ನವದೆಹಲಿ (ಜು. 13): ರೈಲ್ವೆ ಪ್ರಯಾಣವನ್ನು ಇನ್ನಷ್ಟು ಹೆಚ್ಚು ಸುರಕ್ಷಿತ ಹಾಗೂ ಆರಾಮದಾಯಕ ಮಾಡಲು ರೈಲ್ವೆ ಉದ್ಯೋಗಿಗಳೇ ಸಿದ್ಧಪಡಿಸಿದ 20 ಹೊಸ ಪರಿಕಲ್ಪನೆಗಳನ್ನು ಅಳವಡಿಸಿಕೊಳ್ಳಲು ರೈಲ್ವೆ ಮಂಡಳಿ ತೀರ್ಮಾನಿಸಿದೆ.

ರೈಲು ಹೊರಡುವ ಸಂಕೇತವಾಗಿ, ಅದು ಹೊರಡುವ ಕೆಲ ನಿಮಿಷ ಮುನ್ನ ಗಂಟೆ ಮೊಳಗುವುದು, ಕೋಚ್‌ಗಳಲ್ಲಿ ಸಿಸಿಟೀವಿ ಅಳವಡಿಸಿ, ಅದರ ದೃಶ್ಯಗಳನ್ನು ದೃಶ್ಯ ಕಂಟ್ರೋಲ್‌ ರೂಮ್‌ನಲ್ಲಿ ನೇರಪ್ರಸಾರ ಮಾಡುವುದು, ಮೊಬೈಲ್‌ ಫೋನ್‌ನಲ್ಲಿನ ಆ್ಯಪ್‌ ಮೂಲಕವೇ ಕಾಯ್ದಿರಿಸದ (ಎನ್‌ರಿಸವ್‌್ರ್ಡ) ಟಿಕೆಟ್‌ ಮುದ್ರಣ- ಇತ್ಯಾದಿ ನವೀನ ತಂತ್ರಜ್ಞಾನಗಳು ಜಾರಿಗೆ ಬರಲಿವೆ.

ಖಾಸಗಿ ರೈಲು ಓಡಿಸಲು ದಿಗ್ಗಜ ಕಂಪನಿಗಳ ಆಸಕ್ತಿ

ವಿನೂತನ ಪರಿಕಲ್ಪನೆಗಳನ್ನು ಉದ್ಯೋಗಿಗಳು ನೀಡಬಹುದು ಎಂದು 2018ರಲ್ಲೇ ರೈಲ್ವೆ ಇಲಾಖೆ ವೆಬ್‌ಸೈಟ್‌ನಲ್ಲಿ ತನ್ನ ಉದ್ಯೋಗಿಗಳಿಗೆ ಆಹ್ವಾನ ನೀಡಿತ್ತು. ಸೆಪ್ಟೆಂಬರ್‌ 2018ರಿಂದ ಡಿಸೆಂಬರ್‌ 2019ರವರೆಗೆ 2645 ಪರಿಕಲ್ಪನೆಗಳನ್ನು ಉದ್ಯೋಗಿಗಳು ವೆಬ್‌ಸೈಟ್‌ಗೆ ಅಪ್‌ಲೋಡ್‌ ಮಾಡಿದ್ದರು. ಇವುಗಳನ್ನು ಪರಾಮರ್ಶಿಸಿ ಅಂತಿಮವಾಗಿ 20 ನವೀನ ಪರಿಕಲ್ಪನೆಗಳನ್ನು ಅಳವಡಿಸಿಕೊಳ್ಳಲು ರೈಲ್ವೆ ಮಂಡಳಿ ತೀರ್ಮಾನಿಸಿದೆ. ಈ ಬಗ್ಗೆ ಎಲ್ಲ ವಲಯಗಳ ರೈಲ್ವೆ ಮ್ಯಾನೇಜರ್‌ಗಳಿಗೆ ಆದೇಶ ನೀಡಲಾಗಿದ್ದು, 3 ತಿಂಗಳಲ್ಲಿ ಜಾರಿಗೆ ಸೂಚಿಸಲಾಗಿದೆ.

News In 100 Seconds | ಈ ಕ್ಷಣದ ಪ್ರಮುಖ ಹೆಡ್‌ಲೈನ್ಸ್

"