CBSE 12thನೇ ತರಗತಿ ಪರೀಕ್ಷೆ ರದ್ದು: ಪೋಷಕರು, ಶಿಕ್ಷಕರಿಗೆ ಮೋದಿ ರಿಪ್ಲೈ!

* ಸಿಬಿಎಸ್‌ಇ, 12ನೇ ತರಗತಿ ಪರೀಕ್ಷೆ ರದ್ದು

* ಪರೀಕ್ಷೆ ರದ್ದುಗೊಂಡ ಬೆನ್ನಲ್ಲೇ ಟ್ವೀಟ್ ಮಾಡಿ ಮೋದಿಗೆ ಧನ್ಯವಾದ ಎಂದ ಹೆತ್ತವರು ಹಾಗೂ ಶಿಕ್ಷಕರು

* ಈ ಟ್ವೀಟ್‌ಗೆ ಖುದ್ದು ಮೋದಿಯಿಂದ ರಿಪ್ಲೈ

CBSE Class 12 exams cancelled Modi Replies to Parents and Teachers Tweet pod

ನವದೆಹಲಿ(ಜೂ.01): ಕೊರೋನಾ ಎರಡನೇ ಅಲೆ ದೇಶದ ಮೇಲೆ ತನ್ನ ವಕ್ರದೃಷ್ಟಿ ಬೀರಿದೆ. ಇದರಿಂದ ಮಕ್ಕಳ ಶಿಕ್ಷಣದ ಮೇಲೆ ಕೆಟ್ಟ ಪ್ರಭಾವ ಬಿದ್ದಿದೆ. ಆದರೆ ಭವಿಷ್ಯವನ್ನು ಸುಭದ್ರಗೊಳಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಈ ಬಾರಿ ಸಿಬಿಎಸ್‌ಇ ಹಾಗೂ 12ನೇ ತರಗತಿ ಪರೀಕ್ಷೆಯನ್ನು ರದ್ದುಗೊಳಿಸಿದೆ. ಸರ್ಕಾರದ ಈ ನಿರ್ಧಾರ ಪೋಷಕರು ಹಾಗೂ ಶಿಕ್ಷಕರಿಗೆ ಕೊಂಚ ನೆಮ್ಮದಿ ನೀಡಿದೆ. ದೇಶದೆಲ್ಲೆಡೆಯಿಂದ ಈ ವಿಚಾರವಾಗಿ ಪಿಎಂ ಮೋದಿಯನ್ನು ಟ್ಯಾಗ್‌ ಮಾಡಿ ಟ್ವೀಟ್ ಮಾಡಲಾಗುತ್ತಿದೆ. ಈ ನಿರ್ಧಾರ ಸರಿ ಎಂದುಇ ಅನೇಕ ಮಂದಿ ಹೇಳುತ್ತಿದ್ದಾರೆ. ಹೀಗಿರುವಾಗ ಪ್ರಧಾನಿ ಮೋದಿ ಖುದ್ದು ಕೆಲ ಟ್ವೀಟ್‌ಗಳಿಗೆ ಉತ್ತರಿಸಿದ್ದಾರೆ.

CBSE 12ನೇ ಕ್ಲಾಸ್ ಪರೀಕ್ಷೆ ರದ್ದು: ವಿದ್ಯಾರ್ಥಿಗಳ ಆರೋಗ್ಯವೇ ಮುಖ್ಯ ಎಂದ ಪ್ರಧಾನಿ!

ಮಕ್ಕಳ ಆರೋಗ್ಯ ಹಾಗೂ ಕಲ್ಯಾಣವೇ ಪ್ರಾಥಮಿಕತೆ

ಕೇಂದ್ರದ ಈ ನಿರ್ಧಾರದ ಬಗ್ಗೆ ಜ್ಯೋತಿ ಅರೋರಾ ಎಂಬವರು ಟ್ವೀಟ್ ಮಾಡಿದ್ದು, ಮಕ್ಕಳ ದೈಹಿಕ ಹಾಗೂ ಮಾನಸಿಕ ಆರೋಗ್ಯ ಪರಿಗಣಿಸಿ ಸರ್ಕಾರದ ಈ ನಿರ್ಧಾರ ಸರಿಯಾಗಿದೆ ಎಂದಿದ್ದಾರೆ. ಈ ಟ್ವೀಟ್‌ಗೆ ರಿಪ್ಲೈ ಮಾಡಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿ ಮಕ್ಕಳ ಆರೋಗ್ಯ ಹಾಗೂ ಕಲ್ಯಾಣವೇ ಮೊದಲ ಆದ್ಯತೆ ಎಂದಿದ್ದಾರೆ.

