ಮಂಗಳೂರು (ಜೂ.02):  ರಾಜ್ಯದಲ್ಲಿ ಕೋವಿಡ್ ಹಾವಳಿ ಹೆಚ್ಚಿದ್ದು, ಈ ನಿಟ್ಟಿನಲ್ಲಿ  ದ್ವಿತೀಯ ಪಿಯು ಪರೀಕ್ಷೆ ನಡೆಸಬೇಕೆ ಬೇಡವೇ ಎಂಬ ಬಗ್ಗೆ ಕರಾವಳಿಯಲ್ಲಿ ಮೆಗಾ ಆನ್ ಲೈನ್ ಸರ್ವೇ ಮಾಡಲಾಗಿದೆ. ದಕ್ಷಿಣ ಕನ್ನಡ ಜಿಲ್ಲಾ ಪದವಿ ಪೂರ್ವ ಕಾಲೇಜುಗಳ ಪ್ರಾಚಾರ್ಯರ ಸಂಘದಿಂದ ಮೆಗಾ ಸರ್ವೇ ಮಾಡಲಾಗಿದೆ. 

ಜನರವಾಣಿ ಎಂಬ ಖಾಸಗಿ ಸಂಸ್ಥೆ ಮೂಲಕ ಆನ್ ಲೈನ್ ಸರ್ವೇ ನಡೆಸಿದ್ದು,  ಪಿಯುಸಿ ಪರೀಕ್ಷೆ ಬೇಕೋ? ಬೇಡವೋ ಎಂಬ ಬಗ್ಗೆ ಆನ್ ಲೈನ್ ಸರ್ವೇ ನಡೆಸಲಾಗಿದೆ.  ಸರ್ವೇ ಆರಂಭವಾದ ಎರಡೇ ದಿನದಲ್ಲಿ ಹತ್ತು ಸಾವಿರ ಜನರು ಸರ್ವೆಯಲ್ಲಿ ಭಾಗಿಯಾಗಿದ್ದಾರೆ.  73% ವಿದ್ಯಾರ್ಥಿಗಳು, 8% ಪ್ರಾಚಾರ್ಯರು, 14% ಪೋಷಕರು ಮತ್ತು ಇತರರು ಸರ್ವೆಯಲ್ಲಿ  ಪಾಲ್ಗೊಂಡಿದ್ದಾರೆ. 

ರಾಜ್ಯದಲ್ಲೂ ಪಿಯು, ಎಸ್‌ಎಸ್‌ಎಲ್‌ಸಿ ಪರೀಕ್ಷೆ ರದ್ದಾಗುತ್ತಾ.?

ಹತ್ತು ಸಾವಿರ ಜನರಲ್ಲಿ 52% ಜನರಿಗೆ ಪರೀಕ್ಷೆ ಬೇಡ, 48% ಜನರಿಂದ ಬೇಕು ಅನ್ನೋ ಅಭಿಪ್ರಾಯ ಸಂಗ್ರಹವಾಗಿದೆ. ಸಮೀಕ್ಷೆಯಲ್ಲಿ ಪರೀಕ್ಷೆ ಕುರಿತು ಕೇಳಲಾದ ಏಳು ಪ್ರಶ್ನೆಗಳಿಗೆ ವಿಭಿನ್ನ ಉತ್ತರ ದೊರಕಿದೆ.  47% ಜನರಿಂದ ಕಲಿಯುತ್ತಿರುವ ಕಾಲೇಜು ಮಟ್ಟದಲ್ಲೇ ಪರೀಕ್ಷೆ ನಡೆಸಲು ಅಭಿಪ್ರಾಯ ವ್ಯಕ್ತವಾಗಿದೆ.

42% ಜನರಿಂದ 50 ಅಂಕದ ಸಾಂಪ್ರಾದಾಯಿಕ ಪರೀಕ್ಷೆ(1 ಗಂಟೆ 40 ನಿ.) ನಡೆಸಲು ಅಭಿಪ್ರಾಯ ವ್ಯಕ್ತಪಡಿಸಿದ್ದು,  70%  ಜನರು ಆಯಾ ಕಾಲೇಜುಗಳಲ್ಲೇ ಪರೀಕ್ಷೆ ನಡೆಸಲು ಒತ್ತಾಯಿಸಿದ್ದಾರೆ.  81% ಜನರು ಪರೀಕ್ಷೆಗೂ ಮುನ್ನ question bank ಕೊಡಲು ಓಟಿಂಗ್ ಮಾಡಿದ್ದಾರೆ.

CBSE 12ನೇ ಕ್ಲಾಸ್ ಪರೀಕ್ಷೆ ರದ್ದು: ವಿದ್ಯಾರ್ಥಿಗಳ ಆರೋಗ್ಯವೇ ಮುಖ್ಯ ಎಂದ ಪ್ರಧಾನಿ! ..

ಸದ್ಯ ರಾಜ್ಯದಲ್ಲಿ ಪರೀಕ್ಷೆ ನಡೆಸುವ ವಿಧಾನದ ಬಗ್ಗೆ ಸರ್ಕಾರದಲ್ಲಿಯೇ ಗೊಂದಲವಿದೆ. ಇದೀಗ ಈ ಸರ್ವೆ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲು   ದಕ್ಷಿಣ ಕನ್ನಡ ಜಿಲ್ಲಾ ಪಿಯು ಪ್ರಾಚಾರ್ಯರ ಸಂಘ ನಿರ್ಧರಿಸಿದೆ. 

ಇನ್ನು ಈಗಾಗಲೇ ಸಿಬಿಎಸ್‌ಇ ದ್ವಿತೀಯ ಪಿಯು ಪರೀಕ್ಷೆಗಳನ್ನು ರದ್ದು ಮಾಡಲಾಗಿದೆ. ವಿದ್ಯಾರ್ಥಿಗಳ ಕ್ಷೇಮವೇ ಮುಖ್ಯವೆಂದು ಮಹತ್ವದ ನಿರ್ಧಾರ ಮಾಡಲಾಗಿದೆ. 

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona