ಕೊಟ್ಟಾಯಂ(ಆ.19): ವ್ಯಾಪಾರ ಹೆಚ್ಚಿಸಿಕೊಳ್ಳಲು ವ್ಯಾಪಾರಿಗಳು ನಾನಾ ಕಸರತ್ತು ಮಾಡುವುದು ಸಹಜ. ಆದರೆ ಕೇರಳದ ವ್ಯಾಪರಿಯೊಬ್ಬರು ಕೊರೋನಾವನ್ನೇ ಜಾಹೀರಾತಿನ ವಸ್ತುವಾಗಿಸಿಕೊಂಡಿದ್ದಾರೆ.

ಕೊರೋನಾ ಸೋಂಕಿತರ ಸಂಖ್ಯೆ ನಿಯಂತ್ರಿಸುವಲ್ಲಿ ಉತ್ತರ ಕನ್ನಡ ರಾಜ್ಯಕ್ಕೆ ಮಾದರಿ

ಕೊಟ್ಟಾಯಂ ಜಿಲ್ಲೆಯ ಇಲೆಕ್ಟ್ರಾನಿಕ್ಸ್‌ ಅಂಗಡಿ ವ್ಯಾಪಾರಿಯೊಬ್ಬ ‘ಶಾಪಿಂಗ್‌ ಮಾಡಿದ 24 ಗಂಟೆಯಲ್ಲಿ ಕೊರೋನಾ ಬಂದರೆ 50 ಸಾವಿರ ಕ್ಯಾಶ್‌ ಬ್ಯಾಕ್‌’ ಎನ್ನುವ ಬರಹವುಳ್ಳ ಜಾಹೀರಾತು ಮುದ್ರಿಸಿ, ಜನರ ಗಮನ ಸೆಳೆಯುತ್ತಿದ್ದಾರೆ. ಆದರೆ ಇಂಥ ಆಫರ್‌ನಿಂದಾಗಿ ಸೋಂಕಿತರು ತಮ್ಮ ಅನಾರೋಗ್ಯ ಮರೆಮಾಚಿ ಶಾಪಿಂಗ್‌ ಮಾಡುವ ಸಾಧ್ಯತೆ ಇದೆ.

ಅಲ್ಲದೇ ಆರ್ಥಿಕವಾಗಿ ಹಿಂದುಳಿದವರು ಹಣಕ್ಕಾಗಿಯೇ ಸೋಂಕು ತಗುಲಿಸಿಕೊಳ್ಳುವ ಆತಂಕ ಇದೆ ಎಂದು ಇದರ ವಿರುದ್ಧ ಸ್ಥಳೀಯ ಕಾರ್ಪೋರೇಟರೊಬ್ಬರು ಕೋರ್ಟ್‌ ಮೆಟ್ಟಿಲೇರಿದ್ದಾರೆ.