ಶಿಕ್ಷಕರಾಗಿರುವ ಸರಬ್ಜೀತ್‌ ಎಂಬವರೂ ಟ್ವೀಟ್ ಮಾಡಿದ್ದು, ಶಿಕ್ಷಕನಾಗಿ ನಾನು ಸಿಬಿಎಸ್‌ಇ ಹಾಗೂ ಹನ್ನೆರಡನೇ ತರಗತಿ ಪರೀಕ್ಷೆಯನ್ನು ರದ್ದುಗೊಳಿಸಿದ್ದಕ್ಕೆ ಪ್ರಧಾನಿ ಮೋದಿಗೆ ಧನ್ಯವಾದ ಹೇಳುತ್ತೇನೆ. ನೀವು ಸದ್ಗುಣಶೀಲ ವ್ಯಕ್ತಿ. ಮತ್ತೊಮ್ಮೆ ಧನ್ಯವಾದಗಳು ಎಂದಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಮೋದಿ ಕಳೆದ ವರ್ಷ ಶಿಕ್ಷಕ ಸಮುದಾಯ ಉತ್ಕೃಷ್ಟ ಪಾತ್ರ ನಿಭಾಯಿಸಿದೆ. ವಿದ್ಯಾರ್ಥಿಗಳಿಗೆ ಸಹಯೋಗ ನೀಡಿದ್ದಕ್ಕೆ ಹಾಗೂ ಶೈಕ್ಷಣಿಕ ಚಟುವಟಿಕೆ ಮುಂದುವರೆಸಿದ್ದಕ್ಕೆ ನಿಮಗೆ ಧನ್ಯವಾದಗಳು ಎಂದಿದ್ದಾರೆ.

ಇನ್ನು ವಿದ್ಯಾರ್ಥಿಯೊಬ್ಬರ ಪೋಷಕರಾಗಿರುವ ವೆಂಕಟರಂಗನ್ ಟ್ವೀಟ್‌ ಮಾಡುತ್ತಾ, ವಿದ್ಯಾರ್ಥಿಯ ಹೆತ್ತವನಾಗಿ ನಾನು ಪ್ರಧಾನಿ ಮೋದಿ ಪರೀಕ್ಷೆ ರದ್ದುಗೊಳೀಸಿರುವ ನಿರ್ಧಾರದಿಂದ ಖುಚಷಿಯಾಗಿದ್ದೇನೆ. ಇದರಿಂದ ನಿರಾಳಗೊಂಡಿದ್ದೇನೆ. ಮಕ್ಕಳ ಜೀವನವನ್ನು ಅಪಾಯದಿಂದ ಕಾಪಾಡಲು ಹಾಗೂ ಮಕ್ಕಳನ್ನು ಮಾನಸಿಕ ಒತ್ತಡದಿಂದ ದೂರ ಮಾಡಲು ಇರುವ ಮಾರ್ಗ ಇದೊಂದೇ ಎಂದಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಮೋದಿ, ಇದು ನಮ್ಮ ಪಾಳಿಗೆ ಅರಾಜಕ ವರ್ಷವಾಗಿದೆ. ಭಾಗಶಃ ನಮ್ಮ ಸಂತೋಷ ಹಾಳಾಗಿವೆ. ಮನೆಯಲ್ಲೇ ಉಳಿದುಕೊಳ್ಳಬೇಕಾಯ್ತು, ಗೆಳೆಯರನ್ನು ಭೇಟಿಯಾಗುವ ಅವಕಾಶವೂ ಇಲ್ಲದಂತಾಗಿದೆ.

