ಮಹಾರಾಷ್ಟ್ರ[ಜ.27]: ನೀವು ಬಾಲ್ಯದಲ್ಲಿ ಕರಡಿ ಹಾಗೂ ಇಬ್ಬರು ಗೆಳೆಯರ ಕತೆ ಕೆಳಿರಬಹುದು. ಕರಡಿಯಿಂದ ತಪ್ಪಿಸಿಕೊಳ್ಳಲು ಒಬ್ಬಾತ ಮರವೇರಿದರೆ, ಮತ್ತೊಬ್ಬ ನೆಲದ ಮೇಲೆ ಸತ್ತಂತೆ ಬೀಳುತ್ತಾನೆ. ಹುಡುಗ ಸತ್ತಿದ್ದಾನೆಂದು ಭಾವಿಸಿದ ಕರಡಿ ಅತನನ್ನು ಬಿಟ್ಟು ಮುಂದಕ್ಕೋಗುತ್ತದೆ. ಸದ್ಯ ಮಹಾರಾಷ್ಟ್ರದಲ್ಲೂ ಇಂತಹುದೇ ಘಟನೆ ನಡೆದಿದೆ. ಹುಲಿಯೊಂದು ತನ್ನ ಬಳಿ ಬರುತ್ತಿರುವುದನ್ನು ಗಮನಿಸಿದ ಆ ವ್ಯಕ್ತಿ ಕೂಡಲೇ ಸತ್ತಂತೆ ಬಿದ್ದುಕೊಂಡಿದ್ದಾನೆ. ಈ ಮೂಲಕ ತನ್ನ ಜೀವ ಉಳಿಸಿಕೊಂಡಿದ್ದಾನೆ.

ಹೌದು ಹುಲಿಯೊಂದು ಹೊಲದಲ್ಲಿ ದ್ದ ವ್ಯಕ್ತಿಯನ್ನು ಕಂಡು ಬೇಟೆ ಸಿಕ್ಕಿತೆಂದು ಓಡೋಡಿ ಬಂದಿದೆ. ಈ ವೇಳೆ ವ್ಯಕ್ತಿ ತಾನು ಕೊಂಚ ಮಿಸುಕಾಡಿದರೂ ಅಪಾಯ ತಪ್ಪಿದ್ದಲ್ಲ ಎಂದರಿತು ಹೆಣದಂತೆ ಮಲಗಿದ್ದಾನೆ. ಆತನ ಎದೆ ಮೇಲೆ ಕೈಯಿಟ್ಟು ಕೊಂಚ ಸಮಯ ಅಲ್ಲೇ ಕುಳಿತಿದ್ದ ಹುಲಿ ಬೇಟಿಯಾಡಲು ಬಂದ ವ್ಯಕ್ತಿ ಸತ್ತು ಬಿದ್ದಿದ್ದಾನೆಂದು ಭಾವಿಸಿ ಅಲ್ಲಿಂದ ಓಡಿ ಹೋಗಿದೆ. IFS ಅಧಿಕಾರಿ ಪ್ರವೀಣ್ ಈ ವಿಡಿಯೋವನ್ನು ಶೇರ್ ಮಾಡಿಕೊಂಡಿದ್ದಾರೆ.

ವಿಡಿಯೋ ಶೇರ್ ಮಾಡಿಕೊಂಡಿರುವ ಅಧಿಕಾರಿ 'ವ್ಯಕ್ತಿಯೊಬ್ಬ ಸಾವಿನ ದವಡೆಯಿಂದ ಹೇಗೆ ಪಾರಾದ ಎಂದು ನೋಡಲಿಚ್ಛಿಸುತ್ತೀರಾ? ಈ ಹುಲಿ ಆತನನ್ನು ಬೇಟೆಯಾಡಬಹುದಿತ್ತು. ಆದರೆ ಹೆಚ್ಚು ಜನರಿದ್ದ ಕಾರಣ ಭಯದಿಂದ ಪರಾರಿಯಾಗಿದೆ. ಅದೃಷ್ಟವಶಾತ್ ಹುಲಿ ಹಾಗು ಆ ವ್ಯಕ್ತಿ ಇಬ್ಬರಿಗೂ ಯಾವುದೇ ಹಾನಿಯಾಗಿಲ್ಲ' ಎಂದು ಬರೆದಿದ್ದಾರೆ.

ಸದ್ಯ ಈ ವಿಡಿಯೋ ಭಾರೀ ವೈರಲ್ ಆಗಿದೆ.