Asianet Suvarna News Asianet Suvarna News

CDS Gen Bipin Rawat Chopper Crash: ಮುಂದಿನ ವಾರ ತನಿಖಾ ವರದಿ ಸಲ್ಲಿಕೆಯಾಗುವ ಸಾಧ್ಯತೆ

ಸಶಸ್ತ್ರ ಸೇನಾ ಪಡೆಗಳ ಮೊದಲ ಮುಖ್ಯಸ್ಥ ಜನರಲ್ ಬಿಪಿನ್‌ ರಾವತ್‌ ಸೇರಿದಂತೆ 13 ಮಂದಿಯ ಸಾವಿಗೆ ಕಾರಣವಾದ ಸೇನಾ ಹೆಲಿಕಾಪ್ಟರ್‌ ದುರ್ಘಟನೆ ತನಿಖಾ ವರದಿ ಮುಂದಿನ ವಾರ ಸಲ್ಲಿಕೆಯಾಗುವ ಸಾಧ್ಯತೆಯಿದೆ. 

CDS Gen Bipin Rawat chopper crash Probe report likely to be submitted next week gvd
Author
Bangalore, First Published Jan 2, 2022, 9:03 AM IST

ನವದೆಹಲಿ (ಜ.2): ಸಶಸ್ತ್ರ ಸೇನಾ ಪಡೆಗಳ ಮೊದಲ ಮುಖ್ಯಸ್ಥ ಜನರಲ್ ಬಿಪಿನ್‌ ರಾವತ್‌ (Gen Bipin Rawat) ಸೇರಿದಂತೆ 13 ಮಂದಿಯ ಸಾವಿಗೆ ಕಾರಣವಾದ ಸೇನಾ ಹೆಲಿಕಾಪ್ಟರ್‌ ದುರ್ಘಟನೆ ತನಿಖಾ ವರದಿ ಮುಂದಿನ ವಾರ ಸಲ್ಲಿಕೆಯಾಗುವ ಸಾಧ್ಯತೆಯಿದೆ. ಡಿ.8ರಂದು ತಮಿಳುನಾಡಿನ ಕುನೂರಿನಲ್ಲಿ ಸಂಭವಿಸಿದ್ದ ಸೇನಾ ಹೆಲಿಕಾಪ್ಟರ್‌ ದುರಂತದ (IAF Chopper Crash) ಬಗ್ಗೆ ಸೇನಾಪಡೆಗಳ 3 ವಿಭಾಗಗಳನ್ನು ತಜ್ಞರನ್ನು ಒಳಗೊಂಡ ಸಮಿತಿ ತನಿಖೆ ನಡೆಸಿತ್ತು. ಏರ್‌ ಮಾರ್ಷಲ್‌ ಮಾನವೇಂದ್ರ ಸಿಂಗ್‌ (Manavendra Singh) ಈ ತಂಡದ ನೇತೃತ್ವ ವಹಿಸಿದ್ದರು.

ಮನುಷ್ಯನಿಂದ ಆದ ತಪ್ಪುಗಳು, ಹೆಲಿಕಾಪ್ಟರ್‌ ಲ್ಯಾಂಡಿಂಗ್‌ ಆಗುವ ವೇಳೆ ಸಿಬ್ಬಂದಿ ಕಕ್ಕಾಬಿಕ್ಕಿಯಾಗಿದ್ದರೇ? ಎಂಬುದೂ ಸೇರಿದಂತೆ ಎಲ್ಲಾ ಆಯಾಮಗಳಲ್ಲೂ ತನಿಖೆ ಕೈಗೊಳ್ಳಲಾಗಿದ್ದು, ಅದರ ವರದಿ ಅಂತಿಮ ಘಟ್ಟದಲ್ಲಿದೆ. ಹೀಗಾಗಿ ಮುಂದಿನ ವಾರ ಎಲ್ಲಾ ಅಂಶಗಳನ್ನು ಒಳಗೊಂಡ ಬೃಹತ್‌ ಗಾತ್ರದ ತನಿಖಾ ವರದಿ ವಾಯುಪಡೆ ಮುಖ್ಯ ಕಚೇರಿಗೆ ಸಲ್ಲಿಕೆ ಆಗುವ ಸಾಧ್ಯತೆಯಿದೆ ಎನ್ನಲಾಗಿದೆ ಎಂದು ಮೂಲಗಳು ತಿಳಿಸಿವೆ.

ಬಯಲಾಯ್ತು ರಾವತ್ ಹೆಲಿಕಾಪ್ಟರ್ ದುರಂತದ ರಹಸ್ಯ: ಸಿಡಿಎಸ್‌ ಜನರಲ್‌ ಬಿಪಿನ್‌ ರಾವತ್‌, ಅವರ ಪತ್ನಿ ಮಧುಲಿಕಾ ರಾವತ್ ಸೇರಿ 14 ಮಂದಿ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ದುರಂತದ ತನಿಖೆಗಾಗಿ ರಚಿಸಲಾಗಿರುವ ತನಿಖಾ ಸಮಿತಿ ತನ್ನ ವರದಿಯನ್ನು ಶೀಘ್ರದಲ್ಲೇ ಸರ್ಕಾರಕ್ಕೆ ಸಲ್ಲಿಸುವ ಸಾಧ್ಯತೆಯಿದೆ. ಹೆಲಿಕಾಪ್ಟರ್ ಪತನಕ್ಕೆ ಕಾರಣ ತಿಳಿಯಲು ರಕ್ಷಣಾ ಸಚಿವಾಲಯ ತ್ರಿಸೇವಾ ತನಿಖೆಗೆ ಆದೇಶಿಸಿತ್ತು.

IAF Helicopter Crash: ಗ್ರೂಪ್ ಕ್ಯಾಪ್ಟನ್ ವರುಣ್ ಸಿಂಗ್ ನಿಧನ

ಹೌದು ಡಿಸೆಂಬರ್ 8 ರಂದು ಸೇನಾ ದಂಡನಾಯಕ ಬಿಪಿನ್ ರಾವತ್ ಪ್ರಯಾಣಿಸುತ್ತಿದ್ದ ಸೇನಾ ಹೆಲಿಕಾಪ್ಟರ್ ಪತನಗೊಂಡಿತ್ತು. ಈ ದುರಂತದಲ್ಲಿ ಚಾಪರ್‌ನಲ್ಲಿದ್ದ ಎಲ್ಲಾ ಪ್ರಯಾಣಿಕರು ಮೃತಪಟ್ಟಿದ್ದರು. ದುರಂತದ ಬಳಿಕ ಇದಕ್ಕೆ ಕಾರಣವೇನು ಎಂಬ ಪ್ರಶ್ನೆ ಹಲವರನ್ನು ಕಾಡಿತ್ತು. ಈ ಕಾರಣಕ್ಕಾಗಿಯೇ ಅಪಘಾತದ ಕಾರಣವನ್ನು ತನಿಖೆ ಮಾಡಲು ನ್ಯಾಯಾಲಯದ ವಿಚಾರಣೆ ಸ್ಥಾಪಿಸಲಾಗಿದೆ ಹಾಗೂ ಭಾರತೀಯ ವಾಯುಪಡೆಯ ತರಬೇತಿ ವಿಭಾಗದ ಕಮಾಂಡಿಂಗ್-ಇನ್-ಚೀಫ್ ಏರ್ ಮಾರ್ಷಲ್ ಮಾನವೇಂದ್ರ ಸಿಂಗ್ ನೇತೃತ್ವದಲ್ಲಿ ತನಿಖೆ, ವಿಚಾರಣೆ ನಡೆಸಲಾಗಿದೆ. IAF ನ Mi-17V5 ಪತನದ ಕಾರಣಕ್ಕೆ ಸಂಬಂಧಿಸಿದಂತೆ ಹಲವು ಪ್ರಶ್ನೆಗಳಿವೆ. 