CBSE 12ನೇ ಕ್ಲಾಸ್ ಪರೀಕ್ಷೆ ರದ್ದು ಬೆನ್ನಲ್ಲೇ ಪಿಯುಸಿ ಎಕ್ಸಾಂ ಬಗ್ಗೆ ಪ್ರತಿಕ್ರಿಯಿಸಿದ ಸಚಿವ

ನೀಲಮಣಿ ಸಿಂಗ್ ಪಿಎಂ ಮೋದಿಗೆ ಟ್ಯಾಗ್ ಮಾಡಿ ಟ್ವೀಟ್ ಮಾಡಿದ್ದು, ಓರ್ವ ತಂದೆ-ತಾಯಿಯ ಸ್ಥಾನದಲ್ಲಿ ನಿಂತು ನಮ್ಮ ನೋವು, ಸಂವೇದನಾಶೀಲತೆ ಹಾಗೂ ಸಹಾನುಭೂತಿಯನ್ನು ಅರಿತು ನಮ್ಮ ಅತ್ಯಮೂಲ್ಯ ಸಂಪತ್ತು(ಮಕ್ಕಳ) ಬಗ್ಗೆ ಯೋಚಿಸಿದಿರಿ. ಇದಕ್ಕೆ ನಾವು ನಿಮಗೆ ಋಣಿ ಎಂದಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಪ್ರಧಾನಿ ಮೋದಿ ಪರೀಕ್ಷೆಯನ್ನು ರದ್ದುಗೊಳಿಸುವ ನಿರ್ಧಾರ ಇಡೀ ದೇಶದಿಂದ ಲಭ್ಯವಾದ ಡೇಟಾ ಹಾಗೂ ವ್ಯಾಪಕ ವಿಮರ್ಶೆ ನಡೆಸಿ ತೆಗೆದುಕೊಳ್ಳಲಾಗಿದೆ. ಇದು ವಿದ್ಯಾರ್ಥಿಗಳ ಹಿತ ಕಾಪಾಡಲು ತೆಗೆದುಕೊಳ್ಳಲಾಗಿದೆ ಎಂದಿದ್ದಾರೆ.

ಸಿಬಿಎಸ್‌ಇ ಪರೀಕ್ಷೆ ರದ್ದು

ದೇಶಾ​ದ್ಯಂತ 2ನೇ ಅಲೆಯ ಕೋವಿಡ್‌ ಅಬ್ಬರ ಇನ್ನೂ ಪೂರ್ಣವಾಗಿ ಇಳಿ​ಕೆ​ಯಾ​ಗದ ಕಾರಣ ಸಿಬಿಎಸ್‌ಇ ಹಾಗೂ ಐಸಿಎಸ್‌ಇ 12ನೇ ತರಗತಿ ಪರೀಕ್ಷೆಗಳನ್ನು ರದ್ದುಗೊಳಿಸಲು ಮಂಗಳವಾರ ನಿರ್ಧರಿಸಲಾಗಿದೆ.

ಸಿಬಿಎಸ್‌ಇ 12ನೇ ತರಗತಿ ಪರೀಕ್ಷೆ ರದ್ದುಪಡಿಸುವ ನಿರ್ಧಾರವನ್ನು ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ನಿರ್ಧರಿಸಲಾಯಿತು. ಕೆಲವು ನಿಮಿಷಗಳ ಬಳಿಕ ಐಸಿಎಸ್‌ಇ ಮಂಡಳಿ ಕೂಡ ಅದೇ ಹಾದಿ ಹಿಡಿಯಿತು.

