತ್‌ ರೈಲು ಸಂಚಾರ ಪ್ರಾರಂಭಿಸುವುದಾಗಿ ಅಶ್ವಿನಿ ವೈಷ್ಣವ್ ಅವರು ತಿಳಿಸಿದ್ದಾರೆಂದು ಜೋಶಿ ಅವರು ಎಕ್ಸ್‌ ಖಾತೆಯಲ್ಲಿ ಸೋಮವಾರ ಸಂತಸ ಹಂಚಿಕೊಂಡಿದ್ದಾರೆ. ಇದರಿಂದಾಗಿ ಛೋಟಾ ಮುಂಬೈ ಎಂದೇ ಖ್ಯಾತವಾದ ಹುಬ್ಬಳ್ಳಿ-ಪುಣೆ ನಡುವೆ ವಾಣಿಜ್ಯ ಚಟುವಟಿಕೆ ಹೆಚ್ಚಾಗಲಿದೆ. ಜತೆಗೆ ಉತ್ತರ ಕರ್ನಾಟಕದ ಜನರ ಪುಣೆ ಮತ್ತು ಮುಂಬೈ ಪ್ರಯಾಣ ಸುಗಮವಾಗಲಿದ್ದು, ಮಹಾರಾಷ್ಟ್ರದ ಮಂದಿಗೂ ಸಹಾಯವಾಗಲಿದೆ. ಕಳೆದ 2 ತಿಂಗಳ ಹಿಂದೆಯೇ ಜೋಶಿ ಅವರು ಅಶ್ವಿನಿ ವೈಷ್ಣವ್ ಅವರಿಗೆ ಪತ್ರ ಬರೆದು ಹುಬ್ಬಳ್ಳಿಯಿಂದ ಪುಣೆಗೆ ವಂದೇ ಭಾರತ್‌ ರೈಲು ಸೇವೆ ಆರಂಭಿಸುವಂತೆ ಮನವಿ ಮಾಡಿದ್ದರು.

ಇದು ರೈಲು ಸೀಟಿಗಾಗಿ ನಡೆದ ಜಗಳವಲ್ಲ, ವಂದೇ ಭಾರತ್ ಟ್ರೈನ್ ಓಡಿಸಲು ಲೋಕೋ ಪೈಲೆಟ್ಸ್ ಕಿತ್ತಾಟ!

Latest Videos
Follow Us:
Download App:
  • android
  • ios