ನವದೆಹಲಿ(ನ.19):  ರಾಜ್ಯ ಸರ್ಕಾರದ ಸಮ್ಮತಿ ಇಲ್ಲದೆ CBI ಯಾವುದೇ ರಾಜ್ಯದಲ್ಲಿ ತನಿಖೆ ನಡೆಸಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟವಾಗಿ ಹೇಳಿದೆ. ಯಾವುದೇ ರಾಜ್ಯದಲ್ಲಿ ಸಿಬಿಐ ತನಿಖೆಗೆ ಆಯಾ ರಾಜ್ಯದ ಒಪ್ಪಿಗೆ ಅಗತ್ಯ. ಈ ವಿಚಾರದಲ್ಲಿ ಕೇಂದ್ರ ಸರ್ಕಾರ ನಿರ್ಧಾರ ತೆಗದುಕೊಳ್ಳುವಂತಿಲ್ಲ ಎಂದು ಸುಪ್ರೀಂ ಹೇಳಿದೆ.

ಡಿಕೆಶಿ ಮೇಲೆ ಸಿಬಿಐ ದಾಳಿ ಬಿಜೆಪಿ ಪ್ರಚೋದಿತ ಆರೋಪಕ್ಕೆ ಈಶ್ವರಪ್ಪ ಕೊಟ್ಟ ಸ್ಪಷ್ಟನೆ.

ಉತ್ತರ ಪ್ರದೇಶದಲ್ಲಿ ಭ್ರಷ್ಟಾಚಾರ ಪ್ರಕರಣದಲ್ಲಿ ಸಿಲುಕಿದ ಅಧಿಕಾರಿಗಳು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಈ ಮಹತ್ವದ ಆದೇಶ ನೀಡಿದೆ.  ಕಾನೂನಿನ ಪ್ರಕಾರ ರಾಜ್ಯದ ಒಪ್ಪಿಗೆ ಇಲ್ಲದೆ ಕೇಂದ್ರ ಸರ್ಕಾರ ಸಿಬಿಐ ಅಧಿಕಾರ ವ್ಯಾಪ್ತಿಯನ್ನು ವಿಸ್ತರಿಸಲು ಸಾಧ್ಯವಿಲ್ಲ. ಸಂವಿಧಾನದ ಅಧಿಕಾರ ವಿಕೇಂದ್ರಿಕರಣ ನಿಯಮಕ್ಕೆ ಬದ್ಧವಾಗಿದೆ ಎಂದು ಸುಪ್ರೀಂ ಹೇಳಿದೆ.

ಡಿಕೆಶಿ ಮೇಲೆ ಸಿಬಿಐ ದಾಳಿಗೇನು ಕಾರಣ ಗೊತ್ತಾ?...

ಸುಪ್ರೀಂ ಕೋರ್ಟ್ ನೀಡಿದ ತೀರ್ಪು ಅಧಿಕಾರದ ಚುಕ್ಕಾಣಿ ಹಿಡಿದಿರುವ ಬಿಜೆಪಿಯೇತರ ರಾಜ್ಯಗಳಿಗೆ ಮಹತ್ವದ್ದಾಗಿದೆ. ರಾಜಸ್ಥಾನ, ಪಶ್ಮಿಮ ಬಂಗಾಳ, ರಾಜಸ್ಥಾನ, ಮಹಾರಾಷ್ಟ್ರ, ಚತ್ತೀಸ್‌ಘಡ, ಪಂಜಾಬ್, ಮಿಜೋರಾಮ್, ಕೇರಳ ರಾಜ್ಯಗಳ ಒಪ್ಪಿಗೆ ಇಲ್ಲದೆ ಇದೀಗ ಕೇಂದ್ರ ಸರ್ಕಾರ CBI ತನಿಖೆ ನಡೆಸುವುದು ಕಷ್ಟವಾಗಿದೆ. ಇನ್ನುಳಿದ ರಾಜ್ಯಗಳಲ್ಲಿ ಬಿಜೆಪಿ ಅಧಿಕಾರ ಹೊಂದಿರುವ ಕಾರಣ ಕೇಂದ್ರಕ್ಕೆ ಈ ಸಮಸ್ಯೆ ಎದುರಾಗುವುದಿಲ್ಲ.

ಕೇಂದ್ರಾಡಳಿತ ಪ್ರದೇಶವನ್ನು ಮೀರಿ, ಕೇಂದ್ರ ಸರ್ಕಾರ ರಾಜ್ಯದ ಮೇಲೆ ಸಿಬಿಐ ಅಧಿಕಾರ ಹಾಗೂ ನ್ಯಾಯವ್ಯಾಪ್ತಿಯನ್ನು ವಿಸ್ತರಿಸಿದರೆ, ಅದಕ್ಕೆ ರಾಜ್ಯದ ಒಪ್ಪಿಗೆ ಇಲ್ಲದಿದ್ದರೆ ಆ ನಿರ್ಣಯವನ್ನು ಅನುಮತಿಸುವುದಿಲ್ಲ ಎಂದು ಸುಪ್ರೀಂ ಹೇಳಿದೆ.