‘ವಿದ್ಯಾ​ರ್ಥಿ​ಗಳ ಹಿತಾ​ಸಕ್ತಿ, ಪರೀಕ್ಷೆ ನಡೆ​ಯು​ತ್ತ​ವೆಯೇ ಇಲ್ಲವೇ ಎಂಬ ಬಗ್ಗೆ ವಿದ್ಯಾ​ರ್ಥಿ​ಗಳ ಪೋಷ​ಕರು ಹಾಗೂ ಶಿಕ್ಷ​ಕರಲ್ಲಿ ಉಂಟಾ​ಗಿ​ರುವ ಗೊಂದಲ ಹಾಗೂ ಆತಂಕ ಕೊನೆ​ಗಾ​ಣಿ​ಸಲು ಈ ತೀರ್ಮಾನ ಕೈಗೊ​ಳ್ಳ​ಲಾ​ಗಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿ​ದ್ದಾರೆ. ಈ ನಿರ್ಧಾರವನ್ನು ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಹಾಗೂ ಪೋಷಕ ವರ್ಗದವರು ಸ್ವಾಗತಿಸಿದ್ದಾರೆ.

ದ್ವಿತೀಯ ಪಿಯು ಪರೀಕ್ಷೆಯ ಮೆಗಾ ಆನ್‌ಲೈನ್ ಸರ್ವೆ : ಜನಾಭಿಪ್ರಾಯವೇನು..?

ಸುರಕ್ಷತೆ ವಿಚಾರದಲ್ಲಿ ರಾಜಿ ಇಲ್ಲ- ಮೋದಿ:

12ನೇ ತರ​ಗತಿ ಪರೀ​ಕ್ಷೆ​ಗ​ಳನ್ನು ನಡೆಸ​ಬೇಕೇ ಅಥವಾ ಬೇಡವೇ ಎಂಬು​ದರ ಕುರಿ​ತಾಗಿ ಮಂಗ​ಳ​ವಾರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಉನ್ನತ ಮಟ್ಟದ ಸಭೆ ನಡೆಸಲಾಯಿತು. ಬಳಿಕ ಮಾತ​ನಾ​ಡಿದ ಅವರು, ‘ವಿದ್ಯಾ​ರ್ಥಿ​ಗಳ ಹಿತಾ​ಸಕ್ತಿ ಮೇರೆಗೆ 12ನೇ ತರ​ಗ​ತಿಯ ಅಂತಿಮ ಪರೀ​ಕ್ಷೆ​ಗ​ಳನ್ನು ರದ್ದು​ಗೊ​ಳಿ​ಸಲು ನಿರ್ಧ​ರಿ​ಸ​ಲಾ​ಗಿದೆ. ಬಹು ಮುಖ್ಯ​ವಾದ ವಿದ್ಯಾ​ರ್ಥಿ​ಗಳ ಆರೋಗ್ಯ ಮತ್ತು ಸುರಕ್ಷ​ತೆಯ ವಿಚಾ​ರ​ದಲ್ಲಿ ಯಾವುದೇ ಕಾರ​ಣಕ್ಕೂ ರಾಜಿ ಮಾಡಿ​ಕೊ​ಳ್ಳ​ಲಾ​ಗದು’ ಎಂದರು.