ತನಿಖಾ ಸಮಿತಿಯು ಸೇನೆ ಮತ್ತು ಐಎಎಫ್ ಸಿಬ್ಬಂದಿಯ ಹೇಳಿಕೆಗಳನ್ನು ದಾಖಲಿಸಿಕೊಂಡಿದೆ. ಅಪಘಾತದ ಸ್ಥಳದ ಬಳಿ ಇದ್ದ ಸ್ಥಳೀಯರೊಂದಿಗೂ ಮಾತುಕತೆ ನಡೆಸಿ ಮಾಹಿತಿ ಪಡೆಯಲಾಗಿದೆ. ಅಪಘಾತಕ್ಕೂ ಮುನ್ನ ಹೆಲಿಕಾಪ್ಟರ್‌ ವಿಡಿಯೋ ರೆಕಾರ್ಡ್ ಆಗಿದ್ದ ಮೊಬೈಲ್ ಫೋನ್ ಅನ್ನು ಕೂಡ ಪರಿಶೀಲಿಸಲಾಗಿದೆ. ಅಲ್ಲದೇ ಬ್ಲ್ಯಾಕ್ ಬಾಕ್ಸ್ ಎಂದು ಸಾಮಾನ್ಯವಾಗಿ ಕರೆಯಲ್ಪಡುವ ಫ್ಲೈಟ್ ಡೇಟಾ ರೆಕಾರ್ಡ್ ಮಾಡಲಾಗಿದ್ದು, ಮಾಹಿತಿಯನ್ನು ವರದಿಯಲ್ಲಿ ಸೇರಿಸಲಾಗಿದೆ.

Vijay Parv: ಹುತಾತ್ಮ ಬಿಪಿನ್ ರಾವತ್ ಕೊನೇ ವಿಡಿಯೋ ವೈರಲ್, ಯೋಧರಿಗೆ ಕೊಟ್ಟಿದ್ರು ಸಂದೇಶ!

ಏರ್ ಸ್ಟಾಫ್ ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ವಿ.ಆರ್. ಚೌಧರಿ ಅವರು ಪ್ರಸ್ತುತ ನಾಲ್ಕು ದಿನ ದಕ್ಷಿಣ ಕೊರಿಯಾಗೆ ಭೇಟಿ ನೀಡಿ ಆಗಮಿಸಲಿದ್ದಾರೆ. ಅವರು ಮರಳಿ ಬಂದ ಬಳಿಕ ಸರ್ಕಾರಕ್ಕೆ ವರದಿ ಸಲ್ಲಿಸಲಾಗುತ್ತದೆ. CDS ಜನರಲ್ ಬಿಪಿನ್ ರಾವತ್ ಅವರು ಡಿಸೆಂಬರ್ 8 ರಂದು Mi-17V5 ಹೆಲಿಕಾಪ್ಟರ್‌ನಲ್ಲಿದ್ದರು, ಅದು ಸೂಲೂರ್ ವಾಯುನೆಲೆಯಿಂದ ಟೇಕ್ ಆಫ್ ಆಗಿದ್ದು, ವೆಲ್ಲಿಂಗ್ಟನ್‌ನಲ್ಲಿರುವ ಡಿಫೆನ್ಸ್ ಸರ್ವಿಸ್ ಸ್ಟಾಫ್ ಕಾಲೇಜ್ ಕಡೆಗೆ ಹೊರಟಿತ್ತು. ಹೆಲಿಕಾಪ್ಟರ್ ಕೂನೂರು ಪ್ರದೇಶದಲ್ಲಿ ಇಳಿಯುವ ಕೆಲವೇ ನಿಮಿಷಗಳ ಮೊದಲು ಪತನಗೊಂಡಿದ್ದು, ಜನರಲ್ ರಾವತ್, ಅವರ ಪತ್ನಿ ಮತ್ತು ಇತರ 12 ಸೇನಾ ಸಿಬ್ಬಂದಿಯನ್ನು ಬಲಿ ತೆಗೆದುಕೊಂಡಿತ್ತು.

Follow Us:
Download App:
  • android
  • ios