‘ಕೆಲ ರಾಜ್ಯ​ಗ​ಳಲ್ಲಿ ಸೋಂಕು ಗಣ​ನೀಯ ಪ್ರಮಾ​ಣ​ದಲ್ಲಿ ಇಳಿ​ಕೆ​ಯಾ​ಗು​ತ್ತಿದೆ. ಆದಾಗ್ಯೂ ಮತ್ತೆ ಕೆಲ ರಾಜ್ಯ​ಗ​ಳಲ್ಲಿ ಸೋಂಕು ನಿಯಂತ್ರ​ಣಕ್ಕೆ ಸ್ಥಳೀಯ ಮಟ್ಟದ ಕಂಟೈ​ನ್‌​ಮೆಂಟ್‌, ಕಫä್ರ್ಯ ಹೇರ​ಲಾ​ಗಿದೆ. ಜೊತೆಗೆ ಇನ್ನೂ ಕೆಲ ರಾಜ್ಯ​ಗ​ಳಲ್ಲಿ ಲಾಕ್‌​ಡೌನ್‌ ಹೇರ​ಲಾ​ಗಿದೆ. ಇಂಥ ಸಂದಿಗ್ಧ ಪರಿ​ಸ್ಥಿ​ತಿ​ಯಲ್ಲಿ ಪರೀಕ್ಷೆ​ಗ​ಳನ್ನು ಎದು​ರಿ​ಸ​ಲೇ​ಬೇಕು ಎಂದು ವಿದ್ಯಾ​ರ್ಥಿ​ಗ​ಳಿಗೆ ಒತ್ತಡ ಹೇರ​ಬಾ​ರದು. ಅಲ್ಲದೆ ಪರೀಕ್ಷೆ ನಡೆಯ​ಲಿ​ವೆಯೇ ಅಥವಾ ಇಲ್ಲವೇ ಎಂಬ ವಿದ್ಯಾ​ರ್ಥಿ​ಗಳು, ಪೋಷ​ಕರು ಮತ್ತು ಶಿಕ್ಷ​ಕರ ಆತಂಕ​ಗ​ಳನ್ನು ದೂರ ಮಾಡ​ಬೇ​ಕಿದೆ. ವಸ್ತು​ನಿಷ್ಠ ಮಾನ​ದಂಡ​ಗ​ಳನ್ನು ಅನು​ಸ​ರಿಸಿ ಸಮ​ಯಕ್ಕೆ ಸರಿ​ಯಾಗಿ ವಿದ್ಯಾ​ರ್ಥಿ​ಗಳ ಫಲಿ​ತಾಂಶ​ ಪ್ರಕ​ಟಿ​ಸ​ಲು ಸಿಬಿ​ಎ​ಸ್‌ಇ ಕ್ರಮ ಕೈಗೊ​ಳ್ಳ​ಲಿದೆ’ ಎಂದು ಹೇಳಿ​ದರು.

ಈ ಸಭೆ​ಯಲ್ಲಿ ಶಿಕ್ಷ​ಣ ತಜ್ಞರು, ರಾಜ್ಯ​ಗಳ ಪ್ರತಿ​ನಿ​ಧಿ​ಗ​ಳು, ಕೇಂದ್ರದ ಉನ್ನ​ತ ಅಧಿ​ಕಾ​ರಿ​ಗಳು ಸೇರಿ​ದಂತೆ ಶಿಕ್ಷ​ಣಕ್ಕೆ ಸಂಬಂಧಿ​ಸಿದ ಇನ್ನಿ​ತ​ರರು ಇದ್ದರು. ​ಹಲವು ಹಂತದ ಮಾತು​ಕ​ತೆ​ಗಳ ಮೂಲಕ ಪ​ರೀ​ಕ್ಷೆ​ಗ​ಳನ್ನು ರದ್ದು​ಗೊ​ಳಿ​ಸುವ ವಿದ್ಯಾರ್ಥಿ ಸ್ನೇಹಿ ನಿರ್ಧಾರಕ್ಕೆ ಒಪ್ಪಿದ ರಾಜ್ಯ​ಗಳು ಮತ್ತು ಶಿಕ್ಷಣ ತಜ್ಞರ ಕಾರ್ಯ​ವೈ​ಖ​ರಿಗೆ ಪ್ರಧಾನಿ ಮೋದಿ ಮೆಚ್ಚುಗೆ ವ್ಯಕ್ತ​ಪ​ಡಿ​ಸಿ​ದರು.

ಐಸಿಎಸ್‌ಇ ಮಾನದಂಡ ಶೀಘ್ರ ಪ್ರಕಟ:

ಮೋದಿ ಘೋಷಣೆ ಬೆನ್ನಲ್ಲೇ ಮಾತನಾಡಿದ ಐಸಿಎಸ್‌ಇ ಕಾರ‍್ಯದರ್ಶಿ ಜೆರ್ರಿ ಅರಥೂನ್‌, ‘ಐಸಿಎಸ್‌ಇ 12ನೇ ತರಗತಿ ಪರೀಕ್ಷೆ ರದ್ದುಗೊಳಿಸಲಾಗಿದೆ. ಫಲಿತಾಂಶದ ಮಾನದಂಡಗಳನ್ನು ಶೀಘ್ರ ಪ್ರಕಟಿಸಲಾಗುತ್ತದೆ’ ಎಂದರು.

Latest Videos
Follow Us:
Download App:
  • android
  • ios